ಖರೀದಿಯ ಹಂಬಲವನ್ನು ಉಂಟುಮಾಡುವ ಐಫೋನ್ ವಿಶಿಷ್ಟತೆಗಳು

By Shwetha
|

ಆಪಲ್‌ ಕಂಪೆನಿಯ ಐಫೋನ್‌ಗಳು ನಿಜಕ್ಕೂ ಅದನ್ನು ಖರೀದಿಸುವ ಗ್ರಾಹಕರಲ್ಲಿ ಒಂದು ರೀತಿಯ ವಿಶಿಷ್ಟತೆಯನ್ನೇ ಉಂಟುಮಾಡಿದೆ. ಐಫೋನ್‌ಗಳ ಬೆಲೆ ಎಷ್ಟಿದ್ದರೂ ಅದರ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳುವ ಉತ್ಸಾಹ ನಮ್ಮ ಗ್ರಾಹಕರಲ್ಲಿ ಇದ್ದೇ ಇದೆ. ಐಫೋನ್‌ಗಳು ಒಂದು ರೀತಿಯ ಜಾದೂವನ್ನು ಮಾರುಕಟ್ಟೆಯಲ್ಲಿ ಮಾಡಿದ್ದು ಅದು ಏರಿರುವ ಮಟ್ಟವನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ.

ತನ್ನ ಸಾಧನೆಯನ್ನು ಇನ್ನಷ್ಟು ಹೆಚ್ಚಿಸುವ ಮತ್ತು ಯಶಸ್ಸಿನ ಕಿರೀಟಕ್ಕೆ ಇನ್ನೊಂದು ಗರಿ ಎಂಬಂತೆ ಆಪಲ್ ಕಂಪೆನಿಯು ಹೊಚ್ಚ ಹೊಸ ಎರಡು ಐಫೋನ್‌ಗಳಾದ ಐಫೋನ್ 6 ಮತ್ತು ಐಫೋನ್ 6 ಪ್ಲಸ್‌ ಅನ್ನು ಲಾಂಚ್ ಮಾಡಿದ್ದು ತಿಳಿದೇ ಇದೆ. ಈ ಫೋನ್‌ಗಳಂತೂ ಅದ್ಭುತವಾದ ಅತಿ ವಿಶಿಷ್ಟ ಅಂಶಗಳನ್ನು ಒಳಗೊಂಡು ಮನಸೆಳೆಯುವ ಮತ್ತು ಖರೀದಿಸಲು ಪ್ರೇರೇಪಿಸುವಂತಿದ್ದು ನಿಜಕ್ಕೂ ಜಾದೂವಿನ ಅಲೆಯನ್ನೇ ಫೋನ್ ಕ್ಷೇತ್ರದಲ್ಲಿ ಉಂಟುಮಾಡಿದೆ. ತನ್ನನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ ಎಂಬ ಅಂಶದಿಂದಲೇ ಈ ಡಬ್ಬಲ್ ಧಮಾಕಾ ಫೋನ್‌ಗಳ ಸೃಷ್ಟಿಯನ್ನು ಅದು ಮಾಡಿದೆ.

ಹಾಗಿದ್ದರೆ ನಿಮಲ್ಲಿ ಈ ಐಫೋನ್‌ಗಳ ಆಸಕ್ತಿಯನ್ನು ಕೆರಳಿಸುವ ಅದ್ಭುತ ವಿಶೇಷಗಳನ್ನು ನಿಮ್ಮ ಮುಂದೆ ನಾವು ಇಡುತ್ತಿದ್ದು ಇದು ಹೇಗೆ ಹೆಚ್ಚುಗಾರಿಕೆಯನ್ನು ಪಡೆದುಕೊಂಡಿದೆ ಎಂಬುದನ್ನು ನಿಮಗೇ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಹೆಚ್ಚು ನಿರೀಕ್ಷಿತ ಹೊಸ ಆಪಲ್ ಐಫೋನ್ 6 ಮತ್ತು ಐಫೋನ್ 6 ಪ್ಲಸ್‌ನ ಅದ್ಭುತ ವಿಶೇಷತೆಗಳು ಇಲ್ಲಿದೆ! ಐಫೋನ್ 6 = ಅಳತೆ 4.7 ಇಂಚುಗಳಾಗಿದ್ದು, ಐಫೋನ್ 6 ಪ್ಲಸ್ 5.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ.

ಹಾಗಿದ್ದರೆ ಇವೆರಡೂ ಫೋನ್‌ಗಳ ಅತಿ ವಿಶಿಷ್ಟ ಅಂಶಗಳನ್ನು ನಾವು ಇಂದಿನ ಲೇಖನದಲ್ಲಿ ನೀಡುತ್ತಿದ್ದು ನಿಜಕ್ಕೂಈ ಅಂಶಗಳು ಮನಸೆಳೆಯುವಂತಿದೆ

ಇದನ್ನೂ ಓದಿ: ಸೋನಿಯ ಅದ್ಭುತ ಮೋಡಿಯ ಫೋನ್‌ಗಳ ಲಾಂಚ್

#1

#1

ಎರಡೂ ಸ್ಮಾರ್ಟ್‌ಫೋನ್‌ಗಳು 'Retina HD' ಡಿಸ್‌ಪ್ಲೇಯೊಂದಿಗೆ ಬಂದಿದೆ ಮತ್ತು ion- ಬಲಯುತವಾದ ಗ್ಲಾಸ್ ಅನ್ನು ಒಳಗೊಂಡಿದೆ. ಐಫೋನ್ 6, 6.8mm ದಪ್ಪವಾಗಿದ್ದು ಐಫೋನ್ 6 ಪ್ಲಸ್ 7.1mm ದಪ್ಪವಾಗಿದೆ.

#2

#2

ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಆಪಲ್‌ನ A8 64 ಬಿಟ್ ಚಿಪ್ ಅನ್ನು ಹೊಂದಿದೆ. ಹೊಸ ಚಿಪ್ A7 ಗಿಂತ 13% ಸಣ್ಣದಾಗಿದೆ. ಸ್ಚಿಲ್ಲರ್ ಪ್ರಕಾರ, ಇದು 20% ವೇಗವಾಗಿ ಸಿಪಿಯು ಹಾಗೂ 50% ಗ್ರಾಫಿಕ್ಸ್ ಅನ್ನು ಅನುವಾದಿಸುತ್ತದೆ ಎಂದಾಗಿದೆ. ಹೊಸ ಐಫೋನ್‌ಗಳು ಬದಿಯಲ್ಲಿ ಪವರ್ ಬಟನ್‌ಗಳನ್ನು ಹೊಂದಿದ್ದು ತನ್ನ ಹೊಸ ಫೋನ್‌ಗಳಲ್ಲಿ 1.3 ಮಿಲಿಯನ್ ಅಪ್ಲಿಕೇಶನ್‌ಗಳು ದೊರೆಯುವಂತೆ ಆಪಲ್ ಮಾಡಿದೆ. ಆಪಲ್ ಹೇಳುವಂತೆ ಐಫೋನ್ 6 ಪ್ಲಸ್, 24 ಗಂಟೆಗಳ 3 ಜಿ ಟಾಕ್ ಟೈಮ್ ಅನ್ನು ಹೊಂದಿದ್ದು ಐಫೋನ್ 6, 14 ಗಂಟೆಗಳ 3 ಜಿ ಟಾಕ್ ಟೈಮ್ ಅನ್ನು ಹೊಂದಿದೆ.

#3

#3

ಎರಡೂ ಫೋನ್‌ಗಳು 'True-tone flash' ಜೊತೆಗೆ 8MP ಕ್ಯಾಮೆರಾವನ್ನು ಹೊಂದಿದ್ದು, 1.5 ಮೈಕ್ರೊನ್ ಪಿಕ್ಸೆಲ್‌ಗಳು ಇದರಲ್ಲಿದೆ. ಈ ಕ್ಯಾಮೆರಾಗಳು ಇನ್‌ಸೈಟ್ ಸೆನ್ಸಾರ್ ಅನ್ನು ಹೊಂದಿದೆ.

ಈ ಹೊಸ ಕ್ಯಾಮೆರಾಗಳೊಂದಿಗೆ, ಪನೋರಮಾಗಳು ಕೂಡ 43 ವರೆಗೆ ಮೆಗಾಪಿಕ್ಸೆಲ್‌ಗಳನ್ನು ಹೊಂದಿವೆ. ಸ್ಚಿಲ್ಲರ್ ಹೇಳುವಂತೆ ಇದರಲ್ಲಿ ಫೇಸ್ ಡಿಟೆಕ್ಷನ್ ಇದ್ದು ಮತ್ತು ಬ್ಲಿಂಕ್ ಸ್ಲೈಲ್ ಡಿಟೆಕ್ಷನ್ ಅನ್ನು ಇದು ಹೊಂದಿದೆ. ಐಫೋನ್ 6 ಡಿಜಿಟಲ್ ಇಮೇಜ್ ಸ್ಟೆಬಿಲೈಸೇಶನ್ ಅನ್ನು ಹೊಂದಿದ್ದು, ಐಫೋನ್ 6 ಪ್ಲಸ್ ಅಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಅನ್ನು ಒಳಗೊಂಡಿದೆ.

#4

#4

ಎರಡೂ ಸ್ಮಾರ್ಟ್‌ಫೋನ್‌ಗಳು ಆಪಲ್‌ನ ಅತ್ಯಾಧುನಿಕ ಆಪರೇಟಿಂಗ್ ಸಾಫ್ಟ್‌ವೇರ್ ಅನ್ನು ಚಾಲನೆ ಮಾಡುತ್ತಿದ್ದು, ಇದು ಐಓಎಸ್ 8 ಆಗಿದೆ. ಈ ಮೊದಲೇ ಆಪಲ್ ತನ್ನ ಇತ್ತೀಚಿನ ಆಪರೇಟಿಂಗ್ ಸಾಫ್ಟ್‌ವೇರ್ ಐಓಎಸ್ 8 ಕುರಿತ ಕೆಲವೊಂದು ಮಾಹಿತಿಯನ್ನು ನೀಡಿತ್ತು. ಐಓಸ್ 8 'ಹೋಮ್‌ಕಿಟ್' ಆಯ್ಕೆಯನ್ನು ಹೊಂದಿದ್ದು, ಇದು ಮನೆಯ ಡಿಜಿಟಲ್ ಅಪ್ಲಯನ್ಸ್‌ಗಳ ನಿಯಂತ್ರಣವನ್ನು ಮಾಡುವ ರಿಮೋಟ್ ಕಂಟ್ರೋಲ್ ಆಗಿ ಕಾರ್ಯನಿರ್ವಹಿಸುತ್ತದೆ.

#5

#5

ಐಫೋನ್ 6 ಪ್ಲಸ್‌ಗೆ ನಿರ್ದಿಷ್ಟವಾಗಿರುವ ಹಾರಿಜೋಂಟಲ್ ಡಿಸ್‌ಪ್ಲೇ ವಿಶೇಷತೆ ಇದರಲ್ಲಿದೆ. ಹೋಮ್‌ ಸ್ಕ್ರೀನ್‌ನ ಹಾರಿಜೋಂಟಲ್ ವೀಕ್ಷಣೆಯನ್ನು ಬಳಕೆದಾರರಿಗೆ ಒದಗಿಸುತ್ತದೆ. ಐಫೋನ್ 6 ವಿಭಿನ್ನ ಬಳಕೆದಾರ ಇಂಟರ್ಫೇಸ್ ಅನ್ನು ಹೊಂದಿದ್ದು ಇದು ಹೊಸ ಕೀಬೋರ್ಡ್ ಕೀಗಳನ್ನು ನಕಲಿಸು ಅಂಟಿಸಲು ಅನುಮತಿಸುತ್ತದೆ.

#6

#6

ಐಫೋನ್ 6 ನಲ್ಲಿ ವೈಫೈ ಕರೆಮಾಡುವಿಕೆ ಎಂಬ ವಿಶೇಷತೆಯನ್ನು ಇದು ಹೊಂದಿದ್ದು ಇದು ಹೆಚ್ಚಿನ ಗುಣಮಟ್ಟದ ಕರೆಗಳನ್ನು ಮಾಡಲು ಅನುಮತಿಸುತ್ತದೆ. ಯುಎಸ್‌ನಲ್ಲಿ ಈ ಸೇವೆಯು T-ಮೊಬೈಲ್‌ನಲ್ಲಿ ಲಭ್ಯವಾಗುತ್ತಿದೆ. ಐಫೋನ್ 6 ವೈಫೈನ ವೇಗವು ಐಫೋನ್ 5 ಎಸ್‌ಗಿಂತ ಹೆಚ್ಚು ಕ್ಷಿಪ್ರವಾಗಿದ್ದು ಐಫೋನ್ 6 200 LTE ಗಿಂತಲೂ ಹೆಚ್ಚಿನ ಕ್ಯಾರಿಯರ್‌ಗಳನ್ನು ಜಗತ್ತಿನಾದ್ಯಂತ ಬೆಂಬಲಿಸುತ್ತದೆ.

#7

#7

ಆಪಲ್ ಪೇಯು ಐಫೋನ್ ಲಿಂಕ್ ಉಳ್ಳ ಕ್ರೆಡಿಟ್ ಕಾರ್ಡ್‌ಗಳನ್ನು ಗ್ರಾಹರಿಗೆ ಬಳಸಲು ಅನುಮತಿಸುತ್ತಿದ್ದು ಇದರಿಂದ ಹೆಚ್ಚು ಭದ್ರತೆಯ ಸುಗಮ ಪಾವತಿಗಳಿಗೆ ಇದು ಅನುವು ಮಾಡಿಕೊಡುತ್ತದೆ.

#8

#8

ಐಫೋನ್ 6 ನ 16 ಜಿಬಿ ಆವೃತ್ತಿಯು ರೂ 12,138 ಕ್ಕೆ ದೊರೆಯುತ್ತಿದ್ದು 128 ಜಿಬಿ ಯ ಐಫೋನ್ ರೂ 24,337 ಕ್ಕೆ ಲಭ್ಯವಾಗುತ್ತಿದೆ. ಐಫೋನ್ 6 ಪ್ಲಸ್‌ನ ಆರಂಭವು 16ಜಿಬಿಗೆ ರೂ 18,231 ಕ್ಕೆ ಲಭ್ಯವಾಗುತ್ತಿದ್ದು 64 ಜಿಬಿ ಯ ಐಫೋನ್ ಬೆಲೆ ರೂ 24,329.22 ಮತ್ತು 128 ಜಿಬಿಯ ಫೋನ್‌ಗೆ ರೂ 30,426.53 ಎಂದು ಬೆಲೆ ನಿಗದಿ ಪಡಿಸಲಾಗಿದೆ. ಸಪ್ಟೆಂಬರ್ 19 ರ ನಂತರ ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಇವೆರಡೂ ಮಳಿಗೆಗಳಲ್ಲಿ ಲಭ್ಯವಾಗಲಿದೆ.

ಇದರ ಪೂರ್ವ ಬುಕ್ಕಿಂಗ್ ಈಗಾಗಲೇ ಪ್ರಾರಂಭವಾಗಿದ್ದು ಈ ವರ್ಷದ ಕೊನೆಗೆ 115 ದೇಶಗಳಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್‌ಗಳನ್ನು ದೊರೆಯುವಂತೆ ಮಾಡುವ ಇಂಗಿತವನ್ನು ಆಪಲ್ ಕಂಪೆನಿ ಹೊಂದಿದೆ.

Best Mobiles in India

English summary
This article tells about Apple iPhone 6 & iPhone 6 Plus: 8 must-know facts.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X