Home
ಟೆಕ್ ನೌಕರಿ

ಐಫೋನ್ ಎಕ್ಸ್ ಫೋನಿಗೆ ಏರ್‌ಟೆಲ್ ಡ್ಯುಯಲ್ ಇ-ಸಿಮ್ ಸೆಟ್ ಮಾಡುವುದು ಹೇಗೆ?

ಆಪಲ್ ಈ ವರ್ಷ ಮೊದಲ ಬಾರಿಗೆ ಡುಯಲ್ ಇ-ಸಿಮ್ ನ್ನು ತನ್ನ ನೂತನ ಐಫೋನ್ ಗಳಾದ ಎಕ್ಸ್ಎಸ್, ಎಕ್ಸ್ ಎಸ್ ಮ್ಯಾಕ್ಸ್, ಎಕ್ಸ್ ಆರ್ ಗಳಲ್ಲಿ ಪರಿಚಯಿಸಿದೆ. ಆದರೆ ಇ-ಸಿಮ್ ಬೆಂಬಲವು ಎಲ್ಲಾ ದೇಶಗಳಲ್ಲೂ ಲಭ್ಯವಿಲ್ಲ. ಯುಎಸ್, ಕೆನಡಾ, ಜರ್ಮನಿ, ಆಸ್ಟ್ರಿಯಾಗಳಲ್ಲಿ ನಿಮಗೆ ಇದಕ್ಕೆ ಬೆಂಬಲ ಸಿಗುತ್ತದೆ. ಈ ಪಟ್ಟಿಯಲ್ಲಿ ಭಾರತವೂ ಕೂಡ ಸೇರಿದೆ.

ಐಫೋನ್ ಎಕ್ಸ್ ಫೋನಿಗೆ ಏರ್‌ಟೆಲ್ ಡ್ಯುಯಲ್ ಇ-ಸಿಮ್ ಸೆಟ್ ಮಾಡುವುದು ಹೇಗೆ?

ಭಾರತದಲ್ಲಿ ಏರ್ ಟೆಲ್ ಏಕಮಾತ್ರ ಟೆಲಿಕಾಂ ಸಂಸ್ಥೆಯು ಇ-ಸಿಮ್ ಗೆ ಆಪಲ್ ಫೋನ್ ನಲ್ಲಿ ಬೆಂಬಲ ನೀಡುತ್ತದೆ ಎಂದು ಆಪಲ್ ಸಂಸ್ಥೆ ತಿಳಿಸಿದೆ ಮತ್ತು ಇದು ಐಓಎಸ್ 12.1 ನ್ನು ಬಳಕೆ ಮಾಡುತ್ತದೆ ಎಂದು ಹೇಳಿದ್ದು ಇದೀಗ ಈ ಬೆಂಬಲವು ಲಭ್ಯವಾಗಲು ಆರಂಭವಾಗಿದೆ.

ಒಂದು ವೇಳೆ ನೀವು ಕೂಡ ಆಪಲ್ ಫೋನ್ ಬಳಕೆದಾರರಾಗಿದ್ದು ಐಫೋನ್ ಎಕ್ಸ್ಎಸ್,ಎಕ್ಸ್ ಎಸ್ ಮ್ಯಾಕ್ಸ್, ಎಕ್ಸ್ ಆರ್ ನ್ನು ಹೊಂದಿದ್ದಲ್ಲಿ ಇ-ಸಿಮ್ ಸೆಟ್ಟಿಂಗ್ ಮಾಡುವುದು ಹೇಗೆ ಎಂಬ ಹಂತಗಳನ್ನು ನಾವು ತಿಳಿಸಿಕೊಡುತ್ತಿದ್ದೇವೆ.

ಯಾವುದೇ ಫಿಸಿಕಲ್ ಸಿಮ್ ಕಾರ್ಡ್ ನ ಅಗತ್ಯವಿಲ್ಲದೆಯೇ ನೀವು ಇ-ಸಿಮ್ ನ ಮೂಲಕ ನಿಮ್ಮ ಈಗಿನ ಸಿಮ್ ಕಾರ್ಡ್ ನ್ನು ಬದಲಾಯಿಸಿಕೊಳ್ಳಬಹುದು.

1.ಮೊದಲಿಗೆ ನಿಮ್ಮ ಐಫೋನ್ ಎಕ್ಸ್ಎಸ್,ಎಕ್ಸ್ಎಸ್ ಮ್ಯಾಕ್ಸ್ ಅಥವಾ ಎಕ್ಸ್ ಆರ್ ಐಓಎಸ್ 12.1 ಗೆ ಅಪ್ ಡೇಟ್ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

2.ಒಂದು ಎಸ್ಎಂಎಸ್ ನ್ನು ಕಳುಹಿಸಬೇಕು ಅದರಲ್ಲಿ 'eSIM ’ ವನ್ನು ಬರೆದು 121 ಗೆ ಸೆಂಡ್ ಮಾಡಿ.

3.ಒಮ್ಮೆ ಈ ಕೆಲಸ ಮುಗಿದ ನಂತರ ಏರ್ ಟೆಲ್ ನಿಮಗೆ 1ರಿಂದ 2 ಘಂಟೆಯ ಅವಧಿಯಲ್ಲಿ ಕ್ಯೂಆರ್ ಕೋಡ್ ನ್ನು ನಿಮ್ಮ ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡುತ್ತದೆ. ನಿಮ್ಮ ಇಮೇಲ್ ನ್ನು ತೆರೆಯಿರಿ.

4.ನಿಮ್ಮ ಫೋನ್ ನಲ್ಲಿ, ಸೆಟ್ಟಿಂಗ್ಸ್ > ಸೆಲ್ಯುಲರ್ > ಆಡ್ ಸೆಲ್ಯುಲರ್ ಪ್ಲಾನ್ > ನ್ನು ನೇವಿಗೇಟ್ ಮಾಡಿ ಅಲ್ಲಿ ಕ್ಯೂಆರ್ ಕೋಡ್ ನ್ನು ಸ್ಕ್ಯಾನ್ ಮಾಡಿ.

5.ಇದಾದ ನಂತರ, ನಿಮಗೆ ಇಸಿಮ್ ಕನ್ವರ್ಷನ್ ನ್ನು ಖಾತ್ರಿ ಪಡಿಸುವುದಕ್ಕೆ ಒಂದು ಮೆಸೇಜ್ ಬರುತ್ತದೆ. 60 ಸೆಕೆಂಡ್ ನ ಒಳಗೆ ಆ ಮೆಸೇಜ್ ಗೆ ಒಂದನ್ನು ಒತ್ತುವ ಮೂಲಕ ರಿಪ್ಲೈ ಮಾಡಿ.

6.ಖಾತ್ರಿ ಪಡಿಸುವ ಕರೆಗಾಗಿ ಕಾಯಿರಿ ಮತ್ತು ಕನ್ವರ್ಷನ್ ನ್ನು ಒಪ್ಪಿಕೊಳ್ಳಿ.

7.ನಂತರದ ಕೆಲವೇ ಘಂಟೆಗಳಲ್ಲಿ ಇಸಿಮ್ ಆಕ್ಟಿವೇಟ್ ಆಗಿರುತ್ತದೆ.

ಖಂಡಿತವಾಗಲೂ ಹೀಗೆ ಇಸಿಮ್ ನ್ನು ಆಕ್ಟಿವೇಟ್ ಮಾಡಿಕೊಳ್ಳುವುದು ಬಹಳ ಲಾಭದಾಯವಾಗಿರುವ ಕೆಲಸವಾಗಿದೆ. ಈ ಹ್ಯಾಂಡ್ ಸೆಟ್ ಗಳನ್ನು ಡುಯಲ್ ಸಿಮ್ ಡುಯಲ್ ಸ್ಯಾಂಡ್ ಬೈ ಫೀಚರ್ ನಲ್ಲಿ ಡಿಸೈನ್ ಮಾಡಲಾಗಿದೆ ಆದರೆ ಡುಯಲ್ ಸಿಮ್ ಡುಯಲ್ ಆಕ್ಟಿವೇಟ್ ಟೆಕ್ನಾಲಜಿಯನ್ನು ಅಳವಡಿಸಲಾಗಿರುವುದಿಲ್ಲ ಎಂಬುದು ನಿಮ್ಮ ಗಮನದಲ್ಲಿ ಇರಲಿ.

Best Mobiles in India

English summary
Apple iPhone XS, XS Max and XR: How to set up Airtel dual-eSIM
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+