ಒಂದೇ ಫೋನಿನಲ್ಲಿ ಎರಡು ಫೇಸ್‌ಬುಕ್ ಖಾತೆಗಳನ್ನು 'ಲಾಗ್‌ಔಟ್" ಆಗದೆ ಬಳಸಿ!!
ಎರಡೆರಡು ಖಾತೆಗಳನ್ನು ಹೊಂದಿರುವುದನ್ನು'ಫೇಸ್‌ಬುಕ್' ಸ್ವಲ್ಪವೂ ಇಷ್ಟಪಡುವುದಿಲ್ಲ. ಆದರೆ, ನಮ್ಮ ಜನರು ಕೇವಲ ಒಂದು ಫೇಸ್‌ಬುಕ್ ಖಾತೆಯನ್ನು ಉಳಿಸಿಕೊಳ್ಳಲು ಬಯಸದೇ ಎರಡರಿಂದ ಮೂರು ಫೇಸ್‌ಬುಕ್ ಅಕೌಂಟ್‌ಗಳನ್ನು ಬಳಸುತ್ತಾರೆ. ಇಂದಿನ ದಿನಗಳಲ್ಲಿ ಬಹುತೇಕರು ಹಲವು ಫೇಸ್‌ಬುಕ್ ಖಾತೆಗಳನ್ನು ಹೊಂದಿರುವುದು ಎಲ್ಲರಿಗೂ ತಿಳಿದಿರುವ ಸತ್ಯ.

ಹಾಗಾಗಿ, ಫೇಸ್‌ಬುಕ್‌ಗೆ ಇಷ್ಟವಾಗದಿದ್ದರೂ ಸಹ ಒಂದೇ ಮೊಬೈಲ್‌ನಲ್ಲಿ ಎರಡು ಫೇಸ್‌ಬುಕ್ ಅಕೌಂಟ್‌ಗಳನ್ನು ಲಾಗೌಟ್ ಆಗದಂತೆ ಬಳಸುವುದು ಹೇಗೆ ಎಂಬುದನ್ನು ನಾವು ತಿಳಿಸಿಕೊಡುತ್ತೇವೆ. ಒಂದೇ ಒಂದು ಆಂಡ್ರಾಯ್ಡ್ ಸ್ಮಾರ್ಟ್‌ಫೋನಿನಲ್ಲಿ ನಿಮ್ಮ 2 ಫೇಸ್‌ಬುಕ್ ಅಕೌಂಟ್‌ಗಳನ್ನು ರಿಯಲ್ ಟೈಮಿನಲ್ಲಿ ಬಳಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.

ಬೇರೆ ಅಪ್ಲಿಕೇಷನ್ ಬೇಕಿಲ್ಲ!
ಒಂದೇ ಮೊಬೈಲ್‌ನಲ್ಲಿ ಎರಡು ಫೇಸ್‌ಬುಕ್ ಅಕೌಂಟ್‌ಗಳನ್ನು ಲಾಗೌಟ್ ಆಗದೆ ಬಳಸಲು ಥರ್ಡ್ ಪಾರ್ಟಿ ಅಪ್ಲಿಕೇಷನ್ ಸಹಾಯ ಬೇಕಿಲ್ಲ.

ಸ್ಟೆಪ್ 1
ಅಧಿಕೃತವಾರುವ ಫೇಸ್‌ಬುಕ್ ಅಪ್ಲಿಕೇಶನ್ನ್ನು ನಿಮ್ಮ ಆಂಡ್ರಾಯ್ಡ್ ಮೊಬೈಲ್‌ನಲ್ಲಿ (Install) ಡೌನ್ಲೋಡ್ ಮಾಡಿಕೊಳ್ಳಿ. ಇದರೊಂದಿಗೆ ನಿಮ್ಮ ಮೊದಲ ಫೇಸ್‌ಬುಕ್ ಖಾತೆಯನ್ನು ಬಳಸಿ.

ಸ್ಟೆಪ್ 2
ಫೇಸ್‌ಬುಕ್ ಅಪ್ಲಿಕೇಶನ್ ಡೌನ್‌ಲೋಡ್ ನಂತರ, ಮತ್ತೆ ಪ್ಲೇಸ್ಟೋರ್ ತೆರೆದು ಫೇಸ್‌ಬುಕ್‌ನದ್ದೇ ಆದ 'ಫೇಸ್‌ಬುಕ್ ಲೈಟ್' (Facebook Lite) ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಸ್ಟೆಪ್ 3
ಈಗ ನಿಮ್ಮ ಮೊಬೈಲ್‌ನಲ್ಲಿ ಎರಡು ಫೇಸ್‌ಬುಕ್ ಆಪ್‌ಗಳು ಇರುತ್ತವೆ. ಎರಡು ಆಪ್‌ಗಳಲ್ಲಿ ಬೇರೆ ಬೇರೆ ಫೇಸ್‌ಬುಕ್ ಖಾತೆಗಳಿಂದ ಲಾಗಿನ್ ಆಗುವುದನ್ನು ಫೇಸ್‌ಬುಕ್ ನಿರ್ಭಂದಿಸುವುದಿಲ್ಲ.

ಲಾಗ್‌ಔಟ್ ಮಾಡಬೇಕಿಲ್ಲ.!
ಈ ಎರಡು ಆಪ್‌ಗಳ ಫೇಸ್‌ಬುಕ್ ಖಾತೆಗಳನ್ನು ನಿಮ್ಮ ಆಂಡ್ರಾಯ್ಡ್ ಪೋನ್ ಸಪೋರ್ಟ್ ಮಾಡುತ್ತಿದೆ. ಎರಡು ಅಕೌಂಟ್‌ಗಳನ್ನು ಒಮ್ಮೆಲೆ ಬಳಸಿದರೂ ಎರಡರ ನೋಫಿಕೇಷನ್ ಸಹ ಸಿಗಲಿವೆ.

ಅನುಭವ ಸ್ವಲ್ಪ ವಿಭಿನ್ನ!
ಈ ಎರಡು ಅಪ್ಲಿಕೇಶನ್ಗಳ ನಡುವಿನ ಅನುಭವ ಸ್ವಲ್ಪ ವಿಭಿನ್ನವಾಗಿದೆ. ಫೇಸ್‌ಬುಕ್ ಲೈಟ್ ಅಪ್ಲಿಕೇಶನ್ ಶ್ರೀಮಂತ ಅನುಭವವನ್ನು ನೀಡುವುದಿಲ್ಲ. ಆದರೆ ಅದು ಹಗುರವಾದದ್ದು ಕಡಿಮೆ ಡೇಟಾವನ್ನು ಬಳಸುತ್ತದೆ.


Click it and Unblock the Notifications








