ಇ-ಸಿಗರೇಟ್ ದೇಹದ ಆರೋಗ್ಯಕ್ಕೆ ಒಳ್ಳೆಯದೇ ?
ಜೈಲಿಗೆ ಹೋಗುವ ಸಿಗರೇಟಿನ ಚಟವುಳ್ಳ ವ್ಯಕ್ತಿಗಳು ತಮಗೆ ಜೈಲಿನಲ್ಲಿ ಇ ಸಿಗರೇಟ್ ಸೇದಲು ಅನುಮತಿ ನೀಡಬೇಕು ಎಂದುಕೇಳುವುದನ್ನು ನೀವು ಮಾಧ್ಯಮದಲ್ಲಿ ಓದಿರಬಹುದು. ಅಲ್ಲದೇ ಸಿಗರೇಟಿನ ವಿಚಾರ ಬಂದಾಗ ಕೆಲವು ಮಂದಿ ಇ-ಸಿಗರೇಟ್ ಸೇದಿ ಇದರಿಂದ ಪರಿಸರಕ್ಕೆ ಮತ್ತು ದೇಹಕ್ಕೆ ಯಾವುದೇ ಹಾನಿ ಇಲ್ಲ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಸಿಗರೇಟ್ ಆರೋಗ್ಯಕ್ಕೆ ಹಾನಿಕಾರಿ ಎಂಬ ವಿಚಾರ ಎಲ್ಲರಿಗೆ ತಿಳಿದಿದೆ. ಆದರೆ ಇ-ಸಿಗರೇಟ್ ವಿಚಾರದಲ್ಲಿ ಮಾತ್ರ ಕೆಲವು ಮಂದಿ ಒಳ್ಳೆಯದು ಎಂದು ಹೇಳಿದ್ರೆ ಮತ್ತೆ ಕೆಲವರು ಆರೋಗ್ಯಕ್ಕೆ ಹಾನಿ ಎಂದು ಹೇಳುತ್ತಿದ್ದಾರೆ .
ಒಟ್ಟಿನಲ್ಲಿಇ-ಸಿಗರೇಟ್ ಭಾರತದ ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿದೆ. ಧೂಮಪಾನಿಗಳ ಚಟ ಬಿಡಿಸಲು ಇದು ಸಹಕಾರಿ.ತಂಬಾಕಿನ ವಿಷಕಾರಿ ವಸ್ತುಗಳು ಇಲ್ಲವಾದ್ದರಿಂದ ಇದು ಆರೋಗ್ಯಕ್ಕೆ ಮಾರಕವಲ್ಲ. ಸೇದೋ ಚಟ ಇರುವವರು ಸೇದೋದನ್ನು ಬಿಡೋಕೆ ಆಗದಿದ್ದರೆ ಇ-ಸಿಗರೇಟಿನ ಚಟ ಅಂಟಿಸಿಕೊಂಡರೆ ತೊಂದರೆ ಇಲ್ಲವಂತೆ. ಹೀಗೆ ಇ ಸಿಗರೇಟನ್ನು ತಯಾರಿಸುವ ಕಂಪೆನಿಗಳು ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾ ವ್ಯವಹಾರ ಆರಂಭಿಸಿದ್ದಾರೆ. ಹೀಗಾಗಿ ಇಲ್ಲಿ ಇ-ಸಿಗರೇಟ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಮತ್ತು ಇದರ ಸಾಧಕ ಬಾಧಕಗಳ ಬಗ್ಗೆ ಕೆಲವು ಮಾಹಿತಿ ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಇ ಸಿಗರೇಟ್ ದೇಹದ ಆರೋಗ್ಯಕ್ಕೆ ಒಳ್ಳೆಯದೇ ?
ಇ ಸಿಗರೇಟ್‌ನ್ನು ಮೊದಲು ಕಂಡು ಹಿಡಿದ ಸಂಶೋಧಕ ಹರ್ಬರ್ಟ್ ಎ ಗಿಲ್ಬರ್ಟ್. 1963 ರಲ್ಲಿ ಇ ಸಿಗರೇಟನ್ನು ಕಂಡುಹಿಡಿಯಲಾಯಿತು.

ಇ ಸಿಗರೇಟ್ ದೇಹದ ಆರೋಗ್ಯಕ್ಕೆ ಒಳ್ಳೆಯದೇ ?
A . ಎಲ್ ಇ ಡಿ ( ಉರಿದಾಗ ಸಿಗರೇಟಿನ ತುದಿಯ ಕೆಂಡದಂತೆ ಕಾಣಿಸುತ್ತದೆ)
B . ಬ್ಯಾಟರಿ ( ಇದರ ಒಳಗೆ circuitಗಳಿವೆ)
C . ಬಿಸಿಯಾಗಿಸುವ ಭಾಗ(atomize)
D . ಬಾಯಿಯ ಒಳಗೆ ಇರಿಸಿ ಸೇದುವ ಭಾಗ (Cratridge )

ಇ ಸಿಗರೇಟ್ ದೇಹದ ಆರೋಗ್ಯಕ್ಕೆ ಒಳ್ಳೆಯದೇ ?
ಈಗ ಪ್ರಿಂಟರ್ ಮೇಶಿನ್‌ಗೆ ಹೇಗೇ cartridg ಹಾಕಿ ಪ್ರಿಂಟ್ ತೆಗೆಯುಬಹುದು ಅದೇ ರೀತಿಯಾಗಿ ಈ ಇ ಸಿಗರೇಟ್‌ಲ್ಲೂ cartridg ಬಳಸಲಾಗುತ್ತದೆ ವಿವಿಧ ರುಚಿಯ ನಿಕೋಟಿನ್ ಉಳ್ಳ ದ್ರವ (ಇ -ಲಿಕ್ವಿಡ್‌ಗಳನ್ನು) cartridgನಲ್ಲಿ ತುಂಬಿಸಿರುತ್ತಾರೆ.

ಇ ಸಿಗರೇಟ್ ದೇಹದ ಆರೋಗ್ಯಕ್ಕೆ ಒಳ್ಳೆಯದೇ ?
ಇ ಸಿಗರೇಟಿನ ಒಳಗಡೆ ಮೈಕ್ರೋಪ್ರೋಸೆಸರ್‌ಗಳು ಮತ್ತು ಸೆನ್ಸಾರ್‌ಗಳಿವೆ. ಇ -ಸಿಗರೇಟಿನ ಬಾಯಿಯ ಒಳಗೆ ಇಡುವ ಫಿಲ್ಟರ್ ಭಾಗವನ್ನು ಬಾಯಿಯಲ್ಲಿಟ್ಟು ಎಳೆದಾಗ ಸೆನ್ಸಾರ್ ಗಾಳಿಯ ಒತ್ತಡ ಅರಿತು ಬಿಸಿಯಾಗಿಸುವ ಭಾಗಕ್ಕೆ((atomizer ) ಎಲೆಕ್ಟ್ರಾನಿಕ್ ಸಿಗ್ನಲ್ ಕಳಿಸುತ್ತದೆ. ಆಗ ಈ ಭಾಗ ಬಿಸಿಯಾಗಿ ಫಿಲ್ಟರ್ ಒಳಗಿರುವ ಇ ಲಿಕ್ವಿಡ್ ನ್ನು ಆವಿಯಾಗಿ ಹೊಗೆ ಬರುವಂತೆ ಮಾಡುತ್ತದೆ.

ಇ ಸಿಗರೇಟ್ ದೇಹದ ಆರೋಗ್ಯಕ್ಕೆ ಒಳ್ಳೆಯದೇ ?
ಇ ಸಿಗರೇಟ್‌ನ್ನು ಯುಎಸ್‌ಬಿ ಮೂಲಕ ಚಾರ್ಜ ಮಾಡಬಹುದು.

ಇ ಸಿಗರೇಟ್ ದೇಹದ ಆರೋಗ್ಯಕ್ಕೆ ಒಳ್ಳೆಯದೇ ?
ಒಂದೊಮ್ಮೆ ಇ ಸಿಗರೇಟ್‌ನ cartridg ಮುಗಿದಲ್ಲಿ ಮತ್ತೊಂದು cartridgನ್ನು ಹಾಕಿ ಸಿಗರೇಟ್ ಸೇದಬಹುದು.

ಇ ಸಿಗರೇಟ್ ದೇಹದ ಆರೋಗ್ಯಕ್ಕೆ ಒಳ್ಳೆಯದೇ ?
ಇ ಸಿಗರೇಟ್‌ನ cartridg ಬಳಸಲಾಗುವ ಇ ಲಿಕ್ವಿಡ್ ನಿಕೋಟಿನ್ ಯುಕ್ತ ಅಥವಾ ನಿಕೋಟಿನ್ ಇಲ್ಲದೆ ಕೂಡ ಸಿಗುತ್ತದೆ..

ಇ ಸಿಗರೇಟ್ ದೇಹದ ಆರೋಗ್ಯಕ್ಕೆ ಒಳ್ಳೆಯದೇ ?
ಇದರಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಇಲ್ಲ ಅಂತ ಇದರ ತಯಾರಕರು ಹೇಳಿಕೊಂಡಿದ್ದರೂ ಅದು ಸಾಬೀತಾಗಿಲ್ಲ. ಇದರ ಮೇಲೆ ಇನ್ನೂ ಅಧ್ಯಯನ ನಡೆಯುತ್ತಲೇ ಇದೆ..

ಇ ಸಿಗರೇಟ್ ದೇಹದ ಆರೋಗ್ಯಕ್ಕೆ ಒಳ್ಳೆಯದೇ ?
ಬ್ರಿಟಿಷ್ ಮೆಡಿಕಲ್ ಅಸೋಸಿಯೇಶನವರು ಇ ಸಿಗರೇಟಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಈ ಸಿಗರೇಟನ್ನು ಬಳಸಿ ಎಂರು ಯಾರಿಗೂ ನಿರ್ದೇಶನ ಮಾಡಬೇಡಿ ಎಂದು ಅದು ವೈದ್ಯರಲ್ಲಿ ವಿನಂತಿಸಿದೆ.

ಇ ಸಿಗರೇಟ್ ದೇಹದ ಆರೋಗ್ಯಕ್ಕೆ ಒಳ್ಳೆಯದೇ ?
European Respiratory Society's ಮಹಾ ಅಧಿವೇಶನದಲ್ಲಿ ಸಂಶೋಧಕರು ಇದರಿಂದಾಗಿ ಶ್ವಾಸಕೋಶದ ಕ್ಯಾನ್ಸರ್ ಬರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇ ಸಿಗರೇಟ್ ದೇಹದ ಆರೋಗ್ಯಕ್ಕೆ ಒಳ್ಳೆಯದೇ ?
European Respiratory Society's ಮಹಾ ಅಧಿವೇಶನದಲ್ಲಿ ಸಂಶೋಧಕರು ಇದರಿಂದಾಗಿ ಶ್ವಾಸಕೋಶದ ಕ್ಯಾನ್ಸರ್ ಬರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇ ಸಿಗರೇಟ್ ದೇಹದ ಆರೋಗ್ಯಕ್ಕೆ ಒಳ್ಳೆಯದೇ ?
ಇ ಸಿಗರೇಟಿನ್ನು ಸೇದಿದ ವ್ಯಕ್ತಿಗಳಲ್ಲಿ ಅಭಿಪ್ರಾಯ ಕೇಳಿದಾಗ ಬಹಳಷ್ಟು ಮಂದಿ ಇದರಿಂದ ಹೊಗೆ ಬರುತ್ತದೆ ವಿನಾಃ ನಿಜವಾದ ಸಿಗರೇಟಿನ ಅನುಭವ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಇ ಸಿಗರೇಟ್ ದೇಹದ ಆರೋಗ್ಯಕ್ಕೆ ಒಳ್ಳೆಯದೇ ?
ಹೊಗೆಯಲ್ಲಿ ಯಾವುದೇ ವಾಸನೆಯಿಲ್ಲ.
ಇದರಿಂದಾಗಿ ಬೂದಿ ಬರುವುದಿಲ್ಲ.

ಇ ಸಿಗರೇಟ್ ದೇಹದ ಆರೋಗ್ಯಕ್ಕೆ ಒಳ್ಳೆಯದೇ ?
ಒಂದು ಇ ಸಿಗರೇಟ್‌ನ್ನು ಖರೀದಿಸದರೇ ಮಾತ್ರ ಸಾಕು. cartridg ಖಾಲಿಯಾದಾಗ ಹೊಸ cartridg ಹಾಕಬಹುದು, ಇದರಿಂದಾಗಿ ಹಣ ಉಳಿತಾಯವಾಗಲಿದೆ.

ಇ ಸಿಗರೇಟ್ ದೇಹದ ಆರೋಗ್ಯಕ್ಕೆ ಒಳ್ಳೆಯದೇ ?
ಬ್ಯಾಟರಿ ರಿಚಾರ್ಜ್ ಮಾಡಬಹುದು, ಹೊಗೆಯಲ್ಲಿ ವಾಸನೆಯಿಲ್ಲದ ಕಾರಣ ಪರಿಸರಕ್ಕೆ ಹಾನಿಯಿಲ್ಲ.

ಇ ಸಿಗರೇಟ್ ದೇಹದ ಆರೋಗ್ಯಕ್ಕೆ ಒಳ್ಳೆಯದೇ ?
ವಿವಿಧ ರೀತಿಯ ಇ ಲಿಕ್ವಿಡ್ ಇದ್ದು ಗ್ರಾಹಕರಿಗೆ ಸಿಗರೇಟಿನ ಅನುಭವಕ್ಕಿಂತಲೂ ಉತ್ತಮ ಅನುಭವ ಸಿಗುತ್ತದೆ.


Click it and Unblock the Notifications





