Ayodhya Ram Mandir: ಶ್ರೀ ರಾಮ ಮಂದಿರದ ಆರತಿ ಪಾಸ್‌ಗಳನ್ನು ಬುಕ್ ಮಾಡುವುದು ಹೇಗೆ?
ಅಯೋಧ್ಯಾ ರಾಮ ಮಂದಿರ ದರ್ಶನಕ್ಕೆ ಇಂದಿನಿಂದ ಎಲ್ಲಾ ಭಕ್ತಾಧಿಗಳಿಗೆ ಅವಕಾಶ ನೀಡಲಾಗಿದೆ. ನೆನ್ನೆಯಷ್ಟೇ (ಜ. 22, 2024) ರಾಮ ಮಂದಿರದಲ್ಲಿ ರಾಮ್‌ಲಲ್ಲಾ ವಿಗ್ರಹ ಪ್ರತಿಷ್ಠಾಪನೆ ನಡೆದಿದ್ದು, ಅಪಾರ ಸಂಖ್ಯೆಯ ಭಕ್ತಾಧಿಗಳು ಶ್ರೀ ರಾಮನ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ವೆಬ್‌ಸೈಟ್‌ನಲ್ಲಿ ಆರತಿ ಪಾಸ್‌ಗಳನ್ನು ನೀಡಲಾಗುತ್ತಿದೆ.
ಹೌದು, ಅಯೋಧ್ಯಾ ಶ್ರೀ ರಾಮ ಮಂದಿರ ಉದ್ಘಾಟನೆಯ ನಂತರ ದೇವಸ್ಥಾನದ ಅಧಿಕೃತ ವೆಬ್‌ಸೈಟ್ ಮೂಲಕ ಆರತಿ ಪಾಸ್‌ಗಳನ್ನು ನೀಡಲಾಗುತ್ತಿದೆ. ಇನ್ನು ಅರತಿ ಪಾಸ್‌ಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಕೂಡ ಬುಕಿಂಗ್ ಮಾಡಬಹುದಾಗಿದೆ. ಹಾಗಾದ್ರೆ ಶ್ರೀರಾಮ ಮಂದಿರದ ಆರತಿ ಪಾಸ್‌ಗಳನ್ನು ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಅಯೋಧ್ಯಾ (ayodhya) ಶ್ರೀ ರಾಮ ಮಂದಿರ ಟ್ರಸ್ಟ್ ನೀಡಿರುವ ಮಾಹಿತಿಯಂತೆ ಪ್ರತಿನಿತ್ಯ ಮೂರು ಬಗೆಯ ಆರತಿಗಳು ನಡೆಯಲಿವೆ. ಅಂದರೆ ಪ್ರತಿನಿತ್ಯ ಮುಂಜಾನೆ 06:30 AMಗೆ ಶೃಂಗಾರ ಆರತಿ, ಮಧ್ಯಾಹ್ನ 12:00PM ಗೆ ಭೋಗ್ ಆರತಿ ಹಾಗೂ 07:30 PMಕ್ಕೆ ಸಂಧ್ಯಾ ಆರತಿಯನ್ನು ನಡೆಸಲಾಗುತ್ತದೆ. ರಾಮ ಭಕ್ತರು ಈ ಪಟ್ಟಿಯಲ್ಲಿರುವ ಯಾವುದೇ ಆರತಿಯ ಹೆಸರನ್ನು ಆಯ್ಕೆ ಮಾಡುವುದಕ್ಕೆ ಮತ್ತು ಆರತಿ ಪಾಸ್‌ಗಳನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ.
ಇನ್ನು ನೀವು ಈ ಮೇಲಿನ ಆರತಿ ಸಮಯದಲ್ಲಿ ಮಂದಿರದಲ್ಲಿ ಹಾಜರಾಗಬೇಕಾದರೆ ಆರತಿ ಪಾಸ್ ಪಡೆದಿರುವುದು ಮುಖ್ಯವಾಗುತ್ತದೆ. ಆದರಿಂದ ನಿಮಗೆ ಸೂಕ್ತ ಎನಿಸುವ ಆರತಿ ಸಮಯವನ್ನು ಆಯ್ಕೆ ಮಾಡಿಕೊಂಡು ಆರತಿ ಪಾಸ್ ಬುಕ್ ಮಾಡಿಕೊಳ್ಳಹುದಾಗಿದೆ. ಭದ್ರತೆಯ ಕಾರಣದಿಂದ ಪ್ರತಿ ಆರತಿಗೆ ಕೇವಲ ಮೂವತ್ತು ಜನರಿಗೆ ಮಾತ್ರ ಹಾಜರಾಗಲು ಅನುಮತಿ ಇದೆ. ANI ವರದಿಗಳ ಪ್ರಕಾರ, ಮ್ಯಾನೇಜರ್ ಧ್ರುವೇಶ್ ಅವರು ಪಾಸ್ ಹೊಂದಿರುವವರಿಗೆ ಮಾತ್ರ ತೆರೆಯಲಾಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ರಾಮ ಮಂದಿರದ ಆರತಿ ಪಾಸ್‌ಗಳನ್ನು ಅಯೋಧ್ಯಾ ಶ್ರೀ ರಾಮ ಮಂದಿರದ ಅಧಿಕೃತ ವೆಬ್‌ಸೈಟ್‌ನಿಂದ ಬುಕ್ ಮಾಡುವುದಕ್ಕೆ ಅವಕಾಶವಿದೆ. ಇದಕ್ಕಾಗಿ ಭಕ್ತರು ಸರ್ಕಾರದಿಂದ ನೀಡಲಾದ ಗುರುತಿನ ಚೀಟಿಯನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ. ಪ್ರತಿ ಆರತಿಗೆ ಮೂವತ್ತು ಪಾಸ್‌ಗಳನ್ನು ಮಾತ್ರ ನಿಗದಿಪಡಿಸಲಾಗುತ್ತದೆ. ಈ ಸೇವೆಯು ಸಂಪೂರ್ಣ ಉಚಿತವಾಗಿರುವುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

ಅಯೋಧ್ಯಾ ಶ್ರೀ ರಾಮ ಮಂದಿರದ ಆರತಿ ಪಾಸ್‌ಗಳಿಗಾಗಿ ಬುಕ್ ಮಾಡುವುದು ಹೇಗೆ?
* ಮೊದಲಿಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧಿಕೃತ ವೆಬ್‌ಸೈಟ್ srjbtkshetra.org.ಗೆ ಭೇಟಿ ನೀಡಿ
* ನಂತರ ತೆರೆಯುವ ಪೇಜ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು
* ಇದೀಗ ನಿಮ್ಮ ಮೊಬೈಲ್ ನಂಬರ್‌ಗೆ ಬರುವ OTP ಬಳಸಿಕೊಂಡು ಲಾಗ್ ಇನ್ ಆಗಿರಿ
* ನಂತರ ಮುಖಪುಟದಲ್ಲಿ, ಆರತಿ ವಿಭಾಗದ ಮೇಲೆ ಕ್ಲಿಕ್ ಮಾಡಿ.
* ಇದೀಗ ನೀವು ಹಾಜರಾಗಲು ಬಯಸುವ ದಿನಾಂಕ ಮತ್ತು ಆರತಿಯ ಪ್ರಕಾರವನ್ನು ಆಯ್ಕೆಮಾಡಿ.
* ಭಕ್ತರ ಹೆಸರು, ವಿಳಾಸ, ಫೋಟೋ, ಮೊಬೈಲ್ ಸಂಖ್ಯೆ ಇತ್ಯಾದಿ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ
* ದೇವಸ್ಥಾನಕ್ಕೆ ನಿಮ್ಮ ಭೇಟಿಯ ಸಂದರ್ಭದಲ್ಲಿ, ಕೌಂಟರ್‌ನಿಂದ ಪಾಸ್‌ಗಳನ್ನು ಸಂಗ್ರಹಿಸಿ ಮತ್ತು 'ಆರತಿ'ಗೆ ಹಾಜರಾಗಬಹುದು.

ಆರತಿ ಪಾಸ್ ಬುಕ್ ಮಾಡುವುದಕ್ಕೆ ಬೇಕಾದ ದಾಖಲೆಗಳೇನು?
ಅಯೋಧ್ಯಾ ಶ್ರೀ ರಾಮ ಮಂದಿರದ ನಿರ್ವಾಹಕರ ಪ್ರಕಾರ, ಆರತಿ ಪಾಸ್‌ಗಳಿಗೆ ಕೇವಲ ನಾಲ್ಕು ದಾಖಲೆಗಳು ಸ್ವೀಕಾರಾರ್ಹವಾಗಿರುತ್ತವೆ. ಅವುಗಳೆಂದರೆ
* ಡ್ರೈವಿಂಗ್ ಲೈಸೆನ್ಸ್
* ವೋಟರ್ ಐಡಿ
* ಆಧಾರ್ ಕಾರ್ಡ್
* ಪಾಸ್‌ಪೋರ್ಟ್
ಮೇಲ್ಕಂಡ ಈ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತೆಗೆದುಕೊಂಡು ಹೋಗಬಹುದು, ಅದನ್ನು ಅವರು ಅಧಿಕಾರಿಗಳಿಗೆ ಪ್ರಸ್ತುತಪಡಿಸಬೇಕಾಗುತ್ತದೆ.

ಅಯೋಧ್ಯಾ ಶ್ರೀ ರಾಮ ಮಂದಿರಕ್ಕೆ ಹೋಗುವ ಭಕ್ತರು ಗಮನಿಸಬೇಕಾದ ವಿಚಾರ ಇಲ್ಲಿದೆ.
* 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಪ್ರತ್ಯೇಕ ಪಾಸ್ ಅಗತ್ಯವಿಲ್ಲ.
* ಬುಕ್ಕಿಂಗ್ ಸಮಯದಲ್ಲಿ ನೀವು ಪ್ರಸ್ತುತಪಡಿಸಿದ ID ಪುರಾವೆ ದಾಖಲೆಯನ್ನು ದೇವಸ್ಥಾನಕ್ಕೆ ತರಲೇಬೇಕು.
* ವೀಲ್ ಚೇರ್ ಸಹಾಯಕ ಸೇವೆಗಾಗಿ ಬುಕ್ ಮಾಡುವ ಜನರಿಗೆ ನಾಮಮಾತ್ರ ಶುಲ್ಕವನ್ನು ವಿಧಿಸಲಾಗುತ್ತದೆ.
* ದೃಢೀಕರಣಕ್ಕಾಗಿ SRJBTK SMS/ಇಮೇಲ್ ಜ್ಞಾಪನೆಯನ್ನು 24 ಗಂಟೆಗಳ ಮೊದಲು ಕಳುಹಿಸುತ್ತದೆ.
* ಇಮೇಲ್ ಧೃಡೀಕರಣವನ್ನು ನೀವು ಪರಿಶೀಲಿಸಬೇಕು.
* ಮುಖಪುಟಕ್ಕೆ ಲಾಗಿನ್ ಆಗುವ ಮೂಲಕ ನಿಮ್ಮ ಉಪಸ್ಥಿತಿಯನ್ನು ನೀವು ಖಚಿತಪಡಿಸಿಕೊಳ್ಳಬೇಕು
* ನಂತರ ವಹಿವಾಟು ಇತಿಹಾಸ, ಆರತಿ ಆಯ್ಕೆಮಾಡಿ ಮತ್ತು ಅದನ್ನು ಅಪ್ಡೇಟ್ ಮಾಡಲೇಬೇಕು.
* ನಿಮಗೆ ವರದಿ ಮಾಡುವ ಸ್ಥಳದಲ್ಲಿರುವ ಆರತಿ ಪಾಸ್ ಕೌಂಟರ್‌ನಿಂದ ನಿಮ್ಮ ಪಾಸ್ ಅನ್ನು ನೀವು ಪಡೆದುಕೊಳ್ಳಬೇಕು.


Click it and Unblock the Notifications








