Subscribe to Gizbot

ಇಯರ್‌ಫೋನ್‌ ಹೆಚ್ಚು ಬಳಸುವವರು ಈ ಲೇಖನ ಓದಿ!! ಯಾಕೆ?

Written By:

ದಿನನಿತ್ಯದ ದೀರ್ಘ ಸಮಯ ಇಯರ್‌ಫೋನ್‌ ಬಳಕೆ ಪ್ರತಿಯೊಬ್ಬರ ಬೇಸರವನ್ನು ಕಳೆಯಬಹುದು. ಆದರೆ, ಇಯರ್‌ಫೋನ್‌ ಹೆಚ್ಚು ಬಳಕೆಯಿಂದ ಆರೋಗ್ಯದ ಮೇಲಾಗುವ ಸೈಡ್‌ ಎಫೆಕ್ಟ್‌ಗಳ ಮೇಲೆ ಯಾರು ಹೆಚ್ಚು ಗಮನಹರಿಸಿಯೇ ಇರುವುದಿಲ್ಲ.!!

ಹೌದು, ನೀವೇನಾದರೂ ಹೆಚ್ಚು ಇಯರ್‌ಫೋನ್‌ ಬಳಕೆ ಮಾಡುತಿದ್ದರೆ ಹೇಳಿ?. ಎಷ್ಟು ಡೆಸಿಬಲ್‌ ಮೀರದ ಸೌಂಡ್‌ನಲ್ಲಿ ಇಯರ್‌ಫೋನ್‌ ಬಳಕೆ ಮಾಡಬೇಕು ಎಂದು? ನಿಜವಾಗಿಯೂ ನೀವು ತಿಳಿದಿರುತ್ತಿರಾರ? ತಿಳಿದಿದ್ದರೆ ಒಳ್ಳೆಯದು.! ಇಲ್ಲವಾದರೆ ಇಂದಿನ ಲೇಖನದಲ್ಲಿ ತಿಳಿದುಕೊಳ್ಳಿ.

ಇಯರ್‌ಫೋನ್‌ ಹೆಚ್ಚು ಬಳಸುವವರು ಈ ಲೇಖನ ಓದಿ!! ಯಾಕೆ?

 

  • 80 ಡೆಸಿಬಲ್‌ ಮೀರಿದ ಸೌಂಡ್‌ನಲ್ಲಿ ( 100 ರಿಂದ 120 ಡೆಸಿಬಲ್ ) ಇಯರ್‌ಫೋನ್‌ ಬಳಕೆ ಮಾಡುವುದರಿಂದ ನಿಮ್ಮ ಕಿವಿಗಳು ಕೆಲವೇ ನಿಮಿಷಗಳಲ್ಲಿ ಕೇಳುವಸಾಮರ್ಥ್ಯವನ್ನು ಕಳೆದುಕೊಳ್ಳಬಹುದು..!! ಅದಕ್ಕಾಗಿಯೇ ಸ್ಮಾರ್ಟ್‌ಫೊನ್ ಸೌಂಡ್ ಹೆಚ್ಚಿಸುವಾಗ ನಿಮಗೆ ಅಪಾಯದ ಸೂಚನೆ ನೀಡುವುದು.
  • ಇಯರ್‌ಫೋನ್‌ ಹೆಚ್ಚು ಬಳಕೆ ಮಾಡುವುದರಿಂದ ನಿಮ್ಮ ಕಿವಿಗಳಲ್ಲಿ ಬ್ಯಾಕ್ಟೀರಿಯಾ ಸೋಂಕುಗಳು ಬರುವುದರಲ್ಲಿ ಸಂಶಯವಿಲ್ಲ. ಅದರಲ್ಲಿಯೂ ಕ್ಲೀನ್ ಆಗಿರಬೇಕಾದ ಇಯರ್‌ಫೋನ್‌ ಬಳಕೆ ನಿಮ್ಮ ಸಂಪೂರ್ಣ ಆರೋಗ್ಯಕ್ಕೆ ತೊಂದರೆಯಾಗಬಹುದು.
ಇಯರ್‌ಫೋನ್‌ ಹೆಚ್ಚು ಬಳಸುವವರು ಈ ಲೇಖನ ಓದಿ!! ಯಾಕೆ?
  • ಇಯರ್‌ಫೋನ್‌ ಬಳಸುವವರು ಪ್ರಪಂಚ ಮರೆತು ತಲ್ಲಿನರಾಗಿ ಕಾರು ಅಪಘಾತ, ರಸ್ತೆ ಅಪಘಾತ, ಅಲ್ಲದೇ ರೈಲು ಅವಘಡಗಳಿಗೆ ಗುರಿಯಾಗಿದ್ದಾರೆ. ವರ್ಷಕ್ಕೆ ಇಯರ್‌ಫೋನ್‌ನಿಂದಾಗಿ ಸಾವಿರಕ್ಕೂ ಹೆಚ್ಚು ಜನ ಸಾವನಪ್ಪುತ್ತಿದ್ದಾರೆ.
Read more about:
English summary
Now for the painful truth, you can lose your hearing in just 15 minutes if you listen at 100-105 decibels.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot