ನೀವು ಸ್ಮಾರ್ಟ್‌ಫೋನಿನಲ್ಲಿ ಇದೊಂದು ಕೆಲಸ ಮಾಡಿ ಮ್ಯಾಜಿಕ್ ನೋಡಿ!

|

ಇಂದು ಸ್ಮಾರ್ಟ್‌ಫೋನ್‌ ಎಲ್ಲರ ಅಗತ್ಯದ ವಸ್ತುವಾಗಿರುವುದರಿಂದ ಎಲ್ಲರೂ ಸ್ಮಾರ್ಟ್‌ಫೋನನ್ನು ಖರೀದಿಸುತ್ತಿದ್ದಾರೆ. ಆದರೆ, ಹೀಗೆ ಸ್ಮಾರ್ಟ್‌ಫೋನ್ ಖರೀದಿಸಿದ ನಂತರ ಅದು ಚೆನ್ನಾಗಿ ಕೆಲಸ ಮಾಡಲು ಏನು ಮಾಡಬೇಕು ಎಂದು ಶೇ. 75ರಷ್ಟು ಜನರು ತಲೆ ಕೆಡಿಸಿಕೊಳ್ಳುವುದಿಲ್ಲ. ಇದರಿಂದಾಗಿಯೇ ಹಲವರ ಫೋನ್‌ ವೇಗವಾಗಿ ಕೆಲಸ ಮಾಡುವುದಿಲ್ಲ ಎನ್ನುತ್ತಾರೆ ತಜ್ಞರು.

ಉದಾಹರಣೆಗೆ, ನಾನೊಂದು ಮೊಬೈಲ್‌ ಖರೀದಿಸಿದ್ದೆ, ಆದರೆ, ಇತ್ತೀಚಿಗೆ ಅದರ ವೇಗ ಕಡಿಮೆಯಾಗಿದೆ. ಜೊತೆಗೆ ಬ್ಯಾಟರಿ ಜಾಸ್ತಿ ಹೊತ್ತು ಬರುವುದಿಲ್ಲ. ಒಂದು ದಿನಕ್ಕೇ ಖಾಲಿಯಾಗಿ ಬಿಡುತ್ತದೆ ಎಂದು ಹೇಳುವವರಿದ್ದಾರೆ. 4000 ಎಂಎಎಚ್ ಬ್ಯಾಟರಿ ಇರುವ ಫೋನ್‌ ಅದಾಗಿದ್ದರೂ ಸಹ ಒಂದು ದಿನ ಪೂರ್ತಿ ಬ್ಯಾಟರಿ ಸಾಕಾಗುವುದಿಲ್ಲ ಎಂದು ದಿನವೂ ಕೊರಗುತ್ತಿದ್ದಾರೆ.

ನೀವು ಸ್ಮಾರ್ಟ್‌ಫೋನಿನಲ್ಲಿ ಇದೊಂದು ಕೆಲಸ ಮಾಡಿ ಮ್ಯಾಜಿಕ್ ನೋಡಿ!

ಯಾವುದೇ ಒಂದು ಸ್ಮಾರ್ಟ್‌ಫೋನ್‌ ವೇಗವಾಗಿ ಕೆಲಸ ಮಾಡಲು, ಅದರ ಬ್ಯಾಟರಿ ಹೆಚ್ಚು ಹೊತ್ತು ಬರಲು, ಮೊಬೈಲ್‌ ಫೋನ್‌ಗೆ ವೈರಸ್‌ ದಾಳಿ ಮಾಡದಿರಲು ಕೆಲವು ಸಣ್ಣ ಪುಟ್ಟ ನಿರ್ವಹಣೆ ಮಾಡುತ್ತಿರಬೇಕಾಗುತ್ತದೆ. ಹಾಗಾಗಿ, ಈ ಲೇಖನದಲ್ಲಿ ನ ನಿಮ್ಮ ಫೋನ್‌ ಸರಾಗವಾಗಿ ಕೆಲಸ ಮಾಡಲು ಅನುಸರಿಸಬೇಕಾದ ಒಂದೇ ಒಂದು ಮುಖ್ಯ ಕ್ರಮವನ್ನು ನಾನು ತಿಳಿಸಿಕೊಡುತ್ತೇನೆ.

ನೀವು ಮೊಬೈಲ್‌ ಬಳಸಿದ ನಂತರ, ಹಿನ್ನೆಲೆಯಲ್ಲಿ ಆಪ್‌ಗಳು ಕೆಲಸ ಮಾಡುತ್ತಿರುತ್ತವೆ. ಅವುಗಳನ್ನು ಹಾಗೆಯೇ ಕೆಲಸ ಮಾಡಲು ಬಿಟ್ಟರೆ ಬ್ಯಾಟರಿ ಬಹುಬೇಗ ಖಾಲಿಯಾಗುತ್ತದೆ. ಅಲ್ಲದೇ ನಿಮ್ಮ ಮೊಬೈಲ್‌ನ ರ್ಯಾಮ್‌ ಕೂಡ ಬಳಕೆಯಾಗುವುದರಿಂದ ಅದರ ವೇಗ ಕಡಿಮೆಯಾಗುತ್ತಿದೆ. ಹಾಗಾಗಿ, ಯಾವಾಗಲೂ ಹಿನ್ನೆಲೆ ಕೆಲಸ ಮಾಡುವ ಆಪ್‌ಗಳನ್ನು ಡಿಲೀಟ್ ಮಾಡುತ್ತಿರಿ.

ನೀವು ಸ್ಮಾರ್ಟ್‌ಫೋನಿನಲ್ಲಿ ಇದೊಂದು ಕೆಲಸ ಮಾಡಿ ಮ್ಯಾಜಿಕ್ ನೋಡಿ!

ನಿಮ್ಮ ಫೋನಿನ ಪರದೆಯ ಕೆಳಗೆ, ಒಂದು ಬಾಣದ ಗುರುತು, ಒಂದು ರೌಂಡ್‌ ಗುರುತು, ಒಂದು ಚಚ್ಚೌಕದ ಗುರುತು ಇರುತ್ತದೆ. ಇದನ್ನು ನ್ಯಾವಿಗೇಷನ್ ಬಟನ್ ಎನ್ನುತ್ತಾರೆ. ಅದರಲ್ಲಿ ಚಚ್ಚೌಕದ ಗುರುತು ಒತ್ತಿದರೆ ನೀವು ನೋಡಿದ ಅಪ್ಲಿಕೇಷನ್‌ಗಳು ಹಿನ್ನೆಲೆಯಲ್ಲಿ ಕುಳಿತು ಕೆಲಸ ಮಾಡುತ್ತಿರುತ್ತದೆ. ಅವುಗಳು ಕೆಳಗಿರುವ ಡಿಲೀಟ್‌ ಗುರುತು ಒತ್ತಿದರೆ ಕ್ಲಿಯರ್ ಆಗುತ್ತವೆ.

ಮೊಬೈಲ್ ಸ್ಪೋಟಕ್ಕೆ ಏನೆಲ್ಲಾ ಕಾರಣಗಳು ಇರಬಹುದು ಎಂಬ ಕಲ್ಪನೆ ಕೂಡ ನಿಮಗಿಲ್ಲ!

ಮೊಬೈಲ್ ಸ್ಪೋಟಕ್ಕೆ ಏನೆಲ್ಲಾ ಕಾರಣಗಳು ಇರಬಹುದು ಎಂಬ ಕಲ್ಪನೆ ಕೂಡ ನಿಮಗಿಲ್ಲ!

ಇತ್ತೀಚಿಗೆ ಮೊಬೈಲ್ ಸ್ಪೋಟವಾಗುತ್ತಿರುವ ವರದಿಗಳು ಹೆಚ್ಚಾದಂತೆ ಮೊಬೈಲ್ ಸ್ಫೋಟಕ್ಕೆ ಕಾರಣಗಳು ಯಾವುವು ಎಂದು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಇದರಲ್ಲಿ ಫ್ರಾನ್ಸ್ ವಿಜ್ಞಾನಿಗಳ ಗುಂಪೊಂದು ಸಂಶೋಧನೆ ನಡೆಸಿ ಮೊಬೈಲ್ ಸ್ಪೋಟಕ್ಕೆ ನಿಖರ ಕಾರಣಗಳು ಯಾವುವು ಎಂದು ಗುರುತಿಸಿದೆ. ನಿಮಗೆ ಗೊತ್ತಾ?, ಮೊಬೈಲ್ ಸ್ಪೋಟಕ್ಕೆ ಏನೆಲ್ಲಾ ಕಾರಣಗಳು ಇರಬಹುದು ಎಂಬ ಕಲ್ಪನೆ ಕೂಡ ನಿಮಗೆ ಇರಲಿಕ್ಕಿಲ್ಲ.!

ಹೌದು, ವಿಜ್ಞಾನಿಗಳು ಹೇಳುವಂತೆ ಮೊಬೈಲ್ ಸ್ಪೋಟವಾಗಲು ಪ್ರಮುಖ ಮೂರು ಕಾರಣಗಳಿವೆಯಂತೆ. ಅವರ ಸಂಶೋಧನೆ ಪ್ರಕಾರ, ಚಾರ್ಜರ್ ಸಮಸ್ಯೆಯೇ ಮೊಬೈಲ್ ಸ್ಪೋಟಕ್ಕೆ ಮೊದಲ ಕಾರಣವಾದರೆ, ಎರಡನೆಯದು ನೀವು ಬಳಸುವ ಮೊಬೈಲ್ ಬ್ಯಾಕ್ ಕವರ್ (ಪೌಚ್) ಅಂತೆ. ಹಾಗೆಯೇ, ಮೊಬೈಲ್ ಬ್ಯಾಟರಿಯನ್ನು ಹೇಗೆ ಚಾರ್ಜ್ ಮತ್ತು ಅದರ ನಿರ್ವಹಣೆ ಮಾಡಬೇಕು ಎಂಬುದನ್ನು ತಿಳಿಯದಿರುವುದು ಸಹ ಮೊಬೈಲ್ ಸ್ಪೋಟಕ್ಕೆ ಕಾರಣವಂತೆ.

ಮೊಬೈಲ್ ಸುರಕ್ಷಿತವಾಗಿರಲಿ ಎಂದು ಬಳಸುವ ಬ್ಯಾಕ್ ಪೌಚ್ ನಿಮ್ಮ ಮೊಬೈಲ್ ಸಿಡಿಯಲು ಮುಖ್ಯ ಕಾರಣಗಳಲ್ಲಿ ಒಂದು ಎಂದಿರುವ ವಿಜ್ಞಾನಿಗಳು ಅದಕ್ಕೆ ಕಾರಣವನ್ನು ಸಹ ನೀಡಿದ್ದಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ಮೊಬೈಲ್ ಸ್ಪೋಟಕ್ಕೆ ನಿಖರ ಕಾರಣಗಳು ಯಾವುವು?, ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಹೇಗೆ ನಿರ್ವಹಣೆ ಮಾಡಬೇಕು?, ಬ್ಯಾಕ್ ಪೌಚ್‌ನಿಂದ ನಿಮ್ಮ ಮೊಬೈಲ್ ಸಿಡಿಯಲು ಕಾರಣವೇನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಬ್ಯಾಕ್ ಪೌಚ್‌ನಿಂದ ಮೊಬೈಲ್ ಸ್ಪೋಟ!

ಬ್ಯಾಕ್ ಪೌಚ್‌ನಿಂದ ಮೊಬೈಲ್ ಸ್ಪೋಟ!

ಮೊಬೈಲ್ ಸುರಕ್ಷಿತವಾಗಿರಲಿ ಎಂದು ಬಳಸುವ ಬ್ಯಾಕ್ ಪೌಚ್ ನಿಮ್ಮ ಮೊಬೈಲ್ ಸಿಡಿಯಲು ಮುಖ್ಯ ಕಾರಣಗಳಲ್ಲಿ ಒಂದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಮೊಬೈಲ್ ಅನ್ನು ಹೆಚ್ಚು ಬಳಸಿದಾಗ ಆ ಮೊಬೈಲ್ ಹೆಚ್ಚು ಬಿಸಿಯಾಗುತ್ತದೆ. ಮೊಬೈಲ್ ಬಿಸಿಯಾದಾಗ ಬ್ಯಾಕ್ ಪೌಚ್‌ಗಳು ಉಷ್ಣತೆಯನ್ನು ಹೊರಹಾಕಲು ಬಿಡುವುದಿಲ್ಲ. ಇದರ ಒತ್ತಡ ತಡೆಯಲಾರದೆ ಮೊಬೈಲ್ ಬ್ಯಾಟರಿಗಳು ಸಿಡಿಯುತ್ತವೆ ಎಂದು ತಿಳಿಸಿದೆ.

ಚಾರ್ಜಿಂಗ್ ವೇಳೆ ಮೊಬೈಲ್ ಬಳಕೆ

ಚಾರ್ಜಿಂಗ್ ವೇಳೆ ಮೊಬೈಲ್ ಬಳಕೆ

ಚಾರ್ಜಿಂಗ್ ವೇಳೆ ಸ್ಮಾರ್ಟ್‌ಫೋನ್ ಬಳಕೆ ಕೂಡ ಮೊಬೈಲ್ ಫೋನ್‌ನ ಸ್ಫೋಟಕ್ಕೆ ಮತ್ತೊಂದು ಕಾರಣ ಎಂದು ಸಂಶೋಧಕರು ತಿಳಿಸಿದ್ದಾರೆ. ಸ್ಮಾರ್ಟ್‌ಫೋನಿನ ಮದರ್ ಬೋರ್ಡ್‌ಗೆ ಚಾರ್ಜಿಂಗ್ ಒತ್ತಡ ಹೆಚ್ಚು ಬೀಳುವುದು ಕೂಡ ಮೊಬೈಲ್ ಸ್ಪೋಟಕ್ಕೆ ಕಾರಣ ಎಂದು ಹೇಳಿದ್ದಾರೆ. ಮೊಬೈಲ್ ಬ್ಯಾಟರಿ ಬಾಳಿಕೆಯನ್ನು ಅದರ ಸಾಫ್ಟ್‌ವೇರ್ ತಂತ್ರಜ್ಞಾನ ನಿಯಂತ್ರಿಸಿದರೂ ಸಹ ಅದರ ಒತ್ತಡವನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಕಳಪೆ ಪವರ್ ಬ್ಯಾಂಕ್

ಕಳಪೆ ಪವರ್ ಬ್ಯಾಂಕ್

ಕಳಪೆ ಗುಣಮಟ್ಟದ ಪವರ್‌ಬ್ಯಾಂಕ್ ಕೂಡ ಮೊಬೈಲ್ ಸ್ಪೋಟಕ್ಕೆ ಕಾರಣ ಎಂದು ಸಂಶೋಧಕರು ತಿಳಿಸಿದ್ದಾರೆ. ಹಾಗಾಗಿ, ಪವರ್ ಬ್ಯಾಂಕ್ ಪವರ್ ಬ್ಯಾಂಕ್ ಬಳಸುವಾಗ ಎಚ್ಚರವಿರಲಿ. ನೀವು ಬಳಸುವ ಪವರ್ ಬ್ಯಾಂಕ್ ವಿದ್ಯುತ್ ಪ್ರವಾಹದ ಏರಿಳಿತ, ಶಾರ್ಟ್ ಸರ್ಕ್ಯೂಟ್, ದೀರ್ಘ ಚಾರ್ಜಿಂಗಳಿಂದಾಗುವ ಹಾಗೂ ಅತೀ ಬಿಸಿಯಾಗುವಿಕೆ ಸಮಸ್ಯೆಗಳಿಂದ ನಿಮ್ಮ ಸ್ಮಾರ್ಟ್‌ಫೋನಿನ ಸುರಕ್ಷತೆಯನ್ನೊದಗಿಸುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ. ಮತ್ತು ಯುಎಸ್‌ಬಿ ಕೇಬಲ್ ಬಗ್ಗೆ ಜಾಗೃತವಾಗಿರಿ.

ಪದೇ ಪದೇ ಮೊಬೈಲ್ ಚಾರ್ಜ್

ಪದೇ ಪದೇ ಮೊಬೈಲ್ ಚಾರ್ಜ್

ಪದೇ ಪದೇ ಮೊಬೈಲ್ ಚಾರ್ಜ್ ಮಾಡುವ ಅಭ್ಯಾಸ ಬಿಟ್ಟುಬಿಡಿ ಇದರಿಂದ ಕೂಡ ಮೊಬೈಲ್ ಸ್ಪೋಟಗೊಳ್ಳುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ತಿಳಿಸಿದ್ದಾರೆ. ಮೊಬೈಲ್ ಬ್ಯಾಟರಿಯನ್ನು ಒಮ್ಮೆ (80%)ಪೂರ್ತಿಯಾಗುವವರೆಗೂ ಚಾರ್ಜ್ ಮಾಡಿದ ನಂತರ ಬಳಕೆ ಮಾಡಿ. ಪದೇ ಪದೇ ಚಾರ್ಜ್ ಮಾಡುವುದರಿಂದ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸ್ಮಾರ್ಟ್‌ಫೋನಿನ ಬ್ಯಾಟರಿ ಸ್ಪೋಟವಾಗಬಹುದು ಎಂದಿದ್ದಾರೆ.

ಕಳಪೆ ಚಾರ್ಜರ್ ಬಗ್ಗೆ ಎಚ್ಚರ!

ಕಳಪೆ ಚಾರ್ಜರ್ ಬಗ್ಗೆ ಎಚ್ಚರ!

ಮೊಬೈಲ್ ಜೊತೆಗೆ ಬಂದಿದ್ದ ಚಾರ್ಜರ್ ಅನ್ನೇ ಯಾವಾಗಲೂ ಬಳಸಿ. ಚಾರ್ಜರ್ ಹಾಳಾದರೆ ಹಣ ಉಳಿಸುವ ಸಲುವಾಗಿ ಕಳಪೆ ಚಾರ್ಜರ್‌ಗಳನ್ನು ಖರೀದಿಸಿ ಬಳಸಬೇಡಿ. ಅವುಗಳು ವಿದ್ಯುತ್ ಪ್ರವಾಹದ ಏರಿಳಿತಗಳಿಂದ ಅಥವಾ ಚಾರ್ಜ್ ಸಂಪೂರ್ಣವಾದ ಬಳಿಕ ಆಗುವ ಹಾನಿಯಿಂದ ರಕ್ಷಿಸುವ ಸುರಕ್ಷತಾ ತಂತ್ರಜ್ಞಾನವನ್ನು ಹೊಂದಿರುವುದಿಲ್ಲ. ಅಂತಹ ಚಾರ್ಜರ್'ಗಳಿಂದ ನಿಮ್ಮ ಫೋನ್ ಸ್ಪೋಟಗೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಅಗತ್ಯಕ್ಕಿಂತ ಹೆಚ್ಚು ಚಾರ್ಜಿಂಗ್

ಅಗತ್ಯಕ್ಕಿಂತ ಹೆಚ್ಚು ಚಾರ್ಜಿಂಗ್

ರಾತ್ರಿಯಿಡೀ ಫೋನನ್ನು ಚಾರ್ಜ್‌ಗೆ ಇಡುವುದು ಕೂಡ ಒಳ್ಳೆಯ ಅಭ್ಯಾಸವೇನಲ್ಲ. ಮೊಬೈಲ್ ಚಾರ್ಜ್ ಮಾಡುವಾಗ ಹೆಚ್ಚೆಂದರೆ ಶೇ.80ರಷ್ಟು ಬ್ಯಾಟರಿ ಚಾರ್ಜ್ ಮಾಡಿ ಮತ್ತು ಕಡಿಮೆ ಎಂದರೂ 20 ಪರ್ಸೆಂಟ್ ಬ್ಯಾಟರಿ ಚಾರ್ಜ್ ಇರುವಂತೆ ನೋಡಿಕೊಳ್ಳಿ. ಅಗತ್ಯಕ್ಕಿಂತ ಹೆಚ್ಚು ಚಾರ್ಜಿಂಗ್ ನಿಮ್ಮ ಫೋನ್ ಬ್ಯಾಟರಿಯ ಬಾಳಿಕೆಯನ್ನು ಕುಂಠಿತಗೊಳಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಫಾಸ್ಟ್ ಚಾರ್ಜರ್ ಬೇಡ!

ಫಾಸ್ಟ್ ಚಾರ್ಜರ್ ಬೇಡ!

ಫಾಸ್ಟ್ ಚಾರ್ಜರ್‌ಗಳನ್ನು ಆ ತಂತ್ರಜ್ಞಾನ ಅಳವಡಿಕೆಯಾಗಿಲ್ಲದ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆ ಮಾಡಬೇಡಿ. ಫಾಸ್ಟ್ ಚಾರ್ಜರ್‌ನಲ್ಲಿ ಹೈ ವೋಲ್ಟೇಜ್ ಸರಬರಾಜಾಗುವುದರಿಂದ ಬ್ಯಾಟರಿ ಬೇಗನೇ ಬಿಸಿಯಾಗುತ್ತದೆ. ಫಾಸ್ಟ್ ಚಾರ್ಜರ್ ತಂತ್ರಜ್ಞಾನವಿರುವ ಸ್ಮಾರ್ಟ್‌ಫೋನ್ ಆದರೂ ಯಾವಾಗಲೂ ತ್ವರಿತ ಚಾರ್ಜರ್‌ಗಳನ್ನು ಬಳಸುವುದು ಒಳ್ಳೆಯದಲ್ಲ. ಹಾಗಾಗಿ, ಇದು ನಿಮ್ಮ ನೆನಪಿನಲ್ಲಿರಲಿ.

ಅದರದ್ದೇ ಆದ ಚಾರ್ಜರ್

ಅದರದ್ದೇ ಆದ ಚಾರ್ಜರ್

ನಿಮ್ಮ ಫೋನನ್ನು ಅದರದ್ದೇ ಆದ ಚಾರ್ಜರ್'ನಿಂದ ಚಾರ್ಜ್ ಮಾಡಿ. ಮೊಬೈಲ್ ಫೋನ್'ಗಳು ಇತರ ಚಾರ್ಜರ್'ಗಳಿಂದ ಚಾರ್ಜ್ ಆಗುವುದಾದರೂ, ಅದು ಅಸಲಿ ಫೋನ್ ಚಾರ್ಜರ್‌ಗೆ ಹೋಲಿಕೆಯಾಗದಿದ್ದಲ್ಲಿ ನಿಮ್ಮ ಫೋನ್ ಬ್ಯಾಟರಿ ಸಾಮರ್ಥ್ಯದ ಮೇಲೆ ಅದು ದುಷ್ಪರಿಣಾಮ ಬೀಳುತ್ತದೆ. ಬಹುತೇಕ ಬೇರೆ ಯಾವ ಚಾರ್ಜರ್ ಕೂಡ ಸರಿಯಾಗಿ ಹೋಲಿಕೆಯಾಗುವುದಿಲ್ಲ. ಇನ್ನು ಥರ್ಡ್ ಪಾರ್ಟಿ ಬ್ಯಾಟರಿ ಆಪ್‌ಗಳನ್ನು ಬಳಸದಿರುವುದು ಸಹ ನಿಮ್ಮ ಬ್ಯಾಟರಿ ನಿರ್ವಹಣೆಗೆ ಉತ್ತಮ.

Best Mobiles in India

English summary
There are a few simple steps you can take to improve the speed of your device. but thisTip can easily Improve Your smartphone Performance. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X