Home
ಟೆಕ್ ನೌಕರಿ

ನಿಮ್ಮ ಸ್ಮಾರ್ಟ್‌ಫೋನಿನ ವಾಲ್ಯೂಮ್ ಬೂಸ್ಟ್ ಮಾಡುವುದು ಹೇಗೆ?

ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಪೀಕರ್‌ಗಳ ಗುಣಮಟ್ಟ ಹೆಚ್ಚಾದಂತೆ ಅದರಲ್ಲಿ ಕೇಳಿಸುವ ಧ್ವನಿ ಕೂಡ ಕಡಿಮೆಯಾಗಿದೆ ಎಂದು ಹೇಳಬಹುದು. ಹಾಗಾಗಿಯೇ, ಅನೇಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಕಡಿಮೆ ಪ್ರಮಾಣದ ಧ್ವನಿಯ ಬಗ್ಗೆ ಆಗಾಗ್ಗೆ ದೂರು ನೀಡುತ್ತಾರೆ ಮತ್ತು ಅದಕ್ಕಾಗಿ ಅವರು ತಮ್ಮ ಸ್ಮಾರ್ಟ್‌ಫೋನ್ ಅದನ್ನು ಬದಲಾಯಿಸಲು ಬಯಸುತ್ತಾರೆ. ಆದರೆ, ಹೆಚ್ಚು ಧ್ವನಿ ನೀಡದ ಸ್ಪೀಕರ್‌ ಸ್ಮಾರ್ಟ್‌ಫೋನ್‌ಗಳನ್ನು ಬದಲಾಯಿಸಬೇಕಿಲ್ಲ. ಏಕೆಂದರೆ, ಆಪ್‌ಗಳ ಸಹಾಯದಿಂದ ನಿಮ್ಮ ಫೋನಿನ ಧ್ವನಿಯ ಸಾಮರ್ಥ್ಯವನ್ನು ಹೆಚ್ಚಿಸಬಹುದು.

ನಿಮ್ಮ ಸ್ಮಾರ್ಟ್‌ಫೋನಿನ ವಾಲ್ಯೂಮ್ ಬೂಸ್ಟ್ ಮಾಡುವುದು ಹೇಗೆ?

ಹೌದು, ಟಿವಿ ಕಾರ್ಯಕ್ರಮಗಳು, ಚಲನಚಿತ್ರಗಳು, ಸಂಗೀತವನ್ನು ಕೇಳುವುದು, ಯೂಟ್ಯೂಬ್ ವೀಡಿಯೊಗಳನ್ನು ನೋಡುವುದು ಈ ದಿನಗಳಲ್ಲಿ ಬಹಳ ಸಾಮಾನ್ಯವಾಗಿದೆ. ಆದರೆ ಸಾಕಷ್ಟು ದೊಡ್ಡ ಶಬ್ದವಿಲ್ಲದಿದ್ದಾಗ ಅದು ಬಳಕೆದಾರರ ವಿನೋದವನ್ನು ಹಾಳು ಮಾಡುತ್ತದೆ. ಇದಕ್ಕೆ ಪರಿಹಾರವಾಗಿ ವಾಲ್ಯೂಮ್ ಬೂಸ್ಟರ್ ಅಪ್ಲಿಕೇಶನ್‌ಗಳು ಲಭ್ಯವಿವೆ. ಹಾಗಾದರೆ, ಸ್ಮಾರ್ಟ್‌ಫೋನ್ ಬದಲಿಸದೇಕೆಲವು ವಾಲ್ಯೂಮ್ ಬೂಸ್ಟರ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಸ್ಮಾರ್ಟ್‌ಫೋನಿನ ಧ್ವನಿಯ ಸಾಮರ್ಥ್ಯವನ್ನು ಹೆಚ್ಚಿಸುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ಗುಡ್ಇವಿ (GOODEV)

ಗುಡ್ಇವಿ (GOODEV)

ಇದೊಂದು ಉಚಿತ ಆಂಡ್ರಾಯ್ಡ್ ಅಪ್ಲಿಕೇಶನ್ ಆಗಿದ್ದು ಅದನ್ನು ಬಳಸಲು ತುಂಬಾ ಸರಳವಾಗಿದೆ. ಇದು ನಿಮ್ಮ ಸ್ಪೀಕರ್ ಮತ್ತು ಹೆಡ್‌ಫೋನ್‌ನ ಧ್ವನಿ ಪ್ರಮಾಣವನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಆಂಡ್ರಾಯ್ಡ್ 4.2 ಮತ್ತು ಅದಕ್ಕಿಂತ ಹೆಚ್ಚಿನದನ್ನು ಬೆಂಬಲಿಸುವ ಯಾವುದೇ ಸ್ಮಾರ್ಟ್‌ಫೋನ್‌ಗಳಲ್ಲಿ ವಾಲ್ಯೂಮ್ ಬೂಸ್ಟರ್ ಗುಡ್‌ಇವಿ ಕಾರ್ಯನಿರ್ವಹಿಸಬಹುದು. ಇದು ಧ್ವನಿಯನ್ನು ಹೆಚ್ಚಿಸುತ್ತದೆ ಮತ್ತು ಯಾವುದೇ ರೀತಿಯ ಕೆಲಸಗಳಿಗೆ ಮೂಲ ಪ್ರವೇಶದ ಅಗತ್ಯವಿರುವುದಿಲ್ಲ.

ವಿ.ಎಲ್.ಸಿ. (VLC)

ವಿ.ಎಲ್.ಸಿ. (VLC)

ಇದು ಎಲ್ಲಾ ಮಾಧ್ಯಮ ಸ್ವರೂಪಗಳನ್ನು ಬೆಂಬಲಿಸುವ ಅತ್ಯಂತ ಜನಪ್ರಿಯ ಮೀಡಿಯಾ ಪ್ಲೇಯರ್ ಅಪ್ಲಿಕೇಶನ್ ಆಗಿದೆ ಮತ್ತು ಇದು ಉಚಿತವಾಗಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಇದು ಧ್ವನಿಯನ್ನು ಸುಮಾರು ಎರಡು ಪಟ್ಟು ಹೆಚ್ಚಿಸುತ್ತದೆ, ಅಂದರೆ ನಿಮ್ಮ ಸ್ಮಾರ್ಟ್‌ಫೋನಿನ ಧ್ವನಿಯು 200% ಹೆಚ್ಚಿಸುತ್ತದೆ. ಹಾಗಾಗಿ, ಇದು ಕೂಡ ನಿಮ್ಮ ಫೋನಿನ ಧ್ವನಿಯನ್ನು ಹೆಚ್ಚಿಸಲು ಇರುವ ಅತ್ಯುತ್ತಮ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ.

ಪ್ರೆಸಿಸ್ ವಾಲ್ಯೂಮ್ (Precise Volume)

ಪ್ರೆಸಿಸ್ ವಾಲ್ಯೂಮ್ (Precise Volume)

ನಿಮ್ಮ ಆಂಡ್ರಾಯ್ಡ್ ಸಾಧನಕ್ಕಾಗಿ ಇದು ಪೂರ್ಣ-ವೈಶಿಷ್ಟ್ಯದ ವಾಲ್ಯೂಮ್ ಕಂಟ್ರೋಲ್ ಹಬ್‌ನಂತಿದೆ. ಈ ಪ್ರೆಸಿಸ್ ವಾಲ್ಯೂಮ್ ಆಪ್ ಸಹಾಯದಿಂದ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ 15 ವಾಲ್ಯೂಮ್ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಜೊತೆಗೆ ಇದರಲ್ಲಿ ದಿನೀವು 100 ವಿಭಿನ್ನ ಹಂತದ ವಾಲ್ಯೂಮ್ ಅನ್ನು ಪಡೆಯಬಹುದು. ನಿಮ್ಮ ಸಾಧನದ ಆಡಿಯೊ ಸಿಸ್ಟಮ್‌ಗೆ ನೀವು ಇದನ್ನು ಸುಲಭವಾಗಿ ಜೋಡಿಸಬಹುದು. ಇದು 2019 ರ ಜನಪ್ರಿಯ ವಾಲ್ಯೂಮ್ ಬೂಸ್ಟರ್ ಅಪ್ಲಿಕೇಶನ್ ಆಗಿದೆ.

ಈಕ್ವಲೈಜರ್ ಎಫ್ಎಕ್ಸ್ (Equaliser FX )

ಈಕ್ವಲೈಜರ್ ಎಫ್ಎಕ್ಸ್ (Equaliser FX )

ಈ ಈಕ್ವಲೈಜರ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನೀವು ಉಚಿತವಾಗಿ ಡೌನ್‌ಲೋಡ್ ಮಾಡಬಹುದಾಗಿದ್ದು, ಇದು ಬಹುತೇಕ ಎಲ್ಲಾ ಸ್ಟ್ರೀಮಿಂಗ್ ಸೇವೆಗಳನ್ನು ಬೆಂಬಲಿಸುತ್ತದೆ. ಇದು ಗೂಗಲ್ ಪ್ಲೇ ಸಂಗೀತವನ್ನೂ ಒಳಗೊಂಡಿದೆ. ಇದು ಲೌಡ್‌ನೆಸ್ ವರ್ಧಕ ಮತ್ತು ಬಾಸ್ ಬೂಸ್ಟ್‌ನಂತಹ ಹಲವಾರು ಧ್ವನಿ ಪರಿಣಾಮಗಳನ್ನು ಸಹ ಒದಗಿಸುತ್ತದೆ. ಇದರೊಂದಿಗೆ ನಿಮ್ಮ ಸಾಧನದ ಧ್ವನಿ ಗುಣಮಟ್ಟವನ್ನು ನೀವು ಸುಲಭವಾಗಿ ಸುಧಾರಿಸಬಹುದು.

ವೈಪರ್ 4 ಆಂಡ್ರಾಯ್ಡ್ (Viper4Android )

ವೈಪರ್ 4 ಆಂಡ್ರಾಯ್ಡ್ (Viper4Android )

ವಿವಿಧ ರೀತಿಯ ಧ್ವನಿ ಫಿಲ್ಟರ್‌ಗಳನ್ನು ಅನ್ವಯಿಸಲು ರೂಟ್ ಪ್ರವೇಶದ ಅಗತ್ಯವಿರುವ ಅತ್ಯುತ್ತಮ ಆಯ್ಕೆಗಳಲ್ಲಿ ವೈಪರ್ 4 ಆಂಡ್ರಾಯ್ಡ್ ಒಂದಾಗಿದೆ ಮತ್ತು ಧ್ವನಿ ಪರಿಣಾಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಹೆಚ್ಚುವರಿ ಲೌಡ್ ಮೋಡ್ ಅನ್ನು ಸಹ ಹೊಂದಿದೆ. ಅದು ಸ್ವಲ್ಪಮಟ್ಟಿಗೆ ತೀವ್ರತೆಗೆ ಹೋಗಬಹುದು. ಇದು ಉತ್ತಮ ಧ್ವನಿಗಳನ್ನು ಸಾಧಿಸಲು ಸಹಾಯ ಮಾಡುವ ಸ್ಪೀಕರ್ ಆಪ್ಟಿಮೈಸೇಶನ್ ಆಯ್ಕೆಗಳನ್ನು ಸಹ ಹೊಂದಿದೆ.

ಸೂಪರ್ ಹೈ ವಾಲ್ಯೂಮ್ ಬೂಸ್ಟರ್ (Super High Volume Booster)

ಸೂಪರ್ ಹೈ ವಾಲ್ಯೂಮ್ ಬೂಸ್ಟರ್ (Super High Volume Booster)

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬಹಳ ಜನಪ್ರಿಯವಾದ ಸೌಂಡ್ ಬೂಸ್ಟರ್ ಆಪ್ ಇದಾಗಿದೆ. ಆಡಿಯೊ ಟೋನ್ಗಳನ್ನು ಸುಧಾರಿಸಲು ಇದು ಈಕ್ವಲೈಜರ್ ಹೊಂದಿಲ್ಲವಾದರೂ, ಇದು ಕೇವಲ ಒಂದು ಕ್ಲಿಕ್ ಮೂಲಕ ವಾಲ್ಯೂಮ್ ಅನ್ನು ಬಹಳ ಸುಲಭವಾಗಿ ಹೆಚ್ಚಿಸುತ್ತದೆ.ಮ್ಮ ಸಾಧನದ ಆಡಿಯೊ ಸಿಸ್ಟಮ್‌ಗೆ ನೀವು ಇದನ್ನು ಸುಲಭವಾಗಿ ಜೋಡಿಸಬಹುದು. ಇದು 2019 ರ ಜನಪ್ರಿಯ ವಾಲ್ಯೂಮ್ ಬೂಸ್ಟರ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ.

ವಾಲ್ಯೂಮ್ ಬೂಸ್ಟರ್ ಪ್ರೊ (Volume Booster PRO)

ವಾಲ್ಯೂಮ್ ಬೂಸ್ಟರ್ ಪ್ರೊ (Volume Booster PRO)

ವಾಲ್ಯೂಮ್ ಬೂಸ್ಟರ್ ಪ್ರೊ ಕೂಡ ಒಂದು ಅತ್ಯುತ್ತಮ ಲೌಡ್ ಸೌಂಡ್ ಬೂಸ್ಟರ್ ಆಪ್ ಆಗಿದೆ. ಎಲ್ಲಾ ಸಂಗೀತ ಮಾಧ್ಯಮ ವಾಲ್ಯೂಮ್ ಅನ್ನು ಅದರ ಮೂಲಕ ಸಂಗೀತ ಧ್ವನಿ, ಆಟದ ಧ್ವನಿ ಮತ್ತು ವೀಡಿಯೊ ಧ್ವನಿಯಂತೆ ಬಳಸಬಹುದು. ಈ ಆಪ್ ಸಹಾಯದಿಂದ ಅಧಿಸೂಚನೆ ವಾಲ್ಯೂಮ್ ಅಥವಾ ರಿಂಗ್‌ಟೋನ್ ವಾಲ್ಯೂಮ್‌ನಂತೆ ಸಿಸ್ಟಮ್ ವಾಲ್ಯೂಮ್ ಅನ್ನು ಹೆಚ್ಚಿಸಬಹುದು. ಈ ಫೀಚರ್ ಬಹುತೇಕರ ಮನಗೆದ್ದಿದೆ ಎಂದು ಹೇಳಬಹುದು.

ಸೂಪರ್ ಲೌಡ್ ವಾಲ್ಯೂಮ್ ಬೂಸ್ಟರ್

ಸೂಪರ್ ಲೌಡ್ ವಾಲ್ಯೂಮ್ ಬೂಸ್ಟರ್

ಈ ಉನ್ನತ ದರದ ವಾಲ್ಯೂಮ್ ಬೂಸ್ಟರ್ ಅಪ್ಲಿಕೇಶನ್ ಬಾಸ್ ಆಂಪ್ಲಿಫಯರ್ ಮತ್ತು ಬಾಸ್ ಮಟ್ಟವನ್ನು ಸ್ಮಾರ್ಟ್‌ಫೋನಿಗೆ ಒದಗಿಸುತ್ತದೆ. ಗೂಗಲ್ ಪ್ಲೇ ಸ್ಟೋರ್ ಈ ಅಪ್ಲಿಕೇಶನ್‌ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸದಿದ್ದರೂ, ಇನ್ನೂ ಅದರ ರೇಟಿಂಗ್‌ಗಳು ಹೆಚ್ಚು ಮತ್ತು ಅವು ಬಳಕೆದಾರರಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಈ ಅಪ್ಲಿಕೇಶನ್‌ನ ಸಂದರ್ಭದಲ್ಲಿ ಸಕಾರಾತ್ಮಕ ವಿಮರ್ಶೆಗಳನ್ನು ಸುಲಭವಾಗಿ ನೋಡಬಹುದಾಗಿರುವುದರಿಂದ, ಇದು ಕ್ರಮೇಣ ಇನ್ನಷ್ಟು ಜನಪ್ರಿಯವಾಗಬಹುದು.

Best Mobiles in India

English summary
Many Android Users often complain about low volume output and for that, they wish to replace it. Instead of replacement, nowadays, one can easily use some of the volume booster apps that are available for Android. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+