Home
ಟೆಕ್ ನೌಕರಿ

ಆನ್‌ಲೈನಿನಲ್ಲಿ ಉಚಿತ ಸಿನಿಮಾ ನೋಡಲು ಯತ್ನಿಸಿದರೆ ನಿಮ್ಮ ಕಥೆ ಮುಗಿದಂತೆ!!

ಇತ್ತೀಚಿಗೆ ಬಿಡುಗಡೆಯಾಗಿರುವ ಸಿನಿಮಾವನ್ನು ಕ್ರೋಮ್ ಅಥವಾ ಮೋಜಿಲ್ಲಾ ಫೈರ್‌ಫಾಕ್ಸ್‌ನಂತರ ಸರ್ಚ್ ಎಂಜಿನ್‌ಗಳಲ್ಲಿ ಸರ್ಚ್ ಮಾಡಿ ಕದ್ದು ನೋಡುವ ಕೆಲಸಕ್ಕೆ ಕೈಹಾಕಿದರೆ ಆಗುವ ಸಮಸ್ಯೆ ಎಂತದ್ದು ಎಂಬ ಪರಿವೇ ಅವರಿಗಿರುವುದಿಲ್ಲ. ಏಕೆಂದರೆ, ಆನ್‌ಲೈನಿನಲ್ಲಿ ಉಚಿತವಾಗಿ ಹೊಸ ಹೊಸ ಸಿನಿಮಾಗಳನ್ನು ಕದ್ದು ನೋಡುವ ಹಂಬಲ ಬಹುತೇಕರಿಗೆ ಇರುತ್ತದೆ.

ಹೌದು,ಬಹುತೇಕ ಸಿನಿಮಾಗಳು ಯೂಟ್ಯೂಬ್‌ನಲ್ಲಿ ಸಿಗುವುದಿಲ್ಲ ಎಂದು ಹಲವರು ಈ ರೀತಿಯ ಕೆಲಸಕ್ಕೆ ಕೈಹಾಕಿರುತ್ತಾರೆ. ಹೀಗೆ ಸ್ಮಾರ್ಟ್‌ಫೋನ್‌ನಲ್ಲಿ ಏನನ್ನೋ ಬ್ರೌಸ್ ಮಾಡುತ್ತಾ ಹತ್ತಾರು ವೆಬ್‌ಸೈಟ್‌ಗಳನ್ನು ತೆರೆಯುತ್ತಾರೆ. ಇದು ಸಾಮಾನ್ಯವಾಗಿ ಕಂಡರೂ ಸಹ, ಮೊಬೈಲ್ ಮತ್ತು ಕಂಪ್ಯೂಟರ್‌ಗಳ ಮೇಲೆ ಸಹ ಇಂತಹ ಮಾಲ್‌ವೇರ್‌ಗಳ ದಾಳಿಗೆ ಕಾರಣವಾಗಿರುತ್ತದೆ.

ಆನ್‌ಲೈನಿನಲ್ಲಿ ಉಚಿತ ಸಿನಿಮಾ ನೋಡಲು ಯತ್ನಿಸಿದರೆ ನಿಮ್ಮ ಕಥೆ ಮುಗಿದಂತೆ!!

ಹೌದು, ಉದಾಹರಣೆಗೆ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಏನನ್ನೋ ಬ್ರೌಸ್ ಮಾಡುತ್ತಿರುವಾಗ ಒಮ್ಮೊಮ್ಮೆ ಗಾಬರಿಗೊಳಿ ಸುವ ರೀತಿಯ ಮೆಸೇಜ್ ಪ್ರತ್ಯಕ್ಷವಾಗಿ ನಿಮ್ಮನ್ನು ಕಾಡಿರಬಹುದು. ಇಲ್ಲಿ ವೈರಸ್ ಅಟ್ಯಾಕ್ ಆಗಿದೆ. ತಕ್ಷಣ ವೈರಸ್ ತೆಗೆಸಿ ಎಂಬ ಸಂದೇಶ ಬಂದಾಗ ಅದು ನಿಮಗೆ ಸಹಜವಾಗಿ ಕಾಣಿಸಬಹುದು. ಆದರೆ, ಅದೊಂದು ಭಯಾನಕ ಸಂದೇಶವೇ ಆಗಿರುತ್ತದೆ.

ಆನ್‌ಲೈನಿನಲ್ಲಿ ಉಚಿತ ಸಿನಿಮಾ ನೋಡಲು ಯತ್ನಿಸಿದರೆ ನಿಮ್ಮ ಕಥೆ ಮುಗಿದಂತೆ!!

ಅಲ್ಲಿ ಪ್ರತ್ಯಕ್ಷವಾದ ಸಂದೇಶವು ಒಂದು ಮಾಲ್‌ವೇರ್ ಬೆದರಿಕೆ ಆಗಿದ್ದು, ನಿಮ್ಮ ಸ್ಮಾರ್ಟ್‌ಫೋನನ್ನು ಹಾಳುಮಾಡಲು ಅಥವಾ ಡಾಟಾ ಕದಿಯಲೆಂದೇ ರೂಪುಗೊಂಡಿರುವ ಮಾಲ್ವೇರ್ ಅದಾಗಿರುತ್ತದೆ. ಹಾಗಾಗಿ, ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನಿನ ಮೇಲೆ ದಾಳಿ ಮಾಡುವ ಜಾಲತಾಣಗಳ ಬಗ್ಗೆ ಸಂಪೂರ್ಣವಾಗಿ ನಾವು ನಿಮಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ.

ಆಯಂಟಿವೈರಸ್ ಆಗಿರುವುದಿಲ್ಲ!

ಆಯಂಟಿವೈರಸ್ ಆಗಿರುವುದಿಲ್ಲ!

ಯಾವುದಾದರೂ ಜಾಲತಾಣಗಳನ್ನು ತೆರೆದಾಗ, 'ನಿಮ್ಮ ಮೊಬೈಲ್‌ ವೈರಸ್ ತೊಂದರೆಗೆ ಸಿಲುಕಿದೆ. ಅದರಿಂದ ತಪ್ಪಿಸಿಕೊಳ್ಳಲು ಇದನ್ನು ಡೌನ್‌ಲೋಡ್ ಮಾಡಿ' ಎಂಬ ಸಲಹೆಗಳು ಬರುತ್ತಿರುತ್ತವೆ. ಆದರೆ, ನಿಮಗೆ ಗೊತ್ತಾ?, ಹೀಗೆ ಹೇಳುವ ವೆಬ್‌ಸೈಟ್‌ಗಳೇ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ನುಸುಳುವ ಸಂದೇಶಗಳಾಗಿರುತ್ತವೆ ಮತ್ತು ನಿಮ್ಮನ್ನು ಮೋಸಗೊಳಿಸುತ್ತವೆ.

ಆಶ್ವಾಸನೆ ಸ್ವೀಕರಿಸಬೇಡಿ!

ಆಶ್ವಾಸನೆ ಸ್ವೀಕರಿಸಬೇಡಿ!

ಮೋಸಗಾರರು ಮತ್ತು ಕುತಂತ್ರಾಂಶಗಳು ಅನುಸರಿಸುವ ಒಂದು ವಾಮಮಾರ್ಗ ಎಂದರೆ ಆಯಂಟಿವೈರಸ್ ಮುಖವಾಡ ದಲ್ಲಿ ಡಾಟಾ ಕದಿಯಲು ಯತ್ನಿಸುವುದು.! ಆಶ್ವಾಸನೆಯನ್ನು ಸ್ವೀಕರಿಸಿದರೆ, ಖಾಸಗಿ ಮಾಹಿತಿಯ ಸೋರಿಕೆಯ ಜತೆಗೆ, ಗಂಭೀರ ಸಮಸ್ಯೆ ಎದುರಾಗುತ್ತದೆ. ಅದನ್ನು ಸರಿಪಡಿಸಲು ಹಣ ನೀಡಿ ಎಂಬ ಬೆದರಿಕೆಯನ್ನೂ ಆ ಕುತಂತ್ರಾಂಶ ಒಡ್ಡುತ್ತದೆ.

ಸ್ಕ್ಯಾನ್ ಮಾಡುವಂತೆ ನಟಿಸುತ್ತವೆ!

ಸ್ಕ್ಯಾನ್ ಮಾಡುವಂತೆ ನಟಿಸುತ್ತವೆ!

ಉಚಿತ ಸ್ಕ್ಯಾನ್ ಮಾಡಿದ ನಂತರ, ತ್ವರಿತವಾಗಿ ಸ್ಕ್ಯಾನ್ ಮಾಡಿದ್ದೇವೆ, ಈ ತಂತ್ರಾಂಶವನ್ನು ಖರೀದಿಸಿ ಎಂಬ ಬೇಡಿಕೆ, ಎಲ್ಲವೂ ಬರಬಹುದು. ಆದರೆ ತ್ವರಿತವಾಗಿ ಸ್ಕ್ಯಾನ್ ಮಾಡುತ್ತೇವೆ ಎಂಬ ಆಶ್ವಾಸನೆಯೇ ಒಂದು ಬೊಗಳೆ. ಏಕೆಂದರೆ, ಅಂತಹ ಕುತಂತ್ರಾಂಶಗಳು ನಿಜವಾದ ಸ್ಕ್ಯಾನ್ ಮಾಡುವುದಿಲ್ಲ, ಬದಲಿಗೆ ಸ್ಕ್ಯಾನ್ ಮಾಡುವಂತೆ ನಟಿಸುತ್ತವೆ.!

ಬ್ರೌಸರ್ ವಾಪಸ್ ಹೋಗುವುದೇ ಇಲ್ಲ!

ಬ್ರೌಸರ್ ವಾಪಸ್ ಹೋಗುವುದೇ ಇಲ್ಲ!

ನಿಮ್ಮ ಮೊಬೈಲ್‌ ವೈರಸ್ ತೊಂದರೆಗೆ ಸಿಲುಕಿದೆ, ನಿಮ್ಮ ಬ್ರೌಸರ್ ಬದಲಾಯಿಸಿ ಎಂದು ಹೇಳುವ ಸಂದೇಶಗಳನ್ನು ನೀವು ಕ್ಲೋಸ್ ಮಾಡೋಣವೆಂದರೆ, ಬ್ರೌಸರ್ ವಾಪಸ್ ಹೋಗುವುದೇ ಇಲ್ಲ. ಈ ರೀತಿ ಅನುಭವ ನಿಮಗೆ ಆಗಿದ್ದರೆ, ಅದು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂನ್ನು ಹಾಳುಗೆಡಹುವುದು ಅಥವಾ ಡಾಟಾ ಕದಿಯುವ ಉದ್ದೇಶವಾಗಿರುತ್ತದೆ.

ದಾಳಿ ಮಾಡುವುದೇಕೆ?

ದಾಳಿ ಮಾಡುವುದೇಕೆ?

ಸಂದೇಶಗಳ ಮೂಲಕ ವೈರಸ್ ಕಳುಹಿಸಿ ಆಪರೇಟಿಂಗ್ ಸಿಸ್ಟಂನ್ನು ಹಾಳುಗೆಡಹುವುದು ಅಥವಾ ಡಾಟಾ ಕದಿಯುವರ ಉದ್ದೇಶವವನ್ನು ಹೊಂದಿರುವ ಆ ಜಾಲತಾಣಗಳು ನಿಮ್ಮಿಂದ ಹಣವನ್ನು ವಸೂಲಿ ಮಾಡುವ ಗುರಿಯನ್ನು ಹೊಂದಿರುತ್ತವೆ. ಮೊಬೈಲ್ ಮತ್ತು ಕಂಪ್ಯೂಟರ್‌ ಎರಡರಲ್ಲಿಯೂ ಇಂತಹ ಮಾಲ್‌ವೇರ್‌ಗಳ ದಾಳಿಯಾಗುವುದುಂಟು.

ನಾವು ಎಚ್ಚರವಾಗಿರಬೇಕು!

ನಾವು ಎಚ್ಚರವಾಗಿರಬೇಕು!

ಜನರು ಯಾವುದನ್ನು ಆನ್‌ಲೈನಿನಲ್ಲಿ ಹೆಚ್ಚು ಸರ್ಚ್ ಮಾಡುತ್ತಾರೋ ಆ ವಿಷಯಗಳ ಮೇಲೆ ಇಂತಹ ಫೇಕ್ ಜಾಲತಾಣಗಳು ಹುಟ್ಟುಕೊಂಡಿರುತ್ತದೆ. ಹೊಸ ಹೊಸ ಸಿನಿಮಾಗಳನ್ನು ಪುರ್ತಿ ತೋರಿಸುವ ಆಸೆಯನ್ನು ಹುಟ್ಟಿಸಿ ತನ್ನತ್ತ ಸೆಳೆದುಕೊಳ್ಳುತ್ತವೆ. ಹಾಗಾಗಿ,ಸ್ಕ್ರೀನ್ ಮೇಲೆ ಇಂತಹ ಸಂದೇಶಗಳು ಪ್ರತ್ಯಕ್ಷವಾದರೆ ,ಜಾಗ್ರತೆ ವಹಿಸಬೇಕಾದುದು ಬಳಕೆದಾರರನ ಚಾಣಾಕ್ಷತನ.

ಆಯಂಟಿವೈರಸ್ ಪ್ರೊಗ್ರಾಂ

ಆಯಂಟಿವೈರಸ್ ಪ್ರೊಗ್ರಾಂ

ಅಂತರ್ಜಾಲದಲ್ಲಿ ಬ್ರೌಸ್ ಮಾಡುವಾಗ ನಾನಾ ರೀತಿಯ ವೈರಸ್‌ಗಳು, ಮಾಲ್‌ವೇರ್‌ಗಳು, ಆಪರೇಟಿಂಗ್ ಸಿಸ್ಟಂ ಮೇಲೆ ದಾಳಿ ಮಾಡಿ ಅದನ್ನು ಹಾಳುಗೆಡವಲು ಯತ್ನ ಮಾಡುತ್ತಲೇ ಇರುತ್ತವೆ. ಹಾಗಾಗಿ, ಯಾವುದೇ ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್ ಫೋನ್‌ನಲ್ಲಿ ಅವಶ್ಯವಾಗಿ ಉತ್ತಮ ಗುಣಮಟ್ಟದ ಆಯಂಟಿವೈರಸ್ ಪ್ರೊಗ್ರಾಂ ಇರಲೇಬೇಕು.

Best Mobiles in India

English summary
Free antivirus companies are now bundling adware, spyware, toolbars ... Search Engine: Antivirus companies attempt to change your browser's.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+