ಟೆಕ್ಕಿಗಳ ಟ್ರೆಕ್ಕಿಂಗ್: ಅಡುಗೆ, ಮೊಬೈಲ್ ಚಾರ್ಜ್ Stove!

Posted By: Varun
ಟೆಕ್ಕಿಗಳ ಟ್ರೆಕ್ಕಿಂಗ್: ಅಡುಗೆ, ಮೊಬೈಲ್ ಚಾರ್ಜ್ Stove!

ಮಳೆಗಾಲ ಶುರು ಆಯ್ತು ಅಂದ್ರೆ ಬೆಂಗಳೂರಿನ ಸುತ್ತಮುತ್ತ, ಪಶ್ಚಮ ಘಟ್ಟಗಳಲ್ಲಿ ನೆಂದು ಚಾರಣ ಹೊರಡೋದಕ್ಕೆ ಮನಸ್ಸು ಹಾತೊರೆಯುತ್ತೆ. ಕೆಲಸ ಮಾಡಿ stress ಆಗಿರೋ ಮೆದುಳಿಗೆ ಒಂಥರಾ ರಿಲ್ಯಾಕ್ಸ್ ಆಗಲು ಟ್ರೆಕ್ಕಿಂಗ್ ಅತ್ಯುತ್ತಮವಾಗಿದ್ದು, ಪ್ರಕೃತಿಯ ಮಡಿಲಲ್ಲಿ ಕೂಲ್ ಆಗಿ ಎಂಜಾಯ್ ಮಾಡ್ತಾ ಅದನ್ನ ಸವಿಯೋ ಮಜಾನೇ ಬೇರೆ.

ಅದರಲ್ಲೂ ಒಂದಕ್ಕಿಂತ ಹೆಚ್ಚು ದಿನ ಚಾರಣಕ್ಕೆ ಹೊರಡುವವರು ಅಡುಗೆ ಮಾಡಿಕೊಳ್ಳುವುದಕ್ಕೆ ಅಂತ ಸ್ಟವ್, ಹೆಚ್ಚುವರಿ ಬಟ್ಟೆ, ಮೊಬೈಲ್ ನ ಬ್ಯಾಟರಿ, ಎಲ್ಲಾ ತೆಗೆದುಕೊಂಡು ಹೋಗಬೇಕು. ಸ್ಮಾರ್ಟ್ ಫೋನ್ ಇದ್ದರಂತೂ ಎಷ್ಟೇ ಚಾರ್ಜ್ ಮಾಡಿ ತೆಗೆದುಕೊಂಡು ಹೋದರೂ ಪ್ರಯೋಜನವಾಗುವುದಿಲ್ಲ. ನೆಟ್ವರ್ಕ್ ಇಲ್ಲದಿದ್ದರೂ ರಾತ್ರಿ ಕ್ಯಾಂಪ್ ಫೈರ್ ಹಾಕೊಂಡು ಹಾಡು ಕೇಳೋಣಾ ಅಂತಂದ್ರೂ ಏನೂ ಮಾಡಕ್ಕಾಗಲ್ಲ.

ಇದಕ್ಕೆಲ್ಲಾ ಒಂದೇ shot ನಲ್ಲಿ ಪರಿಹಾರ ಕೊಡೋದಕ್ಕೆ ಅಂತ ಬೈಯೋ ಲೈಟ್ ಅಂತ ಕಂಪನಿಯೊಂದು ಸ್ಟವ್ ಒಂದನ್ನು ಕಂಡುಹಿಡಿದಿದ್ದು, ಇದನ್ನು ಉಪಯೋಗಿಸಿಕೊಂಡು ಕಾಡಿನಲ್ಲಿ ಸಿಗುವ ಕಡ್ಡಿ, ಪುರಲೆಗಳನ್ನ ಬಳಸಿ ಅಡುಗೆ ಮಾಡಬಹುದು ಹಾಗೆಯೇ USB ಮೂಲಕ ಚಾರ್ಜ್ ಆಗುವ ಎಲ್ಲ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಹಾಗು ಸ್ಮಾರ್ಟ್ ಫೋನುಗಳನ್ನು ಚಾರ್ಜ್ ಮಾಡಬಹುದಾಗಿದೆ!

ಬರಿ ಟ್ರೆಕ್ಕಿಂಗ್ ಮಾಡಲಷ್ಟೇ ಅಲ್ಲದೆ ತೋಟದ ಮನೆಗಳಲ್ಲಿ ಅಡುಗೆ ಮಾಡಿಕೊಳ್ಳಲು,ಹಳ್ಳಿಗಳಲ್ಲಿ ಕೂಡ ಇದನ್ನು ಉಪಯೋಗಿಸಬಹುದು, ಹೊಗೆರಹಿತವಾಗಿ ಕಾರ್ಯನಿರ್ವಹಿಸುತ್ತದೆ.

ಕೇವಲ 935 ಗ್ರಾಂ ತೂಕದ ಈ ಬಯೋಲೈಟ್ ಸ್ಟವ್ ಕೊಂಡೊಯ್ಯಲು ಹಗುರವಾಗಿದ್ದು, ಒಂದು ಲೀಟರ್ ನೀರನ್ನು 4 ನಿಮಿಷದಲ್ಲಿ ಬಿಸಿ ಮಾಡಬಹುದಾಗಿದೆ.

ಸ್ಟೈನ್ಲೆಸ್ ಸ್ಟೀಲ್ ನಿಂದ ಮಾಡಲ್ಪಟ್ಟಿರುವ ಇದರ ಬೆಲೆ ಸುಮಾರು 7 ಸಾವಿರ ರೂಪಾಯಿಆಗಿದ್ದು (VAT ಹಾಗು ಇತರೆ ತೆರಿಗೆಗಳು ಹೊರತುಪಡಿಸಿ) ನೀವು ಇಲ್ಲಿ ಬುಕ್ ಮಾಡಬಹುದಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot