'ರೈಲ್ವೆ ಆಪ್'ನಲ್ಲಿ ಬಂತು ವಿಶೇಷ ಫೀಚರ್!..ಪ್ರಯಾಣಿಕರು ಈಗ ಫುಲ್ ಖುಷ್!!
ಕೆಲವೊಮ್ಮೆ ಆನ್‌ಲೈನಿನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಲು ಸಾಧ್ಯವಾಗಲಿಲ್ಲ ಅಥವಾ ಅಲ್ಲಿ ಬಹುಬೇಗ ಟಿಕೆಟ್‌ಗಳು ಖಾಲಿಯಾಗಿಬಿಡುತ್ತವೆ. ಇಂತಹ ಸಮಯದಲ್ಲಿ ರೈಲ್ವೆ ನಿಲ್ದಾಣದಲ್ಲಿಯೇ ವಿತರಿಸುವ ಸೀಮಿತ ಆಫ್‌ಲೈನ್ ಟಿಕೆಟ್‌ಗಳನ್ನು ನಿಲ್ದಾಣಕ್ಕೆ ತೆರಳಿ ಪಡೆಯಬಹುದು. ಆದರೆ, ಅಲ್ಲಿರುವ ಕ್ಯೂ ನೋಡಿದರೆ ರೈಲ್ವೆ ಪ್ರಯಾಣವೇ ಬೇಡ ಎಂಬಷ್ಟು ಹಿಂಸೆಯಾಗುತ್ತದೆ ಅಲ್ಲವೇ.?
ಆದರೆ, ಇನ್ಮುಂದೆ ಚಿಂತಿಸಬೇಡಿ. ರೈಲ್ವೆ ನಿಲ್ದಾಣಕ್ಕೆ ತೆರಳಿ ಪಡೆಯಲೇಬೇಕಾದ ಟಿಕೆಟ್‌ಗಳನ್ನು ಸಹ ನೀವು ಈಗ ಕ್ಯೂ ನಿಲ್ಲದೆ ಖರೀದಿಸಬಹುದು. ಇದಕ್ಕಾಗಿ ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಮೊಬೈಲ್ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡರೆ ನೀವು ಕಾಯ್ದಿರಿಸದ ಟಿಕೆಟ್ ಖರೀದಿಸಲು ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.

ರೈಲ್ವೆ ಇಲಾಖೆ ತನ್ನ ವ್ಯಾಪ್ತಿಯ 15 ವಲಯಗಳಲ್ಲಿ ಇಂತಹ ಒಂದು ವ್ಯವಸ್ಥೆಯನ್ನು ನವೆಂಬರ್ 1ರಿಂದ ದೇಶಾದ್ಯಂತ ಈ ಜಾರಿಗೊಳಿಸಲಿಸಲು ನಿರ್ಧರಿಸಿದ್ದು, ಹಾಗಾದರೆ,ನಿಲ್ದಾಣಕ್ಕೆ ತೆರಳಿ ಪಡೆಯಲೇಬೇಕಾದ ಟಿಕೆಟ್‌ಗಳನ್ನು ಸಹ ಈಗ ಕ್ಯೂ ನಿಲ್ಲದೆ ಖರೀದಿಸುವುದು ಹೇಗೆ? ಆ ಮೊಬೈಲ್ ಆಪ್ ಯಾವುದು ಎಂಬ ಪೂರ್ಣ ಮಾಹಿತಿಯನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಈಗ ಸಿಕ್ಕಿತು ಹಳೆಯ ಸೇವೆ!
ರೈಲ್ವೆ ನಿಲ್ದಾಣದಲ್ಲೇ ಟಿಕೆಟ್ ಬುಕ್ ಮಾಡುವ ಈ ಆಯ್ಕೆಯನ್ನು ನಾಲ್ಕು ವರ್ಷಗಳ ಹಿಂದೆ ಪ್ರಮುಖ ನಗರಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿತ್ತು. ಮುಂಬೈ, ದೆಹಲಿ, ಪಲವಲ್ ಮತ್ತು ಚೆನ್ನೈ ನಗರಗಳಲ್ಲಿ ಈ ಸೌಲಭ್ಯ ಜಾರಿಗೊಳಿಸಲಾಗಿತ್ತು. ಆದರೆ, ಮುಂಬೈ ಹೊರತುಪಡಿಸಿ ಉಳಿದೆಡೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿಲ್ಲ ಎಂದು ಹೇಳಲಾಗಿದೆ.

1 ರಿಂದ ದೇಶಾದ್ಯಂತ ಈ ವ್ಯವಸ್ಥೆ
ನಾಲ್ಕು ನಗರಗಳಲ್ಲಿ ಮಾತ್ರ ಲಭ್ಯವಿದ್ದ ಈ ಸೇವೆಗೆ ಹಲವು ವಲಯಗಳನ್ನು ಸೇರಿಸಿರಲಿಲ್ಲ. ಆದರೆ, ಶೀಘ್ರದಲ್ಲೇ ಈ ಸೇವೆಯನ್ನು ದೇಶದ ಎಲ್ಲ ವಲಯಗಳನ್ನು ಸೇರಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು. ನವೆಂಬರ್ 1ರಿಂದ ದೇಶಾದ್ಯಂತ ಈ ವ್ಯವಸ್ಥೆ ಜಾರಿಯಾಗುವುದದು ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

’ಯುಟಿಎಸ್’ ಮೊಬೈಲ್ ಆಪ್!
ರೈಲ್ವೆ ಇಲಾಖೆಯ 'ಯುಟಿಎಸ್' ಮೊಬೈಲ್ ಆಪ್ ಮೂಲಕ ಪ್ರಯಾಣಿಕರು ಕಾಯ್ದಿರಿಸದ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕವೇ ಖರೀದಿಸಬಹುದು. ದೇಶದಾದ್ಯಂತ ನವೆಂಬರ್ 1ರಿಂದ ರೈಲ್ವೆ ಇಲಾಖೆಯ 15 ವಲಯಗಳಲ್ಲಿ ಈ ಸೌಲಭ್ಯ ದೊರೆಯಲಿದ್ದು, ಆಪ್‌ನಲ್ಲಿ ಟಿಕೆಟ್‌ಗಳು ಮಾತ್ರವಲ್ಲದೆ ಪ್ಲಾಟ್‌ಫಾರ್ಮ್ ಟಿಕೆಟ್ ಮತ್ತು ತಿಂಗಳ ಪಾಸ್‌ಗಳನ್ನು ಸಹ ಖರೀದಿಸಬಹುದು.

ಆಫ್‌ಲೈನ್ ಟಿಕೆಟ್ ಬುಕ್ ಹೇಗೆ?
ನೀವು ಆಫ್‌ಲೈನ್ ಟಿಕೆಟ್ ಬುಕ್ ಮಾಡಲು ರೈಲ್ವೆ ನಿಲ್ದಾಣದಲ್ಲಿ ಕ್ಯೂ ನಿಲ್ಲುವ ಪ್ರಮೇಯವಿಲ್ಲ. ಆದರೆ, ರೈಲ್ವೆ ನಿಲ್ದಾಣದಿಂದ 25ರಿಂದ 30 ಮೀಟರ್ ದೂರದಲ್ಲಿದ್ದರೆ ಮಾತ್ರ ಪ್ರಯಾಣಿಕರು ಯುಟಿಎಸ್ ಮೊಬೈಲ್ ಆಪ್ ಮೂಲಕ ಈ ಟಿಕೆಟ್ ಬುಕ್ ಮಾಡಬಹುದು. ಅಂದರೆ, ನೀವು ಎಲ್ಲಿಯೂ ಇದ್ದು ಈ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವೇ ಇಲ್ಲ.

ಒಂದು ಬಾರಿ ನಾಲ್ವರಿಗೆ ಟಿಕೆಟ್
ಯುಟಿಎಸ್ ಮೊಬೈಲ್ ಆಪ್ ಮೂಲಕ ಹೀಗೆ ಟಿಕೆಟ್ ಬುಕ್ ಮಾಡುವಾಗ ಒಂದು ಬಾರಿ ನಾಲ್ಕು ಟಿಕೆಟ್‌ಗಳನ್ನು ಮಾತ್ರ ಖರೀದಿಸಬಹುದು. ಈ ಆಪ್ ದುರುಪಯೋಗವಾಗ ಆಗಬಾರದು ಎಂದು ರೈಲ್ವೆ ಇಲಾಖೆ ಒಂದು ಬಾರಿ ನಾಲ್ಕು ಟಿಕೆಟ್‌ಗಳಿಗೆ ಸೀಮಿತಗೊಳಿಸಿದೆ. ಆದರೆ, ಬೇರೆ ಬೇರೆ ಖಾತೆಗಳಿಂದ ಎಷ್ಟು ಟಿಕೆಟ್ ಬೇಕಾದರೂ ಬುಕ್ ಮಾಡಬಹುದಾಗಿದೆ.


Click it and Unblock the Notifications





