ಶೂಬಾಕ್ಸ್‌ನಿಂದ ಸ್ಮಾರ್ಟ್‌ಫೋನ್ ಪ್ರೊಜೆಕ್ಟರ್ ತಯಾರಿಸುವುದು ಹೇಗೆ?
ಪ್ರೊಜೆಕ್ಟರ್ ಅಂದ್ರೆ ಸಿನಿಮಾ ಥಿಯೇಟರ್‌ಗೆ ಹೋಗೋ ಎಲ್ಲರಿಗೂ ಗೊತ್ತಿಲ್ದೆ ಇರಬಹುದು. ಆದ್ರೆ ಬಹುಸಂಖ್ಯಾತರಿಗೆ ಗೊತ್ತಿದೆ. ಸಿನಿಮಾ ಥಿಯೇಟರ್‌ನಲ್ಲಿ ಬಿಳಿ ಪರದೆಯ ಮೇಲೆ ಸಿನಿಮಾವನ್ನು ಪ್ರೊಜೆಕ್ಟರ್‌ನಿಂದ ಬಿಟ್ಟು ತೋರಿಸುತ್ತಾರೆ. ಸಿನಿಮಾ ಥಿಯೇಟರ್‌ನಲ್ಲಿ ಕುಳಿತು ಸಿನಿಮಾ ನೋಡುವವರು ಒಮ್ಮೆ ಹಿಂದೆ ತಿರುಗಿ ಸ್ವಲ್ಪ ಮೇಲೆ ನೋಡಿದರೆ ಪ್ರೊಜೆಕ್ಟರ್‌ನಿಂದ ಸಿನಿಮಾ ಹೇಗೆ ಪರದೆಯ ಮೇಲೆ ಬೀಳುತ್ತಿದೆ ಎಂದು ಕಾಣುತ್ತದೆ.
ಇನ್ನು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ತಿಳಿದಿರುತ್ತದೆ. ಪ್ರೊಜೆಕ್ಟರ್ ಬಗ್ಗೆ ಯಾಕ್ ಹೀಗೆ ಹೇಳ್ತಿದ್ದೀನಿ ಅಂದ್ರೆ, 'ಮೊಬೈಲ್‌ನಲ್ಲಿನ ವೀಡಿಯೋಗಳನ್ನು ಪ್ರೊಜೆಕ್ಟರ್ ರೀತಿಯಲ್ಲಿ ನಿಮ್ಮ ಮನೆಯ ಗೋಡೆಗಳ ಅಥವಾ ಪರದೆಯ ಮೇಲೆ ಬಿಟ್ಟು ನೋಡುವಂತೆ ಸುಲಭವಾಗಿ ಕೇವಲ 1 ಶೂಬಾಕ್ಸ್‌ನಿಂದ ಪ್ರೊಜೆಕ್ಟರ್ ತಯಾರಿಸಬಹುದಾಗಿದೆ. ಮನೆಯಲ್ಲೆ ಥಿಯೇಟರ್‌ನಲ್ಲಿ ಕುಳಿತು ಸಿನಿಮಾ ನೋಡಿದ ಅನುಭವವನ್ನು ಪಡಲು ಇಷ್ಟವಾಗೋ ಎಲ್ಲರಿಗೂ ಇದು ಸುಲಭ ಮಾರ್ಗ. ಕೆಲವೊಂದು ಸ್ಮಾರ್ಟ್‌ಫೋನ್‌ಗಳು ಡಿಸ್‌ಪ್ಲೇ ಹಂಚುವ ಫೀಚರ್ ಹೊಂದಿವೆ. ಕೇವಲ ಒಂದು ಸ್ಮಾರ್ಟ್‌ಫೋನ್ ಮತ್ತು ಶೂ ಬಾಕ್ಸ್‌ನಿಂದ ಪ್ರೊಜೆಕ್ಟರ್ ಅನ್ನು ತಯಾರಿಸಬಹುದಾಗಿದ್ದು ಅದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ಶೂಬಾಕ್ಸ್‌ನಿಂದ ಸ್ಮಾರ್ಟ್‌ಫೋನ್ ಪ್ರೊಜೆಕ್ಟರ್ ಹೇಗೆ?
ಯಾವುದಾದರೂ ಒಂದು ಹಳೆಯ ಶೂಬಾಕ್ಸ್, ಕಪ್ಪು ಬಣ್ಣ, ಸೂಕ್ತ ಲೆನ್ಸ್, ಗಾಜು ಅಥವಾ ಲೋಹಗಳನ್ನು ಅಂಟಿಸುವ ಗಮ್, ಸ್ಮಾರ್ಟ್‌ಫೋನ್.
ಬೈಕಾನ್ವೆಕ್ಸ್ ಲೆನ್ಸ್‌ಗಳನ್ನು ಫೋಟೋಗ್ರಾಫಿ ಶಾಪ್‌ಗಳಲ್ಲಿ ಖರೀದಿಸಬಹುದಾಗಿದೆ.

ಶೂಬಾಕ್ಸ್‌ನಿಂದ ಸ್ಮಾರ್ಟ್‌ಫೋನ್ ಪ್ರೊಜೆಕ್ಟರ್ ಹೇಗೆ?
ಹಳೆಯ ಯಾವುದಾದರೂ ಸ್ಲೈಡ್ ಪ್ರೊಜೆಕ್ಟರ್‌ನಲ್ಲಿನ ಲೆನ್ಸ್‌ಗಳನ್ನು ಬಳಸಬಹುದಾಗಿದೆ. ಕಾರಣ ಹೊಸದನ್ನು ಖರೀದಿಸಲು ವೆಚ್ಚ ಹೆಚ್ಚಾಗುತ್ತದೆ ಎಂದರೆ ಹೀಗೆ ಮಾಡಬಹುದು.
ಸ್ಮಾರ್ಟ್‌ಫೋನ್ ಪ್ರೊಜೆಕ್ಟರ್ ಮಾಡಲು, ಶೂ ಬಾಕ್ಸ್‌ನಲ್ಲಿ ವೃತ್ತಾಕಾರದಲ್ಲಿ ಕೊರೆದು ನಿಮ್ಮ ರೂಮಿನ ಕತ್ತಲೆಗೆ ಅನುಕೂಲವಾಗುವಂತೆ ಬ್ರೈಟ್‌ನೆಸ್ ಕಾಪಾಡಿಕೊಳ್ಳಲು ಲೆನ್ಸ್‌ಹಿಂದಿನಿಂದ 6 ಇಂಚು ದೂರದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಇರಿಸಬೇಕು.

ಶೂಬಾಕ್ಸ್‌ನಿಂದ ಸ್ಮಾರ್ಟ್‌ಫೋನ್ ಪ್ರೊಜೆಕ್ಟರ್ ಹೇಗೆ?
ಶೂ ಬಾಕ್ಸ್‌ನ ಯಾವುದಾದರೂ ಒಂದು ಕೊನೆಯಲ್ಲಿ ಲೆನ್ಸ್ ಅನ್ನು ಅಟ್ಯಾಚ್ ಮಾಡಿ. ಅದನ್ನು ಗಟ್ಟಿಯಾಗಿ ಅಲುಗಾಡದಂತೆ ಅಂಟಿಸಿ.

ಶೂಬಾಕ್ಸ್‌ನಿಂದ ಸ್ಮಾರ್ಟ್‌ಫೋನ್ ಪ್ರೊಜೆಕ್ಟರ್ ಹೇಗೆ?
ಬ್ರೈಟ್‌ನೆಸ್ ಸಂಪೂರ್ಣ ಹೆಚ್ಚು ಮಾಡಿ, ಲಾಕ್ ಸ್ಕ್ರೀನ್ ಡಿಸೇಬಲ್ ಮಾಡಿ ಲೆನ್ಸ್ ಅಳವಡಿಸಿದ ಬಾಕ್ಸ್‌ನಲ್ಲಿ ಸ್ಮಾರ್ಟ್‌ಫೋನ್ ಅನ್ನು ಲೆನ್ಸ್ ಹಿಂಭಾಗದಲ್ಲಿ ಅದಕ್ಕೆ ಮುಖಮಾಡಿ ಇಡಿ.
ವೀಡಿಯೋ ಶುದ್ಧತೆ ಕಡಿಮೆಯಾದರೆ ಬಾಕ್ಸ್ ಅನ್ನು ಹಿಂದಕ್ಕೆ ಮುಂದಕ್ಕೆ ಇಟ್ಟು ಸರಿಪಡಿಸಿಕೊಳ್ಳಿ.

ಶೂಬಾಕ್ಸ್‌ನಿಂದ ಸ್ಮಾರ್ಟ್‌ಫೋನ್ ಪ್ರೊಜೆಕ್ಟರ್ ಹೇಗೆ?
ಶೂ ಬಾಕ್ಸ್ ಒಳಗೆ ಸಂಪೂರ್ಣವಾಗಿ ಎಲ್ಲಾ ಕಡೆ ಕಪ್ಪು ಬಣ್ಣದಲ್ಲಿ ಬಣ್ಣ ಬಳಿಯಬೇಕು. ಆದರೆ ಬಣ್ಣ ಬಳಿಯ ಬೇಕಾದರೆ ಲೆನ್ಸ್ ಮತ್ತು ಸ್ಮಾರ್ಟ್‌ಫೋನ್ ಅನ್ನು ಹೊರತೆಗೆಯಿರಿ. ಬಣ್ಣ ಸಂಪೂರ್ಣವಾಗಿ ಒಣಗುವ ವರೆಗೂ ಲೆನ್ಸ್ ಮತ್ತು ಫೋನ್ ಇರಿಸಬೇಡಿ. ಅಲ್ಲದೇ ಬಾಕ್ಸ್‌ನ ಮುಚ್ಚಳಕ್ಕೂ ಸಹ ಬಣ್ಣ ಬಳೆಯಿರಿ.

ಶೂಬಾಕ್ಸ್‌ನಿಂದ ಸ್ಮಾರ್ಟ್‌ಫೋನ್ ಪ್ರೊಜೆಕ್ಟರ್ ಹೇಗೆ?
ಬಣ್ಣ ಒಣಗಿದ ನಂತರ ಲೆನ್ಸ್ ಮತ್ತು ಸ್ಮಾರ್ಟ್‌ಫೋನ್ ಅನ್ನು ವ್ಯವಸ್ಥೆಗೊಳಿಸಿ.

ಶೂಬಾಕ್ಸ್‌ನಿಂದ ಸ್ಮಾರ್ಟ್‌ಫೋನ್ ಪ್ರೊಜೆಕ್ಟರ್ ಹೇಗೆ?
ಮೊಬೈಲ್‌ನಲ್ಲಿ ವೀಡಿಯೋಗಳನ್ನು ಪ್ಲೇ ಮಾಡಿ ನಿಮ್ಮ ಮನೆಯ ಅಥವಾ ರೂಮಿನಲ್ಲಿ ಬಿಳಿ ಬಣ್ಣದ ಗೋಡೆಯ ಮೇಲೆ ಸ್ಮಾರ್ಟ್‌ಫೋನ್ ಪ್ರೊಜೆಕ್ಟರ್ ಅನ್ನು ಬಿಡಿ. ಈಗ ನೀವು ಸುಲಭವಾಗಿ ಥಿಯೇಟರ್ ಅನುಭವ ಪಡೆಯಬಹುದು. ಸ್ಮಾರ್ಟ್‌ಫೋನ್ ಪ್ರೊಜೆಕ್ಟರ್ ಮಾಡುವುದು ಹೇಗೆ ಎಂದು ವೀಡಿಯೋ ನೋಡಿ ತಿಳಿಯಲು ಮುಂದಿನ ಸ್ಲೈಡರ್‌ನಲ್ಲಿ ವೀಡಿಯೋ ನೋಡಿ.
ಶೂಬಾಕ್ಸ್‌ನಿಂದ ಸ್ಮಾರ್ಟ್‌ಫೋನ್ ಪ್ರೊಜೆಕ್ಟರ್ ಹೇಗೆ?
ಪ್ರೊಜೆಕ್ಟರ್ ತಯಾರು ಮಾಡುವುದು ಹೇಗೆ ಎಂದು ವೀಡಿಯೋ ನೋಡಿ ಸಹ ತಿಳಿಯಿರಿ.

ಗಿಜ್‌ಬಾಟ್



Click it and Unblock the Notifications