ಕಡಿಮೆ ದರಕ್ಕೆ ಆನ್‌ಲೈನ್‌ನಲ್ಲಿ ಕೆಎಂಎಫ್ ಹಾಲು ಉತ್ಪನ್ನಗಳು!! ಆರ್ಡರ್ ಮಾಡುವುದು ಹೇಗೆ?

Written By:

ಇಂದಿನ ಆನ್‌ಲೈನ್ ಯುಗದಲ್ಲಿ ಗ್ರಾಹಕರಿಗೆ ನೆರವಾಗುವ ದೃಷ್ಟಿಯಿಂದ ಕೆಎಂಎಫ್‌ ನಂದಿನಿ ಉತ್ಪನ್ನಗಳಾದ ನಂದಿನಿ ಹಾಲು, ಮೊಸರು ಸೇರಿ ಹಲವು ಮಿಲ್ಕ್ ಪ್ರಾಡಕ್ಟ್‌ಗಳನ್ನು ಆನ್‌ಲೈನ್‌ ಮೂಲಕ ಖರೀದಿಸುವ ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಕೆಎಂಎಫ್ ಇ-ಡೈರಿ ವ್ಯವಸ್ಥೆ ಆರಂಭಿಸಿದೆ.!!

ದಿನದ 24 ಗಂಟೆಯೂ ಬ್ಯುಸಿಯಾಗಿರುವ ಸಿಟಿಯಲ್ಲಿನ ಜನರಿಗೆ ನೆರವಾಗಲು ಈ ಸೇವೆ ಪ್ರಾರಂಭಿಸಲಾಗಿದ್ದು, ಕಡಿಮೆದರದಲ್ಲಿ ವೆಬ್‌ಸೈಟ್‌ನಲ್ಲಿಯೇ ನಂದಿನಿಯ ಎಲ್ಲಾ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಹಾಲು, ಮೊಸರು, ತುಪ್ಪ, ಬೆಣ್ಣೆ ಹಾಗೂ ಸಿಹಿತಿನಿಸುಗಳು, ಐಸ್‌ಕ್ರೀಂ ಸೇರಿದಂತೆ ಎಲ್ಲಾ ಬಗೆಯ ಉತ್ಪನ್ನಗಳು ಆನ್‌ಲೈನ್‌ನಲ್ಲಿ ಖರೀದಿಗೆ ಲಭ್ಯವಿವೆ.!!

ಹಾಗಾದರೆ, ಕೆಎಂಎಫ್ ತೆರೆದಿರುವ ಇ-ಡೈರಿ ವ್ಯವಸ್ಥೆ ಹೇಗೆ ನಡೆಯಲಿದೆ.? ಡೆಲಿವರಿ ಪಡೆದುಕೊಳ್ಳುವುದು ಹೇಗೆ? ಬುಕ್ಕಿಂಗ್‌ಗೆ ವಿಧಿಸುವ ದರ ಎಷ್ಟು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೆಬ್‌ಸೈಟ್‌ ಯಾವುದು?

ವೆಬ್‌ಸೈಟ್‌ ಯಾವುದು?

ಆನ್‌ಲೈನ್‌ ಮೂಲಕವೇ ನಂದಿನಿ ಪ್ರಾಡೆಕ್ಟ್‌ಗಳನ್ನು ಖರೀದಿಸಲು WWW.edairy.Co.in ವೆಬ್‌ಸೈಟ್‌ಗೆ ಭೇಟಿ ನೀಡಿ.

30 ರೂ. ಸರ್ವೀಸ್ ಚಾರ್ಜ್!!

30 ರೂ. ಸರ್ವೀಸ್ ಚಾರ್ಜ್!!

ನಂದಿನಿ ಪ್ರಾಡೆಕ್ಟ್‌ ಅನ್ನು ಬುಕ್ ಮಾಡಿದರೆ 750 ರೂ. ವರೆಗಿನ ಖರೀದಿಗೆ 30 ರೂ. ಸರ್ವೀಸ್ ಚಾರ್ಜ್ ನಿಗದಿಪಡಿಸಲಾಗಿದೆ. 750 ರೂ. ಮೇಲಿನ ಖರೀದಿಗೆ ಶಿಪ್ಪಿಂಗ್‌ಚಾರ್ಜ್ ಕೊಡಬೇಕಾಗಿಲ್ಲ.

ದಿನಕ್ಕೆ‌ ಎರಡು ಬಾರಿ ಡೆಲಿವರಿ!!

ದಿನಕ್ಕೆ‌ ಎರಡು ಬಾರಿ ಡೆಲಿವರಿ!!

ಆನ್‌ಲೈನ್‌ ಮೂಲಕ ನಂದಿನಿ ಪ್ರಾಡೆಕ್ಟ್‌ ಅನ್ನು ಬುಕ್ ಮಾಡಿದರೆ ದಿನಕ್ಕೆ‌ ಎರಡು ಬಾರಿ ಡೆಲಿವರಿ ನೀಡುವ ಸೌಲಭ್ಯವಿದೆ. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಲಾದ ಉತ್ಪನ್ನಗಳನ್ನು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಸಂಜೆ 4 ರಿಂದ 8 ಗಂಟೆಯೊಳಗೆ ನಿಮ್ಮ ಮನೆ ಬಾಗಿಲಿಗೆ ಡೆಲಿವರಿ ಮಾಡಲಾಗುತ್ತದೆ.

ಮಾಹಿತಿ ಲಭ್ಯ.!!

ಮಾಹಿತಿ ಲಭ್ಯ.!!

ನೀವು ನಂದಿನಿ ಪ್ರಾಡೆಕ್ಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ, ನೀವು ಆರ್ಡರ್ ಮಾಡಿದ ಪ್ರೊಡಕ್ಟ್‌ಗಳ ಡೆಲಿವರಿ ಬಗ್ಗೆ ನಿಮಗೆ ವಿವರವಾದ ಮೇಲ್‌ ಕೂಡ ಆಗಾಗ ಲಭ್ಯವಾಗಲಿದೆ. ಮತ್ತು ಸೇವೆಯ ಬಗ್ಗೆಯೂ ಕೂಡ ಫೀಡ್‌ಬ್ಯಾಕ್ ನೀಡಬಹುದಾಗಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Now find all Nandini Milk Products like Nandini Milk, Nandini Curd, Nandini Paneer & Nandini Gheeavailable online at best prices. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot