'ಇವಿಎಂ' ಯಂತ್ರವನ್ನು ಹ್ಯಾಕ್ ಮಾಡಲು ಸಾಧ್ಯವೆ?..ಯಕ್ಷ ಪ್ರಶ್ನೆಗೆ ಇಲ್ಲಿದೆ ಉತ್ತರ!

|

ಭಾರತದ ರಾಜಕಾರಣದಲ್ಲಿ ರಾಜಕಾರಣಿಗಳ ಡೊಂಬರಾಟಕ್ಕೆ ಸಿಲುಕಿ ನಲುಗುತ್ತಿರುವ ಎಲೆಕ್ಟ್ರಾನಿಕ್ ಮತ ಯಂತ್ರ(ಇವಿಎಂ)ದ ಬಗ್ಗೆ ಸಾಮಾನ್ಯರಿಗೂ ಬಹಳ ಕುತೋಹಲ ಏರ್ಪಟ್ಟಿದೆ. ನಿಜವಾಗಿಯೂ ಇವಿಎಂ ಯಂತ್ರವನ್ನು ಹ್ಯಾಕ್ ಮಾಡಲು ಸಾಧ್ಯವೇ?, ಹ್ಯಾಕ್ ಮಾಡಿದರೂ ಹೇಗೆ ಮಾಡಬಹುದು?, ಎಂಬೆಲ್ಲಾ ಪ್ರಶ್ನೆಗಳು ಕಾಡುತ್ತಿವೆ.

ಭಾರತದ ರಾಜಕಾರಣದಲ್ಲಿ ಭಾರತೀಯ ಜನತಾ ಪಕ್ಷ ಬಹುತೇಕ ರಾಜ್ಯಗಳಲ್ಲಿ ಅಧಿಕಾರವನ್ನು ಕೈವಶ ಮಾಡಿಕೊಂಡಿರುವುದರಿಂದ ಭಾರತೀಯ ಕಾಂಗ್ರೆಸ್ ಪಕ್ಷವು ಎಲೆಕ್ಟ್ರಾನಿಕ್ ಮತ ಯಂತ್ರ(ಇವಿಎಂ) ಹ್ಯಾಕ್ ಆಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ಜನಸಾಮಾನ್ಯರಿಗೂ ಕುತೋಹಲ ಹೆಚ್ಚಿಸಿದೆ.

'ಇವಿಎಂ' ಯಂತ್ರವನ್ನು ಹ್ಯಾಕ್ ಮಾಡಲು ಸಾಧ್ಯವೆ?.ಯಕ್ಷ ಪ್ರಶ್ನೆಗೆ ಇಲ್ಲಿದೆ ಉತ್ತರ!

ಹಾಗಾಗಿ, ಇಂದಿನ ಲೇಖನದಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳು ನಿಜಕ್ಕೂ ಸಂಪೂರ್ಣ ಸುರಕ್ಷಿತವೇ?, ಈ ಯಂತ್ರದಲ್ಲಿ ಏನಾದರೂ ಕೊರತೆಗಳಿವೆಯೇ? ಇವಿಎಂಗಳ ತಾಂತ್ರಿಕತೆಯನ್ನು ಹೇಗೆ ಹ್ಯಾಕ್ ಮಾಡಬಹುದು?, ಹ್ಯಾಕರ್‌ಗಳಿಗೆ ಇದೆಲ್ಲಾ ಸಾಧ್ಯವೆ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡೋಣ. ಕೆಳಗಿನ ಸ್ಲೈಡರ್‌ಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ.

ಇವಿಎಂ ಯಂತ್ರಗಳು

ಇವಿಎಂ ಯಂತ್ರಗಳು

ಭಾರತದಲ್ಲಿ ಮೊದಲ ಬಾರಿ ಎಲೆಕ್ಟ್ರಾನಿಕ್‌ ವೋಟಿಂಗ್ ಮೆಷಿನ್ ಬಳಕೆಯಾಗಿದ್ದು 1981ರ ಕೇರಳ ಉಪಚುನಾವಣೆಯಲ್ಲಿ. ಅಲ್ಲಿಂದ ಇಲ್ಲಿಯವರೆಗೂ ಇವಿಎಂ ಯಂತ್ರಗಳು ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದ್ದು, ಪ್ರಸ್ತುತ ಮತಯಂತ್ರ ಬ್ಯಾಲೇಟ್ ಯೂನಿಟ್, ಕಂಟ್ರೋಲ್ ಯೂನಿಟ್ ಮತ್ತು ಗರಿಷ್ಟ 3,840 ವೋಟ್ ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿವೆ.

ಇವಿಎಂ ಯಂತ್ರಗಳು ತಯಾರಿಸುವುದು ಯಾರು?

ಇವಿಎಂ ಯಂತ್ರಗಳು ತಯಾರಿಸುವುದು ಯಾರು?

ಬೆಂಗಳೂರಿನ ಬಿಇಎಲ್ ಮತ್ತು ಇಸಿಐಎಲ್‌ಗಳು ಸೇರಿಕೊಂಡು ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಭಾರತದಲ್ಲಿ ತಯಾರಿಸುತ್ತಿವೆ. ಆದರೆ, ಈ ಯಂತ್ರದಲ್ಲಿನ ಮೈಕ್ರೋಕಂಟ್ರೋಲರ್ ಚಿಪ್‌ಗಳನ್ನು ಮಾತ್ರ ವಿದೇಶದಿಂತ ತರಿಸಿಕೊಳ್ಳಲಾಗುತ್ತಿದೆ. ಏಕೆಂದರೆ, ಅಂತಹ ಚಿಪ್ ತಯಾರಿಸುವ ತಂತ್ರಜ್ಞಾನ ನಮ್ಮಲ್ಲಿಲ್ಲವಂತೆ.

ಇವಿಎಂನಲ್ಲಿನ ಪ್ರೋಗ್ರಾಮಿಂಗ್ ಕೋಡ್ ಯಾವುದು?

ಇವಿಎಂನಲ್ಲಿನ ಪ್ರೋಗ್ರಾಮಿಂಗ್ ಕೋಡ್ ಯಾವುದು?

ಈಗ ಬಳಕೆಯಾಗುತ್ತಿರುವ ಎಲೆಕ್ಟ್ರಾನಿಕ್ ಮತಯಂತ್ರದ ಚಿಪ್‌ಗಳಲ್ಲಿ ಬಳಕೆಯಾಗುವ ಪ್ರೋಗ್ರಾಮಿಂಗ್ ಕೋಡ್ ಅನ್ನು ಬಹಳ ರಹಸ್ಯವಾಗಿ ಇಡಲಾಗಿದೆ. ಕೆಲವೇ ಕೆಲವು ಸಂಖ್ಯೆಯ ಎಂಜಿನಿಯರ್‌ಗಳಿಗೆ ಹೊರತು ಪಡಿಸಿದರೆ ಇನ್ಯಾರಿಗೂ ಗೊತ್ತಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಇವಿಎಂ ಯಂತ್ರವನ್ನು ಹ್ಯಾಕ್ ಮಾಡಬಹುದೆ?

ಇವಿಎಂ ಯಂತ್ರವನ್ನು ಹ್ಯಾಕ್ ಮಾಡಬಹುದೆ?

ಈ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂದು ಹೇಳುವ ಮುನ್ನ ಇವಿಎಂಗಳ ತಾಂತ್ರಿಕತೆಯನ್ನು ಹೇಗೆ ಹ್ಯಾಕ್ ಮಾಡಬಹುದು ಎಂಬುದನ್ನು ತಿಳಿಯುವುದು ಮುಖ್ಯ. ಹ್ಯಾಕರ್‌ಗಳು ಇವಿಎಂ ಅನ್ನು ಹ್ಯಾಕ್ ಮಾಡುವುದಕ್ಕೆ ಯಂತ್ರವನ್ನು ಬಿಚ್ಚಬೇಕು ಅಥವಾ ಆ ಇವಿಎಂ ಯಂತ್ರ ಅಂತರ್ಜಾಲ ಸಂಪರ್ಕವನ್ನು ಹೊಂದಿರಬೇಕು. ಹಾಗಿದ್ದರೆ ಯಂತ್ರವನ್ನು ಹ್ಯಾಕ್ ಮಾಡಬಹುದು ಎಂದು ಊಹಿಸಬಹುದು.

Karnataka Election 2018: Chunavana app will find your booth in click - GIZBOT KANNADA
ಹೇಗೆಲ್ಲಾ ಹ್ಯಾಕ್ ಮಾಡಬಹುದು?

ಹೇಗೆಲ್ಲಾ ಹ್ಯಾಕ್ ಮಾಡಬಹುದು?

ಒಂದು ವೇಳೆ ಇವಿಎಂ ಯಂತ್ರ ಅಂತರ್ಜಾಲ ಸಂಪರ್ಕವನ್ನು ಹೋಂದಿದ್ದು ಆ ಯಂತ್ರವು ಹ್ಯಾಕರ್‌ಗಳ ಕೈಗೆ ಒಂದು ವೇಳೆ (ಇದು ಊಹೆ.!ಸಿಗುವುದು ಕಷ್ಟ!!) ಸಿಕ್ಕರೆ ಮೂರು ರೀತಿ ಹ್ಯಾಕ್ ಮಾಡಬಹುದು, 1) ಉದ್ದೇಶಿಸಿದ ಅಭ್ಯರ್ಥಿಗೆ ಎಲ್ಲಾ ಮತ ಬೀಳುವಂತೆ ಬಟನ್ ಹ್ಯಾಕ್ ಮಾಡಬಹುದು. 2) ಚಿಪ್ ಅನ್ನು ಹ್ಯಾಕ್ ಮಾಡಿ ಎಲ್ಲಾ ಮತಗಳು ಒಬ್ಬನೇ ಅಭ್ಯರ್ಥಿಗೆ ಬೀಳುವಂತೆ ಮಾಡುವುದು. 3) ಮತಗಳ ಸಂಖ್ಯೆಯನ್ನು ತೋರಿಸುವ ಡಿಸ್‌ಪ್ಲೇ ಹ್ಯಾಕ್ ಮಾಡಿ ಒಬ್ಬ ಅಭ್ಯರ್ಥಿಗೆ ಹೆಚ್ಚು ಓಟು ಇರುವಂತೆ ತೋರಿಸುವುದು.

ಹ್ಯಾಕ್ ಮಾಡುವುದು ಬಹುತೇಕ ಅಸಾಧ್ಯ!

ಹ್ಯಾಕ್ ಮಾಡುವುದು ಬಹುತೇಕ ಅಸಾಧ್ಯ!

ಇಂದು ಚುನಾವಣೆ ಆಯೋಗ ಅನುಸರಿಸುವ ಕಾರ್ಯ ವಿಧಾನದಿಂದ ಇವಿಎಂ ಯಂತ್ರವನ್ನು ಹ್ಯಾಕ್ ಮಾಡಲು ಅಸಾಧ್ಯವೇ ಸರಿ. ಸದ್ಯ ಚುನಾವಣಾ ಆಯೋಗ ಅನುಸರಿಸುವ ನಿರ್ವಹಣಾ ಮಾದರಿಯಲ್ಲಿ ಹ್ಯಾಕರ್‌ಗಳ ಕೈಗೆ ಈ ಯಂತ್ರಗಳು ಸಿಗುವುದೇ ಅಸಾಧ್ಯ. ಒಂದು ವೇಳೆ ಸಿಕ್ಕರೂ ಆ ಯಂತ್ರ ಯಾವ ಕ್ಷೇತ್ರಕ್ಕೆ ಹೋಗುತ್ತದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಇನ್ನು ಮತದಾನ ಆರಂಭವಾಗುವ ಮೊದಲು ಮತಯಂತ್ರವನ್ನು ಪರೀಕ್ಷಿಸುವ ಪ್ರಕ್ರಿಯೆ ಇರುತ್ತದೆ.

ಚುನಾವಣಾ ವ್ಯವಸ್ಥೆಯೇ ಕೈಯಲ್ಲಿರಬೇಕು.

ಚುನಾವಣಾ ವ್ಯವಸ್ಥೆಯೇ ಕೈಯಲ್ಲಿರಬೇಕು.

ಒಂದು ವೇಳೆ ಮತಯಂತ್ರವನ್ನು ಹ್ಯಾಕ್ ಮಾಡಲೇಬೇಕೆಂದರೆ ಇಡೀ ಚುನಾವಣಾ ವ್ಯವಸ್ಥೆಯನ್ನೇ ಹ್ಯಾಕರ್ ಒಬ್ಬ ವಶಕ್ಕೆ ಪಡೆಯಬೇಕಾದ ಅಗತ್ಯ ಇದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಭಾರತದ ಚುನಾವಣಾ ಆಯೋಗ ಕೂಡ ಒಬ್ಬ ವ್ಯಕ್ತಿಯ ಕೈಕೆಳಗೆ ಇರದೆ ಪಾರದರ್ಶಕವಾಗಿರುವುದರಿಂದ ಇವಿಎಂ ಯಂತ್ರವನ್ನು ಇಡೀ ವ್ಯವಸ್ಥೆಗೆ ಸೆಡ್ಡು ಹೊಡೆದು ಹ್ಯಾಕ್ ಮಾಡಲು ಸಾಧ್ಯವಿಲ್ಲ.

ಒಂದು ಸಂದೇಹ ಹುಟ್ಟಬಹುದು!!

ಒಂದು ಸಂದೇಹ ಹುಟ್ಟಬಹುದು!!

ಭಾರತದ ಇವಿಎಂಗಳಿಗೆ ಬೇಕಾದ ಚಿಪ್‌ಗಳನ್ನು ಮೈಕ್ರೋಚಿಪ್ ಟೆಕ್ನಾಲಜಿ ಇನ್‌ಕಾರ್ಪೊರೇಷನ್ ಎಂಬ ವಿದೇಶಿ ಕಂಪೆನಿ ವಿಶಿಷ್ಟ ತಂತ್ರಜ್ಞಾನದ ಮೂಲಕ ತಯಾರಿಸುತ್ತಿದೆ. ಇದು ಚುನಾವಣಾ ಆಯೋಗಕ್ಕೆ ಮಾತ್ರ ತಿಳಿದಿದ್ದು, ಸುರಕ್ಷತೆ ದೃಷ್ಟಿಯಿಂದ ಯಾರಿಗೂ ಈ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ, ಇದರಲ್ಲಿ ತೊಂದರೆ ಎಂದರೆ ಮೈಕ್ರೋಚಿಪ್ ಟೆಕ್ನಾಲಜಿ ಇನ್‌ಕಾರ್ಪೊರೇಷನ್ ಹರಣವೊಂದರಲ್ಲಿ ಭಾಗಿಯಾಗಿರುವ ಸಂಶಯ ಇರುವ ಕಂಪೆನಿಯ ಮಾಲೀಕತ್ವಕ್ಕೆ ಸೇರಿರುವುದರಿಂದ ಇವಿಎಂ ಚಿಪ್‌ಗಳನ್ನು ತಯಾರಿಸಿದಾಗ ಸಂಶಯ ಹುಟ್ಟುವುದು ಸಹಜ.

Best Mobiles in India

English summary
The rules of ECI challenge to hack EVMs are too narrow for any software tester. I know most of software/machines can have faults/loopholes. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X