ಮೆಮೊರಿ ಕಾರ್ಡ್‌ ಕರೆಪ್ಟ್ ಆದರೆ ಡೇಟಾ ವಾಪಸ್ ಪಡೆಯವುದು ಹೇಗೆ?

|

ವೈರಸ್ ತೊಂದರೆಯಿಂದ ಅಥವಾ ಡೇಟಾ ಕರೆಪ್ಟ್ ಆಗಿರುವುದೆರಿಂದಲೂ ಮೆಮೊರಿ ಕಾರ್ಡ್‌ಗಳು ಒಮ್ಮೊಮ್ಮೆ ಅಚಾನಕ್ ಆಗಿ ತನ್ನ ಕೆಲಸ ನಿಲ್ಲಿಸಿಬಿಡುತ್ತವೆ. ಇಂತಹ ಸಮಯದಲ್ಲಿ ಮೊಬೈಲ್ ಮತ್ತು ಕಂಪ್ಯೂಟರ್ ಯಾವುದಕ್ಕೆ ಅಳವಡಿಸಿದರೂ ಸಹ ಅವುಗಳಲ್ಲಿರುವ ಚಿತ್ರ, ವಿಡಿಯೋಗಳು ಸೇರಿದಂತೆ ಯಾವುದೇ ಫೈಲ್‌ಗಳು ತೆರೆಯುವುದಿಲ್ಲ.!!

ಆದರೆ, ಆ ಎಲ್ಲಾ ಫೈಲ್‌ಗಳು ನಿಮಗೆ ತುಂಬಾ ಮುಖ್ಯವಾಗಿದ್ದರೆ ಅವುಗಳನ್ನು ವಾಪಸ್ ಪಡೆಯಲು ಪಡಬೇಕಾದ ಕಷ್ಟ ಅಷ್ಟಿಷ್ಟಲ್ಲ.! ಇನ್ನು ಕೆಲವರಂತೂ ಆ ಡೇಟಾ ಮತ್ತೆ ನಮಗೆ ಸಿಗುವುದಿಲ್ಲ ಎಂದು ಸುಮ್ಮನಾಗಿಬಿಡುತ್ತಾರೆ.!! ಹಾಗಾಗಿ, ಇಂದಿನ ಲೇಖನದಲ್ಲಿ ಮೆಮೊರಿ ಕಾರ್ಡ್ ಕರೆಪ್ಟ್ ಆದರೆ ಡೇಟಾವನ್ನು ಮತ್ತೆ ಹೇಗೆ ಪಡೆದುಕೊಳ್ಳುವುದು ಎಂಬುದನ್ನು ತಿಳಿಯೋಣ.!!

ಮೊದಲು ಏನು ಮಾಡಬೇಕು?

ಮೊದಲು ಏನು ಮಾಡಬೇಕು?

ಮೆಮೊರಿ ಕಾರ್ಡ್‌ ಕೆಲಸ ಮಾಡುತ್ತಿಲ್ಲವೆಂದಾದರೆ ಮೊದಲು ನೀವು ಗಮನಿಸಬೇಕಾದ ಎಚ್ಚರಿಕೆ ಎಂದರೆ, ಯಾವುದೇ ಕಾರಣಕ್ಕೂ ಅದರಲ್ಲಿ ಪುನಃ ಯಾವುದೇ ಫೈಲ್‌ಗಳನ್ನು ಸೇವ್ ಮಾಡಲು ಪ್ರಯತ್ನಿಸಬೇಡಿ. ಜತೆಗೆ ಮೆಮೊರಿ ಕಾರ್ಡ್ ಅನ್ನು ಒರೆಸುವ ಅಥವಾ ಕ್ಲೀನ್ ಮಾಡುವ ಕಾರ್ಯ ಮಾಡದಿರುವುದು ಒಳ್ಳೆಯದು.!!

ಡೇಟಾ ವಾಪಸ್ ತೆಗೆಯುವುದು ಹೇಗೆ?

ಡೇಟಾ ವಾಪಸ್ ತೆಗೆಯುವುದು ಹೇಗೆ?

ಮೆಮೊರಿ ಕಾರ್ಡ್ ಕರೆಪ್ಟ್ ಆಗಿದ್ದರೆ ಅದನ್ನು ನಿಮ್ಮ ಕಂಪ್ಯೂಟರ್‌ಗೆ ಹಾಕಿ ಆ ಫೋಲ್ಡರ್‌ ಮೇಲೆ ಕ್ಲಿಕ್ ಮಾಡಿ ಸರ್ಚ್ ಬಾಕ್ಸ್‌ನಲ್ಲಿ ಅದರಲ್ಲಿರುವ ಮುಖ್ಯ ಫೋಲ್ಡರ್‌ಗಳ ನೇಮ್ ಸರ್ಚ್ ಮಾಡಿ. ನಂತರ ಆ ಫೈಲ್‌ಗಳು ತೆರೆಯುತ್ತವೆ. ಅವುಗಳನ್ನು ಇತರ ಫೈಲ್‌ಗಳ ಮೂಲಕ ನಿಮ್ಮ ಕಂಪ್ಯೂಟರ್‌ನಲ್ಲಿ ಸೇವ್ ಮಾಡಿಕೊಳ್ಳಿ.!!

ರಿಕವರಿ ತಂತ್ರಾಂಶ ಅಳವಡಿಸಿಕೊಳ್ಳಿ.!!

ರಿಕವರಿ ತಂತ್ರಾಂಶ ಅಳವಡಿಸಿಕೊಳ್ಳಿ.!!

ಕಂಪ್ಯೂಟರ್‌ನಲ್ಲಿ ಸರ್ಚ್ ಮಾಡಿದರೂ ಮೆಮೊರಿ ಕಾರ್ಡ್ ಫೈಲ್‌ಗಳು ತೆರೆಯದಿದ್ದರೆ ಕಂಪ್ಯೂಟರ್‌ನಲ್ಲಿ ರಿಕವರಿ ತಂತ್ರಾಂಶ ಅಳವಡಿಸಿಕೊಳ್ಳಿ. ಈ ತಂತ್ರಾಂಶದ ಮೂಲಕ ಮೆಮೊರಿ ಕಾರ್ಡ್ ಸ್ಕ್ಯಾನ್ ಮಾಡಿ, ರಿಕವರಿ‌ ಮಾಡಬಹುದಾದ ಫೈಲುಗಳನ್ನು ತೋರಿಸುತ್ತದೆ. ಬೇಕಾದುದನ್ನು ಆಯ್ಕೆ ಮಾಡಿಕೊಂಡು, ರಿಕವರಿ ಬಟನ್ ಒತ್ತಿ.!!

'ಸಿ' ಡ್ರೈವ್‌ನಲ್ಲಿ ಸೇವ್ ಮಾಡಬೇಡಿ!!

'ಸಿ' ಡ್ರೈವ್‌ನಲ್ಲಿ ಸೇವ್ ಮಾಡಬೇಡಿ!!

ರಿಕವರಿ‌ ಮಾಡಬಹುದಾದ ಫೈಲುಗಳ ಕಂಪ್ಯೂಟರಿನ 'ಸಿ' ಡ್ರೈವ್‌ನಲ್ಲಿ ಸೇವ್ ಮಾಡಬೇಡಿ. ಡಿ ಅಥವಾ ಬೇರಾವುದೇ ಡ್ರೈವ್‌ನಲ್ಲಿ ಸೇವ್‌ ಮಾಡಿಕೊಳ್ಳುವುದು ಒಳ್ಳೆಯದು. ಇನ್ನು ಈ ಯಂತ್ರಾಂಶದಲ್ಲಿ ಡೇಟಾ ರಿಕವರ್ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳುವುದರಿಂದ ತಾಳ್ಮೆಯಿಂದ ಕಾಯಿರಿ.

ಬೇರೊಂದು ಕಂಪ್ಯೂಟರ್‌ ಪ್ರಯತ್ನಿಸಿ!!

ಬೇರೊಂದು ಕಂಪ್ಯೂಟರ್‌ ಪ್ರಯತ್ನಿಸಿ!!

ಮೆಮೊರಿ ಕಾರ್ಡ್‌ ಡೇಟಾ ತೆರೆಯದಿದ್ದರೆ ಇಷ್ಟೆಲ್ಲಾ ಮಾಡುವ ಮೊದಲು ಬೇರೊಂದು ಕಂಪ್ಯೂಟರ್‌ ಅಥವಾ ಮೊಬೈಲ್‌ ಮುಂತಾದ ಸಾಧನಕ್ಕೆ ನಿಮ್ಮ ಮೆಮೊರಿ ಕಾರ್ಡನ್ನು ಸಂಪರ್ಕಿಸಿ ನೋಡಿ. ನಿಮ್ಮ ಕಂಪ್ಯೂಟರ್‌ನಲ್ಲಿ ತೆರೆಯದ ಡೇಟಾ ಇತರ ಕಂಪ್ಯೂಟರ್‌ನಲ್ಲಿ ಕೆಲವೊಮ್ಮೆ ವರ್ಕ್‌ ಆಗಬಹುದು.!!

ವಿಶ್ವದ ದೊಡ್ಡ ಲೀ-ಐಯಾನ್ ಬ್ಯಾಟರಿ ತಯಾರಿಕೆ ಹಿಂದಿತ್ತು 50 ಮಿಲಿಯನ್ ಡಾಲರ್ ಚಾಲೆಂಜ್!!ವಿಶ್ವದ ದೊಡ್ಡ ಲೀ-ಐಯಾನ್ ಬ್ಯಾಟರಿ ತಯಾರಿಕೆ ಹಿಂದಿತ್ತು 50 ಮಿಲಿಯನ್ ಡಾಲರ್ ಚಾಲೆಂಜ್!!

Best Mobiles in India

English summary
How can we recover deleted data from memory card?.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X