ನಿಮ್ಮ ಸ್ಮಾರ್ಟ್ಫೋನ್ ಬ್ಲಾಸ್ಟ್‌ ಆಗದೇ ಇರಲು ಹೀಗೆ ಮಾಡಿ!!

By GizBot Bureau
|

ಮಲೇಶಿಯಾದ ಸಿಇಓ ಸ್ಮಾರ್ಟ್ ಫೋನ್ ಸ್ಪೋಟಗೊಂಡ ಪರಿಣಾಮದಿಂದ ತೀರಿಕೊಂಡರು.ಆದರೆ ಹೀಗೆ ಸ್ಮಾರ್ಟ್ ಫೋನ್ ಸ್ಪೋಟಗೊಳ್ಳಲು ಕಾರಣವೇನು ಎಂದು ತಿಳಿಯದಿದ್ದರೂ, ಸಿಇಓ ಕ್ರೇಡಲ್ ಫಂಡ್ ನಜ್ರೀನ್ ಹಸನ್ ಬಳಸುತ್ತಿದ್ದದ್ದು ಹುವಾಯಿ ಮತ್ತು ಬ್ಲಾಕ್ ಬೆರಿ ಡಿವೈಸ್ ಗಳು ಎಂದು ತಿಳಿದುಬಂದಿದೆ.

ಗೂಗಲ್ ಎಂಬ ಸ್ವಾರಸ್ಯಕರ ಹುಡುಕಾಟ..! ನಿಮಗೆ ಗೊತ್ತಿಲ್ಲ ಹಲವು ಅಂಶಗಳು..!ಗೂಗಲ್ ಎಂಬ ಸ್ವಾರಸ್ಯಕರ ಹುಡುಕಾಟ..! ನಿಮಗೆ ಗೊತ್ತಿಲ್ಲ ಹಲವು ಅಂಶಗಳು..!

ನಿಮ್ಮ ಸ್ಮಾರ್ಟ್ಫೋನ್ ಬ್ಲಾಸ್ಟ್‌ ಆಗದೇ ಇರಲು ಹೀಗೆ ಮಾಡಿ!!

ಅವು ತಮ್ಮಷ್ಟಕ್ಕೇ ತಾವೇ ಬಿಸಿಯಾಗುತ್ತದೆ ಮತ್ತು ಚಾರ್ಜ್ ಗೆ ಹಾಕಿದಾಗ ಅತೀ ಹೆಚ್ಚು ಶಾಖಗೊಳ್ಳುತ್ತೆ. ಹಾಗಾಗಿ ಇದೊಂದೇ ಮಾರ್ಗದಿಂದ ನಾವು ಸ್ಮಾರ್ಟ್ ಫೋನ್ ಸ್ಪೋಟಗೊಳ್ಳುವುದನ್ನು ತಡೆಯಬಹುದು ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಸರಳ ಸಲಹೆಗಳನ್ನು ಮಾಡಿಸಿ ಆ ಮೂಲಕ ಶೇಕಡಾ 95 ರಷ್ಟು ನಿಯಂತ್ರಿಸಬಹುದು.

1. ನಿಮ್ಮದೇ ಫೋನಿನ ಚಾರ್ಜರ್ ಬಳಸಿ

1. ನಿಮ್ಮದೇ ಫೋನಿನ ಚಾರ್ಜರ್ ಬಳಸಿ

ಯಾವಾಗಲೂ ನಿಮ್ಮ ಫೋನಿನ ಜೊತೆಯಲ್ಲೇ ಬರುವ ಚಾರ್ಜರ್ ನ್ನು ಮೊಬೈಲ್ ಚಾರ್ಜಿಂಗ್ ಗೆ ಬಳಕೆ ಮಾಡುವುದು ಒಳ್ಳೆಯದು (ಅಥವಾ ಅದೇ ಕಂಪೆನಿಯ ಒರಿಜಿನಲ್ ಚಾರ್ಜರ್ ). ಒಂದು ವೇಳೆ ಚಾರ್ಜರ್ ಕಳೆದುಹೋದರೆ, ಹಾಳಾದರೆ ಯಾವಾಗಲೂ ಬ್ರ್ಯಾಂಡೆಂಡ್ ಜಾರ್ಜರ್ ನ್ನು ಬಳಕೆ ಮಾಡಿ. ನಕಲಿ ಮತ್ತು ಬ್ರ್ಯಾಂಡೆಂಡ್ ಅಲ್ಲದ ಚಾರ್ಜರ್ ಗಳು ಯಾವಾಗಲೂ ಸಮಸ್ಯೆಗೆ ಕಾರಣವಾಗಬಹುದು.

2. ತಯಾರಿಕಾ ಕಂಪೆನಿಗಳ ಬ್ಯಾಟರಿಗಳನ್ನೇ ಖರೀದಿಸಿ

2. ತಯಾರಿಕಾ ಕಂಪೆನಿಗಳ ಬ್ಯಾಟರಿಗಳನ್ನೇ ಖರೀದಿಸಿ

ಚಾರ್ಜರ್ ಗಳ ಹಾಗೆ, ಒರಿಜಿನಲ್ ಬ್ಯಾಟರಿಗಳನ್ನು ಬಳಕೆ ಮಾಡುವುದು ಕೂಡ ತುಂಬಾ ಮಹತ್ವದದ್ದು. ಒಂದು ವೇಳೆ ನಿಮ್ಮ ಸ್ಮಾರ್ಟ್ ಫೋನಿನ ಬ್ಯಾಟರಿಗಳನ್ನು ಬದಲಿಸುವ ಅಗತ್ಯತೆ ಬಂದರೆ, ಒರಿಜಿನಲ್ ಬ್ಯಾಟರಿಯನ್ನೇ ಖರೀದಿಸುತ್ತಿದ್ದೀರಾ ಎಂಬುದನ್ನು ಪರೀಕ್ಷಿಸಿಕೊಳ್ಳಿ.

3.ಅತೀ ಹೆಚ್ಚು ಕಾಲ ಮೊಬೈಲ್ ಚಾರ್ಜ್ ಮಾಡಬೇಡಿ

3.ಅತೀ ಹೆಚ್ಚು ಕಾಲ ಮೊಬೈಲ್ ಚಾರ್ಜ್ ಮಾಡಬೇಡಿ

ಅತೀ ಹೆಚ್ಚು ಘಂಟೆಗಳ ಕಾಲ ಮೊಬೈಲ್ ನ್ನು ಚಾರ್ಜ್ ಗೆ ಹಾಕಿಡುವ ಅಭ್ಯಾಸ ಬಿಟ್ಟುಬಿಡಿ. ಇದು ಸ್ಮಾರ್ಟ್ ಫೋನ್ ಅತೀ ಹೆಚ್ಚು ಬಿಸಿಯಾಗುವಂತೆ ಮಾಡುತ್ತದೆ. ನಿಮ್ಮ ಫೋನ್ 100 ಶೇಕಡಾ ಚಾರ್ಜ್ ಆದ ಕೂಡಲೇ ಅನ್ ಪ್ಲಗ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

4.ನೇರ ಸೂರ್ಯನ ಕಿರಣಗಳಿಗೆ ಮೊಬೈಲ್ ಒಡ್ಡಬೇಡಿ

4.ನೇರ ಸೂರ್ಯನ ಕಿರಣಗಳಿಗೆ ಮೊಬೈಲ್ ಒಡ್ಡಬೇಡಿ

ನೇರವಾಗಿ ಸೂರ್ಯನ ಕಿರಣಗಳು ಬೀಳುವ ಜಾಗದಲ್ಲಿ ಫೋನನ್ನು ಇಟ್ಟು, ಚಾರ್ಜ್ ಮಾಡಬೇಡಿ. ಅಥವಾ ಬಿಸಿಯಾಗಿರುವ ಜಾಗಗಳು ಉದಾಹರಣೆಗೆ ಕಾರಿನ ಡ್ಯಾಶ್ ಬೋರ್ಡ್ ( ಬೆಳಗಿನ ಹೊತ್ತಿನಲ್ಲಿ) ಬಳಿ ಇಟ್ಟು ಹೆಚ್ಚು ಘಂಟೆಗಳ ಕಾಲ ಮೊಬೈಲ್ ಚಾರ್ಜ್ ಮಾಡಬೇಡಿ. ಇದು ನಿಮ್ಮ ಫೋನ್ ಬಿಸಿಯಾಗುವುದನ್ನು ಹೆಚ್ಚು ಮಾಡಬಹುದು ಮತ್ತು ಫೋನ್ ಸಹಿಸಿಕೊಳ್ಳುವುದು ಕೇವಲ 0 ಯಿಂದ 45 ಡಿಗ್ರಿ ಸೆಂಟಿಗ್ರೇಡ್ ನ ತಾಪವನ್ನು ಮಾತ್ರ.

5. ಅಧಿಕೃತ ಕೇಂದ್ರಗಳಲ್ಲಿ ಮಾತ್ರ ಸ್ಮಾರ್ಟ್ ಫೋನ್ ಸರಿಪಡಿಸಿಕೊಳ್ಳಿ

5. ಅಧಿಕೃತ ಕೇಂದ್ರಗಳಲ್ಲಿ ಮಾತ್ರ ಸ್ಮಾರ್ಟ್ ಫೋನ್ ಸರಿಪಡಿಸಿಕೊಳ್ಳಿ

ಇದನ್ನು ಕೂಡ ನೀವು ಪಾಲಿಸಲೇಬೇಕು .ಅಧಿಕೃತ ಕೇಂದ್ರಗಳಲ್ಲಿ ಮಾತ್ರ ನಿಮ್ಮ ಸ್ಮಾರ್ಟ್ ಫೋನ್ ಗಳನ್ನು ರಿಪೇರಿ ಮಾಡಿಸಿಕೊಳ್ಳಿ. ಅಷ್ಟೇ ಅಲ್ಲ ಸ್ಮಾರ್ಟ್ ಫೋನಿನ ಸರ್ಕ್ಯೂಟ್ ಗಳು ಮತ್ತು ಯಾವುದೇ ಭಾಗಗಳು ಎಫೆಕ್ಟ್ ಗೆ ಒಳಗಾಗಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.

6. ಸಮತ್ತಟ್ಟಾದ ಜಾಗದಲ್ಲಿ ಫೋನನ್ನು ಇಟ್ಟು ಚಾರ್ಜ್ ಮಾಡಿ

6. ಸಮತ್ತಟ್ಟಾದ ಜಾಗದಲ್ಲಿ ಫೋನನ್ನು ಇಟ್ಟು ಚಾರ್ಜ್ ಮಾಡಿ

ನಮ್ಮಲ್ಲಿ ಹಲವರು ಈ ತಪ್ಪನ್ನು ಮಾಡುತ್ತೇವೆ. ದಿಂಬಿನ ಮೇಲೆ ಸ್ಮಾರ್ಟ್ ಫೋನ್ ಇಟ್ಟು ಚಾರ್ಜ್ ಮಾಡುತ್ತೇವೆ. ಇದನ್ನು ಕೂಡ ನೀವು ಅವಾಯ್ಡ್ ಮಾಡಬೇಕು. ಹೀಗೆ ಸಮತ್ತಟ್ಟಾದ ಜಾಗದಲ್ಲಿ ಸ್ಮಾರ್ಟ್ ಫೋನ್ ಇಡದೇ ಇದ್ದರೆ ಬಿಸಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತೆ.

7. ಪವರ್ ಸ್ಟ್ರಿಪ್ ಗಳನ್ನು ಬಳಸಿ ಅಥವಾ ಎಕ್ಸ್ ಟೆಷನ್ ಕಾರ್ಡ್ ಬಳಸಿ ಮೊಬೈಲ್ ಚಾರ್ಜ್ ಮಾಡಬೇಡಿ

7. ಪವರ್ ಸ್ಟ್ರಿಪ್ ಗಳನ್ನು ಬಳಸಿ ಅಥವಾ ಎಕ್ಸ್ ಟೆಷನ್ ಕಾರ್ಡ್ ಬಳಸಿ ಮೊಬೈಲ್ ಚಾರ್ಜ್ ಮಾಡಬೇಡಿ

ಜಾಗರೂಕತೆ ಮಾರ್ಗಗಳಲ್ಲಿ ಪ್ರಮುಖವಾದ ವಿಚಾರವೆಂದರೆ ಪವರ್ ಸ್ಟ್ರಿಪ್ ಗಳನ್ನು ಬಳಸಿ ಅಥವಾ ಎಕ್ಸ್ ಟೆಷನ್ ಕಾರ್ಡ್ ಗಳನ್ನುಬಳಸಿ ಮೊಬೈಲ್ ಚಾರ್ಜ್ ಮಾಡಬೇಡಿ.ಯಾವುದೇ ಡಿವೈಸ್ ಆಗಿರಲಿ, ಅದರಲ್ಲಿರುವ ಯಾವುದೇ ಒಂದು ಕಾರ್ಡ್ ಎಫೆಕ್ಟ್ ಗೆ ಒಳಗಾದರೂ, ನಿಮ್ಮ ಸ್ಮಾರ್ಟ್ ಫೋನ್ ಗೂ ಡ್ಯಾಮೇಜ್ ತಂದೊಡ್ಡುತ್ತದೆ.

8. ನಿಮ್ಮ ಮೊಬೈಲ್ ಮೇಲೆ ಒತ್ತಡ ಹೇರಬೇಡಿ

8. ನಿಮ್ಮ ಮೊಬೈಲ್ ಮೇಲೆ ಒತ್ತಡ ಹೇರಬೇಡಿ

ಮತ್ತೊಂದು ಪ್ರಮುಖ ವಿಚಾರ ಅಂದರೆ ಮೊಬೈಲ್ ಮೇಲೆ ಒತ್ತಡ ಹೇರಬೇಡಿ. ನಿಮ್ಮ ಬ್ಯಾಗ್ ನಲ್ಲಿ ಕೆಳಗೆ ಮೊಬೈಲ್ ಇಟ್ಟುಕೊಂಡು ಅದರ ಮೇಲೆ ಭಾರವಾದ ವಸ್ತುಗಳನ್ನು ಇಟ್ಟುಕೊಂಡು ಬಿಡಬೇಡಿ.

9. ಮೊಬೈಲ್ ಗೆ ಹಾಕಿರುವ ಕೇಸನ್ನು ತೆಗೆದು ಚಾರ್ಜ್ ಮಾಡಿ

9. ಮೊಬೈಲ್ ಗೆ ಹಾಕಿರುವ ಕೇಸನ್ನು ತೆಗೆದು ಚಾರ್ಜ್ ಮಾಡಿ

ಯಾವಾಗಲೂ ಹೀಗೆ ಮಾಡಲು ಸಾಧ್ಯವಾಗದೇ ಇದ್ದರೂ ಕೂಡ, ಮೊಬೈಲ್ ರಕ್ಷಣೆಗೆಂದು ನೀವು ಅದಕ್ಕೆ ತೊಡಿಸುವ ಅಂಗಿಯನ್ನು ಅಥವಾ ಮೊಬೈಲ್ ಕೇಸ್ ಗಳನ್ನು ತೆಗೆದು ಚಾರ್ಜಿಂಗ್ ಗೆ ನಿಮ್ಮ ಸ್ಮಾರ್ಟ್ ಫೋನ್ ಗಳನ್ನು ಹಾಕುವುದು ಬಹಳ ಒಳ್ಳೆಯದು. ಇದರಿಂದಾಗಿ ಮೊಬೈಲ್ ಬಿಸಿಯಾಗುವುದು ಕಡಿಮೆಯಾಗಿರುತ್ತದೆ.

Best Mobiles in India

English summary
CEO dies after phone explodes: Tips to protect your phone from catching fire. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X