Subscribe to Gizbot

ಮುದ್ದೆ ತಯಾರಿಸುವ ಯಂತ್ರದಿಂದ ಉದ್ಯಮಿಗಳಾಗುವ ಅವಕಾಶ!! ಹೇಗೆ ಎಂದು ತಿಳಿಯಿರಿ!!

Written By:

ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಇದೇ ಮೊದಲ ಭಾರಿಗೆ ರಾಗಿ ಮುದ್ದೆ ತಯಾರಿಸುವ ಯಂತ್ರವನ್ನು ಕಂಡುಹಿಡಿದಿದೆ. ಇದು ಸಣ್ಣ ಉಧ್ಯಮಿಗಳ ಪಾಲಿಗೆ ವರವಾಗಲಿದೆ ಎನ್ನಬಹುದು. ಈ ಯಂತ್ರದ ಸಹಾಯದಿಂದ ಸಣ್ಣ ಉಧ್ಯಮ ಶುರು ಮಾಡಬಹದು.!!

ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಾಯೋಜಕತ್ವದಲ್ಲಿ ಈ ಯಂತ್ರ ಅಭಿವೃದ್ಧಿಪಡಿಸಲಾಗಿದ್ದು, ಎಫ್‌ಟಿಆರ್‌ಐ ಹಿರಿಯ ಮುಖ್ಯ ವಿಜ್ಞಾನಿ ವಿ. ಡಿ. ನಾಗರಾಜ್‌ ನೇತೃತ್ವದಲ್ಲಿ ವಿನ್ಯಾಸ ಹಾಗೂ ಫ್ಯಾಬ್ರಿಕೇಷನ್‌ ವಿಭಾಗವು ಈ ಯಂತ್ರ ತಯಾರಿಸಿದೆ.

ಹಾಗಾದರೆ, ರಾಗಿಮುದ್ದೆ ಮಾಡುವ ಯಂತ್ರ ಹೇಗೆ ಕೆಲಸ ಮಾಡುತ್ತದೆ.? ಎಷ್ಟು ಮುದ್ದೆಗಳನ್ನು ಉತ್ಪಾದನೆ ಮಾಡಬಹುದು? ಉದ್ಯಮಿಯಾಗಲು ಏನು ಸಹಕಾರಿ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ. ಮತ್ತು ತಂತ್ರಜ್ಞಾನ ಸಹಾಯದಿಂದ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಉದ್ಯಮಿಗಳಾಗಿ ಹೊರಹೊಮ್ಮಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಾಗಿಮುದ್ದೆ ಮಾಡುವ ಯಂತ್ರ ಹೇಗೆ ಕೆಲಸ ಮಾಡುತ್ತದೆ.?

ರಾಗಿಮುದ್ದೆ ಮಾಡುವ ಯಂತ್ರ ಹೇಗೆ ಕೆಲಸ ಮಾಡುತ್ತದೆ.?

ಈಗ ತಯಾರಿಸಿರುವ ರಾಗಿಮುದ್ದೆ ಮಾಡುವ ಯಂತ್ರಕ್ಕೆ ಕೇವಲ ರಾಗಿ ಹಿಟ್ಟು ಮತ್ತು ಅದಕ್ಕೆ ಬೇಕಾದಷ್ಟು ನೀರು ಸೇರಿಸಿದರೆ ನೀರಿನ ಹಬೆಯ ಮೂಲಕ ಬೆಂದು ರಾಗಿ ಮುದ್ದೆ ಹೊರಬರುತ್ತದೆ. ರಾಗಿ ಮುದ್ದೆ ತಯಾರಿಸಲು 1 ಯೂನಿಟ್‌ ಒಳಗೆ ವಿದ್ಯುತ್‌ ಬಳಸಿಕೊಳ್ಳುತ್ತದೆ.!!

ಗಂಟೆಗೆ 250 ಮುದ್ದೆ ತಯಾರು.!!

ಗಂಟೆಗೆ 250 ಮುದ್ದೆ ತಯಾರು.!!

25 ಕೆ.ಜಿ ರಾಗಿ ಹಿಟ್ಟು ಮತ್ತು ಅದಕ್ಕೆ ಬೇಕಾದಷ್ಟು ನೀರು ಸೇರಿಸಿ ಯಂತ್ರವನ್ನು ಚಾಲೂ ಮಾಡಿದರೇ ಈ ಯಂತ್ರ ಬರೋಬ್ಬರಿ 250 ಮುದ್ದೆ ತಯಾರಿಸುತ್ತದೆ ರಾಗಿ ಮುದ್ದೆ ತಯಾರಿಸಲುನೀರಿನ ಹಬೆಗಾಗಿ ಒಂದು ಗಂಟೆಗೆ 1.2 ಕೆ.ಜಿ ಅಡುಗೆ ಅನಿಲ ಖರ್ಚಾಗಲಿದೆ.

ಹೋಲ್‌ಸೇಲ್ ಬೆಲೆಯಲ್ಲಿ ಮುದ್ದೆ ನೀಡಬಹುದು.!!

ಹೋಲ್‌ಸೇಲ್ ಬೆಲೆಯಲ್ಲಿ ಮುದ್ದೆ ನೀಡಬಹುದು.!!

ಬೆಂಗಳೂರಿನ ಮಾರುಕಟ್ಟೆಯಲ್ಲಿ ಮುದ್ದೆಗೆ ಒಳ್ಳೆಯ ಬೇಡಿಕೆ ಇದೆ. ಹಾಗಾಗಿ, ನೀವು ಕಡಿಮೆ ಎಂದರೂಪ್ರತಿದಿನ 2000 ಮುದ್ದೆ ತಯಾರಿಸಿ ಕೇವಲ 5 ರಿಂದ 6 ರೂಪಾಯಿಗೆ ನೀಡಿದರೂ ಸಹ, ಖರ್ಚೆಲ್ಲಾ ಕಳೆದು 3000 ದಿಂದ 4000 ರೂಪಾಯಿ ಹಣವನ್ನು ಉಳಿಸಬಹುದು.!!

ಯಂತ್ರಕ್ಕೆ ಗರಿಷ್ಟ ₹ 3 ಲಕ್ಷ ವೆಚ್ಚ.!!

ಯಂತ್ರಕ್ಕೆ ಗರಿಷ್ಟ ₹ 3 ಲಕ್ಷ ವೆಚ್ಚ.!!

ಕೇವಲ ಒಂದು ಗಂಟೆಯಲ್ಲಿ 250 ಮುದ್ದೆ ತಯಾರಿಸುವ ಈ ಯಂತ್ರದ ತಂತ್ರಜ್ಞಾನವನ್ನು ಸಿಎಫ್‌ಟಿಆರ್‌ಐ ಸಂಸ್ಥೆಯಿಂದ ಉಚಿತವಾಗಿ ಪಡೆಯಬಹುದು. ಈ ಯಂತ್ರ ತಯಾರಿಕೆಗೆ ಗರಿಷ್ಠ ₹ 3 ಲಕ್ಷ ಖರ್ಚಾಗುವುದು ಎಂದು ಸಿಎಫ್‌ಟಿಆರ್‌ಐ ವಿಜ್ಞಾನಿಗಳು ಹೇಳಿದ್ದಾರೆ..

ಓದಿರಿ:ಚೀನಾ ಮೊಬೈಲ್ ಕಂಪೆನಿಗಳಿಗೆ ಸವಾಲ್ ಹಾಕಿದ 'ಗ್ಯಾಲಕ್ಸಿ ಆನ್ ಮ್ಯಾಕ್ಸ್'!! ಏಕೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
It was a dream come true for V D Nagaraju, senior principal scientist, CSIR-Central Food Technological Research Institute. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot