Home
ಟೆಕ್ ನೌಕರಿ

ಹೊಸ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡುವುದು ಹೇಗೆ?

ನಾವು ನಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾದಾಗ, ಅದನ್ನು ನಮ್ಮೆಲ್ಲಾ ಪ್ರಮುಖ ದಾಖಲೆಗಳಲ್ಲೂ ಅಪ್‌ಡೇಟ್ ಮಾಡುವುದು ಅತ್ಯಗತ್ಯ. ಅವುಗಳಲ್ಲಿ, ಆಧಾರ್ ಕಾರ್ಡ್ ಪ್ರಮುಖ ಗುರುತಿನ ಚೀಟಿಯಾಗಿದ್ದು, ಆಧಾರ್ ಸೇವೆಗಳನ್ನು ಪಡೆಯಲು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುವುದರಿಂದ, ಹೊಸ ಮೊಬೈಲ್ ಸಂಖ್ಯೆಯನ್ನು ಆಧಾರ್‌ನಲ್ಲಿ ನವೀಕರಿಸುವುದು ಮತ್ತಷ್ಟು ಮುಖ್ಯವಾಗುತ್ತದೆ.

ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆ ಬದಲಾಯಿಸಲು ಆನ್‌ಲೈನ್ ಅಪಾಯಿಂಟ್‌ಮೆಂಟ್ ಬುಕ್ ಮಾಡುವ ಮೂಲಕ ನೀವು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು. ಈ ಪ್ರಕ್ರಿಯೆ ಹೇಗೆ ಎಂಬುದಕ್ಕೆ ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ. ಬನ್ನಿ, ಹೊಸ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡುವುದು ಹೇಗೆ? ಎಂಬುದನ್ನು ತಿಳಿಯೋಣ.

ಮೊದಲು ಮೊಬೈಲ್ ಸಂಖ್ಯೆ ಅಪ್‌ಡೇಟ್‌ಗಾಗಿ ಅಪಾಯಿಂಟ್‌ಮೆಂಟ್ ಬುಕ್ ಮಾಡುವುದು ಹೇಗೆ?

  1. ಮೊದಲಿಗೆ, UIDAI ವೆಬ್‌ಸೈಟ್‌ಗೆ (ಈ ಲಿಂಕ್ ಕ್ಲಿಕ್ ಮಾಡಿ) ಭೇಟಿ ನೀಡಿ ಮತ್ತು ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ.
  2. ನಂತರ 'My Aadhaar' ವಿಭಾಗದಲ್ಲಿ, 'Get Aadhaar' ಆಯ್ಕೆಯ ಅಡಿಯಲ್ಲಿ 'Book an Appointment' ಎಂಬುದನ್ನು ಆಯ್ಕೆಮಾಡಿ.
  3. ತೆರೆಯುವ ಪುಟದಲ್ಲಿ, ಡ್ರಾಪ್‌ಡೌನ್ ಪಟ್ಟಿಯಿಂದ ನಿಮ್ಮ ನಗರ ಅಥವಾ ಸ್ಥಳವನ್ನು ಆಯ್ಕೆಮಾಡಿ ಮತ್ತು 'Proceed to Book Appointment' ಮೇಲೆ ಕ್ಲಿಕ್ ಮಾಡಿ.
  4. ನಿಮ್ಮ ಪ್ರಸ್ತುತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ ಮತ್ತು 'Generate OTP' ಆಯ್ಕೆಮಾಡಿ.
  5. ನಿಮ್ಮ ಮೊಬೈಲ್‌ಗೆ ಬಂದಿರುವ OTP ಅನ್ನು ನಮೂದಿಸಿ ಮತ್ತು 'Verify OTP' ಮೇಲೆ ಕ್ಲಿಕ್ ಮಾಡಿ.
    ಹೊಸ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡುವುದು ಹೇಗೆ?
  6. ನಿವಾಸಿ ಪ್ರಕಾರವನ್ನು ಆಯ್ಕೆಮಾಡಿ ಮತ್ತು ನಿಮ್ಮ ಆಧಾರ್ ಸಂಖ್ಯೆ, ಆಧಾರ್‌ನಲ್ಲಿರುವ ನಿಮ್ಮ ಹೆಸರು, ಜನ್ಮ ದಿನಾಂಕ, ಅರ್ಜಿ ಪರಿಶೀಲನೆ ಪ್ರಕಾರ, ರಾಜ್ಯ, ನಗರ, ಮತ್ತು ಆಧಾರ್ ಸೇವಾ ಕೇಂದ್ರದಂತಹ ಅಗತ್ಯ ಮಾಹಿತಿಯನ್ನು ನಮೂದಿಸಿ.
  7. ಎಲ್ಲಾ ವಿವರಗಳನ್ನು ನಮೂದಿಸಿದ ನಂತರ, ನೀವು ನವೀಕರಿಸಲು ಬಯಸುವ ವಿವರಗಳನ್ನು ಆಯ್ಕೆಮಾಡಿ. ಉದಾಹರಣೆಗೆ, ಮೊಬೈಲ್ ಸಂಖ್ಯೆ ನವೀಕರಿಸಲು 'New Mobile Number' ಆಯ್ಕೆಯನ್ನು ಆರಿಸಿ.
  8. 'Next' ಮೇಲೆ ಟ್ಯಾಪ್ ಮಾಡಿ ಮತ್ತು ಲಭ್ಯವಿರುವ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ. ಮತ್ತೊಮ್ಮೆ 'Next' ಆಯ್ಕೆಮಾಡಿ.
  9. ಅಪಾಯಿಂಟ್‌ಮೆಂಟ್ ವಿವರಗಳನ್ನು ಒಮ್ಮೆ ಪರಿಶೀಲಿಸಿ ಮತ್ತು 'Submit' ಮೇಲೆ ಕ್ಲಿಕ್ ಮಾಡಿ.
  10. ಅಪಾಯಿಂಟ್‌ಮೆಂಟ್ ದೃಢೀಕರಣದೊಂದಿಗೆ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಿಕೊಳ್ಳಿ.

ಶುಲ್ಕ ಮತ್ತು ನಂತರದ ಪ್ರಕ್ರಿಯೆ

ಮೊಬೈಲ್ ಸಂಖ್ಯೆ ನವೀಕರಣ ಪ್ರಕ್ರಿಯೆಗೆ ರೂ. 50 ಶುಲ್ಕ ಪಾವತಿಸಬೇಕಾಗುತ್ತದೆ. ನವೀಕರಣ ಪ್ರಕ್ರಿಯೆ ಪೂರ್ಣಗೊಂಡ ನಂತರ, ನಿಮಗೆ URN (ಅಪ್‌ಡೇಟ್ ವಿನಂತಿ ಸಂಖ್ಯೆ) ಹೊಂದಿರುವ ಸ್ವೀಕೃತಿ ಸ್ಲಿಪ್ ದೊರೆಯುತ್ತದೆ. ಈ URN ಬಳಸಿ ನಿಮ್ಮ ನವೀಕರಣದ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಬಹುದು.

ಆಧಾರ್, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡುವ 12-ಅಂಕಿಯ ಅನನ್ಯ ಸಂಖ್ಯೆಯಾಗಿದೆ. ಇದು ಸರ್ಕಾರಿ ಸೌಲಭ್ಯಗಳು, ಬ್ಯಾಂಕಿಂಗ್, ಪ್ರವೇಶಗಳು, ಚಾಲನಾ ಪರವಾನಗಿ, ಪಾಸ್‌ಪೋರ್ಟ್ ಮತ್ತು ಇತರೆ ಸೇವೆಗಳಿಗೆ ಪ್ರಮುಖ ಗುರುತಿನ ಮತ್ತು ವಿಳಾಸದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರಣದಿಂದಾಗಿ, ಆಧಾರ್‌ನಲ್ಲಿರುವ ಎಲ್ಲಾ ಮಾಹಿತಿಗಳು ನಿಖರವಾಗಿ ಮತ್ತು ನವೀಕೃತವಾಗಿರುವುದು ಬಹಳ ಮುಖ್ಯ. ಹಾಗಾಗಿ, ಹೊಸ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡಲು ಈ ಮೇಲಿನ ಹಂತಗಳನ್ನು ಪಾಲಿಸಿ. ಇತರರಿಗೆ ಸಹಾಯ ಮಾಡಲು ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಮತ್ತು ಈ ಮಾಹಿತಿಯಿಂದ ನಿಮಗೆ ಸಹಾಯವಾಗಿದೆ ಎಂದಾದರೆ ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
To ensure access to Aadhaar services, it is important to update your Aadhaar with your new mobile number, as the OTP required will be sent to the registered mobile number.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+