ಹೀಗೆ ಮಾಡುದ್ರೆ ಕೇಲವೇ ನಿಮಿಷಗಳಲ್ಲೇ ಮೊಬೈಲ್ ಚಾರ್ಜ್ ಆಗುತ್ತೆ!!

|

ಸ್ಮಾರ್ಟ್‌ಫೋನ್ ಬ್ಯಾಟರಿ ಬಹುಬೇಗ ಖಾಲಿಯಾಗುವ ಸಮಸ್ಯೆ ಒಬ್ಬಿಬ್ಬರಿಗೆ ಮಾತ್ರವಲ್ಲ ಎಲ್ಲರಿಗೂ ತಟ್ಟುತ್ತದೆ. ಆದರೆ, ಅದಕ್ಕೆ ಬ್ಯಾಟರಿ ಬದಲಿಸುವ ಪರಿಹಾರವಿರುತ್ತದೆ. ಆದರೆ, ಇದಕ್ಕಿಂತಲೂ ಬಹುದೊಡ್ಡ ಸಮಸ್ಯೆ ಎಂದರೆ ಸ್ಮಾರ್ಟ್‌ಫೋನ್ ಅನ್ನು ಬಹುಬೇಗ ಚಾರ್ಜ್ ಮಾಡುವುದು ಎಂದರೆ ನಿಮಗೆ ಆಶ್ಚರ್ಯವಾಗಬಹುದು ಅಲ್ಲವೇ.

ಹೌದು, ನೀವು ಹೊರಗೆ ಹೋಗುವ ಸಮಯದಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ 10% ಚಾರ್ಜ್ ತೋರಿಸಿದಾಗ ಈ ಅನುಭವ ನಿಮಗಾಗಿರಬಹುದು. ಇದು ಸಾಮಾನ್ಯ ಕಿರಿಕಿರಿ ಅಲ್ಲವೇ? ಹಾಗಾಗಿ, ಕೇಲವೇ ನಿಮಿಷಗಳಲ್ಲಿ ಫೋನ್ ಬ್ಯಾಟರಿ ಹೆಚ್ಚು ಚಾರ್ಜ್ ಆಗುವಂತೆ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ. ಮುಂದಿನ ಸ್ಲೈಡರ್‌ಗಳಲ್ಲಿ ಈ ಬಗ್ಗೆ ಮಾಹಿತಿ ತಿಳಿಯಿರಿ.

15 ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಮಾಡಬಹುದು

15 ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಮಾಡಬಹುದು

ಫಾಸ್ಟ್ ಚಾರ್ಜರ್ ಬಳಸದೇ ಕೇವಲ 20 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ತಮ್ಮ ಫೋನ್ ಬ್ಯಾಟರಿ ಚಾರ್ಜ್ ಮಾಡಲು ಹಲವಾರು ಮಾರ್ಗಗಳಿವೆ ಅದಕ್ಕಾಗಿ, ಸ್ಮಾರ್ಟ್‌ಫೋನ್ ಬಳಕೆದಾರರು ಮೊಬೈಲ್ ಚಾರ್ಜ್ ಮಾಡುವಾಗ ಕೆಲವೊಂದು ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡಿ

ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡಿ

ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡಿದರೆ ಸ್ಮಾರ್ಟ್‌ಪೋನ್ ಬಹುಬೇಗ ಚಾರ್ಜ್ ಆಗುತ್ತದೆ ಎಂಬುದು ಈಗಾಗಲೇ ಬಹುತೇಕ ಸ್ಮಾರ್ಟ್ಫೋನ್ ಬಳಕೆದಾರರಿಗಲೆಲ್ಲಾ ತಿಳಿದಿದೆ. ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡುವುದರಿಂದ ಶೇ 30 ಪರ್ಸೆಂಟ್ ಅಧಿಕ ವೇಗದಲ್ಲಿ ಬ್ಯಾಟರಿ ಚಾರ್ಜ್ ಆಗುತ್ತದೆ.

ಏರೋಪ್ಲೇನ್ ಮೋಡ್

ಏರೋಪ್ಲೇನ್ ಮೋಡ್

ಮೊಬೈಲ್ ಅಧಿಸೂಚನೆ ಬಾರ್‌ನಲ್ಲಿ ಕಾಣಿಸುವ ಏರೋಪ್ಲೇನ್ ಮೋಡ್ ಅನ್ನು ಆನ್ ಮಾಡಿ ಚಾರ್ಜಿಂಗ್ ಚಾರ್ಜ್ ಮಾಡಿದರೆ ನಿಮ್ಮ ಫೋನ್ ಬ್ಯಾಟರಿ ಚಾರ್ಜಿಂಗ್ ವೇಗ ಹೆಚ್ಚಾಗಲಿದೆ. ಏರೋಪ್ಲೇನ್ ಮೋಡ್ ಆನ್ ಮಾಡಿದ್ದಾಗ ನೆಟ್‌ವರ್ಕ್ ವ್ಯವಸ್ಥೆ ಕಟ್ ಆಗಿರುವುದರಿಂದ ಫೋನ್ ಬಹುಬೇಗ ಚಾರ್ಜ್ ಆಗುತ್ತದೆ.

ಬ್ರೌಸಿಂಗ್ ಮಾಡಲೇಬೇಡಿ

ಬ್ರೌಸಿಂಗ್ ಮಾಡಲೇಬೇಡಿ

ಏರೋಪ್ಲೇ ಮೋಡ್ ಆನ್ ಆಫ್ ಮಾಡದಿದ್ದರೂ ಪರವಾಗಿಲ್ಲ. ಆದರೆ, ಯಾವುದೇ ಕಾರಣಕೂ ಸಹ ಚಾರ್ಜಿಂಗ್ ವೇಳೆ ಬ್ರೌಸಿಂಗ್ ಮಾಡಲೇಬೇಡಿ. ಏಕೆಂದರೆ ಬ್ಯಾಟರಿ ಚಾರ್ಜ್ ಆಗುತ್ತಿರುವ ಸಮಯದಲ್ಲಿ ಇಂಟರ್‌ನೆಟ್ ಬಳಕೆ ಮಾಡಿದರೆ ಸಾಮಾನ್ಯ ಸ್ಥಿತಿಗಿಂತ ಹೆಚ್ಚು ಬ್ಯಾಟರಿ ಶಕ್ತಿ ಖಾಲಿಯಾಗುತ್ತದೆ.

ಲ್ಯಾಪ್‌ಟಾಪ್‌ನಲ್ಲಿ ಚಾರ್ಜ್ ಬೇಡ

ಲ್ಯಾಪ್‌ಟಾಪ್‌ನಲ್ಲಿ ಚಾರ್ಜ್ ಬೇಡ

ಹೆಚ್ಚು ಜನರು ಲ್ಯಾಪ್‌ಟಾಪ್ ಮೂಲಕ ಚಾರ್ಜ್ ಮಾಡಿಕೊಳ್ಳಲು ಬಯಸುತ್ತಾರೆ. ಆದರೆ, ಗೋಡೆಯ ವಿದ್ಯುತ್ ಸ್ಲಾಟ್‌ಗಳಿಂದ ಬ್ಯಾಟರಿ ವೇಗವಾಗಿ ಚಾರ್ಜ್ ಆದಷ್ಟು ಲ್ಯಾಪ್‌ಟಾಪ್ ಮೂಲಕ ಚಾರ್ಜ್ ಆಗುವುದಿಲ್ಲ. ಏಕೆಂದರೆ, ಲ್ಯಾಪ್‌ಟಾಪ್ ಮೊಬೈಲ್‌ಗೆ ಬೇಕಾದಷ್ಟು ಪ್ರಮಾಣದಲ್ಲಿ ಶಕ್ತಿಯನ್ನು ಬಿಡುವುದಿಲ್ಲ.

ಈ ಚಾರ್ಜರ್ ಇದ್ದರೆ ನಿಮ್ಮ ಮೊಬೈಲ್ ಮತ್ತು ಬ್ಯಾಟರಿ ಎಂದೂ ಹಾಳಾಗುವುದಿಲ್ಲ

ಈ ಚಾರ್ಜರ್ ಇದ್ದರೆ ನಿಮ್ಮ ಮೊಬೈಲ್ ಮತ್ತು ಬ್ಯಾಟರಿ ಎಂದೂ ಹಾಳಾಗುವುದಿಲ್ಲ

ಚಾರ್ಜಿಂಗ್ ಕೇಬಲ್ ಸ್ಮಾರ್ಟ್‌ಪೋನ್ ಮತ್ತು ಸ್ಮಾರ್ಟ್‌ಪೋನ್ ಬ್ಯಾಟರಿಗೂ ತುಂಬ ಪ್ರಮುಖವಾದುದು. ಕಳಪೆ ಕೇಬಲ್ ಬಳಸಿ ಚಾರ್ಜ್ ಮಾಡಲು ಹೊರಟರೆ ಸರಿಯಾಗಿ ಚಾರ್ಜ್ ಆಗದಿರುವುದು, ಅತಿಯಾಗಿ ಬಿಸಿಯಾಗುವುದು, ಕೆಲವೊಮ್ಮೆ ಬೆಂಕಿ ಕಾಣಿಸಿಕೊಳ್ಳುವುದು, ಇತ್ಯಾದಿ ಸಮಸ್ಯೆಗಳು ಕಂಡುಬರುತ್ತವೆ.

ಇನ್ನು ಕಂಪೆನಿಯಿಂದಲೇ ಬಂದಿರುವ ಚಾರ್ಜರ್ ಸ್ಮಾರ್ಟ್‌ಫೋನ್‌ಗಳಿಗೆ ಅತ್ಯುತ್ತಮ ಚಾರ್ಜರ್ ಆದರೂ ಅದು ಕೂಡ ಕಲವು ದ್ವಂದ್ವಗಳನ್ನು ಉಂಟು ಮಾಡುತ್ತಿದೆ.!! ಹಾಗಾಗಿಯೇ, ಕಂಪೆನಿ ಚಾರ್ಜರ್‌ಗಳಿಗಿಂತಲೂ ಹೆಚ್ಚು ನಿಖರವಾದ ಹಾಗೂ ಇನ್ನು ಹೆಚ್ಚಿನ ಕಾರ್ಯನಿರ್ವಹಣೆ ನೀಡುವ ಸ್ಮಾರ್ಟ್‌ ಚಾರ್ಜಿಂಗ್ ಕೇಬಲ್‌ಗಳು ಬರುತ್ತಿವೆ.!! ಹಾಗಾದರೆ, ಏನಿದು ಸ್ಮಾರ್ಟ್‌ ಚಾರ್ಜಿಂಗ್ ಕೇಬಲ್? ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಏನಿದು ಸ್ಮಾರ್ಟ್‌ ಚಾರ್ಜಿಂಗ್ ಕೇಬಲ್?

ಏನಿದು ಸ್ಮಾರ್ಟ್‌ ಚಾರ್ಜಿಂಗ್ ಕೇಬಲ್?

ಸ್ಮಾರ್ಟ್‌ಪೋನ್ ಮತ್ತು ಸ್ಮಾರ್ಟ್‌ಪೋನ್ ಬ್ಯಾಟರಿ ಜೀವನಮಟ್ಟವನ್ನು ಹೆಚ್ಚಿಸುವ ಸಲುವಾಗಿ ಸ್ಮಾರ್ಟ್‌ ಚಾರ್ಜಿಂಗ್ ಕೇಬಲ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಚಾರ್ಜರ್‌ಗಳು ಸ್ಮಾರ್ಟ್‌ಪೋನ್ ಚಾರ್ಜಿಂಗ್ ವ್ಯವಸ್ಥೆಯನ್ನೇ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ನಿಮ್ಮ ಫೋನ್ ರಕ್ಷಿಸುತ್ತದೆ.

ಏನೆನೆಲ್ಲಾ ಕಾರ್ಯನಿರ್ವಹಿಸುತ್ತವೆ

ಏನೆನೆಲ್ಲಾ ಕಾರ್ಯನಿರ್ವಹಿಸುತ್ತವೆ

ಫೋನ್ ಚಾರ್ಜ್ ಸರಿಯಾಗಿ ಆಗುತ್ತಿದೆಯೇ, ಫೋನಿನ ನಿಗದಿತ ಚಾರ್ಜಿಂಗ್ ವಿದ್ಯುತ್ ಪ್ರವಾಹಕ್ಕಿಂತ ಹೆಚ್ಚು ವಿದ್ಯುತ್ ಪ್ರವಹಿಸುತ್ತಿದೆಯೇ, ಕೇಬಲ್ ಬಿಸಿಯಾಗುತ್ತಿದೆಯೇ, ಇತ್ಯಾದಿ ವಿಷಯಗಳನ್ನು ಸ್ಮಾರ್ಟ್‌ ಚಾರ್ಜಲ್ ಕೇಬಲ್ ತೋರಿಸುತ್ತದೆ. ಮತ್ತು ಎಚ್ಚರಿಕೆ ಸಹ ನೀಡುತ್ತದೆ.

ಸ್ವಯಂ ರಕ್ಷಣೆ.

ಸ್ವಯಂ ರಕ್ಷಣೆ.

ಚಾರ್ಜಿಂಗ್ ವಿದ್ಯುತ್ ಪ್ರವಾಹ, ಕೇಬಲ್ ಬಿಸಿಯಾಗುತ್ತಿರುವ ಬಗ್ಗೆ ಈ ಸ್ಮಾರ್ಟ್ಫೋನ್ ಮೊದಲೇ ತೋರಿಸುವುದರಿಂದ ಈ ಚಾರ್ಜರ್ ಬಳಕೆ ಮಾಡುವ ಗ್ರಾಹಕರು ಮೊದಲೇ ಎಚ್ಚರಿಕೆ ಸೂಚನೆಗಳನ್ನು ಪಡೆಯಬಹುದಾಗಿದೆ. ಮನೆಯಲ್ಲಿನ ವಿಧ್ಯತ್ ತೊಂದರೆಗಳನ್ನು ಸಹ ಈ ಕೇಬಲ್‌ ಪರಿಹರಿಸಿಕೊಳ್ಳಲಿವೆ.

ಬೆಲೆ ಎಷ್ಟು? ಎಲ್ಲೆಲ್ಲಿ ಲಭ್ಯವಿದೆ?

ಬೆಲೆ ಎಷ್ಟು? ಎಲ್ಲೆಲ್ಲಿ ಲಭ್ಯವಿದೆ?

ಸ್ಮಾರ್ಟ್‌ ಚಾರ್ಜರ್ ಕೇಬಲ್‌ಗಳು ಸಧ್ಯಕ್ಕೆ ಅಮೆರಿಕದಲ್ಲಿ ಮತ್ತು ಸಿಂಗಪುರಗಳಲ್ಲಿ ಮಾತ್ರ ಲಭ್ಯವಿದೆ. ಇನ್ನುಳಿದ ದೇಶಗಳಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗುವ ಸೂಚನೆ ಇದು. ಆದರೆ, ಭಾರತಕ್ಕೆ ಯಾವಾಗ ಬರುತ್ತದೋ ಗೊತ್ತಿಲ್ಲ. ಇನ್ನು ಬೆಲೆ ಯು 2000ದಿಂದ ಶುರುವಾಗುತ್ತದೆ.

Best Mobiles in India

English summary
charging smartphone with in 15 minutes!.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X