Home
ಟೆಕ್ ನೌಕರಿ

ಒಂದು ವರ್ಷ ಉಚಿತ ChatGPT Go ಸಬ್‌ಸ್ಕ್ರಿಪ್ಷನ್ ಪಡೆಯವುದು ಹೇಗೆ?

ಇದೇ ನವೆಂಬರ್ 4, 2025ರಿಂದ ಭಾರತದಲ್ಲಿ ChatGPT ಬಳಕೆದಾರರಿಗೆ ಒಂದು ದೊಡ್ಡ ಉಡುಗೊರೆ ಸಿಗಲಿದೆ. ಕೃತಕ ಬುದ್ಧಿಮತ್ತೆ (AI) ಅಭಿವೃದ್ಧಿ ಸಂಸ್ಥೆ OpenAI ತನ್ನ ChatGPT Go ಪ್ಲಾನ್ ಅನ್ನು ಭಾರತೀಯರಿಗಾಗಿ ಪೂರ್ಣ 12 ತಿಂಗಳ ಕಾಲ ಉಚಿತವಾಗಿ ನೀಡಲು ನಿರ್ಧರಿಸಿದೆ. ಈ ವಿಶೇಷ ಆಫರ್ ಕಂಪನಿಯ ಮೊದಲ "DevDay Exchange Bengaluru 2025" ಕಾರ್ಯಕ್ರಮದ ಅಂಗವಾಗಿ ಘೋಷಿಸಲಾಗಿದೆ. ಹಾಗಾದರೆ, ಒಂದು ವರ್ಷ ಉಚಿತ ChatGPT Go ಸಬ್‌ಸ್ಕ್ರಿಪ್ಷನ್ ಪಡೆಯುವುದು ಹೇಗೆ?. ಇದರಿಂದ ಏನೆಲ್ಲಾ ಲಾಣಗಳಿವೆ ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನೊ.

ChatGPT Go ಎಂದರೇನು?
OpenAI ತನ್ನ ChatGPT ಬಳಕೆದಾರರು ಹೆಚ್ಚುವರಿ ಸೌಲಭ್ಯವನ್ನು ಬಳಸಲು ಸಾಧ್ಯವಾಗುವಂತೆ ChatGPT Go ಪ್ಲಾನ್ ಅನ್ನು ಪರಿಚಯಿಸಿತ್ತು. ಈ ಆಫರ್ ಅನ್ನು ಮೂಲತಃ ₹399 ಪ್ರತಿ ತಿಂಗಳಿಗೆ ಬಿಡುಗಡೆ ಮಾಡಲಾಗಿತ್ತು. ಇದು ಉಚಿತ ಹಾಗೂ ಪ್ರೀಮಿಯಂ ಪ್ಲಾನ್‌ಗಳ ನಡುವೆ ಇರುವ ಮಧ್ಯಮ ಮಟ್ಟದ ಆಯ್ಕೆಯಾಗಿತ್ತು. ಈ ಯೋಜನೆಯು ನವೆಂಬರ್ 4 ರಿಂದ ಸಂಪೂರ್ಣವಾಗಿ ಉಚಿತವಾಗಿ ದೊರೆಯಲಿದೆ. ಈ ಪ್ಲಾನ್ GPT-5 ಮಾದರಿಯಿಂದ ಚಾಲಿತವಾಗಿದ್ದು, ಉಚಿತ ಆವೃತ್ತಿಯಿಗಿಂತ ಹೆಚ್ಚು ಸಾಮರ್ಥ್ಯವನ್ನು ನೀಡುತ್ತದೆ. ಇದರ ಪ್ರಮುಖ ವೈಶಿಷ್ಟ್ಯಗಳು ಹೀಗಿವೆ,

  • 10 ಪಟ್ಟು ಹೆಚ್ಚು ಮೆಸೇಜ್ ಲಿಮಿಟ್‌ಗಳು : ಉಚಿತ ಬಳಕೆದಾರರಿಗಿಂತ ಹೆಚ್ಚು ಚಾಟ್ ಸಂದೇಶಗಳನ್ನು ಕಳುಹಿಸಲು ಅವಕಾಶ.
  • ಚಿತ್ರ ಸೃಷ್ಟಿ ಮತ್ತು ಫೈಲ್ ಅಪ್‌ಲೋಡ್ ಸಪೋರ್ಟ್ : ಪ್ರತಿದಿನ ಚಿತ್ರ ರಚನೆ ಮತ್ತು ಫೈಲ್ ಅಪ್‌ಲೋಡ್ ಮಾಡಬಹುದು.
  • ಹೆಚ್ಚಿನ ಮೆಮೊರಿ ಸಾಮರ್ಥ್ಯ : ನಿಮ್ಮ ಹಿಂದಿನ ಸಂಭಾಷಣೆಯ ಮಾಹಿತಿ ಹೆಚ್ಚು ಕಾಲ ಉಳಿಯುತ್ತದೆ.
  • UPI ಪಾವತಿ ಸಪೋರ್ಟ್ : ಭಾರತೀಯ ಬಳಕೆದಾರರಿಗಾಗಿ ಸರಳ ಪಾವತಿ ಆಯ್ಕೆ.
  • ಈಗ ಈ ಎಲ್ಲಾ ವೈಶಿಷ್ಟ್ಯಗಳನ್ನು ಒಂದು ವರ್ಷದವರೆಗೆ ಉಚಿತವಾಗಿ ಪಡೆಯಬಹುದು.
  • ಒಂದು ವರ್ಷ ಉಚಿತ ChatGPT Go ಸಬ್‌ಸ್ಕ್ರಿಪ್ಷನ್ ಪಡೆಯವುದು ಹೇಗೆ?

ಉಚಿತ ಸಬ್‌ಸ್ಕ್ರಿಪ್ಷನ್ ಪಡೆಯುವುದು ಹೇಗೆ?

  • ನವೆಂಬರ್ 4 ರಿಂದ ಈ ಆಫರ್ ಲಭ್ಯವಾಗುತ್ತದೆ.
  • ChatGPT ವೆಬ್‌ಸೈಟ್ ಅಥವಾ ಆಪ್ ತೆರೆಯಿರಿ : chat.openai.com ಅಥವಾ ChatGPT ಮೊಬೈಲ್ ಆಪ್‌ಗೆ ಹೋಗಿ.
  • ChatGPT Go ಆಯ್ಕೆಮಾಡಿ : ಸಬ್‌ಸ್ಕ್ರಿಪ್ಷನ್ ವಿಭಾಗದಲ್ಲಿ "Go" ಪ್ಲಾನ್ ಕ್ಲಿಕ್ ಮಾಡಿ.
  • ನಿಯಮಗಳಿಗೆ ಒಪ್ಪಿಗೆ ನೀಡಿ : ಉಚಿತ ಸಬ್‌ಸ್ಕ್ರಿಪ್ಷನ್‌ಗೆ ಸಂಬಂಧಿಸಿದ ಶರತ್ತುಗಳನ್ನು ದೃಢೀಕರಿಸಿ.
  • ಪಾವತಿ ಮಾಹಿತಿ ನಮೂದಿಸಿ (ಅಗತ್ಯವಿದ್ದರೆ) : ಮೊದಲ 12 ತಿಂಗಳು ಉಚಿತವಾದರೂ, ಖಾತೆ ದೃಢೀಕರಣಕ್ಕಾಗಿ ಪಾವತಿ ವಿಧಾನವನ್ನು ನಮೂದಿಸಬೇಕಾಗಬಹುದು.
  • ಸಬ್‌ಸ್ಕ್ರಿಪ್ಷನ್ ದೃಢಪಡಿಸಿ ಮತ್ತು ಬಳಕೆ ಪ್ರಾರಂಭಿಸಿ : ChatGPT Go‌ನ ಎಲ್ಲಾ ವೈಶಿಷ್ಟ್ಯಗಳು ತಕ್ಷಣ ಸಕ್ರಿಯಗೊಳ್ಳುತ್ತವೆ.

ಕೆಲವು ಹೆಚ್ಚುವರಿ ಸಲಹೆಗಳು

  • ನಿಮ್ಮ ಖಾತೆ ಭಾರತೀಯ ಪ್ರದೇಶಕ್ಕೆ ಲಿಂಕ್ ಆಗಿರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಈ ಉಚಿತ ಅವಧಿಯನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿ, ಹೊಸ ವೈಶಿಷ್ಟ್ಯಗಳನ್ನು ಪ್ರಯೋಗಿಸಿ.
  • 12 ತಿಂಗಳು ಮುಗಿಯುವ ಮುನ್ನ ಸಬ್‌ಸ್ಕ್ರಿಪ್ಷನ್ ನವೀಕರಣದ ಕುರಿತು ಸೂಚನೆ ಪರಿಶೀಲಿಸಿ.
  • ಈಗಾಗಲೇ Go ಪ್ಲಾನ್‌ನಲ್ಲಿ ಇರುವವರು ಸಹ ಈ ಆಫರ್‌ನಿಂದ ಅಧಿಕ 1 ವರ್ಷದ ಉಚಿತ ವಿಸ್ತರಣೆ ಪಡೆಯುತ್ತಾರೆ.

ಭಾರತವು OpenAIಗೆ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಮಾರುಕಟ್ಟೆ. ಆದ್ದರಿಂದ ಈ ಉಚಿತ ಪ್ಲಾನ್ ಹೊಸ ಬಳಕೆದಾರರನ್ನು ಆಕರ್ಷಿಸುವ ಜೊತೆಗೆ, ಎಲ್ಲಾ ಬಳಕೆದಾರರ ಅನುಭವವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶ ಹೊಂದಿದೆ. ದೇಶದ ಯುವಕರು, ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಈಗ ChatGPT Go‌ನ ಎಲ್ಲಾ ಪ್ರೀಮಿಯಂ ವೈಶಿಷ್ಟ್ಯಗಳನ್ನು ಉಚಿತವಾಗಿ ಅನುಭವಿಸಬಹುದು ಎಂಬ ಸುದ್ದಿಯೇ ಅತ್ಯುತ್ತಮವಾಗಿದೆ. ಹಾಗಾಗಿ, ಈ ಅವಕಾಶವನ್ನು ತಪ್ಪಿಸಿಕೊಳ್ಳದೆ, ChatGPT Go‌ನ ಸಂಪೂರ್ಣ ಸಾಮರ್ಥ್ಯವನ್ನು ಉಚಿತವಾಗಿ ಅನುಭವಿಸಿ.

Best Mobiles in India

English summary
OpenAI introduced the ChatGPT Go plan as a new feature for ChatGPT users, initially priced at ₹399 per month. This plan served as a mid-range option between the free and premium versions. Starting from November 4, the plan will be offered at no cost.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+