Home
ಟೆಕ್ ನೌಕರಿ

ಭಾರತದಲ್ಲಿ ChatGPT Go ಈಗ ಉಚಿತ: ಪಡೆಯುವುದು ಹೇಗೆ?

ಸಾನ್‌ಫ್ರಾನ್ಸಿಸ್ಕೋ ಮೂಲದ AI ಸಂಸ್ಥೆ OpenAI ಈಗ ಭಾರತದ ಎಲ್ಲಾ ಬಳಕೆದಾರರಿಗೆ ಒಂದು ದೊಡ್ಡ ಉಡುಗೊರೆಯಾಗಿ ತನ್ನ ChatGPT Go ಚಂದಾದಾರಿಕೆ ಯೋಜನೆಯನ್ನು ಉಚಿತವಾಗಿ ನೀಡುತ್ತಿದೆ. OpenAI ಸಂಸ್ಥೆಯು ತನ್ನ ಮೊದಲ DevDay Exchange India 2025 ಕಾರ್ಯಕ್ರಮದ ಭಾಗವಾಗಿ ಈ ಘೋಷಣೆಯನ್ನು ಮಾಡಿದ್ದು, ಸಾಮಾನ್ಯವಾಗಿ ₹399 ಮಾಸಿಕ ದರದಲ್ಲಿ ಲಭ್ಯವಿದ್ದ ಈ ChatGPT Go ಚಂದಾದಾರಿಕೆಯು (ನವೆಂಬರ್ 4 ರಿಂದ ಆರಂಭವಾಗಿದೆ) ಮುಂದಿನ 12 ತಿಂಗಳುಗಳವರೆಗೆ ಸಂಪೂರ್ಣ ಉಚಿತವಾಗಿ ಲಭ್ಯವಿರಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ChatGPT Go ಎಂದರೇನು?
ChatGPT Go ಯೋಜನೆಯು ಕಳೆದ ಆಗಸ್ಟ್ 2025ರಲ್ಲಿ ಬಿಡುಗಡೆಯಾದ ಒಂದು ಕಡಿಮೆ ದರದ ಸಬ್ಸ್ಕ್ರಿಪ್ಶನ್ ಆಯ್ಕೆಯಾಗಿದೆ. ChatGPT ಬಳಕೆದಾರರಿಗೆ ಇದು ಉಚಿತ ಆವೃತ್ತಿಗಿಂತ ಹೆಚ್ಚು ಸೌಲಭ್ಯಗಳನ್ನು ನೀಡುತ್ತದಾದರೂ, ChatGPT Plus (₹1,950/ತಿಂಗಳು) ಗಿಂತ ಕಡಿಮೆ ಬೆಲೆಯ ಆಯ್ಕೆಯಾಗಿದೆ. ಈ ಯುGo ಯೋಜನೆ ಮುಖ್ಯವಾಗಿ ಹೆಚ್ಚು ಮೆಸೇಜ್ ಮಿತಿಗಳು, ವೇಗದ ಪ್ರತಿಕ್ರಿಯೆಗಳು, ಮತ್ತು GPT-5 ಮಾದಲಿಗೆ ಪ್ರವೇಶವನ್ನು ನೀಡುತ್ತದೆ. ಆದರೆ, ಇದು Plus ಬಳಕೆದಾರರಿಗೆ ಮಾತ್ರ ಲಭ್ಯವಾಗುವ ವಿಡಿಯೋ ನಿರ್ಮಾಣ ಅಥವಾ ಕೋಡೆಕ್ಸ್ ಏಜೆಂಟ್‌ನಂತಹ ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿಲ್ಲ.

ಭಾರತದಲ್ಲಿ ChatGPT Go ಈಗ ಉಚಿತ: ಪಡೆಯುವುದು ಹೇಗೆ?

ChatGPT Go: ಉಚಿತವಾಗೊ ಹೇಗೆ ಸಕ್ರಿಯಗೊಳಿಸಬೇಕು?
ಮೊದಲು chat.openai.com ಗೆ ತೆರಳಿ ನಿಮ್ಮ OpenAI ಖಾತೆಗೆ ಲಾಗಿನ್ ಆಗಿ.
ಲಾಗಿನ್ ಆದ ನಂತರ "Try Go, Free" ಎಂಬ ಪಾಪ್-ಅಪ್ ಕಾಣಿಸುತ್ತದೆ. ಇಲ್ಲಿ Try Go ಬಟನ್ ಮೇಲೆ ಕ್ಲಿಕ್ ಮಾಡಿ.
ಪ್ರೈಸಿಂಗ್ ಪುಟದಲ್ಲಿ Go ಯೋಜನೆ ₹0 ಎಂದು ತೋರಿಸುತ್ತದೆ. Upgrade to Go ಆಯ್ಕೆಯನ್ನು ಆರಿಸಿ.
ಪಾವತಿ ಪುಟದಲ್ಲಿ ₹0 ಪಾವತಿಸಲು ಸೂಚಿಸಲಾಗುತ್ತದೆ. ನೀವು UPI, ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಬ್ಯಾಂಕ್ ಟ್ರಾನ್ಸ್ಫರ್ ಮೂಲಕ ದೃಢೀಕರಿಸಬಹುದು.
ಇದೀಗ ನಿಮ್ಮ ChatGPT Go ಯೋಜನೆ ಸಕ್ರಿಯಗೊಳ್ಳುತ್ತದೆ.

ChatGPT Go ಯೋಜನೆ: ಏನೆಲ್ಲಾ ಪ್ರಮುಖ ಸೌಲಭ್ಯಗಳು ದೊರೆಯಲಿವೆ?
ಉಚಿತ ಆವೃತ್ತಿಗಿಂತ 10 ಪಟ್ಟು ಹೆಚ್ಚು ಮೆಸೇಜ್ ಮತ್ತು ಫೈಲ್ ಅಪ್ಲೋಡ್ ಮಿತಿ
OpenAI ಯ ಹೊಸ GPT-5 ಮಾದರಿಗೆ ನೇರ ಪ್ರವೇಶ
Python ಹಾಗೂ ಡೇಟಾ ವಿಶ್ಲೇಷಣಾ ಉಪಕರಣಗಳಲ್ಲಿ ಹೆಚ್ಚಿನ ಬಳಕೆ ಮಿತಿ
Projects, Tasks, ಮತ್ತು Custom GPTs ಆಯ್ಕೆಯ ಮೂಲಕ ನಿಮ್ಮ ಕೆಲಸವನ್ನು ವ್ಯವಸ್ಥಿತವಾಗಿ ಮಾಡುವ ಅವಕಾಶ
ವೇಗವಾದ ಪ್ರತಿಕ್ರಿಯೆ, ಸ್ಥಿರತೆ ಮತ್ತು ಉನ್ನತ ಮಟ್ಟದ ಬಳಕೆದಾರ ಅನುಭವ

OpenAI ಪರಿಚಯಿಸಿರುವ ChatGPT Go ಯೋಜನೆಯ ಉಚಿತ ಲಭ್ಯತೆ ಭಾರತದ AI ಆಸಕ್ತರಿಗಾಗಿ ದೊಡ್ಡ ಅವಕಾಶವಾಗಿದೆ. ಪ್ರೀಮಿಯಂ AI ಅನುಭವವನ್ನು ಉಚಿತವಾಗಿ ನೀಡುವ ಈ ಆಫರ್, ಭಾರತದ ಬಳಕೆದಾರರಿಗೆ ಕೃತಕ ಬುದ್ಧಿಮತ್ತೆಯ ಹೊಸ ಸಾಧ್ಯತೆಗಳನ್ನು ಅನ್ವೇಷಿಸಲು ದಾರಿ ತೆರೆದಿದೆ. ನೀವು ಇನ್ನೂ ಪ್ರಯತ್ನಿಸದಿದ್ದರೆ, ಈಗಲೇ ChatGPT ವೆಬ್‌ಸೈಟ್‌ಗೆ ತೆರಳಿ ನಿಮ್ಮ ಉಚಿತ ChatGPT Go ಯೋಜನೆಯನ್ನು ಸಕ್ರಿಯಗೊಳಿಸಿ. ಗಮನಿಸಿ: ಉಚಿತ ಅವಧಿಯ ನಂತರ ಸ್ವಯಂ ಪಾವತಿಯನ್ನು ತಪ್ಪಿಸಲು AutoPay ಆಯ್ಕೆಯನ್ನು ಆಫ್ ಮಾಡುವುದು ಮರೆಯಬೇಡಿ.

Best Mobiles in India

English summary
OpenAI made the announcement as part of its first DevDay Exchange India 2025 event, saying that the ChatGPT Go subscription (starting November 4), which was normally available at a monthly rate of ₹399, will be available completely free for the next 12 months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+