ಪ್ರವಾಸಕ್ಕೆ ಬುಕ್ ಮಾಡಲು ಐಫೋನ್ ಆಪ್

Posted By: Varun
ಪ್ರವಾಸಕ್ಕೆ ಬುಕ್ ಮಾಡಲು ಐಫೋನ್ ಆಪ್
ಖ್ಯಾತ ಆನ್ಲೈನ್ ಪ್ರವಾಸಿ ವೆಬ್ ತಾಣವಾದ ಕ್ಲಿಯರ್ ಟ್ರಿಪ್ ಈಗ ಆಪಲ್ ಐಫೋನ್, ಐಪ್ಯಾಡ್ ಬಳಕೆದಾರರಿಗೆಂದೇ ಉಚಿತ iOS ಆಪ್ ಒಂದನ್ನು ಬಿಡುಗಡೆ ಮಾಡಿದೆ.

split ಸ್ಕ್ರೀನ್ ಮೂಲಕ ಸರ್ಚ್ ಮಾಡಬಹುದಾದ ವಿಂಡೋ ಇರುವ ಈ ಆಪ್ ಮೂಲಕ ಫ್ಲೈಟ್ ಹಾಗು ಅದರ ಟಿಕೆಟ್ ಬೆಲೆಯನ್ನು ಒಟ್ಟಿಗೆ ನೋಡಬಹುದಾಗಿದೆ. ಬಳಕೆದಾರರು ಇದರ split screen ಮೂಲಕ ರಿಟರ್ನ್ ಟಿಕೆಟ್ ಅನ್ನು ಸುಲಭವಾಗಿ ಬುಕ್ ಮಾಡಬಹುದಾಗಿದ್ದು, ಇತ್ತೀಚಿಗೆ ಸರ್ಚ್ ಮಾಡಿದ ವಿವರಗಳೂ ಇದರಲ್ಲಿ ನೋಡಬಹುದಾಗಿದೆ.

ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗು ನೆಟ್ ಬ್ಯಾಂಕಿಂಗ್ ಮೂಲಕವೂ ಹಣ ಪಾವತಿ ಮಾಡಬಹುದಾಗಿದ್ದು, ಈ ಆಪ್ ಅನ್ನು ಆಪಲ್ ಐಟ್ಯೂನ್ ಮಳಿಗೆಯಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

Please Wait while comments are loading...
Opinion Poll

Social Counting