ಪ್ರತಿಯೋರ್ವ ಸ್ಮಾರ್ಟ್‌ಫೋನ್ ಬಳಕೆದಾರನು ಈ ಮಾಹಿತಿ ತಿಳ್ಕೊಬೇಕು! ಏನದು?!!

Written By:

ಹ್ಯಾಕರ್ಸ್ ಅಭಿವೃಧ್ಧಿಪಡಿಸಿರುವ ಕುತಂತ್ರಾಂಶಗಳಂದ ಈಗಾಗಲೇ ಸುಮಾರು 18.5 ಮಿಲಿಯನ್ ಜನರ ಸ್ಮಾರ್ಟ್‌ಫೋನ್‌ಗಳಲ್ಲಿ ವೈರಸ್ ಸೇರಿರುವುದಾಗಿ ವರದಿಯಾಗಿದೆ.! ಹೌದು, ವನ್ನಾಕ್ರೈ ನಂತರ ಇದೀಗ ಸ್ಮಾರ್ಟ್‌ಫೋನ್‌ಗಳ ಮೇಲೆ ಹ್ಯಾಕರ್ಸ್‌ಗಳು ಕಣ್ಣುಹಾಕಿದ್ದು,ನಿಮ್ಮ ಸ್ಮಾರ್ಟ್‌ಫೋನ್ ಸಹ ಇಂತಹ ಒಂದು ಕುತಂತ್ರಕ್ಕೆ ಸಿಲುಕಿರುವ ಸಾಧ್ಯತೆ ಹೆಚ್ಚಿದೆ!!

ನಿಮ್ಮ ಸ್ಮಾರ್ಟ್‌ಪೋನ್ ಪ್ರೈವಸಿಯನ್ನು ಕದಿಯಲು ಈ ಕುತಂತ್ರಾಂಶ ಆಪ್ ಅನ್ನು ರಚಿಸಲಾಗಿದ್ದು, ನಿಮ್ಮೆಲ್ಲಾ ಖಾಸಾಗಿ ಮಾಹಿತಿಯನ್ನು ಖದಿಯಲು ಈ ಕುತಂತ್ರಾಶಗಳಿಂದ ಸಾಧ್ಯವಿದೆ. ಇದರಿಂದ ನಿಮ್ಮ ಬ್ಯಾಂಕ್ ಮಾಹಿತಿ ಮತ್ತು ಖಾಸಾಗಿ ಮಾಹಿತಿಗಳು ಹ್ಯಾಕರ್ಸ್‌ಗಳ ಪಾಲಾಗುವ ಸಂಭವ ಹೆಚ್ಚಿರುತ್ತದೆ.!!

ಹಾಗಾಗಿ, ಪ್ರತಿಯೊಬ್ಬ ಸ್ಮಾರ್ಟ್‌ಫೋನ್ ಬಳಕೆದಾರನು ಕೂಡ ತನ್ನ ಸ್ಮಾರ್ಟ್‌ಫೋನ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಮುಖ್ಯ.!! ಹಾಗಾದರೆ, ಹ್ಯಾಕರ್ಸ್‌ಗಳಿಗೆ ಸಿಗದಂತೆ ಸ್ಮಾರ್ಟ್‌ಫೋನ್ ಸುರಕ್ಷತೆ ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೋನ್‌ಗೆ ವೈರಸ್ ಅಟ್ಯಾಕ್ ಆಗುವುದು ಹೇಗೆ?

ಸ್ಮಾರ್ಟ್‌ಫೋನ್‌ಗೆ ವೈರಸ್ ಅಟ್ಯಾಕ್ ಆಗುವುದು ಹೇಗೆ?

 • ಪೆನ್‌ಡ್ರೈವ್ ಮತ್ತು ಮೆಮೊರಿ ಕಾರ್ಡ್ ಮೂಲಕ ವೈರಸ್ ನಿಮ್ಮ ಮೊಬೈಲ್ ಸೇರುತ್ತದೆ.!
 • ಆಸೆಹುಟ್ಟಿಸುವ, ಆಫರ್ ನೀಡುವಂತಹ ಸುಳ್ಳು ಮಾಹಿತಿ ಹೊತ್ತಿರುವ ಆನ್‌ಲೈನ್ ಲಿಂಕ್‌ಗಳ ಮೂಲಕ ವೈರಸ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೇರುತ್ತವೆ.!
 • ಹ್ಯಾಕರ್‌ಗಳು ಅಭಿವೃದ್ದಿಪಡಿಸಿದ ಆಪ್‌ಗಳನ್ನು ಡೌನ್‌ಲೋಡ್ ಮಾಡಿದರೆ ಸ್ಮಾರ್ಟ್‌ಫೋನ್‌ಗೆ ವೈರಸ್ ಸೇರುತ್ತದೆ.!!
 • ಸಾರ್ವಜನಿಕ ವೈಫೈ ಅನ್ನು ಬಳಕೆ ಮಾಡುವುದು.!
ಸ್ಮಾರ್ಟ್‌ಫೋನ್‌ಗೆ ವೈರಸ್ ಅಟ್ಯಾಕ್ ಆಗದಂತೆ ತಡೆಯುವುದು ಹೇಗೆ?

ಸ್ಮಾರ್ಟ್‌ಫೋನ್‌ಗೆ ವೈರಸ್ ಅಟ್ಯಾಕ್ ಆಗದಂತೆ ತಡೆಯುವುದು ಹೇಗೆ?

 • ಮೇಲೆ ನೀಡಿರುವ ಕಾರಣಗಳಿಂದ ಸ್ಮಾರ್ಟ್‌ಫೋನ್‌ಗೆ ವೈರೆಸ್ ಅಟ್ಯಾಕ್ ಆಗುತ್ತದೆ. ಹಾಗಾಗಿ, ಆ ತಪ್ಪುಗಳನ್ನು ಮಾಡಬೇಡಿ.!!
 • ಉತ್ತಮ ಆಂಟಿವೈರಸ್ ಬಳಸಿ.!!
 • ಸ್ಮಾರ್ಟ್‌ಫೋನ್ ಸೆಟ್ಟಿಂಗ್‌ ತೆರೆದು 'ಅನ್‌ಸೋರ್ಸ್' ಎಂಬ ಆಯ್ಕೆಯನ್ನು ಆಫ್ ಮಾಡಿ. ಬೇಕಾದ ಆಪ್ ಡೌನ್‌ಲೋಡ್ ಮಾಡಲು ಮಾತ್ರ ಇದನ್ನು ತೆರೆಯಿರಿ.!!
 • ಆಪ್‌ ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕವೇ ಡೌನ್‌ಲೋಡ್ ಮಾಡಿರಿ.!!
ವೈರಸ್ ಅಟ್ಯಾಕ್ ಆಗಿದೆ ಎಂದು ಹೇಗೆ ತಿಳಿಯುವುದು?

ವೈರಸ್ ಅಟ್ಯಾಕ್ ಆಗಿದೆ ಎಂದು ಹೇಗೆ ತಿಳಿಯುವುದು?

 • ವೈರಸ್ ಅಟ್ಯಾಕ್ ಆಗಿದ್ದರೆ ನಿಮ್ಮ ಸ್ಮಾರ್ಟ್‌ಫೋನ್ ಬಳಕೆ ಸ್ಲೋ ಆಗಿರುತ್ತದೆ.!!
 • ಫೋನ್‌ನಲ್ಲಿ ಸೆಟ್ಟಿಂಗ್ಸ್ ತೆರೆದು ಸೆಕ್ಯೂರ್ ಆಯ್ಕೆ ತೆರೆದರೆ ಜಂಕ್ ಫೈಲ್‌ಗಳ ಬಗ್ಗೆ ಮಾಹಿತಿ ಸಿಗುತ್ತದೆ.!!
 • ಆಪ್‌ಗಳು ತನ್ನಿಂದಾನೆ ಸ್ಲೋ ಆಗುತ್ತವೆ.!
 • ಕೆಲವು ಆಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಲು ಸಾಧ್ಯವಿಲ್ಲ.!!
ವೈರಸ್ ಅಟ್ಯಾಕ್ ಆದರೆ ಏನು ಮಾಡಬೇಕು?

ವೈರಸ್ ಅಟ್ಯಾಕ್ ಆದರೆ ಏನು ಮಾಡಬೇಕು?

 • ಸ್ಮಾರ್ಟ್‌ಫೋನ್ ರೀಬೂಟ್ ಮಾಡುವ ಆಯ್ಕೆ ಸ್ಮಾರ್ಟ್‌ಫೋನ್‌ನಲ್ಲಿಯೇ ಇರುತ್ತದೆ. ಹಾಗಾಗಿ, ಸ್ಮಾರ್ಟ್‌ಫೋನ್ ರೀಬೂಟ್ ಮಾಡಿ.!!
 • ನಿಮ್ಮ ಡಾಕ್ಯುಮೆಂಟ್ಸ್‌ಗಳನ್ನು ಬೇರೆಡೆ ಸ್ಥಳಾಂತರಿಸಿ.
 • ಬ್ಯಾಂಕ್ ದಾಖಲೆಗಳನ್ನು ಸ್ಮಾರ್ಟ್‌ಫೊನ್‌ನಿಂದ ಹೊರತೆರೆಯಿರಿ.
 • ಉತ್ತಮ ಆಂಟಿವೈರಸ್ ಇನ್‌ಸ್ಟಾಲ್ ಮಾಡಿ.
 • ಸ್ಮಾರ್ಟ್‌ಫೋನ್‌ಗೆ ನೀಡಿರುವ ಪಾಸ್‌ವರ್ಡ್‌ಗಳನ್ನು ಚೇಂಜ್ ಮಾಡಿ. ನಿಮ್ಮ ಸ್ಮಾರ್ಟ್‌ಫೋನ್ ಸೆಕ್ಯೂರ್ ಮಾಡಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
From locking your smartphone, these tips will help keep your information protected. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot