Home
ಟೆಕ್ ನೌಕರಿ

ಆನ್‌ಲೈನ್‌ ಮೋಸ ಹೇಗೆ ನಡೆಯುತ್ತದೆ..? ಈ 9 ವಿಧಾನಗಳ ಬಗ್ಗೆ ಇರಲಿ ಎಚ್ಚರ..!

By Gizbot Bureau

ಇಂಟರ್‌ನೆಟ್‌ ಯುಗ ಬೆಳೆದಂತೆಲ್ಲಾ ಆನ್‌ಲೈನ್‌ ಬ್ಯಾಂಕಿಂಗ್‌ ವಂಚನೆಗಳು ಹೆಚ್ಚುತ್ತಿವೆ. ಬಳಕೆದಾರರನ್ನು ತಮ್ಮ ಬಲೆಗೆ ಬೀಳಿಸಲು ವಂಚಕರು ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ಅಂತಹ ವಂಚನೆಗಳನ್ನು ತಪ್ಪಿಸುವುದು ಅಗತ್ಯವಾಗಿರುತ್ತದೆ. ದೇಶದ ಅತಿದೊಡ್ಡ ಆನ್‌ಲೈನ್ ವಂಚನೆಯಲ್ಲಿ ವ್ಯಕ್ತಿಯೊಬ್ಬರು ಇತ್ತೀಚೆಗೆ 11 ಕೋಟಿ ರೂ. ಗಳನ್ನು ಕಳೆದುಕೊಂಡಿದ್ದಾರೆ. ಬ್ಯಾಂಕುಗಳು ಸಹ ತಮ್ಮ ಗ್ರಾಹಕರಿಗೆ ಇಂತಹ ವಂಚನೆಗಳ ಬಗ್ಗೆ ಎಚ್ಚರಿಕೆ ನೀಡುವುದು ಸ್ವಲ್ಪ ಅನುಮಾನ. ಆನ್‌ಲೈನ್ ಬ್ಯಾಂಕಿಂಗ್ ವಿವರಗಳನ್ನು ಕದಿಯಲು ಮತ್ತು ಅವರ ಹಣಕ್ಕಾಗಿ ಜನರನ್ನು ಮೋಸಗೊಳಿಸಲು ವಂಚಕರು ಬಳಸುವ 9 ಸಾಮಾನ್ಯ ವಿಧಾನಗಳು ಇಲ್ಲಿವೆ.

ಸ್ಮೈಷಿಂಗ್‌

ಸ್ಮೈಷಿಂಗ್‌

ಈ ವಂಚನೆ ಆನ್‌ಲೈನ್ ಶಾಪಿಂಗ್‌ಗೆ ಸಂಬಂಧಿಸಿದೆ. ಆನ್‌ಲೈನ್ ಶಾಪಿಂಗ್ ಅಥವಾ ಕ್ಯಾಶ್‌ಬ್ಯಾಕ್‌ ಹೆಸರಿನಲ್ಲಿ ಗ್ರಾಹಕರು ಎಸ್‌ಎಂಎಸ್ ಸ್ವೀಕರಿಸುತ್ತಾರೆ. ಆ ಎಸ್‌ಎಂಎಸ್‌ನಲ್ಲಿ ಗ್ರಿಡ್ ಕಾರ್ಡ್ ವಿವರಗಳನ್ನು, ಎಟಿಎಂ ಕಾರ್ಡ್ ಪಿನ್, ಯುಪಿಐ ಪಿನ್, ಡೆಬಿಟ್ ಕಾರ್ಡ್ ಸಂಖ್ಯೆ ಮತ್ತು ಸಿವಿವಿಯಂತಹ ಗೌಪ್ಯ ವಿವರಗಳನ್ನು ಹಂಚಿಕೊಳ್ಳಲು ಗ್ರಾಹಕರನ್ನು ವಂಚಕರು ಕೇಳುತ್ತಾರೆ.

ಜ್ಯೂಸ್ ಜಾಕಿಂಗ್

ಜ್ಯೂಸ್ ಜಾಕಿಂಗ್

ಈ ವಿಧಾನದ ಅಡಿಯಲ್ಲಿ, ವಂಚಕರು ಸಾರ್ವಜನಿಕ ಚಾರ್ಜಿಂಗ್ ಪೋರ್ಟ್‌ಗಳಲ್ಲಿ ಚಿಪ್ ಬಳಸಿ ಮಾಲ್‌ವೇರ್‌ / ಸ್ಪೈವೇರ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡುತ್ತಾರೆ. ಈ ಚಿಪ್‌ ನಿಮ್ಮ ಸೂಕ್ಷ್ಮ ಡೇಟಾವನ್ನು ನಕಲಿಸುತ್ತದೆ ಮತ್ತು ಚಾರ್ಜರ್‌ನ್ನು ಸಂಪರ್ಕಿಸಿದಾಗಲೆಲ್ಲಾ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮಾಲ್‌ವೇರ್‌ನ್ನು ಇನ್‌ಸ್ಟಾಲ್‌ ಮಾಡುತ್ತದೆ.

ವಿಶಿಂಗ್

ವಿಶಿಂಗ್

ಈ ವಂಚನೆಯ ವಿಧಾನದಲ್ಲಿ ಗ್ರಾಹಕರನ್ನು ಕರೆಗಳ ಮೂಲಕ ಮೋಸ ಮಾಡಲಾಗುತ್ತದೆ. ಕರೆ ಮಾಡಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ವಿತರಿಸಲಾದ ಒಟಿಪಿ ಅಥವಾ ಬಳಕೆದಾರ ಐಡಿಯಂತಹ ಬ್ಯಾಂಕಿಂಗ್ ವಿವರಗಳನ್ನು ಕೇಳುತ್ತಾರೆ. ಮತ್ತು ವಂಚಕನು ನಿಮ್ಮ ಫೋನ್‌ನಲ್ಲಿ ಸಕ್ರಿಯಗೊಳಿಸುವ SMS ಅನ್ನು ಫಾರ್ವರ್ಡ್ ಮಾಡುತ್ತಾನೆ, ಅದನ್ನೇ ನಂತರ, ನಿಮ್ಮ ಬ್ಯಾಂಕ್ ಖಾತೆಯ ಪ್ರವೇಶಕ್ಕೆ ವಂಚಕರು ಬಳಸುತ್ತಾರೆ.

ರಿಮೋಟ್ ಅಸಿಸ್ಟೆನ್ಸ್‌

ರಿಮೋಟ್ ಅಸಿಸ್ಟೆನ್ಸ್‌

ಈ ವಿಧಾನದಲ್ಲಿ ಟೀಮ್‌ ವೀವರ್, ಕ್ವಿಕ್‌ಸಪೋರ್ಟ್‌ ಮತ್ತು ಎನಿಡೆಸ್ಕ್‌ನಂತಹ ಸಿಸ್ಟಮ್ ಸಹಾಯಕ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡಲು ವಂಚಕರು ಕೇಳುತ್ತಾರೆ ಈ ಅಪ್ಲಿಕೇಶನ್‌ಗಳು ಮೋಸಗಾರನಿಗೆ ನಿಮ್ಮ ಸ್ಮಾರ್ಟ್‌ಫೋನ್‌ನ ಸಂಪೂರ್ಣ ಪ್ರವೇಶವನ್ನು ನೀಡುತ್ತವೆ.

ಫಿಶಿಂಗ್

ಫಿಶಿಂಗ್

ಈ ವಿಧಾನದಲ್ಲಿ, ವಂಚಕರು ದುರುದ್ದೇಶಪೂರಿತ ಲಿಂಕ್‌ನ್ನು ಎಸ್‌ಎಂಎಸ್ ಅಥವಾ ಇಮೇಲ್‌ಗಳ ಮೂಲಕ ಕಳುಹಿಸುತ್ತಾರೆ, ಅದು ಗ್ರಾಹಕನ ಗೌಪ್ಯ ವಿವರಗಳಾದ ಗ್ರಿಡ್ ಕಾರ್ಡ್ ವಿವರ, ಎಟಿಎಂ ಕಾರ್ಡ್ ಪಿನ್, ಯುಪಿಐ ಪಿನ್, ಡೆಬಿಟ್ ಕಾರ್ಡ್ ಸಂಖ್ಯೆ ಮತ್ತು ಸಿವಿವಿ ಹಂಚಿಕೊಳ್ಳಲು ಕೇಳುತ್ತದೆ.

ಕ್ಯಾಶ್‌ಬ್ಯಾಕ್‌ಗಳು

ಕ್ಯಾಶ್‌ಬ್ಯಾಕ್‌ಗಳು

ಸಾಮಾನ್ಯವಾಗಿ ಆನ್‌ಲೈನ್ ಶಾಪಿಂಗ್‌ನಲ್ಲಿ ಕ್ಯಾಶ್‌ಬ್ಯಾಕ್ ನೀಡುವ ಸಂದೇಶಗಳು ವಾಟ್ಸ್‌ಆಪ್ ಅಥವಾ ಎಸ್‌ಎಂಎಸ್ ಮೂಲಕ ಬರುತ್ತವೆ. ಈ ಸಂದೇಶಗಳು ಸಾಮಾನ್ಯವಾಗಿ ಫಿಶಿಂಗ್ ಪ್ರಯತ್ನಗಳಾಗಿದ್ದು, ಜನರು ತಮ್ಮ ಆನ್‌ಲೈನ್ ಬ್ಯಾಂಕಿಂಗ್ ವಿವರಗಳನ್ನು ಹಂಚಿಕೊಳ್ಳುವಂತೆ ಪ್ರೆರೇಪಿಸುತ್ತವೆ.

ಆನ್‌ಲೈನ್ ವಹಿವಾಟಿನ ಮರುಪಾವತಿ

ಆನ್‌ಲೈನ್ ವಹಿವಾಟಿನ ಮರುಪಾವತಿ

ಈ ವಿಧಾನದಲ್ಲಿ ಮೋಸಗಾರರು ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಿಂದ (ಅಮೆಜಾನ್, ಫ್ಲಿಪ್‌ಕಾರ್ಟ್) ಕರೆ ಮಾಡುತ್ತಿದ್ದೇವೆಂದು ಹೇಳಿಕೊಳ್ಳುತ್ತಾರೆ. ಮತ್ತು ಇತ್ತೀಚಿನ ಯಾವುದೇ ಆನ್‌ಲೈನ್ ವಹಿವಾಟಿನ ಮರುಪಾವತಿಯ ಆಫರ್‌ನ್ನು ನೀಡುತ್ತಾರೆ. ಮರುಪಾವತಿಯ ಭರವಸೆ ಮೂಲಕ ಆನ್‌ಲೈನ್ ವ್ಯಾಪಾರಿಗಳನ್ನು ಬಲೆಗೆ ಬೀಳಿಸಲು ಪ್ರಯತ್ನಿಸುತ್ತಾರೆ ಮತ್ತು ಗ್ರಾಹಕರ ಬ್ಯಾಂಕ್ ಅಥವಾ ಕ್ರೆಡಿಟ್ / ಡೆಬಿಟ್ ಕಾರ್ಡ್ ವಿವರಗಳನ್ನು ತೆಗೆದುಕೊಳ್ಳುತ್ತಾರೆ.

ಕೆವೈಸಿ ಚೆಕ್

ಕೆವೈಸಿ ಚೆಕ್

ಇದು ಮತ್ತೊಂದು ಸಾಮಾನ್ಯ ಆನ್‌ಲೈನ್ ವಂಚನೆಯಾಗಿದೆ. ಈಗಾಗಲೇ ಪೇಟಿಎಂ ತನ್ನ ಬಳಕೆದಾರರಿಗೆ ಕೆವೈಸಿ ವಂಚನೆಯ ವಿರುದ್ಧ ಎಚ್ಚರಿಕೆ ನೀಡಿದೆ. ಈ ಹಗರಣ ನಿಮ್ಮ ಬ್ಯಾಂಕ್ ಅಥವಾ ಪೇಟಿಎಂ ಕೆವೈಸಿ ಗ್ರಾಹಕ ಸೇವಾ ಅಧಿಕಾರಿ ಎಂದು ಹೇಳಿಕೊಳ್ಳುವ ಕರೆ ಮೂಲಕ ಪ್ರಾರಂಭವಾಗುತ್ತದೆ. ನಿಮ್ಮ ಬ್ಯಾಂಕ್, ಕಾರ್ಡ್ ಅಥವಾ ಪೇಟಿಎಂ ಖಾತೆಯನ್ನು ನಿರ್ಬಂಧಿಸಲಾಗುವುದು ಎಂದೇಳಿ ನಿಮ್ಮನ್ನು ಭಯಪಡಿಸುತ್ತಾರೆ. AnyDesk ಅಥವಾ Team Viewer ನಂತಹ ರಿಮೋಟ್‌ ಅಕ್ಸೆಸ್‌ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ನಿಮಗೆ ಮನವರಿಕೆ ಮಾಡಿ ವಂಚನೆ ಮಾಡುತ್ತಾರೆ.

ಸಿಮ್ ಅಪ್‌ಗ್ರೇಡ್

ಸಿಮ್ ಅಪ್‌ಗ್ರೇಡ್

ಈ ವಿಧಾನ ಹೊಸದೇನಲ್ಲ, ಸ್ಮಾರ್ಟ್‌ಫೋನ್ ಬಳಕೆದಾರರನ್ನು ಮೋಸಗೊಳಿಸಲು ಬಳಸುತ್ತಾರೆ, ಈ ವಿಧಾನದ ಮೂಲಕ ಗ್ರಾಹಕರು ನಿಮಿಷಗಳಲ್ಲಿ ಹಣ ಕಳೆದುಕೊಳ್ಳುತ್ತಾರೆ. ಸಿಮ್ ಸ್ವಾಪ್ ಅಥವಾ ಸಿಮ್ ಕಾರ್ಡ್ ವಿನಿಮಯ ನಿಮ್ಮ ಫೋನ್ ಸಂಖ್ಯೆಯೊಂದಿಗೆ ಹೊಸ ಸಿಮ್ ಕಾರ್ಡ್‌ನ್ನು ನೋಂದಾಯಿಸುತ್ತಿದೆ. ಈ ಪ್ರಕ್ರಿಯೆಯ ನಂತರ ನಿಮ್ಮ ಹಳೆಯ ಸಿಮ್ ಕಾರ್ಡ್ ಅಮಾನ್ಯವಾಗುತ್ತದೆ ಮತ್ತು ಸಿಗ್ನಲ್ ಸ್ವೀಕರಿಸುವುದನ್ನು ನಿಲ್ಲಿಸುತ್ತದೆ. ವಂಚಕರು ನಿಮ್ಮ ಫೋನ್ ಸಂಖ್ಯೆಯನ್ನು ಹೊಂದಿದ ನಂತರ, ಅವರು ತಮ್ಮ ಸಿಮ್ ಕಾರ್ಡ್‌ನಲ್ಲಿ ಒಟಿಪಿಗಳನ್ನು ಪಡೆಯುತ್ತಾರೆ.

ಇದರೊಂದಿಗೆ ಅವರು ಬ್ಯಾಂಕ್ ವರ್ಗಾವಣೆಯನ್ನು ಪ್ರಾರಂಭಿಸಬಹುದು ಮತ್ತು ಒಟಿಪಿಗಳನ್ನು ಪಡೆದ ನಂತರ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಸಹ ಆಯ್ಕೆ ಮಾಡಬಹುದು. ಈ ವಂಚನೆಯು ಏರ್‌ಟೆಲ್, ವೊಡಾಫೋನ್ ಅಥವಾ ಜಿಯೋದ ಕಾರ್ಯನಿರ್ವಾಹಕರು ಎಂದು ನಟಿಸುವ ವ್ಯಕ್ತಿಯ ಕರೆಯಿಂದ ಪ್ರಾರಂಭವಾಗುತ್ತದೆ. ವಾಡಿಕೆಯ ಕರೆ ಎಂದು ಹೇಳುವ ವಂಚಕರು, ಕಾಲ್‌ ಡ್ರಾಪ್ ಸಮಸ್ಯೆ, ಸಿಗ್ನಲ್ ಸ್ವಾಗತ ಅಥವಾ ಮೊಬೈಲ್ ಇಂಟರ್ನೆಟ್ ವೇಗ ಹೆಚ್ಚಿಸಲು ನಿಮಗೆ ಸಹಾಯ ಮಾಡುವ ಭರವಸೆ ನೀಡಿ ಮೋಸ ಮಾಡುತ್ತಾರೆ.

Best Mobiles in India

English summary
Common Tricks Used By Frauds To Get Steal Your Money
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+