ಕಂಪ್ಯೂಟರ್ ಮತ್ತು ಮೊಬೈಲ್‌ ಬಗ್ಗೆ ನೀವು ತಿಳಿಯದ 5 ರಹಸ್ಯ ಮಾಹಿತಿಗಳು!!

|

ಈ ತಂತ್ರಜ್ಞಾನ ಪ್ರಪಂಚದ ಆಳ ಅಗಲಗಳನ್ನು ಓರ್ವ ಯಶಸ್ವಿ ಬುದ್ದಿವಂತ ತಂತ್ರಜ್ಞಾನಿಯೂ ಕಂಡುಕೊಳ್ಳಲಾರ ಎಂಬ ಮಾತಿದೆ. ಅಂತಹ ತಂತ್ರಜ್ಞಾನಿಯೇ ಎಲ್ಲವನ್ನೂ ಅರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲದಿರುವಾಗ ಸಾಮಾನ್ಯರಾದ ನಾವು ಅರ್ಥಮಾಡಿಕೊಳ್ಳುವುದು ಕಷ್ಟಸಾಧ್ಯ ಎನ್ನಬಹುದು. ಏಕೆಂದರೆ, ನಾವು ಈ ತಂತ್ರಜ್ಞಾನ ಪ್ರಪಂಚದಲ್ಲಿ ಬೇರೆಯವರನ್ನು ಅನುಸರಿಸಿ, ಅವರನ್ನು ನೋಡಿ ಮತ್ತು ಕೇಳಿ ಕಲಿತ ವಿಷಯಗಳೇ ಹೆಚ್ಚಿರುವುದರಿಂದ ನಾವು ಕೆಲ ಮಾಹಿತಿಗಳಿಗಷ್ಟೇ ಸೀಮಿತವಾಗಿ ಉಳಿದುಬಿಡುತ್ತೇವೆ.

ಕಂಪ್ಯೂಟರ್ ಮತ್ತು ಮೊಬೈಲ್‌ ಬಗ್ಗೆ ನೀವು ತಿಳಿಯದ 5 ರಹಸ್ಯ ಮಾಹಿತಿಗಳು!!

ಉದಾಹರಣೆಗೆ ನಾವೆಲ್ಲರೂ ಇಮೇಲ್ ಮಾಡುವಾಗ, ಮುಖ್ಯವಾಗಿ ಯಾರಿಗೆ ಉದ್ದೇಶಿತವಾಗಿದೆಯೋ ಅವರ ಇಮೇಲ್ ವಿಳಾಸವನ್ನು To ಎಂಬಲ್ಲಿಯೂ, ಅದರ ಒಂದು ನಕಲು ಪ್ರತಿಯು ಬೇರೆಯವರಿಗೆ ಕಳುಹಿಸಬೇಕಿದ್ದರೆ ಅವರ ಇಮೇಲ್ ವಿಳಾಸವನ್ನು CC ಎಂಬಲ್ಲಿಯೂ ದಾಖಲಿಸಬೇಕೆಂದು ಹೆಚ್ಚಿನವರಿಗೆ ಗೊತ್ತು. ಆದರೆ BCC ಎಂಬ ಮತ್ತೊಂದು ಅಡ್ರೆಸ್ ಬಾರ್ ಅಲ್ಲಿ ಇರುತ್ತದೆ. ಅದೇನು ಎಂದು ಕೇಳಿದರೆ ಯಾರಿಗೂ ತಿಳಿದಿರುವುದಿಲ್ಲ. ಅಯ್ಯೋ ಎಲ್ಲಿಯೋ ನೋಡುವ ತನಕ ನಾನೂ ಸಹ ಇದನ್ನು ತಿಳಿದಿರಲಿಲ್ಲ.

ಇನ್ನು ನಾವು ದಿನವೂ ಬಳಸುವ ಲ್ಯಾಪ್‌ಟಾಪ್ ಶಟ್‌ಡೌನ್ ಮಾಡುವುದು ಅನಗತ್ಯ ಎಂಬುದು ಸಹ ಹಲವರಿಗೆ ಗೊತ್ತಿಲ್ಲ ಎಂದು ಹೇಳಬಹುದು. ಇಂತಹ ಚಿಕ್ಕ ಚಿಕ್ಕ ವಿಷಯಗಳೂ ಕೂಡ ನಮ್ಮ ಅರಿವಿಗೆ ಬಾರದಂತೆ ಕೆಲವೊಮ್ಮೆ ಉಳಿದುಬಿಡುತ್ತವೆ. ಹಾಗಾಗಿ, ಇಂದಿನ ಲೇಖನದಲ್ಲಿ ತಂತ್ರಜ್ಞಾನ ಪ್ರಪಂಚದಲ್ಲಿ ಪ್ರತಿಯೋರ್ವರು ತಿಳಿಯಲೇಬೇಕಾದ ವಿಶೇಷ ಮಾಹಿತಿಗಳನ್ನು ನಾನು ಇಂದು ನಿಮ್ಮ ಮುಂದಿಡುತ್ತಿದ್ದೇನೆ. ಈ ಲೇಖನದಲ್ಲಿ ಹೆಚ್ಚು ಜನರು ತಿಳಿಯದ ಪ್ರಮುಖ ಐದು ವಿಷಯಗಳ ಬಗ್ಗೆ ನಾವು ತಿಳಿಯಲು ಪ್ರಯತ್ನಿಸೋಣ.

ಇಮೇಲ್‌ನಲ್ಲಿ BCC, ಏನಿದು ಗೊತ್ತಾ?

ಇಮೇಲ್‌ನಲ್ಲಿ BCC, ಏನಿದು ಗೊತ್ತಾ?

ಮೊದಲೇ ಹೇಳಿದಂತೆ, ನಾವು ಇಮೇಲ್ ಮಾಡುವಾಗ, ಮುಖ್ಯವಾಗಿ ಯಾರಿಗೆ ಉದ್ದೇಶಿತವಾಗಿದೆಯೋ ಅವರ ಇಮೇಲ್ ವಿಳಾಸವನ್ನು To ಎಂಬಲ್ಲಿಯೂ, ಅದರ ಒಂದು ನಕಲು ಪ್ರತಿಯು ಬೇರೆಯವರಿಗೆ ಕಳುಹಿಸಬೇಕಿದ್ದರೆ ಅವರ ಇಮೇಲ್ ವಿಳಾಸವನ್ನು CC ಎಂಬಲ್ಲಿಯೂ ದಾಖಲಿಸಬೇಕು. ಆದರೆ BCC ಎಂಬ ಮತ್ತೊಂದು ಅಡ್ರೆಸ್ ಬಾರ್ ಇದೆ. ನೀವು ಇಲ್ಲಿ ಯಾರದ್ದೇ ಇಮೇಲ್ ವಿಳಾಸ ದಾಖಲಿಸಿದರೆ, BCC ಯಲ್ಲಿರುವ ವಿಳಾಸವು ನೀವು To ಮತ್ತು CC ಮೂಲಕ ಕಳುಹಿಸಿದವರಿಗೆ ಕಾಣಿಸುವುದಿಲ್ಲ. ಅಂದರೆ, ಯಾರಿಗೆಲ್ಲಾ ಇಮೇಲ್ ಕಳುಹಿಸಿದ್ದೀರಿ ಎಂಬುದು ಯಾರಿಗೂ ತಿಳಿಯದಿರಲಿ ಎಂಬ ಉದ್ದೇಶ ನಿಮ್ಮದಾಗಿದ್ದರೆ, BCC ಯಲ್ಲಿ ಇಮೇಲ್ ಸೆಂಡ್ ಮಾಡಿ.

ಲ್ಯಾಪ್‌ಟಾಪ್ ಶಟ್‌ಡೌನ್ ಅನಗತ್ಯ

ಲ್ಯಾಪ್‌ಟಾಪ್ ಶಟ್‌ಡೌನ್ ಅನಗತ್ಯ

ನಾವೂ ದಿನವೂ ಬಳಸುವ ಲ್ಯಾಪ್‌ಟಾಪ್ ಅನ್ನು ಶಟ್‌ಡೌನ್ ಮಾಡುವುದು ಅನಗತ್ಯ. ಒಂದು ಸ್ಥಳದಲ್ಲಿ ಬಳಸುತ್ತಿರುವ ಲ್ಯಾಪ್‌ಟಾಪ್ ಅನ್ನು ಎತ್ತಿಕೊಂಡು ಹೋಗಿ ಮತ್ತೊಂದು ಸ್ಥಳದಲ್ಲಿ ಮತ್ತೆ ಲ್ಯಾಪ್‌ಟಾಪ್ ಅನ್ನು ಬಳಸಬೇಕಾಗಿದ್ದರೆ ಲ್ಯಾಪ್‌ಟಾಪ್ ಅನ್ನು ಶಟ್‌ಡೌನ್ ಮಾಡಲೇಬೇಕೆಂದಿಲ್ಲ. ತುಂಬಾ ಬ್ರೌಸರ್‌ಗಳನ್ನು ತೆರೆದು ಇವನ್ನು ನಾಳೆ ನೋಡೋಣ ಎಂದುಕೊಂಡರೆ, ಅವೆಲ್ಲವನ್ನೂ ತೆರೆದೇ ಇಟ್ಟಿರಬಹುದು. ಏಕೆಂದರೆ, ಲ್ಯಾಪ್‌ಟಾಪ್ ಆನ್ ಇರುವಂತೆಯೇ ಅದರ ಸ್ಕ್ರೀನ್ ಭಾಗವನ್ನು ಮುಚ್ಚಿಟ್ಟರೂ ಅದು ಸ್ವಯಂಚಾಲಿತವಾಗಿ ಅದು ಸ್ಲೀಪ್ ಮೋಡ್‌ಗೆ ಹೊರಟುಹೋಗುತ್ತದೆ. ಆದರೆ, ಲ್ಯಾಪ್‌ಟಾಪ್ ಸಿಸ್ಟಂ ಸುರಕ್ಷತೆಗಾಗಿ ವಾರಕ್ಕೊಮ್ಮೆಯಾದರೂ ಲ್ಯಾಪ್‌ಟಾಪ್ ಶಟ್‌ಡೌನ್ ಮಾಡಬೇಕು.

ಕಂಪ್ಯೂಟರ್ ಪ್ರೋಗ್ರಾಂ ಸಮಸ್ಯೆ

ಕಂಪ್ಯೂಟರ್ ಪ್ರೋಗ್ರಾಂ ಸಮಸ್ಯೆ

ನಿಮ್ಮ ಕಂಪ್ಯೂಟರ್‌ನ ಯಾವುದೇ ಒಂದು ಪ್ರೋಗ್ರಾಂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾಗ ಇಡೀ ಕಂಪ್ಯೂಟರೇ ಕೆಟ್ಟುಹೋಗಿದೆ ಎಂದುಕೊಳ್ಳಬೇಡಿ. ಏಕೆಂದರೆ, ಸರಿಯಾಗಿ ಕೆಲಸ ಮಾಡದ ಪ್ರೋಗ್ರಾಂನಲ್ಲೂ ಸಮಸ್ಯೆ ಇರಬಹುದು. ಹಾಗಾಗಿ, ಯಾವುದೇ ಪ್ರೋಗ್ರಾಂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾಗ ಅದನ್ನು ಅನ್‌ಇನ್‌ಸ್ಟಾಲ್ ಮಾಡಿ. ನಂತರ ಅದರ ಎಕ್ಸಿಕ್ಯೂಟೆಬಲ್ ಫೈಲ್ ಸಹಾಯದಿಂದ ಪುನಃ ಪ್ರೋಗ್ರಾಂ ಇನ್‌ಸ್ಟಾಲ್ ಮಾಡಿ. ಇದಾದ ನಂತರ ಕಂಪ್ಯೂಟರ್ ರೀಸ್ಟಾರ್ಟ್ ಮಾಡಿ ಆ ಪ್ರೋಗ್ರಾಂ ತೆರೆಯಿರಿ. ಹೀಗೆ ಮಾಡಿದರೆ ಆ ನಿರ್ದಿಷ್ಟ ಸಾಫ್ಟ್‌ವೇರ್‌ನಲ್ಲಿ ಸಮಸ್ಯೆ ಕಾಣದಂತೆ ಮಾಯವಾಗಬಹುದು. ಇನ್ನು ಹಳೆಯ ತಾತ್ಕಾಲಿಕ ಫೈಲುಗಳ ನಿರ್ಮೂಲನೆಗೂ ಇದು ಸಹಕಾರಿ.

ಫೋನಿನಲ್ಲಿ ಟೈಪ್ ಮಾಡಿ ನೋಡಿ

ಫೋನಿನಲ್ಲಿ ಟೈಪ್ ಮಾಡಿ ನೋಡಿ

ಸ್ಮಾರ್ಟ್‌ಫೋನ್‌ಗಳಿಂದ ಹೊರಸೂಸುವ ರೇಡಿಯೇಶನ್‌ಗಳು ಆರೋಗ್ಯಕ್ಕೆ ಅಪಾಯಕಾರಿ ಮತ್ತು ಕ್ಯಾನ್ಸರ್‌ಗೂ ಕಾರಣವಾಗಬಹುದು. ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ಈ SAR (ನಿರ್ದಿಷ್ಟ ಹೀರಿಕೊಳ್ಳುವ ದರ) ರೇಡಿಯೇಶನ್ ಮೌಲ್ಯವು 1.6 Watts/kg ಇದ್ದರೆ ಆರೋಗ್ಯಕ್ಕೆ ಅಪಾಯವಿಲ್ಲ. ಸ್ಮಾರ್ಟ್‌ಫೋನ್‌ಗಳಿಂದ ಹೊರಸೂಸುವ ರೇಡಿಯೇಶನ್‌ಗಳು ಇದಕ್ಕಿಂತ ಕಡಿಮೆ ಇದ್ದರೆ ಮಾತ್ರ ಖರೀದಿಸಿ. ನಿಮ್ಮ ಫೋನಿನಲ್ಲಿ *#07# ಎಂದು ಟೈಪ್ ಮಾಡಿ ನೋಡಿ ಈ ಬಗ್ಗೆ ಫೋನಿನಲ್ಲೇ ವಿವರಗಳ ಸಮೇತ ಮಾಹಿತಿ ಪಡೆಯಬಹುದು. ಇನ್ನು ಹೆಸರುವಾಸಿ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದರೆ ಈ ಸಮಸ್ಯೆ ಎದುರಾಗುವುದಿಲ್ಲ.

ಸ್ಮಾರ್ಟ್‌ಫೋನ್ ಸೇಫ್ ಮೋಡ್‌

ಸ್ಮಾರ್ಟ್‌ಫೋನ್ ಸೇಫ್ ಮೋಡ್‌

ನಿಮ್ಮ ಸ್ಮಾರ್ಟ್‌ಫೋನ್ ನಿಧಾನವಾಗಿ ಕೆಲಸ ಮಾಡುತ್ತಿದೆಯೆಂದಾದರೆ, ಅದನ್ನು ವೇಗವಾಗಿಸಲು, ಫ್ಯಾಕ್ಟರಿ ಡೇಟಾ ರೀಸೆಟ್ ಎಂಬ ಆಯ್ಕೆಯು ಸಹಾಯ ಮಾಡುತ್ತದೆ. ಇದನ್ನು ಒಮ್ಮೆ ಸೇಫ್ ಮೋಡ್‌ನಲ್ಲಿ ರೀಬೂಟ್ ಮಾಡಿದರೆ ನಿಮ್ಮ ಫೋನ್ ಹೊಸದರಂತೆ ಕೆಲಸ ಮಾಡಲಿದೆ. ಹೀಗೆ ಮಾಡಿದಾಗ ಫೋನಿನಲ್ಲಿ ನೀವು ಇನ್‌ಸ್ಟಾಲ್ ಮಾಡಿದ ಎಲ್ಲ ಆಯ್ಕೆಗಳು, ನಿಮ್ಮ ಎಲ್ಲ ಮಾಹಿತಿ, ಸಂಪರ್ಕ, ಫೈಲ್‌ಗಳು ಡಿಲೀಟ್ ಆಗಿಬಿಡುತ್ತವೆಆಂಡ್ರಾಯ್ಡ್ ಫೋನನ್ನು ಸೇಫ್ ಮೋಡ್‌ನಲ್ಲಿ ಆನ್ ಮಾಡಲು, ಪವರ್ ಬಟನ್ ಒತ್ತಿ ಹಿಡಿದಾಗ, ಪವರ್ ಆಫ್ ಎಂಬ ಬಟನ್ ಗೋಚರಿಸುತ್ತದೆ. ಅದನ್ನು ಒತ್ತಿ ಹಿಡಿದುಕೊಳ್ಳಿ. ಸೇಫ್‌ಮೋಡ್‌ನಲ್ಲಿ ಫೋನ್ ರೀಸ್ಟಾರ್ಟ್ ಆಗುತ್ತದೆ.

Best Mobiles in India

English summary
The best and simple computer tips everyone should know, Here are some of the important computer tips which will let you work smoothly. to know more visit to kannada.gizbot

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X