Home
ಟೆಕ್ ನೌಕರಿ

ನಿಮ್ಮ ಸ್ಮಾರ್ಟ್‌ಫೋನ್‌ ಹ್ಯಾಕ್ ಆಗಲು ಕಾರಣಗಳೇನು?..ಅದಕ್ಕೆ ಪರಿಹಾರಗಳು ಯಾವುವು?

ನಿಮಗೆ ಗೊತ್ತಾ?, ಹ್ಯಾಕರ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ಗೆ ಮಾಲಿಷಿಯಸ್ ಕೋಡ್ ಇನ್ ಸ್ಟಾಲ್ ಮಾಡಿ ಮೆಸೇಜ್, ಫೋಟೊ ಮತ್ತು ಮೈಕ್ರೊಫೋನ್ ಮೇಲೂ ನಿಯಂತ್ರಣ ಸಾಧಿಸುವ ಸಾಧ್ಯತೆ ಇತ್ತೀಚಿಗೆ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ನಿಮ್ಮ ಖಾಸಗಿ ಮತ್ತು ಕಾರ್ಪೊರೇಟ್ ಮಾಹಿತಿಗಳಾದ ಬ್ಯಾಂಕ್ ಖಾತೆ ಸಂಖ್ಯೆ, ಕ್ರೆಡಿಟ್ ಕಾರ್ಡ್ ಮಾಹಿತಿ ಕದ್ದು ಅವರು ದುರ್ಬಳಕೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಅಂದರೆ, ಇದರಿಂದ ನಿಮ್ಮ ಹಣ ಸುಲಭವಾಗಿ ಹ್ಯಾಕರ್‌ಗಳ ಪಾಲಾಗುವ ಸಂಭವ ಇರುತ್ತದೆ.

ನಿಮ್ಮ ಸ್ಮಾರ್ಟ್‌ಫೋನ್‌ ಹ್ಯಾಕ್ ಆಗಲು ಕಾರಣಗಳೇನು?..ಅದಕ್ಕೆ ಪರಿಹಾರಗಳು ಯಾವುವು?

ಹೌದು, ಇದಕ್ಕೆಲ್ಲ ನೇರ ಕಾರಣ ಸ್ಮಾರ್ಟ್‌ಫೋನ್‌ ಹ್ಯಾಕ್ ಆಗಿರಬಹುದು. ಅಂದರೆ, ಹ್ಯಾಕರ್‌ಗಳು ನಿಮ್ಮ ಸ್ಮಾರ್ಟ್‌ಫೋನ್ ಮೇಲೆ ನಿಯಂತ್ರಣ ಸಾಧಿಸಿರಬಹುದು. ಅದರಿಂದ ಜಿಪಿಎಸ್ ನಿಮ್ಮ ಸ್ಥಳದ ಮಾಹಿತಿ ಸೇರಿದಂತೆ ನಿಮ್ಮೆಲ್ಲಾ ಚಟುವಟಿಕೆಗಳನ್ನು ಅವರು ಗಮನಿಸುತ್ತಿರುತ್ತಾರೆ. ನಿಮ್ಮಿಂದ ಹಣವನ್ನು ಎಗರಿಸಲು ನಾನಾ ತರಹದ ತಂತ್ರಗಳನ್ನು ಬಳಸಿಕೊಳ್ಳುತ್ತಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ ಹ್ಯಾಕ್ ಆಗಲು ಕಾರಣಗಳು ಮತ್ತು ಅದಕ್ಕಿರುವ ಪರಿಹಾರಗಳು ಯಾವುವು ಎಂಬುದನ್ನು ನಾವು ಪಟ್ಟಿಮಾಡಿದ್ದೇವೆ.

ಆಪ್ ಸ್ಟೋರ್‌ನಲ್ಲಿ ಮಾತ್ರ ಆಪ್ ಡೌನ್‌ಲೋಡ್ ಮಾಡಿ.

ಆಪ್ ಸ್ಟೋರ್‌ನಲ್ಲಿ ಮಾತ್ರ ಆಪ್ ಡೌನ್‌ಲೋಡ್ ಮಾಡಿ.

ಸ್ಮಾರ್ಟ್‌ಫೋನ್‌ಗೆ ಒಂದು ಆಪ್‌ ಡೌನ್‌ಲೋಡ್ ಮಾಡುವ ಮುನ್ನ ಪ್ರಮುಖವಾಗಿ ತಿಳಿದಿರಬೇಕಾದ ವಿಷಯ ಎಂದರೆ ಆಪ್ ಸ್ಟೋರ್‌ಗಳಿಂದ ಮಾತ್ರವೇ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಬೇರೆ ಮೂಲಗಳಿಂದ ಇನ್‌ಸ್ಟಾಲ್ ಮಾಡಿಕೊಳ್ಳುವುದು ಅಪಾಯಕ್ಕೆ ದಾರಿ ಎಂಬುದನ್ನು ತಿಳಿದಿರಿ. ಪ್ರತಿಯೊಂದು ಆಪ್‌ ಡೌನ್‌ಲೋಡ್ ಮಾಡುವಾಗಲೂ ಅವುಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ. ಅನಿವಾರ್ಯ ಅಲ್ಲದೇ ಇದ್ದರೆ ಥರ್ಡ್‌ಪಾರ್ಟಿ ಆಪ್‌ಗಳನ್ನು ಇನ್‌ಸ್ಟಾಲ್ ಮಾಡದೇ ಇರುವುದೇ ಒಳಿತು.

ಆಪ್ ಕೇಳುವ ಪರ್ಮಿಷನ್‌ಗಳನ್ನು ಗಮನಿಸಿ!

ಆಪ್ ಕೇಳುವ ಪರ್ಮಿಷನ್‌ಗಳನ್ನು ಗಮನಿಸಿ!

ಯಾವುದೇ ಆಪ್ ಅನ್ನು ಪ್ಲೆಸ್ಟೋರ್‌ನಿಂದಲೇ ಇನ್‌ಸ್ಟಾಲ್ ಮಾಡುವುದು ಒಳಿತು. ಆದರೆ, ಪ್ಲೇಸ್ಟೋರ್ ಗಳಿಗೂ ಹ್ಯಾಕರ್ ದಾಳಿ ನಡೆಸಿ ವಂಚನೆ ನಡೆಸಿದ ಪ್ರಕರಣಗಳಿವೆ. ಹೀಗಾಗಿ ಯಾವುದೇ ಆಪ್‌ಗಳನ್ನು ಡೌನ್ ಲೋಡ್ ಮಾಡುವಾಗ ಕೇಳುವ ಪರ್ಮಿಷನ್‌ಗಳನ್ನು ಗಮನಿಸಿ, ಆಫ್‌ಲೈನ್ ಗೇಮಿಂಗ್ ಆ್ಪ್‌ಗೆ ಕಾಂಟ್ಯಾಕ್ಟ್, ಗ್ಯಾಲರಿ, ಲೊಕೇಷನ್ ಪರ್ಮಿಷನ್ ಅನಗತ್ಯ. ಹೀಗೆ ಕೇಳುವ ಆಪ್ ಬಳಕೆ ಬೇಡ ಎಂಬುದು ನಮ್ಮ ಸಲಹೆ.

ಅಧಿಕೃತ ಆಪ್‌ ಬಳಕೆಮಾಡಿ.

ಅಧಿಕೃತ ಆಪ್‌ ಬಳಕೆಮಾಡಿ.

ನೀವು ಬಳಕೆ ಮಾಡುವ ಆಪ್ ಅಧಿಕೃತವಾಗಿದ್ದರೆ ಸೂಕ್ತ ಎನ್ನುವುದು ತಜ್ಞರ ಸಲಹೆ. ಇವುಗಳನ್ನು ಬಳಸುವುದರಿಂದ ಲಾಗಿನ್ ಸುರಕ್ಷತೆ ಇರುವುದರ ಜತೆಗೆ ಹ್ಯಾಕಿಂಗ್ ದಾಳಿಗೆ ಸುಲಭವಾಗಿ ತುತ್ತಾಗುವ ಅಪಾಯವೂ ಕಡಿಮೆ ಇರುತ್ತದೆ ಎನ್ನುತ್ತಾರೆ. ಜೊತೆಗೆ ಇತರ ಬಳಕೆದಾರರು ಕೊಟ್ಟಿರುವ ಆ ಆಪ್‌ಗೆ ನೀಡಿರುವ ರೇಟಿಂಗ್ಸ್ ಮತ್ತು ರಿವ್ಯೂಗಳನ್ನು ಸರಿಯಾಗಿ ಓದಿ. ಇನ್‌ಸ್ಟಾಲ್ ಮಾಡಿಕೊಂಡಿ ತೊಂದರೆ ಅನಿಭವಿಸಿದ್ದವರ ಮಾತುಗಳು ನಿಮಗೆ ಸಹಾಯಕವಾಗಿರಬಹುದು.

Unknown Sources ಡಿಸೇಬಲ್ ಮಾಡಿಬಿಡಿ

Unknown Sources ಡಿಸೇಬಲ್ ಮಾಡಿಬಿಡಿ

ಯಾವುದೇ ಸ್ಮಾರ್ಟ್‌ಫೋನ್ ಬಳಸುತ್ತಿದ್ದರೂ ಸೆಟ್ಟಿಂಗ್ಸ್‌ನ ತೆರೆದು ಸೆಕ್ಯುರಿಟಿ ವಿಭಾಗದಲ್ಲಿ ಇದೆ. Unknown Sources ಎಂಬ ಆಯ್ಕೆಯನ್ನು ಡಿಸೇಬಲ್ ಮಾಡಿಬಿಡಿ. ಯಾರಾದರೂ ಆಪ್‌ ಮೂಲಕ ನಿಮ್ಮ ಫೋನ್ ಮಾಹಿತಿ ತಿಳಿಯಲು ಅಥವಾ ವೈರಸ್ ಕಳುಹಿಸಲು ಪ್ರಯತ್ನಿಸಿದರೆ ಈ ಆಪ್ ಅವುಗಳು ಇನ್‌ಸ್ಟಾಲ್ ಆಗುವುದನ್ನು ತಡೆಯುತ್ತದೆ. ಇದನ್ನು ಡಿಸೇಬಲ್ ಮಾಡಿದಾಗ ಕೆಲವೊಮ್ಮೆ ನಮಗೆ ಬೇಕಾದ ಅತ್ಯುತ್ತಮ ಆಪ್‌ಗಳನ್ನು ಸಹ ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. ಹಾಗಾಗಿ ಇದರ ಬಗ್ಗೆ ಎಚ್ಚರವಾಗಿರಿ.

ಕಾಲಕಾಲಕ್ಕೆ ಸಾಫ್ಟ್‌ವೇರ್ ಅಪ್‌ಡೇಟ್

ಕಾಲಕಾಲಕ್ಕೆ ಸಾಫ್ಟ್‌ವೇರ್ ಅಪ್‌ಡೇಟ್

ಹ್ಯಾಕರ್‌ಗಳು ನಿಮ್ಮ ಫೋನ್‌ಗೆ ಮಾಲಿಷಿಯಸ್ ಕೋಡ್ ಇನ್ ಸ್ಟಾಲ್ ಮಾಡಿ ಮೆಸೇಜ್, ಫೋಟೊ ಮತ್ತು ಮೈಕ್ರೊಫೋನ್ ಮೇಲೂ ನಿಯಂತ್ರಣ ಸಾಧಿಸುತ್ತಾರೆ. ಇದರಿಂದ ದುರ್ಬಳಕೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಫೋನ್ ಮೇಲೆ ನಿಯಂತ್ರಣ ಸಾಧಿಸುವುದರಿಂದ ಹ್ಯಾಕರ್‌ಗಳು ಜಿಪಿಎಸ್ ಸಹಾಯದಿಂದ ನಿಮ್ಮ ಸ್ಥಳದ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು. ಕಾಲಕಾಲಕ್ಕೆ ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವುದರಿಂದಲೂ ಹ್ಯಾಕಿಂಗ್ ದಾಳಿಯಿಂದ ರಕ್ಷಣೆ ಪಡೆಯಬಹುದು.

ಪರಿಚಿತ ಸಂದೇಶಗಳ ಲಿಂಕ್‌ ಕ್ಲಿಕ್‌

ಪರಿಚಿತ ಸಂದೇಶಗಳ ಲಿಂಕ್‌ ಕ್ಲಿಕ್‌

ಮೊಬೈಲ್‌ಗೆ ಬರುವ ಅಪರಿಚಿತ ಸಂದೇಶಗಳ ಲಿಂಕ್‌ ಕ್ಲಿಕ್‌ ಮಾಡುವುದರಿಂದ ಹ್ಯಾಕ್‌ ಆಗುತ್ತದೆ. ಇಂತಹ ಲಿಂಕ್‌ಗಳು ಯಾವುದಾದರೂ ಹೊಸ ಉತ್ಪನ್ನ ಅಥವಾ ರಿಯಾಯಿತಿ ಮಾರಾಟದ ಆಮಿಷಗಳಿಂದ ಕೂಡಿರುತ್ತವೆ. ಅದನ್ನು ಕ್ಲಿಕ್ ಮಾಡುವಂತೆ ಸೆಳೆಯುತ್ತವೆ. ಅದನ್ನು ಕ್ಲಿಕ್ ಮಾಡಿದಾಕ್ಷಣ ನಮ್ಮ ಫೋನ್‌ನಲ್ಲಿರುವ ಮಾಹಿತಿ ಪಡೆಯುವ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹಾಗಾಗಿ, ಮೊಬೈಲ್‌ಗೆ ಬರುವ ಯಾವುದೇ ಅಪರಿಚಿತ ಸಂದೇಶಗಳ ಲಿಂಕ್ ಅನ್ನು ಕ್ಲಿಕ್ ಮಾಡುವ ಮುನ್ನ ಎಚ್ಚರವಿರಲಿ.

ಪಾಸ್‌ವರ್ಡ್‌ ಸೇವ್ ಮಾಡಬೇಡಿ.

ಪಾಸ್‌ವರ್ಡ್‌ ಸೇವ್ ಮಾಡಬೇಡಿ.

ಬ್ಯಾಂಕ್ ಖಾತೆಯ ಪಿನ್ ಮತ್ತು ಪಾಸ್‌ವರ್ಡ್, ಕ್ರೆಡಿಟ್ ಕಾರ್ಡ್ ಪಿನ್ ನಂಬರ್ ಸೇರಿ ಸೋಷಿಯಲ್ ಮೀಡಿಯಾದ ಪಾಸ್‌ವರ್ಡ್‌ಗಳನ್ನು ಗೌಪ್ಯವಾಗಿಡಿ. ಕೆಲವೊಂದು ಆಪ್‌ಗಳು ನಿಮ್ಮ ಫೋನ್‌ನಲ್ಲಿರುವ ಮಾಹಿತಿಗಳನ್ನು ಕದ್ದು ಅವುಗಳನ್ನು ಸೈಬರ್ ಕ್ರಿಮಿನಲ್‌ಗಳಿಗೆ ಮಾರಿಬಿಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗೆ ಅವರು ಮಾರಿಕೊಂಡರೆ ಹ್ಯಾಕರ್‌ಗಳಿಗೆ ನಿಮ್ಮ ಹಣವನ್ನು ದೋಚಲು ಕಷ್ಟವಾಗುವುದಿಲ್ಲ ಎಂಬುದು ತಂತ್ರಜ್ಞರ ಅಭಿಪ್ರಾಯ.

Best Mobiles in India

English summary
Often, the hack or data breach occurs without the consumer's knowledge, according to Sharabani. And it's not just consumers that criminals target. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+