Subscribe to Gizbot

ಪ್ಯಾನ್, ಸಿಮ್, ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್‌ ಮಾಡಲು ಡೆಡ್‌ಲೈನ್!!

Written By:

ಒಟ್ಟು 33 ಕೋಟಿ ಪ್ಯಾನ್‌ ಕಾರ್ಡ್‌ಗಳ ಪೈಕಿ ಇದುವರೆಗೂ ಕೇವಲ. 13.28 ಕೋಟಿ ಪ್ಯಾನ್‌ ಕಾರ್ಡ್‌ಗಳು ಮಾತ್ರ ಆಧಾರ್‌ಗೆ ಲಿಂಕ್‌ ಆಗಿರುವುದರಿಂದ ಸರ್ಕಾರ ಮತ್ತೊಮ್ಮೆ ಗಡುವನ್ನು ವಿಸ್ತರಿಸಿದೆ. ಮತ್ತೆ ಮೂರು ತಿಂಗಳು ಗಡುವು ಮುಂದುವರೆದಿದ್ದು, 2018ರ ಮಾ.31ರವರೆಗೂ ಸಮಯ ವಿಸ್ತರಣೆಯಾಗಿದೆ.!!

ಪ್ಯಾನ್, ಸಿಮ್, ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್‌ ಮಾಡಲು ಡೆಡ್‌ಲೈನ್!!

ಇದೇ ವೇಳೆಯಲ್ಲಿ ಸರಕಾರದ ವಿವಿಧ ಯೋಜನೆಗಳನ್ನು ಪಡೆಯಲು ಆಧಾರ್‌ ಜೋಡಣೆಯ ಗಡುವುಗಳ ದಿನಾಂಕವನ್ನು ಸಹ ಆಧಾರ್ ಪ್ರಾಧಿಕಾರ ಈ ಬಾರಿ ಫೈನಲ್ ಮಾಡಿದ್ದು, ಹಾಗಾದರೆ, ಯಾವ ಯಾವ ಯೋಜನೆಗಳಿಗೆ ಎಷ್ಟೆಷ್ಟು ಸಮಯವನ್ನು ನೀಡಲಾಗಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಯಾಂಕ್‌ ಖಾತೆ ಜೊತೆ ಆಧಾರ್!!

ಬ್ಯಾಂಕ್‌ ಖಾತೆ ಜೊತೆ ಆಧಾರ್!!

ಬ್ಯಾಂಕ್‌ ಖಾತೆ ಜತೆ ಆಧಾರ್‌ ಜೋಡಣೆಗೆ ಡಿ.31 ಅಂತಿಮ ಗಡುವಾಗಿದ್ದು, ಸಮಯವನ್ನು ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ ಎಂದು ಆಧಾರ್ ಪ್ರಾಧಿಕಾರ ತಿಳಿಸಿದೆ. ಹಾಗಾಗಿ, ಈ ತಿಂಗಳ ಕೊನೆಯ ವೇಳೆಗೆ ಆಧಾರ್ ಲಿಂಕ್ ಮಾಡದಿದ್ದರೆ ಬ್ಯಾಂಕ್ ಖಾತೆ ಸ್ಥಗಿತಗೊಳ್ಳಲಿದೆ.!!

ಸಿಮ್‌ಕಾರ್ಡ್ ಜೊತೆ ಆಧಾರ್!!

ಸಿಮ್‌ಕಾರ್ಡ್ ಜೊತೆ ಆಧಾರ್!!

ಮೊಬೈಲ್‌ ಸಂಖ್ಯೆ-ಆಧಾರ್ ಲಿಂಕಿಂಗ್‌ಗೆ 2018ರ ಫೆ.06ರವರೆಗೂ ಸಮಯಾವಕಾಶವಿದೆ. ಜನವರಿ 1 ನೇ ತಾರೀಖಿನಿಂದ ಆನ್‌ಲೈನ್‌ನಲ್ಲಿ ಆಧಾರ್ ಮತ್ತು ಸಿಮ್‌ಕಾರ್ಡ್ ಲಿಂಕ್ ಮಾಡಬಹುದಾಗಿದ್ದು, 2018ರ ಫೆ.06ರ ನಂತರ ಲಿಂಕ್ ಆಗಿರದ ಸಿಮ್‌ಕಾರ್ಡ್‌ಗಳು ಸ್ಥಗಿತಗೊಳ್ಳಲಿವೆ.!!

ಎಲ್‌ಪಿಜಿ ಮತ್ತು ಆಧಾರ್!!

ಎಲ್‌ಪಿಜಿ ಮತ್ತು ಆಧಾರ್!!

ಎಲ್‌ಪಿಜಿ ಮತ್ತು ಸಮಾಜ ಕಲ್ಯಾಣ ಯೋಜನೆಗಳಿಗೆ ಇದೇ ತಿಂಗಳ ಡಿಸೆಂಬರ್ 31 ರ ಒಳಗಾಗಿ ಆಧಾರ್ ಲಿಂಕ್ ಮಾಡಬೇಕಿದ್ದು, ಆಧಾರ್ ಕಾರ್ಡ್ ಲಿಂಕ್ ಆಗಿರದ ಬಳಕೆದಾರರಿಗೆ ಸಿಗುವ ಸಬ್ಸಿಡಿ ಹಣವನ್ನು ಮೊಟಕುಗೊಳಿಸಲಾಗುತ್ತದೆ.!!

Aadhaar card Number link to PAN card !! ಆಧಾರ್ ಅನ್ನು ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಲು ಸೆಂಕೆಡ್ ಸಾಕು!!
ಅಂಚೆ ಕಚೇರಿ ಮತ್ತು ಆಧಾರ್!!

ಅಂಚೆ ಕಚೇರಿ ಮತ್ತು ಆಧಾರ್!!

ಬ್ಯಾಂಕ್ ಮತ್ತು ಮ್ಯೂಚುವಲ್ ಫಂಡ್‌ಗಳ ಜೊತೆಗೆ ಅಧಾರ್ ಲಿಂಕ್ ಮಾಡದಿದ್ದರೆ ಅಂಚೆ ಕಚೇರಿ ಖಾತೆಗಳು ಸ್ಥಗಿತಗೊಳ್ಳಲಿದ್ದು, ಇದೇ ಡಿಸೆಂಬರ್ 31 ನೇ ತಾರೀಖಿನ ಒಳಗಾಗಿ ಅಧಾರ್ ಜೊತೆಗೆ ಬ್ಯಾಂಕ್ ಮತ್ತು ಮ್ಯೂಚುವಲ್ ಫಂಡ್‌ಗಳನ್ನು ಲಿಂಕ್ ಮಾಡಬೇಕಿದೆ.!!

ಓದಿರಿ:ಸ್ಮಾರ್ಟ್‌ಫೋನ್ ಲೋಕವೇ ಬೆಚ್ಚಿಬೀಳುವ ಸುದ್ದಿ!..18ಕೋಟಿ ಜನರು ಬಳಸುತ್ತಿರುವ ಆಪ್‌ಗಳು ಸೇಫ್ ಆಗಿಲ್ಲ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
As of November, 13.28 crore out of 33 crore PANs have been linked to the 12-digit biometric identifier Aadhaar.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot