ಡೌನ್‌ಲೋಡ್ ಮಾಡಿರುವ ಆಪ್‌ನ್ನು ಪ್ಲೇ ಸ್ಟೋರ್‌ನಲ್ಲಿ ಡಿಲೀಟ್ ಮಾಡುವುದು ಹೇಗೆ?
ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಬಹಳಷ್ಟು ಜನ ಡೌನ್‌ಲೋಡ್ ಮಾಡಿರುವ ಆಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ ಡಿಲೀಟ್ ಮಾಡಿರುತ್ತಾರೆ. ಆದರೆ ನಿಜವಾಗಿಯೂ ಈ ಆಪ್‌ಗಳು ಸ್ಮಾರ್ಟ್‌ಫೋನ್‌ನಿಂದ ಮಾತ್ರ ಡಿಲೀಟ್ ಅಗಿರುತ್ತದೆ. ಆದರೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಅಕೌಂಟ್‌ನಲ್ಲಿ ಇದು ಹಾಗೆಯೇ ಇರುವ ವಿಚಾರ ಬಹಳಷ್ಟು ಜನರಿಗೆ ತಿಳಿದಿಲ್ಲ. ಹೀಗಾಗಿ ಇಲ್ಲಿ ಗೂಗಲ್ ಪ್ಲೇ ಸ್ಟೋರ್‌ನ ಅಕೌಂಟ್‌ನಲ್ಲಿರುವ ಆಪ್‌ಗಳನ್ನು ಹೇಗೆ ಡಿಲೀಟ್ ಮಾಡಬಹುದು ಜೊತೆಗೆ ಡೌನ್‌ಲೋಡ್ ಆಗಿರುವ ಆಪ್‌ಗಳನ್ನು ಹೇಗೆ ಅಪ್‌ಡೇಟ್ ಮಾಡಬಹುದು ಎಂಬುದರ ಬಗ್ಗೆ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಆಪ್‌ನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡಿಲೀಟ್ ಮಾಡುವುದು ಹೇಗೆ?
ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ,ಮೆನು ಬಟನ್ ಮೂಲಕ My Apps ಆಯ್ಕೆಯನ್ನು ಆರಿಸಿ.

ಆಪ್‌ನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡಿಲೀಟ್ ಮಾಡುವುದು ಹೇಗೆ?
My Apps ಆಯ್ಕೆಯನ್ನು ಆರಿಸಿದ ಮೇಲೆ ನಿಮಗೆ Installed ಮತ್ತು All ಆಯ್ಕೆಗಳಿರುವ ಒಂದು ಪೇಜ್ ಓಪನ್ ಆಗುತ್ತದೆ. Installed ಆಯ್ಕೆಯನ್ನು ಆರಿಸಿದ್ದಲ್ಲಿ ಸದ್ಯ ಇನ್‌ಸ್ಟಾಲ್ ಆಗಿರುವ ಆಪ್‌ಗಳ ಲಿಸ್ಟ್ ಓಪನ್ ಆಗುತ್ತದೆ. ಮತ್ತು ಬಲಗಡೆ ಇರುವ ಅಪ್‌ಡೆಟ್ ಆಯ್ಕೆಯನ್ನು ಆರಿಸಿದ್ದಲ್ಲಿ ಆ ಅಪ್ಲಿಕೇಶನ್‌ಗೆ ಸಂಬಂಧಿಸಿ ಹೊಸ ಫೀಚರ್‌ಗಳು ಅಪ್‌ಡೇಟ್ ಆಗಿದ್ದಲ್ಲಿ ಆಪ್‌ಡೇಟ್ ಆಗುತ್ತವೆ.

ಆಪ್‌ನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡಿಲೀಟ್ ಮಾಡುವುದು ಹೇಗೆ?
ಒಂದು ವೇಳೆ All ಆಯ್ಕೆಗಳನ್ನು ಆರಿಸಿದ್ದಲ್ಲಿ ಇದುವರೆಗೂ ನೀವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿರುವ ಆಪ್‌ಗಳ ಲಿಸ್ಟ್ ಓಪನ್ ಆಗುತ್ತದೆ.ಇಲ್ಲಿ ಕ್ಲೋಸ್ ಆಯ್ಕೆಯನ್ನು ಆರಿಸಿ. ಆಗ ನಿಮ್ಮ ಸ್ಕ್ರೀನ್‌ಲ್ಲಿಈ ಅಪ್ಲಿಕೇಶನ್ ಡಿಲೀಟ್ ಮಾಡಬೇಕೆ ಎಂದು ತೋರಿಸುವ ಒಂದು ಪಾಪ್ ಅಪ್ ಬಾಕ್ಸ್ ಬರುತ್ತದೆ.ಇಲ್ಲಿ 'ok' ಎಂದು ಆರಿಸಿದ್ದಲ್ಲಿ ಆ ಅಪ್ಲಿಕೇಶನ್ ಡಿಲೀಟ್ ಆಗುತ್ತದೆ.


Click it and Unblock the Notifications