ಟೆದರಿಂಗ್ ಮತ್ತು ಹಾಟ್‌ಸ್ಪಾಟ್: ಯಾವುದು ಬೆಸ್ಟ್..?
ಇತ್ತೀಚಿನ ಜಗತ್ತಿನಲ್ಲಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಅಂರ್ತಜಾಲ ಸೇವೆಗೆ ಕನೆಕ್ಟ್ ಆಗಿಯೇ ಇರುತ್ತಾರೆ. ಅದೂ ಅಲ್ಲದೆ ಅಂತರ್ಜಾಲ ಜಗತ್ತು ನಾವಂದುಕೊಳ್ಳುವುದಕ್ಕಿಂತ ಭಾರೀ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಉದಾಹರಣೆಗೆ ಅಂತರ್ಜಾಲವನ್ನು ಆಕ್ಸಿಸ್ ಮಾಡುವುದಕ್ಕೆ ಇದೀಗ ಹಲವು ವಿಭಿನ್ನ ಮಾರ್ಗಗಳಿವೆ. ಸ್ಯಾಟಲೈಟ್, ಟೆಲಿಫೋನ್ ವಯರ್ಸ್, ವಯರ್ ಲೆಸ್ ಅಥವಾ ಮೊಬೈಲ್ ಕನೆಕ್ಷನ್ ಇತ್ಯಾದಿಗಳ ಮೂಲಕ ನಾವು ಅಂತರ್ಜಾಲವನ್ನು ಆಕ್ಸಿಸ್ ಮಾಡಬಹುದು.

ಇವುಗಳಲ್ಲಿ ದಿನಂಪ್ರತಿ ಹೆಚ್ಚಾಗಿ ಬಳಕೆ ಮಾಡುವ ಕನೆಕ್ಷನ್ ಗಳಲ್ಲಿ ಟೆದರಿಂಗ್ ಮತ್ತು ಹಾಟ್ ಸ್ಪಾಟ್ ಬಹಳ ಮುಖ್ಯವಾದುದ್ದು. ಅಂತರ್ಜಾಲ ಸೇವೆಯನ್ನುಇತರೆ ಡಿವೈಸ್ ಗಳ ಜೊತೆ ಹಂಚಿಕೊಳ್ಳಬೇಕು ಎಂದು ಬಯಸಿದಾಗ ನಾವು ಹೆಚ್ಚಾಗಿ ಈ ಎರಡು ಸೇವೆಗಳನ್ನು ಬಳಕೆ ಮಾಡುತ್ತೇವೆ. ಈ ಲೇಖನದಲ್ಲಿ ನಾವು ಈ ಎರಡರ ಹೋಲಿಕೆಯನ್ನು ಹೇಳುತ್ತಿದ್ದೇವೆ. ಈ ಎರಡೂ ಕನೆಕ್ಷನ್ ನಲ್ಲಿರುವ ಕೆಲವು ವ್ಯತ್ಯಾಸಗಳ ಪರಿಚಯವನ್ನು ನಿಮಗೆ ಮಾಡಿಕೊಡಲಿದ್ದೇವೆ.

ಟೆದರಿಂಗ್ ಅಂದರೆ ಏನು?
ಟೆದರಿಂಗ್ ಅಂದರೆ ನೀವು ನಿಮ್ಮ ಕಂಪ್ಯೂಟರ್ ನಲ್ಲಿ ಅಥವಾ ಇತರೆ ಡಿವೈಸ್ ಗಳಲ್ಲಿ ಮತ್ತೊಂದು ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ನಲ್ಲಿರುವ ಸೆಲ್ಯೂಲರ್ ನೆಟ್ ವರ್ಕ್ ಕೆಪಾಬಲಿಟಿಯನ್ನು ಅಂದರೆ ಅಂತರ್ಜಾಲವನ್ನು ಆಕ್ಸಿಸ್ ಮಾಡಲು ನಡೆಸುವ ಪ್ರೊಸೆಸ್ ನ್ನು ಟೆದರಿಂಗ್ ಎಂದು ಕರೆಯಲಾಗುತ್ತೆ.
ಟೆದರಿಂಗ್ ಎಂದರೆ ಅಂತರ್ಜಾಲವನ್ನು ಡಿವೈಸ್ ಗಳ ನಡುವೆ ಹಂಚಿಕೊಳ್ಳುವುದು.ಇದಕ್ಕಾಗಿ ನೀವು ಬೇರೆಬೇರೆ ಟೆದರಿಂಗ್ ಗಳನ್ನು ಬಳಸಬಹುದು ಅಂದರೆ ಇಂಟರ್ ಕನೆಕ್ಷನ್ ಗಳನ್ನು ಹಂಚಿಕೊಳ್ಳಲು ವೈ-ಫೈ, ಬ್ಲೂಟೂತ್ ಟೆದರಿಂಗ್ ಅಥವಾ ಯುಎಸ್ ಬಿ ಟೆದರಿಂಗ್ ಇತ್ಯಾದಿಗಳು.

ಹಾಟ್ ಸ್ಪಾಟ್ಸ್ ಅಂದರೆ ಏನು?
ಹಾಟ್ ಸ್ಪಾಟ್ ಟೆದರಿಂಗ್ ಗಿಂತ ತೀರಾ ಭಿನ್ನವಾಗಿರುತ್ತದೆ. ಹಾಟ್ ಸ್ಪಾಟ್ ಅಂದರೆ ಅದು ವಯರ್ ಲೆಸ್ ಆಕ್ಸಿಸ್ ಪಾಯಿಂಟ್ ಆಗಿದ್ದು ಅದು ನಿಮಗೆ ಅಂತರ್ಜಾಲದ ಕನೆಕ್ಷನ್ ನ್ನು ಒದಗಿಸುತ್ತದೆ. ನೀವು ಕಂಪ್ಯೂಟರ್, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಗಳನ್ನು ಈ ವಯರ್ ಲೆಸ್ ಆಕ್ಸಿಸ್ ಪಾಯಿಂಟ್ ಗೆ ಕನೆಕ್ಟ್ ಮಾಡಿಕೊಳ್ಳಬಹುದು.
ನೀವು ಹಾಟ್ ಸ್ಪಾಟ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಗುರುತಿಸಬಹುದು. ಯಾರು ಬೇಕಿದ್ದರೂ (ಪಾಸ್ ವರ್ಡ್ ಪ್ರೊಟೆಕ್ಷನ್ ಇಲ್ಲದೇ ಇದ್ದರೆ) ಈ ಅಂತರ್ಜಾಲದ ಆಕ್ಸಿಸ್ ಪಾಯಿಂಟ್ ಗೆ ತಮ್ಮ ಡಿವೈಸ್ ನ್ನು ಕನೆಕ್ಟ್ ಮಾಡಿಕೊಳ್ಳಬಹುದು.ಸ್ಮಾರ್ಟ್ ಫೋನ್, ರೂಟರ್ ಗಳು ಮತ್ತು ಕಂಪ್ಯೂಟರ್ ಗಳು ವೈಫೈ ಹಾಟ್ ಸ್ಪಾಟ್ ಗಳಂತೆ ಕಾರ್ಯ ನಿರ್ವಹಿಸುತ್ತದೆ. ಸ್ಮಾರ್ಟ್ ಫೋನ್ ಗಳಲ್ಲಿ ನೀವು ಮೊಬೈಲ್ ಹಾಟ್ ಸ್ಪಾಟ್ ಗಳನ್ನು ಸುಮಾರು 4-5 ಡಿವೈಸ್ ಗಳನ್ನು ಕನೆಕ್ಟ್ ಮಾಡಿಕೊಳ್ಳುವುದಕ್ಕೆ ಬಳಸಬಹುದು.

ಹಾಗಾದ್ರೆ ಟೆದರಿಂಗ್ ಮತ್ತು ಹಾಟ್ ಸ್ಪಾರ್ಟ್ ನಡುವಿನ ವ್ಯತ್ಯಾಸವೇನು?
ಹಾಟ್ ಸ್ಪಾಟ್ ಮತ್ತು ಟೆದರಿಂಗ್ ನಲ್ಲಿ ಗುರುತಿಸಬಹುದಾದ ಕೆಲವು ವ್ಯತ್ಯಾಸಗಳಿವೆ. ಎಲ್ಲರೂ ಕೂಡ ಟೆದರ್ಡ್ ಕನೆಕ್ಷನ್ ಗೆ ಕನೆಕ್ಟ್ ಆಗಲು ಸಾಧ್ಯವಾಗುವುದಿಲ್ಲ. ಆದರೆ ಪಬ್ಲಿಕ್ ಹಾಟ್ ಸ್ಪಾಟ್ ಗೆ ಎಲ್ಲರೂ ಕೂಡ ಕನೆಕ್ಟ್ ಆಗಬಹುದು.ಆದರೆ, ಟೆದರಿಂಗ್ ಗಿಂತ ವೈ-ಫೈ ಹಾಟ್ ಸ್ಪಾಟ್ ಗಳು ಹೆಚ್ಚು ಕನ್ವೀನಿಯಂಟ್ ಆಗಿರುತ್ತದೆ. ವೈಫೈ ಹಾಟ್ ಸ್ಪಾಟ್ ಗಳನ್ನು ಬಳಸಲು ಯಾವುದೇ ಹೆಚ್ಚುವರಿ ಆಪ್ ಗಳನ್ನು ನಿಮ್ಮ ಕಂಪ್ಯೂಟರ್ ಗೆ ಅಥವಾ ಡಿವೈಸ್ ಗೆ ಇನ್ಸ್ಟಾಲ್ ಮಾಡುವ ಅಗತ್ಯವಿಲ್ಲ.
ವೈ-ಫೈ ಹಾಟ್ ಸ್ಪಾಟ್ ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಡಿವೈಸ್ ಗಳನ್ನು ಯಾವುದೇ ಸಮಸ್ಯೆ ಇಲ್ಲದೆ ಕನೆಕ್ಟ್ ಮಾಡಿಕೊಳ್ಳಬಹುದು. ಆದರೆ ಟೆದರಿಂಗ್ ನಲ್ಲಿ ನೀವು ಎಕ್ಸರ್ನಲ್ ಟೂಲ್ ಗಳನ್ನು ಅಥವಾ ಡಿವೈಸ್ ಡ್ರೈವರ್ ಗಳನ್ನು ಇಂಟರ್ನೆಟ್ ಶೇರ್ ಮಾಡಲು ಬಳಸಬೇಕಾಗುತ್ತದೆ. ಆದರೆ ಹಾಟ್ ಸ್ಪಾಟ್ ಗೆ ಹೋಲಿಸಿದರೆ ಟೆದರಿಂಗ್ ಕಡಿಮೆ ಬ್ಯಾಟರಿಯನ್ನು ಬಳಸುತ್ತದೆ.

ಭದ್ರತೆನೂ ನೋಡಿ
ಭದ್ರತಾ ವಿಚಾರದಲ್ಲಿ ಹೇಳುವುದಾದರೆ ವೈಫೈ ಹಾಟ್ ಸ್ಪಾಟ್ ನಲ್ಲಿ ಹ್ಯಾಕಿಂಗ್ ಅಟೆಂಪ್ಟ್ ಗಳು ನಡೆಯುವುದು ಹೆಚ್ಚು. ಇಂಟರ್ನೆಟ್ ಟ್ರಾಫಿಕ್ ನ್ನು ತೊಂದರೆಗೆ ಸಿಲುಕಿಸುವ ಅನೇಕ ವೈಫೈ ಸ್ನೈಪರ್ ಗಳು ಇದ್ದಾರೆ. ಅದಕ್ಕಾಗಿ ಹಲವಾರು ಟೂಲ್ ಗಳೂ ಕೂಡ ಲಭ್ಯವಿದೆ. ಯಾವುದೇ ಟ್ರೈನಿಂಗ್ ಪಡೆದಿರುವ ಹ್ಯಾಕರ್ ಭಾರೀ ಸುಲಭದಲ್ಲಿ ಹಾಟ್ ಸ್ಪಾಟ್ ನಲ್ಲಿ ಕಳ್ಳತನ ಮಾಡಬಹುದು. ಹಾಗಾಗಿ ಸರಿಯಾದ ಎನ್ಕ್ರಿಪ್ಶನ್ ಸ್ನ್ಯಾಡರ್ಡ್ ನ್ನು ಅಳವಡಿಸಿಕೊಂಡಿರಬೇತು. ಕಠಿಣ ಪಾಸ್ ವರ್ಡ್ ಗಳನ್ನು ಬಳಸಬೇಕು. ಅಷ್ಟೇ ಅಲ್ಲ ನೂತನ ಸೆಕ್ಯೂರಿಟಿ ಪ್ರೋಟೋಕಾಲ್ ಗಳನ್ನು ಉದಾಹರಣೆಗೆ WPA2. ಒಟ್ಟಿನಲ್ಲಿ ಟೆದರಿಂಗ್ ಮತ್ತು ಹಾಟ್ ಸ್ಪಾಟ್ ಗೆ ಪ್ರಮುಖ ವ್ಯತ್ಯಾಸಗಳಿವೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ಕಮೆಂಟಿಸಿ.


Click it and Unblock the Notifications








