Subscribe to Gizbot

ಭಾರತೀಯ ಸೇನೆಯಲ್ಲಿರುವ ಅತ್ಯಾಧುನಿಕ ರಕ್ಷಣಾ ಸಾಧನಗಳು

Posted By:

ಈಗ ಎಲ್ಲಾ ಮಾಧ್ಯಮಗಳಲ್ಲಿ ಉತ್ತರಾಖಂಡ ಪ್ರವಾಹದ್ದೇ ಸುದ್ದಿ. ಮಾಧ್ಯಮಗಳಲ್ಲಿ ಭಾರತೀಯ ಸೈನಿಕರು ಪ್ರವಾಹದಲ್ಲಿ ಸಂತ್ರಸ್ಥರಾದ ಜನರನ್ನು ರಕ್ಷಣೆ ಮಾಡುತ್ತಿರುವ ದೃಶ್ಯಗಳನ್ನು ನೀವು ನೋಡಿರಬಹುದು.ಕಳೆದ ಒಂದು ವಾರದಿಂದ ಕಾರ್‍ಯಾಚರಣೆ ಮಾಡಿ ಸಾವಿರಾರು ಜನರನ್ನು ಯೋಧರು ರಕ್ಷಣೆ ಮಾಡಿದ್ದಾರೆ. ಸೈನಿಕರು ಡಿಆರ್‌ಡಿಒ ನಿರ್ಮಿಸಿದ ಅತ್ಯಾಧುನಿಕ ಸಾಧನಗಳನ್ನು ಬಳಸಿ ಜನರ ರಕ್ಷಣೆಗೆ ಮುಂದಾಗುತ್ತಿದ್ದಾರೆ.

ಪಾಕೃತಿಕ ವಿಕೋಪ ಮತ್ತು ಯುದ್ದ ಸಂದರ್ಭದಲ್ಲಿ ಸಂವಹನ ಮತ್ತು ರಕ್ಷಣೆಗೆ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ವಿವಿಧ ಸಾಧನಗಳನ್ನು ತಯಾರಿಸಿ ಭಾರತೀಯ ಸೇನೆಗೆ ನೀಡಿದೆ. ಹೀಗಾಗಿ ಇಲ್ಲಿ ಡಿಆರ್‌ಡಿಒ ನಿರ್ಮಿಸಿದ ಕೆಲವು ಆಧುನಿಕ ಸಾಧನಗಳ ಬಗ್ಗೆ ಮಾಹಿತಿಯಿದೆ. ಒಂದೊಂದೆ ಪುಟವನ್ನು ತಿರುಗಿಸಿ ಈ ಮಾಹಿತಿಯನ್ನು ಓದಿಕೊಂಡು ಹೋಗಿ.

ಇದನ್ನೂ ಓದಿ : ಉಗ್ರರನ್ನು ಪತ್ತೆ ಮಾಡುವ ಆಧುನಿಕ ಸಾಧನಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಆರ್‌ಡಿಒ ನೇತ್ರಾ

ಡಿಆರ್‌ಡಿಒ ನೇತ್ರಾ

ಮಾನವ ರಹಿತ ನೇತ್ರಾ ವೈಮಾನಿಕ ಸಾಧನನವನ್ನು (unmanned aerial vehicle) ರಾಷ್ಟ್ರೀಯ ವಿಪತ್ತು ಪರಿಹಾರ ಕಾರ್ಯಾಚರಣೆಯಲ್ಲಿ ಸೇನೆ ಬಳಸುತ್ತದೆ. ನೇತ್ರಾ ಸಾಧನದ ಮೂಲಕ ದುರ್ಗಮ ಪ್ರದೇಶಗಳಲ್ಲಿ ಸಿಲುಕಿರುವವರನ್ನು ಪತ್ತೆಮಾಡಬಹುದಾಗಿದೆ. ಕಳೆದ ವರ್ಷದಿಂದ ಭಾರತೀಯ ಸೇನೆ ಈ ಸಾಧನವನ್ನು ಬಳಸುತ್ತಿದೆ. ಒಂದು ನೇತ್ರಾ ಸಾಧನ ತಯಾರಿಸಲು ಡಿಆರ್‌ಡಿಒ 20 ಲಕ್ಷ 50 ಸಾವಿರ ರೂ. ವೆಚ್ಚ ಮಾಡಿದೆ. ಇಂದು ಒಟ್ಟು 24 ನೇತ್ರಾ ಸಾಧನಗಳು ಭಾರತೀಯ ಸೇನೆಯಲ್ಲಿದೆ.

ಸ್ಯಾಟಲೈಟ್‌ ಫೋನ್‌ :

ಸ್ಯಾಟಲೈಟ್‌ ಫೋನ್‌ :

ಸಂವಹನಕ್ಕಾಗಿ ಈ ಫೋನ್‌ ಬಳಸಲಾಗುತ್ತದೆ. ಯಾವ ಮೂಲೆಯಲ್ಲಿದ್ದರೂ ಉಪಗ್ರಹಗಳ ಸಿಗ್ನಲ್‌ ಮೂಲಕ ಮಾತನಾಡಬಹುದಾಗಿದೆ.

ಹೆಲ್ಮೆಟ್‌ ಕ್ಯಾಮೆರಾ:

ಹೆಲ್ಮೆಟ್‌ ಕ್ಯಾಮೆರಾ:

ಪಾಕೃತಿಕ ವಿಕೋಪ,ಯುದ್ದದ ಸಂದರ್ಭದಲ್ಲಿ ಈ ಹೆಲ್ಮೆಟ್‌ ಕ್ಯಾಮೆರಾವನ್ನು ಬಳಸಲಾಗುತ್ತದೆ. ಎಲ್‌ಇಡಿ ಲೈಟ್‌ ಹೊಂದಿದ್ದು, ಕಟ್ಟಡದ ಅಡಿಯಲ್ಲಿ ಸಿಲುಕಿಕೊಂಡವರನ್ನು ರಕ್ಷಣೆ ಮಾಡಲು ಸಹಾಯಕವಾಗುತ್ತದೆ.

ಸ್ನೇಕ್‌ ರೊಬೊಟ್‌:

ಸ್ನೇಕ್‌ ರೊಬೊಟ್‌:

ಕಟ್ಟಡ ಕುಸಿತ ಪ್ರಕರಣಗಳಲ್ಲಿ ಜನರನ್ನು ಕಾಪಾಡಲು ಈ ರೊಬೊಟ್‌ ಡಿಆರ್‌ಡಿಒ ಅಭಿವೃದ್ಧಿ ಪಡಿಸಿದೆ. ಈ ಸ್ನೇಕ್‌ ರೋಬೋಟ್‌ 1.5 ಮೀಟರ್‌ ಉದ್ದವಿದ್ದು, ಅಲ್ಯುಮಿನಿಯಂನಿಂದ ತಯಾರಿಸಲಾಗಿದೆ. ಈ ಹಾವಿನ ಮುಂಭಾಗದಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಇದನ್ನು ಜಾಯ್‌ಸ್ಟಿಕ್‌ನ ಮೂಲಕ ನಿರ್ವಹಿಸಬಹುದಾಗಿದೆ.

ಸಂಯುಕ್ತ ಎಲೆಕ್ಟ್ರಾನಿಕ್‌ ವಾರ್‌ಫೇರ್‌ ಸಿಸ್ಟಂ

ಸಂಯುಕ್ತ ಎಲೆಕ್ಟ್ರಾನಿಕ್‌ ವಾರ್‌ಫೇರ್‌ ಸಿಸ್ಟಂ

ಯುದ್ದದ ಸಂದರ್ಭ‌ದಲ್ಲಿ ಸೈನಿಕರ ನಡುವೆ ಪರಸ್ಪರ ಸಂವಹನಕ್ಕಾಗಿ ಈ ಸಂಯುಕ್ತ ಎಲೆಕ್ಟ್ರಾನಿಕ್‌ ವಾರ್‌ಫೇರ್‌ ಸಿಸ್ಟಂ.ಬಳಸಲಾಗುತ್ತದೆ. ಈ ಒಂದು ಸಂಯುಕ್ತ ಎಲೆಕ್ಟ್ರಾನಿಕ್‌ ವಾರ್‌ಫೇರ್‌ ಸಿಸ್ಟಂ 150 ಕಿ.ಮೀ ದೂರದವರೆಗೆ ಸಂವಹನ ನಡೆಸುವ ಸಾಮರ್ಥ್ಯ‌ ಹೊಂದಿದ್ದು. ಈ ಸಿಸ್ಟಂಗಳು ರಾಡಾರ್‌ ಸಂಕೇತಗಳನ್ನು ಜ್ಯಾಮ್‌ ಮಾಡುವ ಸಾಮರ್ಥ್ಯ‌ವನ್ನು ಹೊಂದಿದೆ.

ಸಂಯುಕ್ತ ಎಲೆಕ್ಟ್ರಾನಿಕ್‌ ವಾರ್‌ಫೇರ್‌ ಸಿಸ್ಟಂ

ಸಂಯುಕ್ತ ಎಲೆಕ್ಟ್ರಾನಿಕ್‌ ವಾರ್‌ಫೇರ್‌ ಸಿಸ್ಟಂ

ಭಾರತ 1998ರ ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಸ್ಫೋಟದ ಪರೀಕ್ಷೆ ನಡೆಸಿದ ಬಳಿಕ ಅಮೆರಿಕ ಯುದ್ದ ಸಾಮಾಗ್ರಿಗಳನ್ನು ಆಮದಿನ ಮೇಲೆ ನಿರ್ಬಂಧ ವಿಧಿಸಿತ್ತು. ಹೀಗಾಗಿ 40 ಕಂಪೆನಿಗಳ ಸಹಯೊಗದೊಂದಿಗೆ ಡಿಆರ್‌ಡಿಒ ಸಂಯುಕ್ತ ಎಲೆಕ್ಟ್ರಾನಿಕ್‌ ವಾರ್‌ಫೇರ್‌ ಸಿಸ್ಟಂ ಅಭಿವೃದ್ಧಿ ಪಡಿಸಿದೆ.

ಡಿಆರ್‌ಡಿಒ ದಕ್ಷ :

ಡಿಆರ್‌ಡಿಒ ದಕ್ಷ :

ರಿಮೋಟ್‌ ಕಂಟ್ರೋಲ್‌ ಮೂಲಕ ನಿಯಂತ್ರಿಸಬಹುದಾದ ಸಾಧನವಾಗಿದ್ದು, ನೆಲದಡಿಯಲ್ಲಿ ಹುದುಗಿಸಿಟ್ಟ ಬಾಂಬ್‌ಗಳನ್ನು ಪತ್ತೆ ಮಾಡಲು,ಈ ಸಾಧನವನ್ನು ಬಳಸಲಾಗುತ್ತದೆ.500ಮೀ.ದೂರದಿಂದ ಈ ಸಾಧನವನ್ನುನಿಯಂತ್ರಿಸಬಹುದಾಗಿದ್ದು ಇದರಲ್ಲಿರುವ ಸ್ಕ್ಯಾನರ್‌ ಮೂಲಕ ಬಾಂಬ್‌ ಇರಿಸಿದ ಜಾಗವನ್ನು ಪತ್ತೆ ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot