Home
ಟೆಕ್ ನೌಕರಿ

ಫೋನ್ ಚಾರ್ಜ್‌ನಲ್ಲಿರುವಾಗ ಕರೆ ಸ್ವೀಕರಿಸಿದಿರೋ ಅಪಾಯ ಗ್ಯಾರಂಟಿ!

By Shwetha

ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್‌ನಲ್ಲಿರುವಾಗ ಕರೆಯನ್ನು ಸ್ವೀಕರಿಸಬೇಡಿ ಎಂಬುದಾಗಿ ಎಚ್ಚರಿಕೆಗಳನ್ನು ನೀವು ಪಡೆದುಕೊಂಡಿರುತ್ತೀರಿ. ಏಕೆಂದರೆ ಈ ಸಮಯದಲ್ಲಿ ರೇಡಿಯೇಶನ್ 1000 ಪಟ್ಟು ಅಧಿಕವಾಗಿರುತ್ತದೆ. ಇದು ಯಾವುದೇ ಬ್ರ್ಯಾಂಡ್‌ನ ಫೋನ್‌ಗಳಿಗೂ ಅನ್ವಯವಾಗಿರುತ್ತದೆ. ಬ್ಯಾಟರಿ ಮಟ್ಟ ಕಡಿಮೆ ಇದ್ದ ಸಂದರ್ಭದಲ್ಲಿ ಫೋನ್ ಹೆಚ್ಚಿನ ರೇಡಿಯೇಶನ್ ಅನ್ನು ಬಳಸಿಕೊಳ್ಳುತ್ತದೆ. ಸಿಗ್ನಲ್ ದುರ್ಬಲವಾಗಿದ್ದ ಸಂದರ್ಭದಲ್ಲಿ ಹೆಚ್ಚು ರೇಡಿಯೇಶನ್ ಬಳಕೆಯಾಗುತ್ತದೆ. ಹಾಗಿದ್ದರೆ ಫೋನ್ ಚಾರ್ಜ್‌ನಲ್ಲಿರುವಾಗ ಅದನ್ನು ಬಳಕೆ ಮಾಡಬಾರದು ಏಕೆ ಎಂಬುದನ್ನು ಇಂದಿಲ್ಲಿ ತಿಳಿಸುತ್ತಿದ್ದೇವೆ.

ಥರ್ಮಲ್ ರನ್‌ವೇಯಂತಹ ಸಮಸ್ಯೆ

ಥರ್ಮಲ್ ರನ್‌ವೇಯಂತಹ ಸಮಸ್ಯೆ

ಲಿಥಿಯಮ್ ಬ್ಯಾಟರಿಗಳು ಥರ್ಮಲ್ ರನ್‌ವೇಯಂತಹ ಸಮಸ್ಯೆಗಳನ್ನು ಹೊಂದಿದ್ದು, ಇದು ಹೆಚ್ಚು ಬಿಸಿಯಾದಂತೆ ಸ್ಫೋಟಗೊಳ್ಳುವ ಅಪಾಯವಿರುತ್ತದೆ. ಈ ಕಾರಣದಿಂದಾಗಿ, ಸ್ಮಾರ್ಟ್‌ಫೋನ್ ತಯಾರಕರು ಹೆಚ್ಚು ಚಾರ್ಜ್‌ನಿಂದ ಬ್ಯಾಟರಿಯನ್ನು ಸಂರಕ್ಷಿಸುವ ವಿಧಾನಗಳನ್ನು ಅಳವಡಿಸಬೇಕಾಗಿದ್ದು ಇದರಿಂದ ಫೋನ್ ಸ್ಫೋಟವನ್ನು ತಡೆಗಟ್ಟಬಹುದಾಗಿದೆ.

ಹೆಚ್ಚು ತೆಳು

ಹೆಚ್ಚು ತೆಳು

ಈ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಹೆಚ್ಚು ತೆಳುವಾಗಿದ್ದು ಬ್ಯಾಟರಿಗಳನ್ನು ಕೂಡ ಇದೇ ಮಾದರಿಯಲ್ಲಿ ತಯಾರಿಸಲಾಗುತ್ತಿದೆ. ಇದರಿಂದಾಗಿ ಬ್ಯಾಟರಿಗಳಿಗೆ ಧನಾತ್ಮಕ ಮತ್ತು ಋಣಾತ್ಮಕ ಪ್ಲೇಟ್‌ಗಳನ್ನು ಪತ್ಯೇಕವಾಗಿ ಇರಿಸಿಕೊಳ್ಳಲು ಸ್ಥಳದ ಅಭಾವ ಉಂಟಾಗುತ್ತಿದೆ. ಈ ಎರಡು ಪ್ಲೇಟ್‌ಗಳ ನಡುವೆ ಏನಾದರೂ ಸಂಭವಿಸಿದಲ್ಲಿ ಇದು ಸಮಸ್ಯೆಯನ್ನು ಉಂಟುಮಾಡಬಹುದು, ವಿಶೇಷವಾಗಿ ಅಗತ್ಯ ಪ್ರಮಾಣಗಳಿಗೆ ಬ್ಯಾಟರಿಯನ್ನು ವಿನ್ಯಾಸಗೊಳಿಸದೇ ಇದ್ದ ಸಂದರ್ಭದಲ್ಲಿ

ಸ್ಮಾರ್ಟ್‌ಫೋನ್ ಸುರಕ್ಷತೆ

ಸ್ಮಾರ್ಟ್‌ಫೋನ್ ಸುರಕ್ಷತೆ

ಬ್ಯಾಟರಿ ತಯಾರಿಕೆಯು ಎಲ್ಲಾ ನಿಯಮಗಳನ್ನು ಪೂರೈಸುವಂತಿರಬೇಕು ಮತ್ತು ಸ್ಮಾರ್ಟ್‌ಫೋನ್ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡಿರವಬೇಕು. ಆದರೆ ಕೆಲವು ತಯಾರಕರು ಹಣ ಉಳಿಸುವ ಉದ್ದೇಶದಿಂದಾಗಿ ಬ್ಯಾಟರಿ ಓವರ್ ಹೀಟ್‌ನ ಸಂರಕ್ಷಣೆಯ ಬಗ್ಗೆ ಗಮನ ತೆಗೆದುಕೊಳ್ಳುವುದಿಲ್ಲ. ಅವರ ಈ ನಿರ್ಲಕ್ಷ್ಯತನದಿಂದಾಗಿ ದೊಡ್ಡ ಅನಾಹುತವೇ ಸಂಭವಿಸುತ್ತದೆ ಇಂತಹುದ್ದರಲ್ಲಿ ಬಳಕೆದಾರರು ರಾತ್ರಿ ಪೂರ್ತಿ ಚಾರ್ಜ್ ಮಾಡುವ ಅಭ್ಯಾಸವನ್ನಿಟ್ಟುಕೊಂಡಿರುತ್ತಾರೆ ಎಂದಾದಲ್ಲಿ ಅಂತಹವರಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿರುತ್ತದೆ.

ಒರಿಜಿನಲ್ ಬ್ಯಾಟರಿ

ಒರಿಜಿನಲ್ ಬ್ಯಾಟರಿ

ತಯಾರಕರ ಒರಿಜಿನಲ್ ಬ್ಯಾಟರಿಗಳನ್ನು ಮಾತ್ರವೇ ಬಳಸಿ ರೀಪ್ಲೇಸ್‌ಮೆಂಟನ್ನು ಮಾಡಿ. ಮಾರುಕಟ್ಟೆಯಲ್ಲಿ ನಿಮ್ಮ ಫೋನ್‌ಗಳಿಗೆ ಕಡಿಮೆ ದರದ ಬ್ಯಾಟರಿಗಳು ಲಭ್ಯವಾಗುತ್ತವೆ, ಆದರೆ ನಕಲಿ ಬ್ಯಾಟರಿಗಳನ್ನು ಬಳಸದೇ ಅಸಲಿ ಬ್ಯಾಟರಿಗಳನ್ನು ಮಾತ್ರ ಬಳಸಿ.

ಬಿಸಿಯಾದ ಸ್ಥಳ

ಬಿಸಿಯಾದ ಸ್ಥಳ

ಬಿಸಿಯಾದ ಸ್ಥಳಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಇರಿಸಬೇಡಿ, ವಿಶೇಷವಾಗಿ ಅದನ್ನು ಚಾರ್ಜ್‌ನಲ್ಲಿರಿಸಿದ್ದಾಗ. ಇನ್ನಷ್ಟು ತಾಮಪಾನವು ಓವರ್ ಹೀಟಿಂಗ್ ಸಮಸ್ಯೆಯನ್ನು ಇನ್ನಷ್ಟು ಅಪಾಯಕಾರಿಯಾಗಿಸಬಹುದು.

ಫೋನ್ ಸ್ಫೋಟ

ಫೋನ್ ಸ್ಫೋಟ

ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತಿರುವಾಗ ಫೋನ್ ಬಳಸಿದಲ್ಲಿ ಬ್ಯಾಟರಿ ಇನ್ನಷ್ಟು ಬಿಸಿಯಾಗುತ್ತದೆ, ಇದರಿಂದ ಫೋನ್ ಸ್ಫೋಟಗೊಳ್ಳುವ ಅಪಾಯ ತೀವ್ರವಾಗಿರುತ್ತದೆ.

Best Mobiles in India

English summary
In this article we are giving you tips on why we should not use our phones while it is in charge. Here we are giving you why phones are explode also.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+