ಕೇವಲ ಕ್ಯಾಮೆರಾಗಾಗಿ ಮಾತ್ರ ಮೊಬೈಲ್ ಖರೀದಿಸುತ್ತಿರಾ?..ಕಂಪೆನಿಗಳ ಮೋಸ ತಿಳಿಯುತ್ತಿಲ್ಲವೇ?
ಕೆಲವೊಂದು ಮೊಬೈಲ್ ಕಂಪನಿಗಳು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವಾಗಲೆಲ್ಲ ಅವುಗಳಲ್ಲಿ ಅಳವಡಿಸುವ ಕ್ಯಾಮೆರಾಗಳಿಗೆ ಇನ್ನಿಲ್ಲದ ಮಹತ್ವ ನೀಡುತ್ತಿವೆ. ಕ್ಯಾಮೆರಾ ಮಹತ್ವದ ಬಗ್ಗೆಯೇ ಮಾತ್ರ ಅವು ಹೆಚ್ಚು ಜಾಹಿರಾತನ್ನು ಪ್ರಕಟಿಸುತ್ತವೆ.!!
ಭಾರತೀಯರು ಛಾಯಾಚಿತ್ರ ಪ್ರಿಯರು ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಕೆಲವೊಂದು ಮೊಬೈಲ್ ಕಂಪನಿಗಳು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವಾಗಲೆಲ್ಲ ಅವುಗಳಲ್ಲಿ ಅಳವಡಿಸುವ ಕ್ಯಾಮೆರಾಗಳಿಗೆ ಇನ್ನಿಲ್ಲದ ಮಹತ್ವ ನೀಡುತ್ತಿವೆ. ಕ್ಯಾಮೆರಾ ಮಹತ್ವದ ಬಗ್ಗೆಯೇ ಮಾತ್ರ ಅವು ಹೆಚ್ಚು ಜಾಹಿರಾತನ್ನು ಪ್ರಕಟಿಸುತ್ತವೆ.!!
ನೀವು ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಬರುವ ಕೆಲವು ಮೊಬೈಲ್ ಜಾಹೀರಾತುಗಳ ಮೇಲೆ ಒಮ್ಮೆ ಕಣ್ಣಾಡಿಸಿ ನೋಡಿದರೆ ಈ ಬಗ್ಗೆ ನಿಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಎಷ್ಟು ಕ್ಯಾಮೆರಾಗಳಿವೆ, ಫೋಟೊ ಹೇಗೆ ತೆಗೆಯುತ್ತವೆ ಎಂಬ ಜಾಹಿರಾತುಗಳ ಮೂಲಕ ನಿಮ್ಮನ್ನು ಸೆಳೆಯುತ್ತವೆ.!! ಹಾಗಾಗಿ, ಇಂತಹ ಮೋಸಕ್ಕೆ ನೀವು ಬಲಿಯಾಗದಿರಲು ಏನು ಮಾಡಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಉತ್ತಮ ಕ್ಯಾಮೆರಾ ಮೊಬೈಲ್?
ಕ್ಯಾಮೆರಾ ಇಟ್ಟುಕೊಂಡು ಹೆಚ್ಚು ಪ್ರಚಾರ ನಡೆಸುವ ಮೊಬೈಲ್‌ಗಳನ್ನು ಖರೀದಿಸುವ ಮುನ್ನ ನೀವು ಸ್ವಲ್ಪ ಯೋಚನೆ ಮಾಡುವುದು ಒಳಿತು.! ಏಕೆಂದರೆ, ಮೊಬೈಲ್‌ನಲ್ಲಿನ ಇತರ ತಂತ್ರಜ್ಞಾನಗಳು ನಿಮಗೆ ಮುಖ್ಯವಲ್ಲವೇ? ಮೊಬೈಲ್ ಖರೀದಿಸುತ್ತಿರುವುದು ಕೇವಲ ಕ್ಯಾಮೆರಾಗಾಗಿ ಮಾತ್ರವೇ? ಕ್ಯಾಮೆರಾದ ನಿಜವಾದ ಶಕ್ತಿ ಏನು? ಎಂಬುದನ್ನು ನೀವು ತಿಳಿದಿರಬೇಕು.!!

ಇತರ ತಂತ್ರಜ್ಞಾನಗಳು ನಿಮಗೆ ಮುಖ್ಯವಲ್ಲವೇ?
ಸ್ಮಾರ್ಟ್‌ಫೋನ್‌ನಲ್ಲಿ ಎಷ್ಟು ಕ್ಯಾಮೆರಾಗಳಿವೆ, ಫೋಟೊ ಹೇಗೆ ತೆಗೆಯುತ್ತವೆ ಎಂಬ ಜಾಹಿರಾತುವಿನಲ್ಲಿ ಕ್ಯಾಮೆರಾ ವಿಷಯಕ್ಕೆ ಮಹತ್ವ ಸಿಕ್ಕಿರುತ್ತದೆಯೇ ಹೊರತು ಮೊಬೈಲ್‌ನ ಇತರ ಕಾರ್ಯದ ಕುರಿತು ಒಂದು ತುಣುಕು ಮಾಹಿತಿ ಇರುವುದಿಲ್ಲ.! ಹಾಗಾದರೆ, ಇತರ ತಂತ್ರಜ್ಞಾನಗಳು ನಿಮಗೆ ಮುಖ್ಯವಲ್ಲವೆ?

ಹಣ ಕಳೆದುಕೊಂಡಂತೆಯೇ ಸರಿ.!!
ಕೆಲವೊಂದು ಮೊಬೈಲ್ ಕಂಪೆನಿಗಳು ನಾವು ಹೆಚ್ಚು ಮೆಗಾಪಿಕ್ಸೆಲ್‌ನ ಕ್ಯಾಮೆರಾ ಕ್ಯಾಮೆರಾ ನೀಡುತ್ತಿದ್ದೇವೆ ಎಂದು ಹೇಳಿದರೂ ಅಹ, ಆ ಕ್ಯಾಮೆರಾಗೆ ಸಪೋರ್ಟ್ ಆಗುವಷ್ಟು ಪ್ರೊಸೆಸರ್ ಮತ್ತು ಇತರ ಹಾರ್ಡ್‌ವೇರ್‌ಗಳನ್ನು ನೀಡಿರುವುದಿಲ್ಲ.! ನೀಡಿದ್ದರೂ ಅವು ಕಡಿಮೆ ಗುಣಮಟ್ಟದವಾಗಿರುತ್ತದೆ ಎನ್ನಬಹುದು.!!

ಕ್ಯಾಮೆರಾಗೆ ಹೆಚ್ಚು ಖರ್ಚಾಗುವುದಿಲ್ಲ!!
ಇಂದಿನ ಕ್ಯಾಮೆರಾ ತಯಾರಕರು ಕಡಿಮೆ ಭಾರದ ಮಿರರ್ ಲೆಸ್ ತಂತ್ರಜ್ಞಾನದ ನೂತನ ಆವೃತ್ತಿಗಳನ್ನು ತಂದಿದ್ದಾರೆ. ಇದರಿಂದ ಕ್ಯಾಮೆರಾಗಾಗಿಯೇ ಹೆಚ್ಚು ಹಣವನ್ನು ಮೊಬೈಲ್ ಕಂಪೆನಿಗಳು ವಿನಿಯೋಗಿಸುವುದಿಲ್ಲ.!! ಆದರೆ, ಗ್ರಾಹಕರಿಂದ ಕ್ಯಾಮೆರಾ ಹೆಸರೇಳಿಕೊಂಡು ಹೆಚ್ಚು ಹಣವನ್ನು ಪಡೆದುಕೊಳ್ಳುತ್ತವೆ.!!

ಸಾಫ್ಟ್‌ವೇರ್ ತಂತ್ರವೂ ಇರುತ್ತದೆ.!!
ಸ್ಮಾರ್ಟ್‌ಫೋನ್ ಪ್ರಪಂಚ ಮತ್ತಷ್ಟು ಸ್ಮಾರ್ಟ್ ಆದಂತೆಲ್ಲ ವಿರಾಜಮಾನವಾಗಿ ಮೆರೆಯುತ್ತಿದ್ದ ವೃತ್ತಿಪರ ಕ್ಯಾಮೆರಾಗಳ ಅವಶ್ಯಕತೆಯನ್ನೇ ಕಡಿಮೆಗೊಳಿಸಿದೆ. ಸ್ಮಾರ್ಟ್‌ಫೋನ್ ಸಾಫ್ಟ್‌ವೇರ್ ಕ್ಯಾಮೆರಾಗಳ ದಿಕ್ಕನ್ನು ಬದಲಿಸಿದೆ.!! ಅತ್ಯುತ್ತಮ ಸಾಫ್ಟ್‌ವೇರ್ ಬಳಸಿಕೊಂಡು ಕಡಿಮೆ ಗುಣಮಟ್ಟದ ಕ್ಯಾಮೆರಾದಲ್ಲಿಯೂ ಉತ್ತಮ ಫೋಟೊ ಬರುವ ತಂತ್ರವನ್ನು ಸಹ ಇಂತಹ ಕಂಪೆನಿಗಳು ಉಪಯೋಗಿಸಿಕೊಳ್ಳುತ್ತವೆ.!!


Click it and Unblock the Notifications








