Home
ಟೆಕ್ ನೌಕರಿ

ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಸೇಫ್ ಆಗಿ ಇರಬೇಕಾ? ಹಾಗಿದ್ರೆ ಈಗಲೇ ಆಧಾರ್ ಬಯೋಮೆಟ್ರಿಕ್ 'Lock' ಮಾಡಿ

ಇತ್ತೀಚೆಗೆ ಬ್ಯಾಂಕ್ ಖಾತೆ (Bank Account)ಗೆ ಕನ್ನ ಹಾಕುತ್ತಿರುವವರ ಸಂಖ್ಯೆ ಜಾಸ್ತಿಯಾಗಿದೆ. ಒಟಿಪಿ (OTP) ಮಾತ್ರ ಹಣ ವಂಚನೆ (Money Fraud) ಮಾಡಬಹುದು ಎಂದು ನೀವು ತಿಳಿದಿದ್ದರೆ, ನಿಮ್ಮಷ್ಟು ಮೂರ್ಖರು ಯಾರೂ ಇಲ್ಲ. ಜಸ್ಟ್ ನಿಮ್ಮ ಆಧಾರ್ ನಂಬರ್ (Aadhaar Number) ಸಿಕ್ಕರೆ ಸಾಕು, ಹ್ಯಾಕರ್‌ಗಳು ನಿಮ್ಮ ಖಾತೆಯಲ್ಲಿರುವ ಹಣವನ್ನೆಲ್ಲಾ ಕ್ಷಣ ಮಾತ್ರದಲ್ಲಿ ದೋಚುತ್ತಾರೆ.

ಕಲಿಗಾಲ ಕೆಟ್ಟೋಯ್ತು ಅಂತ ಸುಮ್ಮನೆ ಹೇಳಿಲ್ಲ. ನಾವು ಎಷ್ಟೇ ಜಾಗ್ರತೆವಹಿಸಿದ್ದರೂ ದೋಖಾ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಸೈಬರ್ ಪೊಲೀಸರಿಗೂ ಹ್ಯಾಕರ್‌ಗಳು (Hackers) ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಬಳಸಿ ಬ್ಯಾಂಕ್ ಖಾತೆಗೆ ಕನ್ನ ಹಾಕುವವರ ಸಂಖ್ಯೆಯೂ ಹೆಚ್ಚಾಗಿದೆ. ಇದೀಗ ಆಧಾರ್ ಸಂಖ್ಯೆ ಪಡೆದು ಹಣ ಲೂಟಿ ಮಾಡುವ ದುಸ್ಸಾಹಸಕ್ಕೂ ಕೈಹಾಕಿದ್ದಾರೆ ಖತರ್ನಾಕ್ ಖದೀಮರು.

ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಸೇಫ್ ಆಗಿರಲು ಹೀಗೆ ಮಾಡಿ

ಹೌದು, ಆಧಾರ್ ಸಂಖ್ಯೆ ಪಡೆದು ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಲೂಟಿ ಮಾಡಿರುವ ಘಟನೆಗಳು ಬೆಳಕಿಗೆ ಬಂದಿವೆ. ಅಷ್ಟರಮಟ್ಟಿಗೆ ಡಿಜಿಟಲ್ ಹ್ಯಾಕರ್‌ಗಳು ಬುದ್ಧಿವಂತರಾಗಿದ್ದಾರೆ. ವಂಚಕರು (ಹ್ಯಾಕರ್‌ಗಳು) ನಿಮ್ಮ ಆಧಾರ್ ಸಂಖ್ಯೆ ಬಳಸಿ ಬ್ಯಾಂಕ್‌ ಖಾತೆಗೆ ಕನ್ನ ಹಾಕಬಾರದು ಹಾಗೂ ಯಾವುದೇ ಮಾಹಿತಿ ಕದಿಯಬಾರದು ಅಂದ್ರೆ ನಿಮಗಿರುವ ಒಂದೇ ಮಾರ್ಗ ಅದೇ 'ಬಯೋಮೆಟ್ರಿಕ್ ಲಾಕ್‌' ಮಾಡುವುದು.

ಆಧಾರ್ ಬಯೋಮೆಟ್ರಿಕ್ ಲಾಕ್‌ ಮಾಡಿದ್ರೆ ವಂಚನೆಗೊಳಗಾಗುವುದು ತಪ್ಪುತ್ತದೆ. ನೀವು ಕಷ್ಟಪಟ್ಟು ದುಡಿದ ಹಣಕ್ಕೆ ಭದ್ರತೆಯೂ ಸಿಗುತ್ತದೆ. ಹಾಗಿದ್ರೆ, ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡುವುದು ಹೇಗೆ? ಇದರಿಂದ ಏನು ಅನುಕೂಲ? ಅನಾನುಕೂಲಗಳು ಇವೆಯೇ? ಎಂಬ ಬಗ್ಗೆ ತಿಳಿಯಲು ಮುಂದೆ ಓದಿ.

ಆಧಾರ್ ಬಯೋಮೆಟ್ರಿಕ್ ಲಾಕ್‌ ಮಾಡಲು ಈ ವಿಧಾನ ಬಳಸಿ

  • ಫಸ್ಟ್ ಮೊಬೈಲ್ (ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌) ನಲ್ಲಿ ಗೂಗಲ್‌ ಅಪ್ಲಿಕೇಶನ್‌ ಓಪನ್ ಮಾಡಿ.
  • My Aadhar ಎಂದು ಸರ್ಚ್‌ ಬಾರ್‌ನಲ್ಲಿ ಟೈಪ್ ಮಾಡಿ ಒಕೆ ಕೊಡಿ.
  • https://myaadhaar.uidai.gov.in/login ಎಂಬ ಲಿಂಕ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
  • ಆಗ ನಿಮಗೆ ಮೈ ಆಧಾರ್ ವೆಬ್‌ಸೈಟ್‌ ಪೇಜ್ ಓಪನ್ ಆಗುತ್ತದೆ.
  • ಅಲ್ಲಿ ಕಾಣುವ Login ಮೇಲೆ ಕ್ಲಿಕ್ ಮಾಡಿದ್ರೆ, ಮತ್ತೊಂದು ಪುಟ ಓಪನ್ ಆಗುತ್ತದೆ.
  • ಆಗ Enter Aadhaar Number ಎಂಬಲ್ಲಿ ಆಧಾರ್ ಸಂಖ್ಯೆ ಟೈಪ್ ಮಾಡಿ.
  • ಪಕ್ಕದ ಬಾಕ್ಸ್‌ನಲ್ಲಿರುವ (Enter Captcha) ಅಕ್ಷರಗಳನ್ನು ತುಂಬಿರಿ.
  • ಬಳಿಕ Login With OTP ಎಂಬ ಬಳಿ ಕ್ಲಿಕ್ಕಿಸಿ.
  • ಆಗ ನಿಮ್ಮ ನಂಬರ್‌ಗೆ ಒಟಿಪಿ ಬರುತ್ತದೆ, ಅದನ್ನು ಅಲ್ಲಿ ತುಂಬಿದ್ರೆ ಮತ್ತೊಂದು ಪೇಜ್‌ ಓಪನ್ ಆಗುತ್ತದೆ.
  • ಆಗ ನೀವು Update My Aadhar sectionಗೆ ಭೇಟಿ ನೀಡಿ.
  • ಅಲ್ಲಿ Lock / Unlock Biometrics ಮೇಲೆ ಕ್ಲಿಕ್ ಮಾಡಬೇಕು.
  • ಪುನಃ ನಿಮ್ಮ ಆಧಾರ್ ನಂಬರ್ ಮತ್ತು ಓಟಿಪಿ ಕೇಳುತ್ತದೆ.
  • ಮೇಲಿನಂತೆಯೇ ತುಂಬಿ, Lock Biometrics ಮೇಲೆ ಕ್ಲಿಕ್ಕಿಸಿ.
  • ಆಗ ನಿಮ್ಮ ಆಧಾರ್ ಬಯೋಮೆಟ್ರಿಕ್ ಮಾಹಿತಿಗಳು ಲಾಕ್‌ ಆಗುತ್ತವೆ.

ಈ ರೀತಿ ನೀವು ಬಯೋಮೆಟ್ರಿಕ್ ಲಾಕ್‌ ಮಾಡಿದರೆ, ಹ್ಯಾಕರ್‌ಗಳು ನಿಮ್ಮ ಯಾವುದೇ ಮಾಹಿತಿಗಳನ್ನು ಕದಿಯಲು ಸಾಧ್ಯವಿಲ್ಲ ಮತ್ತು ಬ್ಯಾಂಕ್ ಖಾತೆಯ ಹಣ ಸುರಕ್ಷಿತವಾಗಿರುತ್ತದೆ.

ಬಯೋಮೆಟ್ರಿಕ್‌ ಲಾಕ್‌ ಮಾಡಿದ್ರೆ ಏನು ಅನಾನುಕೂಲ?

ಸುರಕ್ಷತೆಯ ದೃಷ್ಟಿಯಿಂದ ಬಯೋಮೆಟ್ರಿಕ್ ಲಾಕ್ ಮಾಡುವುದು ಉತ್ತಮ. ಆದರೆ, ಆಧಾರ್ ಬಯೋಮೆಟ್ರಿಕ್ ಲಾಕ್‌ ಮಾಡಿದ ಬಳಿಕ ಏನಾಗುತ್ತೆ? ಎಂಬ ಗೊಂದಲ ನಿಮ್ಮಲ್ಲಿ ಮೂಡುವುದ ಸಹಜ. ಅದರ ಬಗ್ಗೆಯೂ ನಾವು ತಿಳಿಸುತ್ತೇನೆ. ಮುಂದೆ ಓದಿ.

ಒಮ್ಮೆ ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡಿದ್ರೆ, ಮುಂದೆ ಯಾವುದೇ ಬಯೋಮೆಟ್ರಿಕ್‌ ಪ್ರಮಾಣೀಕರಣ ಮಾಡಲು ಸಾಧ್ಯವಿಲ್ಲ. ನೀವು ರೇಷನ್‌ ತರಲು ನ್ಯಾಯಬೆಲೆ ಅಂಗಡಿಗೆ ಹೋಗುತ್ತೀರಿ. ಆಗ ಬಯೋಮೆಟ್ರಿಕ್ ಲಾಕ್‌ ಆದರೆ ರೇಷನ್‌ ಪಡೆಯುವ ವೇಳೆ ಬಯೋಮೆಟ್ರಿಕ್ ಪ್ರಮಾಣೀಕರಣ ಆಗದಿರಬಹುದು. ಆಗ, ನೀವು ಚಿಂತಿಸಬೇಕಿಲ್ಲ. ಪುನಃ ಆಧಾರ್ ಬಯೋಮೆಟ್ರಿಕ್ ಅನ್ನು Unlock (ಅನ್‌ಲಾಕ್‌) ಮಾಡಿದರೆ ಸಾಕು.

ಆಧಾರ್ ಬಯೋಮೆಟ್ರಿಕ್ ಲಾಕ್‌ ಬೇಡ ಎಂದರೆ ಮೇಲೆ ತಿಳಿಸಿದ ವಿಧಾನವನ್ನು ಬಳಸಬೇಕು. ಅಲ್ಲಿ, Unlock Biometric (Disable the Locking system) ಅನ್ನು ಆಯ್ಕೆ ಮಾಡಬೇಕು. ಆಗ ನಿಮ್ಮ ಆಧಾರ್ ಬಯೋಮೆಟ್ರಿಕ್ ಅನ್‌ಲಾಕ್‌ ಆಗುತ್ತದೆ.

Best Mobiles in India

English summary
How to lock Aadhaar biometric? What's the advantage of this? Are there disadvantages? Read on to know about.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+