ನಿಮ್ಮ ಮಕ್ಕಳ ಮೇಲೆ ಮೊಬೈಲ್ ಪರಿಣಾಮ ಹೇಗಿದೆ ಗೊತ್ತಾ?..ಎಚ್ಚರವಿರಲಿ!!

Written By:

ನಾವು ಮೊಬೈಲ್‌ನಿಂದ ಎಷ್ಟು ದೂರವಿದ್ದರೂ ಸಹ ಅದು ನಮ್ಮನ್ನು ಬಿಡುತ್ತಿಲ್ಲ. ಏಕೆಂದರೆ ಮೊಬೈಲ್, ಸ್ಮಾರ್ಟ್‌ಫೋನ್‌ಗಳನ್ನು ಬಳಸದೆಯೇ ಒಂದು ನಿಮಿಷ ಕೂಡ ಇರಲಾರದ ಪರಿಸ್ಥಿತಿ ಇಂದಿನ ಆನ್‌ಲೈನ್ ಯುಗದಲ್ಲಿ ಸಾಮಾನ್ಯವಾಗಿದೆ.!! ಹಾಗಾಗಿ, ಇದರ ಮುಂದೆ ಮೊಬೈಲ್ ದುಷ್ಪರಿಣಾಮಗಳ ಬಗ್ಗೆ ಹೆಚ್ಚು ಯಾರು ತಲೆಕೆಡಿಸಿಕೊಂಡಿಲ್ಲ ಎನ್ನಬಹುದು.!!

ನಿಮಗೆ ಗೊತ್ತಾ..ಹೆಚ್ಚು ಮೊಬೈಲ್ ಬಳಕೆಯೇ ಮಕ್ಕಳ ಆರೋಗ್ಯದ ಏರುಪೇರಿಗೆ ಕಾರಣವಾಗುತ್ತಿದೆ ಎಂದು? ಹೌದು, ಹೆಚ್ಚು ಮೊಬೈಲ್ ಬಳಕೆಯಿಂದಲೇ ಮೊಬೈಲ್ ಬಳಕೆ ಮಾಡುವ ಮಕ್ಕಳು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ವರದಿಯೊಂದು ಹೊರಬಿದ್ದಿದೆ. ಮೊಬೈಲ್ ದೇಹದ ಆರೋಗ್ಯಕ್ಕೆ ಎಫೆಕ್ಟ್ ಆದರೆ ಸಾಮಾಜಿಕ ಜಾಲತಾಣಗಳು ಅವರ ಮನಸ್ಸಿಗೂ ತೊಂದರೆಯಾಗಿದೆ.!!

ಹಾಗಾದರೆ, ಮಕ್ಕಳು ಮೊಬೈಲ್ ಬಳಕೆ ಏಕೆ ಕಡಿಮೆಯಾಗಬೇಕು? ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಏನೆಲ್ಲಾ ತೊಂದರೆಗಳು ಕಾಣಿಸುತ್ತವೆ.? ಇದಕ್ಕೆ ಪರಿಹಾರವೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್‌ನಿಂದ ನಿದ್ರಾ ವ್ಯವಸ್ಥೆಗೆ ತೊಂದರೆ.!!

ಮೊಬೈಲ್‌ನಿಂದ ನಿದ್ರಾ ವ್ಯವಸ್ಥೆಗೆ ತೊಂದರೆ.!!

ಮಾನವನ ದೇಹಕ್ಕೆ ಅಗತ್ಯ ಪ್ರಮಾಣದಷ್ಟು ನಿದ್ರೆ ಬೇಕು. ಮಕ್ಕಳಿಗೆ ಇನ್ನು ಹೆಚ್ಚಿನ ನಿದ್ರೆ ಇದ್ದರೆ ಉತ್ತಮ. ಆದರೆ, ಹೆಚ್ಚು ಮೊಬೈಲ್ ಬಳಕೆ ಮಾಡುವ ಮಕ್ಕಳನಿದ್ರಾ ವ್ಯವಸ್ಥೆಯಲ್ಲಿ ಶೇ.50 ಪರ್ಸೆಂಟ್‌ಗಿಂತಲೂ ಹೆಚ್ಚು ಬದಲಾವಣೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.! 10,000 ಕ್ಕೂ ಹೆಚ್ಚು ಜನರ ಮೇಲೆ ಅಧ್ಯಯನ ನಡೆಸಿ ಈ ಸಂಶೋಧನೆ ನಡೆಸಲಾಗಿದೆ.!!

ಮಕ್ಕಳಲ್ಲಿ ನರಗಳ ಬೆಳವಣಿಗೆಯಲ್ಲಿ ತೊಂದರೆ.!!

ಮಕ್ಕಳಲ್ಲಿ ನರಗಳ ಬೆಳವಣಿಗೆಯಲ್ಲಿ ತೊಂದರೆ.!!

ಮಕ್ಕಳ ನರಮಂಡಲದ ರಚನೆ ಇನ್ನೂ ಬೆಳವಣಿಗೆ ಹಂತದಲ್ಲಿರುವಾಗ ಮೊಬೈಲ್ ಬಳಕೆ ಮಾಡಿದರೆ ನರಗಳು ಶಕ್ತಿಹೀನವಾಗುತ್ತವೆ. ಇದರಿಂದಾಗಿ ಮುಂದೆ ಸ್ಮರಣ ಶಕ್ತಿ ಮತ್ತು ದೃಷ್ಟಿ ಮೇಲೆ ಸಮಸ್ಯೆಗಳು ತಲೆದೂರಬಹುದು ಎಂದು ಸಂಶೋಧನೆ ತಿಳಿಸಿದೆ.!!

ಮಾನಸಿಕ ಒತ್ತಡ.!!

ಮಾನಸಿಕ ಒತ್ತಡ.!!

ಮಕ್ಕಳು ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದಷ್ಟು ಒಳ್ಳೆಯದು ಎನ್ನುತ್ತದೆ ಈ ವರದಿ.! ಸಾಮಾಜಿಕ ಮಾಧ್ಯಮಗಳಿಂದ ಹರಡುವ ಸುದ್ದಿಗಳು, ಇತರ ಜೀವನದ ಫ್ಯಾಶನ್, ಜಾಹಿರಾತುಗಳು ಮಕ್ಕಳ ಮನಸ್ಸಿನ ಮೇಲೆ ಒತ್ತಡ ತರುತ್ತವೆ ಎಂದು ಎಲ್ಲಾ ವರದಿಗಳು ಹೇಳುತ್ತವೆ.!! ಹಾಗಾಗಿ, ಈ ಬಗ್ಗೆ ಪೋಷಕರು ಎಚ್ಚರಿಕೆಯಿಂದ ಇದ್ದರೆ ಒಳಿತು.!!

ಪ್ರೀತಿಯೇ ಔಷದ.!!

ಪ್ರೀತಿಯೇ ಔಷದ.!!

ಮಕ್ಕಳ ಮೇಲೆ ಮೊಬೈಲ್ ಹಾಗೂ ಸಾಮಾಜಿಕ ಮಾಧ್ಯಮಗಳು ಬೀರುತ್ತಿರುವ ಕೆಟ್ಟ ಪ್ರಬಾವವನ್ನು ತಡೆಯಲು ಪ್ರೀತಿಗಿಂತ ಬೇರೊಂದು ಲಸಿಕೆಇಲ್ಲ ಎಂದು ಎಲ್ಲಾ ವರದಿಗಳು ಹೇಳುತ್ತವೆ. ಮಕ್ಕಳಿಗೆ ಪ್ರೀತಿಯ ಜೊತೆಗೆ ವಾಸ್ತವ ಪ್ರಪಂಚದ ಬಗ್ಗೆ ಅರಿವು ಮೂಡಿಸುವ ಕಾರ್ಯ ಪೋಷಕರಿಂದ ಆಗಬೇಕಿದೆ.!!

ಓದಿರಿ:ಜಿಯೋ 4G ಬೇಸಿಕ್ ಫೋನ್ ಫೀಚರ್ಸ್ ಬಿಡುಗಡೆ! ಹೇಗಿದೆ ಫೋನ್?..ಎಸ್‌ಕ್ಲೂಸಿವ್ ವಿಡಿಯೋ ನೋಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Mobile phones are a necessity for most children and young people,to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot