ಆನ್‌ಲೈನಿನಲ್ಲಿ ನಿಮ್ಮ ಆಧಾರ್ ಅಪ್‌ಡೇಟ್ ಹಿಸ್ಟರಿ ಡೌನ್‌ಲೋಡ್ ಮಾಡುವುದು ಹೇಗೆ?

ಭಾರತೀಯ ಗುರುತು ಪ್ರಾಧಿಕಾರ (UIDAI) ಇತ್ತೀಚೆಗಷ್ಟೇ ಸ್ವಯಂ ಪ್ರಾಮಾಣಿಕರಿಸುವ ಹೊಸ ವೈಶಿಷ್ಟ್ಯವೊಂದನ್ನು ಸೇರಿಸಿತ್ತು. ಈಗ ನಿಮ್ಮ ಆಧಾರ್ ಅಪ್ ಡೇಟ್ ಹಿಸ್ಟರಿಯನ್ನು ನೀವೇ ಸ್ವತಃ ಡೌನ್ ಲೋಡ್ ಮಾಡಿಕೊಳ್ಳಬಹುದಾದ ಆಯ್ಕೆಯೊಂದನ್ನು ಆಧಾರ್ ಪ್ರಾಧಿಕಾರ ನೀಡುತ್ತಿದೆ. ಈ ವಿಶೇಷತೆಯು ಅನೇಕರಿಗೆ ಸಹಕಾರಿಯಾಗಲಿದ್ದು ಪ್ರಮುಖವಾಗಿ ಯಾರು ಪಾಸ್ ಪೋರ್ಟ್,ವೀಸಾಗೆ ಅರ್ಜಿ ಸಲ್ಲಿಸಿರುತ್ತಾರೇ ಅಂತವರು ಕೆಲವು ವರ್ಷಗಳ ಮನೆಯ ವಿಳಾಸವನ್ನು ಕನ್ಫರ್ಟ್ ಮಾಡಬೇಕಿರುವ ಸಂದರ್ಬದಲ್ಲಿ ನೆರವಾಗುತ್ತೆ.

ಆಧಾರ್ ಪ್ರಾಧಿಕಾರದ ಸಿಇಓ ಆಗಿರುವ ಅಜಯ್ ಭೂಷಣ್ ಪಾಂಡೇ ನೀಡಿರುವ ಮಾಹಿತಿಯಂತೆ ಈಗಾಗಲೇ ಆಧಾರ್ ಅಪ್ ಡೇಟ್ ಹಿಸ್ಟರಿ ವೈಶಿಷ್ಟ್ಯತೆಯ ಬೇಟಾ ಫೇಸ್ ನ್ನು ನೀಡಲಾಗಿದೆ., ಇದನ್ನು ಆಧಾರ್ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಆ ಮೂಲಕ ಬಳಕೆದಾರರು ವಿಳಾಸ ಮತ್ತು ಇತರೆ ಮಾಹಿತಿಯ ಡಿಕ್ಲರೇಷನ್ ಬಳಸಬಹುದು. ಆಧಾರ್ ಅಪ್ ಡೇಟ್ ಹಿಸ್ಟರಿಯನ್ನು ನೀಡುವುದರಿಂದಾಗಿ , ವ್ಯಕ್ತಿಯ ಬಗ್ಗೆ ಹೆಚ್ಚು ನಂಬಿಕೆ ಬರುತ್ತೆ ಮತ್ತು ಕೆಲಸಕ್ಕೆ ಅರ್ಜಿ ಸಲ್ಲಿಸುವಾಗ, ಶಾಲೆಯ ಅಡ್ಮಿಷನ್ ಮಾಡುವಾಗ ಇನ್ನು ಹಲವಾರು ಕೆಲಸಗಳಿಗಾಗಿ ಇದನ್ನು ಬಳಸಲಬಹುದು.
ಕಾರಣವೇನೆಂದೆರೆ ಹಲವಾರು ಸಂದರ್ಬದಲ್ಲಿ ತಮ್ಮ ಹಳೆಯ ಎರಡು ಮತ್ತು ಮೂರು ವರ್ಷದ ಹಿಂದಿನ ಅಡ್ರೆಸ್ ಗಳನ್ನು ಕೇಳಲಾಗುತ್ತೆ.
ಆಧಾರ್ ಪ್ರಾಧಿಕಾರದ ಮೂಲಗಳು ತಿಳಿಸುವಂತೆ, ಹಿಸ್ಟರಿ ಆಫ್ ಆಧಾರ್ ಅಪ್ ಡೇಟ್ ಆಯ್ಕೆಯಲ್ಲಿ ದಿನಾಂಕಗಳ ಆಧಾರದಲ್ಲಿ ಮಾಹಿತಿಗಳಿರಲಿದ್ದು, ವಿಳಾಸದಲ್ಲಿ ಅಪ್ ಡೇಟ್ ಗಳಾಗಿದ್ದಲ್ಲಿ ಮತ್ತು ಹೆಸರು, ಹುಟ್ಟಿದ ದಿನಾಂಕ, ಅಡ್ರೆಸ್, ಲಿಂಗ, ಮೊಬೈಲ್ ನಂಬರ್ ಗಳನ್ನು ರಿಮೂವ್ ಮಾಡಿರುವುದು ಅಥವಾ ಈ-ಮೇಲ್ ಐಡಿ ಇತ್ಯಾದಿಗಳು ಯಾವುದೇ ಇದ್ದರೂ ಬರಲಿದೆಯಂತೆ.,
ಆಧಾರ್ ಅಪ್ ಡೇಟ್ ಹಿಸ್ಟರಿಯನ್ನು ಡೌನ್ ಲೋಡ್ ಮಾಡುವುದು ಹೇಗೆ?
ನೀವೂ ಕೂಡ ಈ ಆಧಾರ್ ಅಪ್ ಡೇಟ್ ಹಿಸ್ಟರಿ ಆಯ್ಕೆಯನ್ನು ಬಳಸಬೇಕು ಎಂದಾದರೆ ಮೊದಲಿಗೆ UIDAI ವೆಬ್ ಸೈಟ್ www.uidai.gov.in ಗೆ ತೆರಳಿ. ಅಲ್ಲಿ ಆಧಾರ್ ಅಪ್ ಡೇಟ್ ಹಿಸ್ಟರಿಯನ್ನು ಕ್ಲಿಕ್ ಮಾಡಿ, ಅದು ಒಂದು ಪೇಜನ್ನು ತೆರೆಯುತ್ತೆ. ನೀವು ಅಲ್ಲಿ ಆಧಾರ್ ನಂಬರ್, ವರ್ಚುವಲ್ ಐಡಿ(VID) ಮತ್ತು ಸೆಕ್ಯುರಿಟಿ ಕ್ಯಾಪ್ಚಾವನ್ನು ತುಂಬಬೇಕು.ಆಗ ನೀವೊಂದು ಓಟಿಪಿಯನ್ನು ಪಡೆಯುತ್ತೀರಿ, ಅದು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ಗೆ ಬರುತ್ತೆ., ನೀವು ಓಟಿಪಿಯನ್ನು ಬರೆದ ಕೂಡಲೇ, ನೀವು ನಿಮ್ಮ ಆಧಾರ್ ಅಪ್ ಡೇಟ್ ಹಿಸ್ಟರಿಯನ್ನು ಪಡೆಯಬಹುದು. ನಿಮಗೆ ಅಗತ್ಯವಿದ್ದರೆ ಆ ಅಪ್ ಡೇಟ್ ಹಿಸ್ಟರಿಯನ್ನು ಪ್ರಿಂಟ್ ಕೂಡ ಮಾಡಬಹುದು.
ಈಗಾಗಲೇ ಆಧಾರ್ ಪ್ರಾಧಿಕಾರವು ಆಧಾರ್ ಕಾರ್ಡ್ ಹೋಲ್ಡರ್ ಬಳಿ ಡಾಟಾಬೇಸ್ ನಲ್ಲಿ 12 ಡಿಜಿಟ್ ನ uiD ನಂಬರ್ ನಲ್ಲಿ ಇತರೆ ಯಾರಾದರೂ ಉಪಸ್ಥಿತರಿದ್ದಾರೆ ಎಂಬುದನ್ನು ಪರೀಕ್ಷಿಸುವಂತೆ ಹೇಳಿದೆ. ಈ ಪ್ರಕ್ರಿಯೆಯೂ ಕೂಡ ಕೆಲವು ಜನಸಂಖ್ಯಾ ಡಾಟಾಗಳನ್ನು ವ್ಯಕ್ತಿಯ ಬಗ್ಗೆ ಪಡೆಯಲಿದ್ದು, ಆ ಮಾಹಿತಿಗಳನ್ನು ಪರಿಶೀಲನೆ ಮಾಡಬಹುದಾಗಿದೆ.


Click it and Unblock the Notifications








