Home
ಟೆಕ್ ನೌಕರಿ

ನಿಮ್ಮ ಡ್ರೈವಿಂಗ್‌ ಲೈಸೆನ್ಸ್‌ ಅಡ್ರೆಸ್‌ ಚೇಂಜ್‌ ಮಾಡೋದು ಹೇಗೆ? ಇಲ್ಲಿದೆ ಸುಲಭ ಮಾರ್ಗ!

ನಿಮ್ಮ ಡ್ರೈವಿಂಗ್‌ ಲೈಸೆನ್ಸ್‌ನಲ್ಲಿರುವ ಅಡ್ರೆಸ್‌ ಚೇಂಜ್‌ ಮಾಡಿಸಬೇಕು. ಇಷ್ಟು ದಿನ ನಾನು ಬೆಂಗಳೂರಿನಲ್ಲಿದ್ದೆ ಇದೀಗ ನಮ್ಮ ಊರಿಗೆ ವಾಪಾಸ್ಸು ಬಂದಿದ್ದೇನೆ. ಆದರೆ ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ನಮ್ಮ ಮನೆ ವಿಳಾಸ ಬದಲಾಯಿಸುವುದು ಹೇಗೆ ಅನ್ನೋ ಸಾಮಾನ್ಯ ಪ್ರಶ್ನೆ ಎಲ್ಲರಲ್ಲೂ ಇದ್ದೆ ಇರಲಿದೆ. ಯಾಕಂದ್ರೆ ಡ್ರೈವಿಂಗ್‌ ಲೈಸೆನ್ಸ್‌ ಕೂಡ ಅತಿ ಅಗತ್ಯವಾದ ದಾಖಲೆಗಳಲ್ಲಿ ಒಂದಾಗಿದೆ.

ಹೌದು, ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸುವುದು ಕಷ್ಟವೇನಲ್ಲ. ನೀವು ಎಲ್ಲಿದ್ದೀರೋ ಅಲ್ಲಿಯ ವಿಳಾಸಕ್ಕೆ ನಿಮ್ಮ ಡ್ರೈವಿಂಗ್‌ ಲೈಸೆನ್ಸ್‌ ಅಡ್ರೆಸ್‌ ಅನ್ನು ಅಪ್ಡೇಟ್‌ ಮಾಡಬಹುದು. ಆದರೆ ಇದಕ್ಕಾಗಿ ನೀವು ಕೆಲವು ಅಂಶಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ನಿಮ್ಮ ಅಡ್ರೆಸ್‌ ಅಪ್ಡೇಟ್‌ ಮಾಡುವುದಕ್ಕೆ ಏನೆಲ್ಲಾ ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡ್ರೈವಿಂಗ್‌ ಲೈಸೆನ್ಸ್‌ ಅಡ್ರೆಸ್‌ ಚೇಂಜ್‌ ಮಾಡೋದು ಹೇಗೆ? ಇಲ್ಲಿದೆ ಸುಲಭ ಮಾರ್ಗ!

ಡ್ರೈವಿಂಗ್‌ ಲೈಸೆನ್ಸ್‌ ಅಪ್ಡೇಟ್‌ ಮಾಡಿಸುವ ಮುನ್ನ ನಿಮ್ಮ ಬಳಿ ಕೆಲವು ದಾಖಲೆಗಳು ಅಗತ್ಯವಾಗಿ ಇರಬೇಕಾಗುತ್ತದೆ. ಅವುಗಳೆಂದರೆ
* ಅಪ್ಲಿಕೇಶನ್‌ ಫಾರ್ಮ್ 33
* ನೋಂದಣಿ ಪ್ರಮಾಣಪತ್ರ (ವಾಹನದ RC)
* ಅಡ್ರೆಸ್‌ ಬದಲಾಗಿರುವುದಕ್ಕೆ ಪೂರಕ ದಾಖಲೆಗಳು
* ಇನ್ಯುರೆನ್ಸ್‌ ಸೆರ್ಟಿಫಿಕೆಟ್‌
* ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ
* ಸ್ಮಾರ್ಟ್ ಕಾರ್ಡ್ ಫೀ
* ಚಾಸಿಸ್ ಮತ್ತು ಎಂಜಿನ್ ಪೆನ್ಸಿಲ್ ಪ್ರಿಂಟ್
* ಫೈನಾನ್ಷಿಯರ್‌ನಿಂದ ಯಾವುದೇ ಆಕ್ಷೇಪಣೆ ಇಲ್ಲ ಎನ್ನುವ ಪ್ರಮಾಣಪತ್ರ

ಈ ಎಲ್ಲಾ ದಾಖಲೆಗಳನ್ನು ಹೊಂದಿರುವ ಚಾಲಕರು ತಮ್ಮ ಡ್ರೈವಿಂಗ್‌ ಲೈಸೆನ್ಸ್‌ ಅನ್ನು ಬದಲಾಯಿಸುವುದಕ್ಕೆ ಈ ಕೆಳಕಂಡ ವಿವರಗಳನ್ನು ಅನುಸರಿಸಬಹುದಾಗಿದೆ.

ಡ್ರೈವಿಂಗ್‌ ಲೈಸೆನ್ಸ್‌ ಅಡ್ರೆಸ್‌ ಚೇಂಜ್‌ ಮಾಡೋದು ಹೇಗೆ? ಇಲ್ಲಿದೆ ಸುಲಭ ಮಾರ್ಗ!

ಡ್ರೈವಿಂಗ್‌ ಲೈಸೆನ್ಸ್‌ನಲ್ಲಿರುವ ಅಡ್ರೆಸ್‌ ಅನ್ನು ಬದಲಾಯಿಸುವುದು ಹೇಗೆ?
* ಆನ್‌ಲೈನ್‌ ಮೂಲಕ ಡ್ರೈವಿಂಗ್‌ ಲೈಸೆನ್ಸ್‌ ಅಡ್ರೆಸ್‌ ಚೇಂಜ್‌ ಮಾಡಿಸಲು https://sarathi.parivahan.gov.in ವೆಬ್‌ಸೈಟ್‌ಗೆ ಬೇಟಿ ನೀಡಿ
* ಇದೀಗ ಮುಖಪುಟದಲ್ಲಿ ಕಾಣಿಸುವ ಡ್ರಾಪ್‌ಡೌನ್ ಮೆನುವಿನಲ್ಲಿ ನಿಮ್ಮ ಕರೆಂಟ್‌ ಸ್ಟೆಟಸ್‌ ಆಯ್ಕೆ ಕ್ಲಿಕ್‌ ಮಾಡಿ.
* ಇಲ್ಲಿ ನಿಮಗೆ ವಿವಿಧ ಸೇವೆಗಳ ಪೇಜ್‌ ಕಾಣಿಸಲಿದೆ
* ಇದರಲ್ಲಿ ಅಡ್ರೆಸ್‌ ಚೇಂಜ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
* ನಂತರ ಅಡ್ರೆಸ್‌ ಚೇಂಜ್‌ ಮಾಡಲು ಅರ್ಜಿ ಸಲ್ಲಿಸುವ ಪೇಜ್‌ ತೆರೆಯಲಿದೆ.
* ಇಲ್ಲಿ ನೀವು ನಿಮ್ಮ DL ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ
* ನಂತರ ಗೆಟ್ ಡಿಎಲ್ ಡಿಟೇಲ್ಸ್ ಬಟನ್ ಕ್ಲಿಕ್ ಮಾಡಿ
* ಇದಾದ ಮೇಲೆ ಮುಂದಿನ ಪುಟದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ತೋರಿಸಲಾಗುತ್ತದೆ.
* ನಿಮ್ಮ ಮಾಹಿತಿ ಸರಿಯಾಗಿದ್ದರೆ ಯೆಸ್‌ ಆಯ್ಕೆಯನ್ನು ಟ್ಯಾಪ್‌ ಮಾಡುವ ಮೂಲಕ ವಿವರಗಳನ್ನು ದೃಢೀಕರಿಸಿ
* ಇದಾದ ಮೇಲೆ ನಿಮ್ಮ ಡ್ರೈವಿಂಗ್ ಲೈಸೆನ್ಸ್‌ನ ವರ್ಗವನ್ನು ಆಯ್ಕೆಮಾಡಿ
* ಇದರಲ್ಲಿ ಸಂಬಂಧಪಟ್ಟ RTO ಅನ್ನು ಆಟೋ-ಪಿಕ್ ಮಾಡಲು ನಿಮ್ಮ ಪ್ರಸ್ತುತ ವಿಳಾಸದ ಪಿನ್‌ಕೋಡ್ ಅನ್ನು ನಮೂದಿಸಿ
* ಇನ್ನಷ್ಟು ಮುಂದುವರೆಯಲು ಕಂಟಿನ್ಯೂ ಕ್ಲಿಕ್ ಮಾಡಿ
* ಈಗ ನಿಮ್ಮ ಮಾಹಿತಿಯನ್ನು ಎಡಿಟ್‌ ಮಾಡುವ ಪೇಜ್‌ ತೆರೆಯಲಿದೆ.
* ಇದರಲ್ಲಿ ನಿಮ್ಮ ಹೊಸ ವಿಳಾಸವನ್ನು ನಮೂದಿಸಿ, ನಂತರ ಬರುವ ಕ್ಯಾಪ್ಚಾವನ್ನು ನಮೂದಿಸಿ
* ಇದೀಗ ನಿಮ್ಮ ಅಪ್ಲಿಕೇಶನ್ ಸಂಖ್ಯೆಯ ಪ್ರಿಂಟ್ ತೆಗೆದುಕೊಳ್ಳಿ
* ಅಡ್ರೆಸ್‌ ಚೇಂಜ್‌ ಮಾಡಲು ಬೇಕಾದ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ನಂತರ ಶುಲ್ಕವನ್ನು ಪಾವತಿಸಿ
* ಇದೀಗ ನೀವು ಅರ್ಜಿ ಸಲ್ಲಿಸಿರುವುದಕ್ಕೆ ರಶೀದಿಯನ್ನು ಪ್ರಿಂಟ್‌ ತೆಗೆದುಕೊಳ್ಳಬಹುದು.

Best Mobiles in India

English summary
Driving licence: how to change address in driving licence? Complete Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+