ಆನ್‌ಲೈನ್ ಮೂಲಕ ಬ್ಯಾಂಕ್ ವ್ಯವಹಾರ ನಡೆಸುವವರು ತಿಳಿದಿರಲೇಬೇಕಾದ 8 ವಿಷಯಗಳು!!
ಇಂಟರ್‌ನೆಟ್ ಇಲ್ಲವೆಂದರೆ ಬ್ಯಾಂಕಿಂಗ್ ಅಸಾಧ್ಯ ಎನ್ನುವಷ್ಟು ಇಂದು ಬ್ಯಾಂಕಿಂಗ್ ಕ್ಷೇತ್ರ ಸರಳವಾಗಿದೆ. ಹಾಗಾಗಿಯೇ, ಎಲ್ಲರೂ ಸ್ಮಾರ್ಟ್‌ಪೋನ್ ಮೂಲಕವೇ ಇಂದು ಬ್ಯಾಂಕ್ ವ್ಯವಹಾರ ನಡೆಸುತ್ತಿದ್ದಾರೆ.
ತಂತ್ರಜ್ಞಾನ ಪ್ರಪಂಚ ಅಭಿವೃದ್ದಿಯಾದಂತೆ ಇಂಟರ್‌ನೆಟ್ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳು ಒಂದೇ ನಾಣ್ಯದ ಎರಡು ಮುಖಗಳಾಗಿ ಬದಲಾಗಿವೆ ಎನ್ನಬಹುದು. ಇಂಟರ್‌ನೆಟ್ ಇಲ್ಲವೆಂದರೆ ಬ್ಯಾಂಕಿಂಗ್ ಅಸಾಧ್ಯ ಎನ್ನುವಷ್ಟು ಇಂದು ಬ್ಯಾಂಕಿಂಗ್ ಕ್ಷೇತ್ರ ಸರಳವಾಗಿದೆ. ಹಾಗಾಗಿಯೇ, ಎಲ್ಲರೂ ಸ್ಮಾರ್ಟ್‌ಪೋನ್ ಮೂಲಕವೇ ಇಂದು ಬ್ಯಾಂಕ್ ವ್ಯವಹಾರ ನಡೆಸುತ್ತಿದ್ದಾರೆ.
ಬ್ಯಾಂಕ್ ಶಾಖೆಗೆ ಹೋಗದೆಯೇ ಮೊಬೈಲ್‌ನಿಂದಲೇ ಬ್ಯಾಲೆನ್ಸ್ ಪರಿಶೀಲಿಸುವುದು, ಹಣ ವರ್ಗಾವಣೆ, ನಾನಾ ಬಗೆಯ ಬಿಲ್ ಪಾವತಿ, ರೈಲ್ವೆ, ಸಿನಿಮಾ ಟಿಕೆಟ್ ಬುಕಿಂಗ್, ಮೊಬೈಲ್ ರೀಚಾಜ್‌ರ್, ಡಿಜಿಟಲ್ ಟಿ.ವಿ ರೀಚಾರ್ಜ್ ಇತ್ಯಾದಿ ಸೇವೆಗಳನ್ನು ಕೆಲವೇ ಕ್ಷಣಗಳಲ್ಲಿ ಪಡೆಯಬಹುದಾದ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಯಾರು ಬಿಟ್ಟಾರು ಹೇಳಿ.?!

ಆದರೆ, ಇಂತಹ ಸುಲಭವಾದ ಬ್ಯಾಂಕಿಂಗ್ ವ್ಯವಸ್ಥೆ ನಮಗೆ ಉಪಯೋಗದ ಜೊತೆಗೆ ತೊಂದರೆಗಳನ್ನು ತರುತ್ತಿದೆ. ಆನ್‌ಲೈನ್ ಹ್ಯಾಕರ್‌ಗಳು ವಿವಿಧ ರೂಪದಲ್ಲಿ ಜನರ ಹಣವನ್ನು ದೋಚುತ್ತಿರುವ ಸುದ್ದಿ ಪ್ರತಿದಿನವೂ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಗ್ರಾಹಕರ ಬ್ಯಾಂಕ್ ಖಾತೆಗೆ ಕನ್ನಹಾಕಲು ಹ್ಯಾಕರ್‌ಗಳು ನಾನಾ ರೂಪದಲ್ಲಿ ಸಜ್ಜಾಗಿದ್ದಾರೆ!

ಹಾಗಾಗಿ, ಇಂದಿನ ಲೇಖನದದಲ್ಲಿ ಆನ್‌ಲೈನ್ ಮೂಲಕ ಬ್ಯಾಂಕ್ ವ್ಯವಹಾರ ನಡೆಸುವವರು ತಿಳಿದಿರಲೇಬೇಕಾದ ವಿಷಯಗಳು ಯಾವುವು ಎಂಬುದನ್ನು ಪಟ್ಟಿ ಮಾಡಿದ್ದೇವೆ. ನಾವು ಪಟ್ಟಿ ಮಾಡಿರುವ ಕಳಕಂಡ 8 ವಿಷಯಗಳು ಖಂಡಿತವಾಗಿ ಹ್ಯಾಕರ್‌ಗಳಿಂದ ನಿಮ್ಮ ರಕ್ಷಣೆ ಸಾಧ್ಯವಾಗಿದೆ. ಹಾಗಾದರೆ, ಅವುಗಳು ಯಾವುವು ಎಂಬುದನ್ನು ಮುಂದೆ ನೋಡೊಣ.!

1. ನಿಮ್ಮ ಬ್ಯಾಂಕ್ ಖಾತೆಯ ಪಾಸ್‌ವರ್ಡ್‌ಗಳನ್ನು ನಿಯಮಿತವಾಗಿ ಬದಲಿಸುತ್ತಿರಿ.
2. ಅಪರಿಚಿತರು ಕಳುಹಿಸಿರುವ ಇಮೇಲ್‌ಗಳನ್ನು ತೆರೆಯಬೇಡಿ. ಒಂದು ವೇಳೆ ತೆರೆದರು ಅದರಲ್ಲಿನ ಆಮಿಷಕ್ಕೆ ಬಲಿಯಾಗಬೆಡಿ.
3. ಅಪರಿಚಿತರೊಂದಿಗೆ ನಿಮ್ಮ ಪಾಸ್ವರ್ಡ್ ಅಥವಾ OTP ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ನಿಮಗೆ ಮಾತ್ರ ತಿಳಿದಿರಬೇಕು ಅಷ್ಟೆ!
4. ಯಾವುದೇ ವೆಬ್‌ಸೈಟ್ ಪ್ರವೇಶಿಸಲು ನಿಮ್ಮ ಗೂಗಲ್ ಅಥವಾ ಫೇಸ್‌ಬುಕ್ ಅಕೌಂಟ್‌ಗಳನ್ನು ಬಳಸದಿರುವುದು ಒಳ್ಳೆಯದು.
5. ಬ್ರೌಸರ್ ವಿಂಡೋವನ್ನು ಮುಚ್ಚುವ ಬದಲು ನಿಮ್ಮ ಖಾತೆಯನ್ನು ಲಾಗ್ ಔಟ್ ಮಾಡಿ.
6. ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರ್‌ಗಳನ್ನು ನಿಯಮಿತವಾಗಿ ಅಪ್‌ಡೆಟ್ ಮಾಡುತ್ತಿರಿ.
7. ಅತ್ಯುತ್ತಮ ಆಯಂಟಿ ವೈರಸ್‌ಗಳನ್ನು ಬಳಸುವುದು ಒಳ್ಳೆಯದು.
8. ಸಾರ್ವಜನಿಕ Wi-Fi ಸಂಪರ್ಕ ಬಳಸುವುದನ್ನು ಮೊದಲು ಬಿಡಿ.


Click it and Unblock the Notifications








