ಸ್ಮಾರ್ಟ್‌ಫೋನ್ ವೇಗ ಕಡಿಮೆಯಾಗದಂತೆ ತಡೆಯುವುದು ಹೇಗೆ?!
ಪ್ರಪಂಚದಲ್ಲಿ ಸರಾಸರಿ ಸ್ಮಾರ್ಟ್‌ಫೋನ್ ಬಳಕೆದಾರನೋರ್ವ ಪ್ರತಿ 21 ತಿಂಗಳಿಗೊಮ್ಮೆ ಸ್ಮಾರ್ಟ್‌ಫೋನ್ ಬದಲಾಯಿಸುತ್ತಾನೆ ಎಂಬ ರಿಪೋರ್ಟ್ ಹೊರಬಿದ್ದಿದೆ.!!
ಒಂದು ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ಹತ್ತು ಬಾರಿ ಯೋಚಿಸುವ ನಾವು ಸ್ಮಾರ್ಟ್‌ಫೋನ್ ಖರೀದಿಸಿದ ನಂತರ ಅದನ್ನು ಸರಿಯಾಗಿ ನಿರ್ವಹಣೆ ಮಾಡುವುದಿಲ್ಲ. ಹಾಗಾಗಿ, ಪ್ರಪಂಚದಲ್ಲಿ ಸರಾಸರಿ ಸ್ಮಾರ್ಟ್‌ಫೋನ್ ಬಳಕೆದಾರನೋರ್ವ ಪ್ರತಿ 21 ತಿಂಗಳಿಗೊಮ್ಮೆ ಸ್ಮಾರ್ಟ್‌ಫೋನ್ ಬದಲಾಯಿಸುತ್ತಾನೆ ಎಂಬ ರಿಪೋರ್ಟ್ ಹೊರಬಿದ್ದಿದೆ.!!
ರಿಪೋರ್ಟ್‌ನಲ್ಲಿ ತಿಳಿಸಿರುವಂತೆ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ವೇಗ ಕಡಿಮೆಯಾಗುವುದರಿಂದಲೇ ಬಹುತೇಕ ಜನರು ಸ್ಮಾರ್ಟ್‌ಫೋನ್ ಬದಲಾಯಿಸುತ್ತಿದ್ದಾರೆಂತೆ. ಸ್ಮಾರ್ಟ್‌ಫೋನ್ ಖರೀದಿಸಿದ ಹೊಸದರಲ್ಲಿ ಇದ್ದ ವೇಗ ನಂತರ ಕ್ಷಿಣಿಸುವುದರಿಂದ ಎಲ್ಲರೂ ಸ್ಮಾರ್ಟ್‌ಫೋನ್ ಬದಲಾವಣೆ ಮಾಡಲು ಮುಂದಾಗುತ್ತಾರೆ ಎಂದು ಹೇಳಲಾಗಿದೆ.!!

ಹಾಗಾಗಿ, ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್ ವೇಗ ಬಹಳ ಕಡಿಮೆಯಾಗಿದ್ದರೆ, ಅಂತರ್ಜಾಲ ಸಂಪರ್ಕ ನಿಧಾನವಾಗಿದ್ದರೆ ಅದಕ್ಕೆ ಪರಿಹಾರವನ್ನು ತಿಳಿಯೋಣ.! ಸ್ಮಾರ್ಟ್‌ಫೋನ್ ವೇಗ ಕಡಿಮೆಯಾಗಲು ನಮ್ಮ ಸಣ್ಣಪುಟ್ಟ ತಪ್ಪುಗಳೇ ಕಾರಣಗಳಾಗಿರುವುದರಿಂದ ಆ ತಪ್ಪುಗಳು ಯಾವುವು? ಪರಿಹಾರಗಳನ್ನು ಮುಂದೆ ತಿಳಿಯಿರಿ.!!

ಉತ್ತಮ ಮೆನು ಲಾಂಚರ್ ಬಳಸಿ
ನೀವು ಖರೀದಿಸುವ ಪ್ರತಿ ಸ್ಮಾರ್ಟ್‌ಫೋನ್‌ನಲ್ಲೂ ಒಂದು ಲಾಂಚರ್ ಅಳವಡಿಸಲಾಗಿರುತ್ತದೆ. ಮೊಬೈಲ್ ಪರದೆ ಮೇಲೆ ಕಾಣುವ ಮೆನು ವಿಧಾನ, ಐಕಾನ್‌ಗಳು, ಸೂಚನೆಗಳು...ಇವೆಲ್ಲವೂ ಇದರಲ್ಲೇ ಇರುತ್ತವೆ. ಇದಕ್ಕಗಿ ಹೆಚ್ಚು RAM ಬಳಕೆಯಾಗುವುದರಿಂದ ಕಡಿಮೆ RAM ಬಳಸುವ ಲಾಂಚರ್ ಅಳವಡಿಸಿಕೊಳ್ಳಿ. ನಿಮ್ಮ ಫೋನ್ ವೇಗ ಹೆಚ್ಚುತ್ತದೆ.!!


ಆನಿಮೇಶನ್ ಲೈವ್ ವಾಲ್‌ಪೇಪರ್ ಬಳಸದಿರಿ.!!
ಕಡಿಮೆ ಸಾಮರ್ಥ್ಯದ RAM ಮತ್ತು ಹಳೆಯ ಪ್ರೊಸೆಸರ್‌ಗಳಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಆನಿಮೇಶನ್ ಲೈವ್ ವಾಲ್‌ಪೇಪರ್ ಬಳಸಬೇಡಿ. ಇಂತಹ ಲೈವ್ ವಾಲ್‌ಪೇಪರ್‌ಗಳು ಮೊಬೈಲ್ ಬ್ಯಾಕ್‌ಗ್ರೌಂಡ್‌ನಲ್ಲಿ ಕ್ರಿಯಾಶೀಲವಾಗಿರುತ್ತವೆ. ಇದರಿಂದ ಮೊಬೈಲ್ ವೇಗ ಭಾರಿ ಕಡಿಮೆಯಾಗುತ್ತದೆ.!!

ಒಪೆರಾ, ಫೈರ್‌ಫಾಕ್ಸ್ ಒಳ್ಳೆಯದು.!!
ನಿಮ್ಮದು ಸ್ವಲ್ಪ ಹಳೆಯ ಸ್ಮಾರ್ಟ್ಫೋನ್ ಆದರೂ ಒಪೆರಾ, ಫೈರ್‌ಫಾಕ್ಸ್‌ನಂತಹ ಬ್ರೌಸರ್‌ಗಳನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು.ಕಡಿಮೆ RAM ಬಳಸುವ ಈ ಬ್ರೌಸರ್‌ಗಳು ನಿಮ್ಮ ಅಂತರ್ಜಾಲ ಸಂಪರ್ಕವನ್ನು ಹೆಚ್ಚಿಸುತ್ತವೆ.!! ಒಪೆರಾದಲ್ಲಿ ಪಾಪ್‌ಅಪ್ ಬ್ಲಾಕರ್ ಮತ್ತು ಡೇಟಾ ಸೇವರ್ ಆಯ್ಕೆಗಳು ಬ್ರೌಸರ್ ವೇಗವನ್ನು ಹೆಚ್ಚಿಸಲು ನೆರವಾಗುತ್ತವೆ.

ಹೆಚ್ಚು RAM ಇದ್ದರೆ ಕ್ರೋಮ್ ಬಳಸಿ.!!
ಇಂದು ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ರೋಮ್ ಬಳಕೆ ಸಾಮಾನ್ಯ. ಇನ್ನು ಕ್ರೋಮ್‌ನಂತಹ ಸರ್ಚ್ ಎಂಜಿನ್ ಹೆಚ್ಚು RAM ಬಳಸಿಕೊಳ್ಳುತ್ತವೆ. ಇದನ್ನು ಹೆಚ್ಚು ಹೊತ್ತು ಬಳಸಿದ ನಂತರ ನಿಲ್ಲಿಸಿದರೂ ಈ ಮೊಬೈಲ್ ಯಥಾಸ್ಥಿತಿಗೆ ಬರಲು ಸ್ವಲ್ಪಹೊತ್ತು ಹಿಡಿಯುತ್ತದೆ. ಹಾಗಾಗಿ, 3GB RAM ಮೇಲ್ಪಟ್ಟ ಸ್ಮಾರ್ಟ್‌ಫೋನ್‌ಗಳಿಗೆ ಕ್ರೋಮ್ ಒಳ್ಳೆಯದು.!!

ಆಯಂಟಿ ವೈರಸ್‌ಗಳ ಬಗ್ಗೆ ತಿಳಿದಿರಲಿ!!
ಪ್ರತಿ ಸ್ಮಾರ್ಟ್‌ಫೋನ್‌ನಲ್ಲೂ ಡಿಫಾಲ್ಟ್ ಆಗಿ ಯಾವುದಾದರೂ ಒಂದು ಆಯಂಟಿ ವೈರಸ್ ತಂತ್ರಾಂಶ ಇರುತ್ತದೆ. ಇದು ಮೊಬೈಲ್‌ನ RAMಗೆ ತಕ್ಕಂತೆ ಕೆಲಸ ಮಾಡುತ್ತದೆ. ಇದಲ್ಲದೆ ಮತ್ತೊಂದು ತಂತ್ರಾಂಶವನ್ನು ಅಳವಡಿಸಿಕೊಳ್ಳುವ ಅಗತ್ಯವಿಲ್ಲ. ಆದರೂ ಹೆಚ್ಚಿನ ಆಯಂಟಿ ವೈರಸ್ ಬಗ್ಗೆ ನಿಮಗೆ ತಿಳಿದಿರಲಿ.!!

ಫೇಸ್‌ಬುಕ್ ಲೈಟ್ ಬಳಸಿ.!!
ಫೇಸ್‌ಬುಕ್ ತಂತ್ರಾಂಶ ಇರುವ ಮೊಬೈಲ್ ಫೋನ್‌ಗಳ ವೇಗ ಶೇ 15ರಷ್ಟು ಕಡಿಮೆಯಾಗುತ್ತದೆ ಎಂಬುದು ಸೈಬರ್ ತಂತ್ರಜ್ಞರ ಅಭಿಪ್ರಾಯ. ಸ್ನ್ಯಾಪ್ ಚಾಟ್ ತಂತ್ರಾಂಶದಲ್ಲೂ ಇದೇ ಸಮಸ್ಯೆ ಇದ್ದು, ಫೇಸ್‌ಬುಕ್ ಲೈಟ್ನಂತಹ ಸೌಲಭ್ಯಗಳನ್ನು ಬಳಸಿಕೊಳ್ಳಿ. ಇದರಿಂದ RAM ಬಳಕೆ ಪ್ರಮಾಣ ಕಡಿಮೆಯಾಗುತ್ತದೆ.!!

ಮೊಬೈಲ್ ವೇಗ ಹೆಚ್ಚಿಸುವ ಆಪ್ ಬೇಡ.!!
ಮೊಬೈಲ್ ವೇಗ ಹೆಚ್ಚಿಸಿಕೊಳ್ಳಲು ಈ ಆಪ್ ಉತ್ತಮ ಎಂಬ ಜಾಹೀರಾತುಗಳನ್ನು ನಂಬದಿರಿ. ನಿಮ್ಮ ಮೊಬೈಲ್ ವೇಗವನ್ನು ಒಂದೇ ಬಾರಿಗೆ ಹೆಚ್ಚಿಸುತ್ತವೆ ಎಂದು ತಿಳಿಯಬೇಡಿ. ಏಕೆಂದರೇ ಇವು ಕೂಡ ನಿಮ್ಮ ಸ್ಮಾರ್ಟ್‌ಫೋನ್ RAM ಬಳಸಿಕೊಂಡೆ ಕಾರ್ಯನಿರ್ವಹಣೆ ನೀಡುತ್ತವೆ.!!


Click it and Unblock the Notifications








