Elections result 2023: EVM ನಲ್ಲಿ ವೋಟ್ ಕೌಂಟಿಂಗ್ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ!
ಲೋಕಸಭೆ ಚುನಾವಣೆಗೆ ದಿಕ್ಸೂಚಿ ಅಂತಾನೇ ಖ್ಯಾತಿ ಪಡೆದುಕೊಂಡಿರುವ ಪಂಚ ರಾಜ್ಯಗಳ ಚುನಾವಣೆಯ ಪಲಿತಾಂಶದ (Elections result 2023) ಮೇಲೆ ದೇಶದ ಚಿತ್ತ ನೆಟ್ಟಿದೆ. ಇದರಲ್ಲಿ ನಾಳೆ ಮಿಜೋರಾಂ ರಾಜ್ಯವನ್ನು ಹೊರತುಪಡಿಸಿ ಇನ್ನುಳಿದ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಾಳೆ (ಡಿ 3) ನಡೆಯಲಿದೆ. ಈಗಾಗಲೇ ಪಂಚರಾಜ್ಯಗಳ ಮತದಾನೋತ್ತರ ಸಮೀಕ್ಷೆಗಳ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅಷ್ಟಕ್ಕೂ ಇವಿಎಂ ಪೆಟ್ಟಿಯಲ್ಲಿರುವ ವೋಟ್ ಅನ್ನು ಕೌಂಟ್ ಮಾಡುವುದು ಹೇಗೆ ಅನ್ನೋ ಕುತೂಹಲ ಕೂಡ ಇದೆ.
ಹೌದು, ನಾಳೆ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ,ಛತ್ತೀಸ್‌ಗಢ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದೆ. ನಾಲ್ಕು ರಾಜ್ಯಗಳಲ್ಲಿಯೂ ಅಲ್ಲಿನ ಮತದಾರ ಬರೆದಿರುವ ಭವಿಷ್ಯ EVMಗಳಲ್ಲಿ ಭದ್ರವಾಗಿದೆ. ಹಾಗಾದ್ರೆ EVMನಲ್ಲಿರುವ ವೋಟ್ ಅನ್ನು ಕೌಂಟಿಂಗ್ ಹೇಗೆ ನಡೆಸಲಾಗುತ್ತದೆ. ಇವಿಎಂಗಳಲ್ಲಿರುವ ವೋಟ್ ಅನ್ನು ಲೆಕ್ಕಹಾಕುವಾಗ ಅನುಸರಿಸಲಾಗುವ ನಿಯಮಗಳೇನು? ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಚುನಾವಣೆ ಪ್ರಕ್ರಿಯೆಯಲ್ಲಿ EVM ನಲ್ಲಿರುವ ವೋಟ್‌ಗಳನ್ನು ಲೆಕ್ಕ ಹಾಕುವ ಕಾರ್ಯ ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಇಲ್ಲಿ ಮತಗಳನ್ನು ಲೆಕ್ಕಹಾಕುವ ಮುನ್ನ ಚುನಾವಣಾ ಆಯೋಗ ನಿಗಧಿಪಡಿಸಿರುವ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅದರಂತೆ ಮತ ಎಣಿಕೆ ಕಾರ್ಯವನ್ನು ಸಾಕಷ್ಟು ಎಚ್ಚರಿಕೆ ಹಾಗೂ ಜಾಗ್ರತೆಯಿಂದ ನಡೆಸಲಾಗುತ್ತದೆ. ಇದಕ್ಕಾಗಿಯೇ ಒಂದು ಕ್ಷೇತ್ರದ ಚುನಾವಣೆಯನ್ನು ನಡೆಸುವ ಜವಾಬ್ದಾರಿ ಹೊಂದಿರುವ ಚುನಾವಣಾಧಿಕಾರಿ (RO)ಯೇ ಮತ ಎಣಿಕೆ ಕಾರ್ಯದ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅಂದರೆ RO ಒಬ್ಬ ಸರ್ಕಾರಿ ಅಧಿಕಾರಿ ಅಥವಾ ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ಪ್ರತಿ ಕ್ಷೇತ್ರಕ್ಕೆ ECI ನಿಂದ ನಾಮನಿರ್ದೇಶನಗೊಂಡವರು ಆಗಿರುತ್ತಾರೆ.
ಮತ ಎಣಿಕೆ ನಡೆಸುವುದು ಹೇಗೆ?
EVM ನಲ್ಲಿ ವೋಟ್ ಕೌಂಟಿಂಗ್ ಮಾಡುವ ಜವಾಬ್ದಾರಿಯನ್ನು ಚುನಾವಣಾಧಿಕಾರಿ (RO) ಹೊಂದಿರುತ್ತಾರೆ. ಯಾವ ಕ್ಷೇತ್ರಕ್ಕೆ ಎಲ್ಲಿ ಮತ ಎಣಿಕೆ ಕಾರ್ಯ ನಡೆಸಬೇಕು ಎನ್ನುವುದನ್ನು ಅಲ್ಲಿನ RO ನಿರ್ದಾರ ಮಾಡುತ್ತಾರೆ. ಇನ್ನು ಮತ ಎಣಿಕೆಯ ದಿನಾಂಕ ಮತ್ತು ಸಮಯವನ್ನು ಚುನಾವಣಾ ಆಯೋಗವು ನಿಗದಿಪಡಿಸುತ್ತದೆ. ಸಾಮಾನ್ಯವಾಗಿ ಒಂದು ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆಯನ್ನು ಒಂದೇ ಸ್ಥಳದಲ್ಲಿ ಮಾಡಲಾಗುತ್ತದೆ. ಇದನ್ನು RO ಅವರ ನೇರ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಅನ್ನೊ ನಿಯಮವಿದೆ.

EVM ನಲ್ಲಿ ವೋಟ್ ಕೌಂಟಿಂಗ್ ಹೇಗೆ?
ಮತದಾರರು ಬರೆದಿರುವ ಭವಿಷ್ಯ EVMನಲ್ಲಿ ಭದ್ರವಾಗಿದ್ದು, ಈಗಾಗಲೇ ಮತ ಎಣಿಕೆ ನಡೆಯುವ ಕೇಂದ್ರಗಳಲ್ಲಿ EVM ಗಳನ್ನು ಡಿ ಮಾಸ್ಟರಿಂಗ್ ಮಾಡಲಾಗಿದೆ. ನಾಳೆ ನಡೆಯಲಿರುವ ಮತ ಎಣಿಕೆ ಕಾರ್ಯವನ್ನು ಚುನಾವಣಾಧಿಕಾರ ನೇತೃತ್ವದಲ್ಲಿ ನಡೆಯಲಿದೆ. ಅದರಂತೆ ಪ್ರತಿ ಸುತ್ತಿನ ಮತ ಎಣಿಕೆಯಲ್ಲಿ 14EVMಗಳ ಮತಗಳನ್ನು ಕೌಂಟ್ ಮಾಡಲಾಗುತ್ತದೆ. ಮತಗಳ ಎಣಿಕೆಯು ಎಲೆಕ್ಟ್ರಾನಿಕ್ ಟ್ರಾನ್ಸ್ಮಿಟೆಡ್ ಪೋಸ್ಟಲ್ ಬ್ಯಾಲೆಟ್ (ಇಟಿಪಿಬಿ) ಮತ್ತು ಪೋಸ್ಟಲ್ ಬ್ಯಾಲೆಟ್ (PB) ನೊಂದಿಗೆ ಪ್ರಾರಂಭವಾಗಲಿದೆ.
ವೋಟ್ ಕೌಟಿಂಗ್ ಮಾಡುವಾಗ VVPAT ಸ್ಲಿಪ್‌ಗಳ ಪಾತ್ರವೇನು?
EVM ವೋಟ್ ಕೌಂಟಿಂಗ್ ಸಮಯದಲ್ಲಿ ವಿವಿಪ್ಯಾಟ್ ಸ್ಲಿಪ್‌ಗಳ ನಡುವೆ ಹೊಂದಾಣಿಕೆ ಮಾಡಲಾಗುತ್ತದೆ. ವಿವಿಪ್ಯಾಟ್ ಸ್ಲಿಪ್ ಹಾಗೂ ಇವಿಎಂ ಕೌಂಟಿಂಗ್ ನಡುವೆ ವ್ಯತ್ಯಾಸ ಕಂಡುಬಂದರೆ ವಿವಿಪ್ಯಾಟ್ ಸ್ಲಿಪ್ ಕೌಂಟಿಂಗ್ ಪಲಿತಾಂಶವೇ ಅಂತಿಮವಾಗಿರುತ್ತದೆ ಎನ್ನಲಾಗಿದೆ. ಆದರೆ ಈ ವಿಚಾರದ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರವನ್ನು ಚುನಾವಣೆ ಆಯೋಗ ಹೊಂದಿಲ್ಲ.

EVM ನಲ್ಲಿ ವೋಟ್ ಮಾಡುವುದು ಹೇಗೆ?
EVM ನಲ್ಲಿ ಮತದಾರರಿಗೆ ತಮ್ಮ ಅಭ್ಯರ್ಥಿಗಳ ಪ್ರತಿ ಆಯ್ಕೆಗೆ ಒಂದು ಬಟನ್ ಅನ್ನು ನೀಡಲಾಗಿರುತ್ತದೆ. ಅಲ್ಲದೆ EVM ಅನ್ನು ಕೇಬಲ್ ಮೂಲಕ ಕನೆಕ್ಟಿವಿಟಿ ಮಾಡಲಾಗಿರುತ್ತದೆ. ಅಂದರೆ EVM ಎರಡು ಯೂನಿಟ್‌ಗಳನ್ನು ಒಳಗೊಂಡಿರುತ್ತದೆ. ಒಂದು ಕಂಟ್ರೂಲ್ ಯೂನಿಟ್ ಮತ್ತು ವೋಟಿಂಗ್ ಯೂನಿಟ್ ಈ ಎರಡು ಯೂನಿಟ್‌ಗಳನ್ನು ಕೇಬಲ್ ಮೂಲಕ ಕನೆಕ್ಟ್ ಮಾಡಲಾಗಿರುತ್ತದೆ. ಇದರಿಂದ ಮತದಾರ ತನ್ನ ಮತ ಚಲಾಯಿಸುವಾಗ ಗುಂಡಿಯನ್ನು ಟ್ಯಾಪ್ ಮಾಡಿದರೆ ವೋಟ್ ತಾನೇ ಲಾಕ್ ಆಗಲಿದೆ. ಈ ಮೂಲಕ ಒಬ್ಬ ವ್ಯಕ್ತಿಯು ಒಮ್ಮೆ ಮಾತ್ರ ಮತ ಚಲಾಯಿಸುವುದನ್ನು ಖಚಿತಪಡಿಸಲಿದೆ.


Click it and Unblock the Notifications








