ಮೊಬೈಲ್‌ನಲ್ಲಿಯೇ 'ಪಿಎಫ್' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಖಾಸಾಗಿ ವಲಯದಲ್ಲಿ ಉದ್ಯೋಗ ಮಾಡುತ್ತಿರುವವರು ಇದೀಗ ಒಂದೇ ಕ್ಲಿಕ್‌ನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಬ್ಯಾಲೆನ್ಸ್ ಅನ್ನು ಚೆಕ್ ಮಾಡಬಹುದಾದ ಆಯ್ಕೆ ಲಭ್ಯವಿದೆ.!

ಖಾಸಾಗಿ ವಲಯದಲ್ಲಿ ಉದ್ಯೋಗ ಮಾಡುತ್ತಿರುವವರು ಇದೀಗ ಒಂದೇ ಕ್ಲಿಕ್‌ನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಬ್ಯಾಲೆನ್ಸ್ ಅನ್ನು ಚೆಕ್ ಮಾಡಬಹುದಾದ ಆಯ್ಕೆ ಲಭ್ಯವಿದೆ.! ಹಾಗಾಗಿ, ಈಗ ಸುಲಭವಾಗಿ 'ಯುಎಎನ್' ನಂಬರ್ ಮೂಲಕ ಎಸ್ಎಂಎಸ್ ಮುಖಾಂತಹ ಇಪಿಎಫ್ ಹಣವನ್ನು ಚೆಕ್ ಮಾಡಬಹುದು.!!
ಹೌದು, ಎಸ್‌ಎಮ್‌ಎಸ್ ಮೂಲಕ ಇಪಿಎಫ್ ಬ್ಯಾಲೆನ್ಸ್ ತಿಳಿಯಲು ನಿಮ್ಮ ಸ್ಯಾಲರಿ ಸ್ಲಿಪ್‌ನಲ್ಲಿರುವ ಯೂನಿವರ್ಸಲ್ ಅಕೌಂಟ್ ನಂಬರ್ (UAN) ಹೊಂದಿರಬೇಕು. ಈ 'ಯುಎಎನ್' ನಂಬರ್ ಮೂಲಕ ಪಿಎಫ್‌ನ ಬಹು ಖಾತೆಗಳನ್ನು ವಿಲೀನ ಮಾಡಬಹುದಲ್ಲದೇ, ಭವಿಷ್ಯ ನಿಧಿ ಮೊತ್ತವವನ್ನು ತಿಳಿಯುವ ಅವಕಾಶವಿದೆ.!!

ಹಾಗಾದರೆ, ಮೊಬೈಲ್ ಮೂಲಕ ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಬ್ಯಾಲೆನ್ಸ್ ಅನ್ನು ಚೆಕ್ ಮಾಡುವುದು ಹೇಗೆ? ಯುಎಎನ್ (UAN) ಸಂಖ್ಯೆಯೊಂದಿಗೆ ಪಿಎಫ್ ಬಹು ಖಾತೆಗಳನ್ನು ವಿಲೀನ ಮಾಡುವುದು ಹೇಗೆ? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಅಫಿಷಿಯಲ್ ವೆಬ್‌ಸೈಟ್ ತೆರೆಯಿರಿ.!!
http://uanmembers.epfoservices.in/ ವೆಬ್‌ಸೈಟ್ ತೆರೆದು ವೆಬ್ ಪುಟದ ಬಲ ಬದಿಯಲ್ಲಿರುವ ಲಾಗ್ ಇನ್ ಕ್ಲಿಕ್ ಮಾಡಿ. ನಂತರ ನಿಮ್ಮ ಯುನಿವರ್ಸಲ್ ಅಕೌಂಟ್ ನಂಬರ್(ಯುಎಎನ್) ನೀಡಿ ಮೊಬೈಲ್ ಸಂಖ್ಯೆ ದಾಖಲಿಸಿ.!

ಪಿಎಫ್ ಕಚೇರಿ ಸೂಚಿಸಿ.!!
eನಿಮ್ಮ ಯುನಿವರ್ಸಲ್ ಅಕೌಂಟ್ ನಂಬರ್(ಯುಎಎನ್) ನೀಡಿ ಮೊಬೈಲ್ ಸಂಖ್ಯೆ ದಾಖಲಿಸಿದ ನಂತರ ಪಿಎಫ್ ಅಕೌಂಟ್ ಹೊಂದಿರುವ ರಾಜ್ಯ ಮತ್ತು ನಿಮ್ಮ ಕಚೇರಿ ಪ್ರದೇಶವನ್ನು ಸೂಚಿಸಿ.!

ಒಟಿಪಿ ದಾಖಲಿಸಿ ಮಾಹಿತಿ ಪಡೆಯಿರಿ.!!
ರಾಜ್ಯ ಮತ್ತು ನಿಮ್ಮ ಕಚೇರಿ ಪ್ರದೇಶವನ್ನು ನೀಡಿದ ನಂತರ ಅಲ್ಲಿರುವ captcha ಕೋಡ್ ನಮೂದಿಸಿದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಫೋನಿಗೆ ಪಿನ್ ನಂಬರ್ ಬರಲಿದೆ. ಒಟಿಪಿ ದಾಖಲಿಸಿ ಪೂರ್ಣ ವಿವರ ಪಡೆಯಬಹುದು.

ಎಸ್‌ಎಮ್‌ಎಸ್ ಮೂಲಕ ಚೆಕ್ ಮಾಡುವುದು!!
ಯುಎಎನ್ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ಇದ್ದರೆ ನೋಂದಾಯಿತ ಮೊಬೈಲ್ ಫೋನಿನಿಂದ EPFOHO UAN ENG ಈ ಸಂದೇಶವನ್ನು 7738299899 ಸಂಖ್ಯೆಗೆ ಎಸ್ಎಂಎಸ್ ಕಳಿಸಿ ಸುಲಭವಾಗಿ ಎಸ್‌ಎಮ್‌ಎಸ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು.!!

ಪಿಎಫ್ ಖಾತೆ ವಿಲೀನ ಹೇಗೆ?
UAN ಸಂಖ್ಯೆ ಜತೆ EPFO ಚಂದಾದಾರರು ಒಟ್ಟು 10 ಖಾತೆಗಳನ್ನು ವಿಲೀನ ಮಾಡಲು ಅವಕಾಶ ನೀಡಲಾಗಿದೆ. ಇದಕ್ಕಾಗಿ 120ಕ್ಕೂ ಹೆಚ್ಚು EPFO ಕಚೇರಿಗಳಿಗೆ ಅತಿ ಶೀಘ್ರದಲ್ಲಿ ಈ ಸೌಲಭ್ಯ ಅಳವಡಿಸುವಂತೆ ನಿರ್ದೇಶನ ನೀಡಲಾಗಿದ್ದು, ಆನ್‌ಲೈನಿನಲ್ಲಿಯೂ ಶೀಘ್ರವೇ ಈ ಸೇವೆ ಬರಲಿದೆ.!!

ಡಿಜಿಟಲ್ ರೀತಿ ಅನುಮೋದನೆಯಾಗಿರಬೇಕು.!!
ನಿಮ್ಮ ಉದ್ಯೋಗ ಸಂಸ್ಥೆಯಿಂದ ಆಧಾರ್, ಪ್ಯಾನ್ ಅಥವಾ ಬ್ಯಾಂಕ್ ಅಕೌಂಟ್ ಮಾಹಿತಿ ಡಿಜಿಟಲ್ ರೀತಿಯಲ್ಲಿ ಅನುಮೋದನೆಯಾಗಿದ್ದರೆ ಮಾತ್ರ ಈ ಮಾಹಿತಿ ನಿಮಗೆ ಸಿಗಲಿದೆ. ಇಪಿಎಫ್ ಖಾತೆಗಳ ಬಗ್ಗೆ ಕನ್ನಡದಲ್ಲೂ ಮಾಹಿತಿ ಸಿಗಲಿದ್ದು, ಹೆಚ್ಚಿನ ಮಾಹಿತಿಗೆ 1800118005 ಸಹಾಯವಾಣಿಯನ್ನು ಸಂಪರ್ಕಿಸಿ.!!


Click it and Unblock the Notifications





