Home
ಟೆಕ್ ನೌಕರಿ

ನಿಮ್ಮ PF ಪಾಸ್‌ಬುಕ್ ಡೌನ್‌ಲೋಡ್ ಮಾಡುವುದು ಹೇಗೆ?..ಸಂಪೂರ್ಣ ಮಾಹಿತಿ!

ಭಾರತದಲ್ಲಿ ಖಾಸಗಿ ಉದ್ಯೋಗಿಗಳಿಗೆ ನಿವೃತ್ತಿ ನಂತರದ ಆರ್ಥಿಕ ಭದ್ರತೆಯನ್ನು ಒದಗಿಸುವ ಅತ್ಯಂತ ಮಹತ್ವದ ಯೋಜನೆಯೆಂದರೆ ಉದ್ಯೋಗಿಗಳ ಭವಿಷ್ಯ ನಿಧಿ (EPF). 1951ರಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ ಈ ಯೋಜನೆಯನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ನಿರ್ವಹಿಸುತ್ತದೆ. EPF ವ್ಯವಸ್ಥೆಯಡಿ ಉದ್ಯೋಗಿ ಹಾಗೂ ಉದ್ಯೋಗದಾತರು ಪ್ರತೀ ತಿಂಗಳು ಸಂಬಳದ ಒಂದು ನಿಗದಿತ ಮೊತ್ತವನ್ನು ಒಂದೇ ಖಾತೆಗೆ ಜಮಾ ಮಾಡುತ್ತಾರೆ. ಈ ನಿಧಿ ನಿವೃತ್ತಿ ಸಮಯದಲ್ಲಿ ಮಾತ್ರವಲ್ಲ, ಉದ್ಯೋಗ ಬದಲಾವಣೆ, ಆರೋಗ್ಯ ಸಮಸ್ಯೆ ಅಥವಾ ತುರ್ತು ಹಣಕಾಸು ಅಗತ್ಯಗಳ ಸಂದರ್ಭದಲ್ಲಿಯೂ ಸಹಾಯಕವಾಗುತ್ತದೆ
.
ಇತ್ತೀಚಿನ ದಿನಗಳಲ್ಲಿ EPFO ತನ್ನ ಸೇವೆಗಳನ್ನು ಸಂಪೂರ್ಣ ಡಿಜಿಟಲ್ ಮಾಡಿದ್ದು, EPF ಖಾತೆಯ ತಿಂಗಳಾವಾರು ಕೊಡುಗೆಗಳು ಮತ್ತು ವಹಿವಾಟುಗಳ ಸಂಪೂರ್ಣ ವಿವರಗಳನ್ನು ಆನ್‌ಲೈನ್ ಮೂಲಕವೇ ಪರಿಶೀಲಿಸಲು ಅವಕಾಶ ನೀಡಿದೆ. ಅದರಲ್ಲೂ EPF ಪಾಸ್‌ಬುಕ್ ನಿಮ್ಮ ಖಾತೆಯ ಸಂಪೂರ್ಣ ಹಣಕಾಸಿನ ದಾಖಲೆಯಾಗಿದೆ. ಆದ್ದರಿಂದ EPF ಪಾಸ್‌ಬುಕ್ ಅನ್ನು ಸಮಯಕಾಲಕ್ಕೆ ಡೌನ್‌ಲೋಡ್ ಮಾಡಿ ಪರಿಶೀಲಿಸುವುದು ಪ್ರತಿಯೊಬ್ಬ ಉದ್ಯೋಗಿಗೂ ಅಗತ್ಯವಾಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ EPF ಪಾಸ್‌ಬುಕ್ ಅನ್ನು ಡೌನ್‌ಲೋಡ್ ಮಾಡಲು ಇರುವ ಎಲ್ಲಾ ಮಾರ್ಗಗಳ ಕುರಿತಂತೆ ನಾವು ಮಾಹಿತಿ ತಂದಿದ್ದೇವೆ.

EPFO ಸದಸ್ಯ ಪೋರ್ಟಲ್ ಮೂಲಕ
EPFO ಸದಸ್ಯ ಪೋರ್ಟಲ್ ಮೂಲಕ EPF ಪಾಸ್‌ಬುಕ್ ಡೌನ್‌ಲೋಡ್ ಮಾಡುವುದು ಅತ್ಯಂತ ಅಧಿಕೃತ ಮತ್ತು ವಿಶ್ವಾಸಾರ್ಹ ವಿಧಾನವಾಗಿದೆ. ಸದಸ್ಯ ಪೋರ್ಟಲ್‌ಗೆ ಭೇಟಿ ನೀಡಿ ನಿಮ್ಮ UAN ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆದ ನಂತರ, OTP ದೃಢೀಕರಣದ ಮೂಲಕ ಖಾತೆಗೆ ಪ್ರವೇಶ ಸಿಗುತ್ತದೆ. ಲಾಗಿನ್ ಆದ ಬಳಿಕ ಪಾಸ್‌ಬುಕ್ ವಿಭಾಗವನ್ನು ಆಯ್ಕೆ ಮಾಡಿದರೆ, ನೀವು ಕೆಲಸ ಮಾಡಿದ ಪ್ರತಿಯೊಂದು ಸಂಸ್ಥೆಯ ಪ್ರತ್ಯೇಕ ವಿವರಗಳೊಂದಿಗೆ ಉದ್ಯೋಗಿ ಹಾಗೂ ಉದ್ಯೋಗದಾತರ ಕೊಡುಗೆಗಳು, ಖಾತೆಯ ಒಟ್ಟು ಶೇಷ ಮತ್ತು ವಹಿವಾಟುಗಳ ದಿನಾಂಕಗಳನ್ನು ನೋಡಬಹುದು. ಈ ಪಾಸ್‌ಬುಕ್ ಅನ್ನು PDF ರೂಪದಲ್ಲಿ ಡೌನ್‌ಲೋಡ್ ಮಾಡಿ ಆಫ್‌ಲೈನ್‌ನಲ್ಲಿಯೂ ಉಳಿಸಬಹುದು.

ನಿಮ್ಮ PF ಪಾಸ್‌ಬುಕ್ ಡೌನ್‌ಲೋಡ್ ಮಾಡುವುದು ಹೇಗೆ?..ಸಂಪೂರ್ಣ ಮಾಹಿತಿ!

UMANG ಆ್ಯಪ್ ನಿಂದ ಇನ್ನಷ್ಟು ಸುಲಭ
ಸ್ಮಾರ್ಟ್‌ಫೋನ್ ಬಳಕೆದಾರರಿಗೆ EPF ವಿವರಗಳನ್ನು ಪಡೆಯಲು UMANG ಆ್ಯಪ್ ಇನ್ನಷ್ಟು ಸುಲಭ ಪರಿಹಾರವನ್ನು ನೀಡುತ್ತದೆ. ಸರ್ಕಾರದ ಅಧಿಕೃತ ಈ ಆ್ಯಪ್‌ನಲ್ಲಿ EPFO ಸೇವೆಗಳು ಒಂದೇ ವೇದಿಕೆಯಲ್ಲಿ ಲಭ್ಯವಿವೆ. UMANG ಆ್ಯಪ್‌ಗೆ ಲಾಗಿನ್ ಆಗಿ EPFO ಪಾಸ್‌ಬುಕ್ ಆಯ್ಕೆ ಮಾಡಿದರೆ, OTP ಪರಿಶೀಲನೆಯ ನಂತರ ನಿಮ್ಮ EPF ಖಾತೆಯ ಸಂಪೂರ್ಣ ಮಾಹಿತಿ ತೆರೆದಿಡುತ್ತದೆ. ಹಿಂದಿನ ಉದ್ಯೋಗ ಸಂಸ್ಥೆಗಳ ವಿವರಗಳು, ಹಣದ ಜಮಾ ಹಾಗೂ ಹಿಂಪಡೆಯುವ ದಾಖಲೆಗಳು ಸ್ಪಷ್ಟವಾಗಿ ಕಾಣುತ್ತವೆ. ಅಗತ್ಯವಿದ್ದರೆ ಪಾಸ್‌ಬುಕ್ ಅನ್ನು ನೇರವಾಗಿ ಮೊಬೈಲ್‌ಗೆ ಡೌನ್‌ಲೋಡ್ ಮಾಡಬಹುದು.

ಮಿಸ್ ಕಾಲ್ ನೀಡುವ ಮೂಲಕ
ಇಂಟರ್‌ನೆಟ್ ಸೌಲಭ್ಯ ಇಲ್ಲದವರಿಗೂ EPFO ಸರಳ ಪರಿಹಾರವನ್ನು ನೀಡಿದೆ. ನಿಮ್ಮ ಮೊಬೈಲ್ ಸಂಖ್ಯೆ UAN ಗೆ ಲಿಂಕ್ ಆಗಿದ್ದು ಮತ್ತು KYC ಪ್ರಕ್ರಿಯೆ ಪೂರ್ಣಗೊಂಡಿದ್ದರೆ, ನೋಂದಾಯಿತ ಸಂಖ್ಯೆಯಿಂದ ಒಂದು ಮಿಸ್ ಕಾಲ್ ನೀಡುವುದರಿಂದಲೇ EPF ಶೇಷದ ಮಾಹಿತಿ SMS ಮೂಲಕ ಲಭ್ಯವಾಗುತ್ತದೆ. ಅಲ್ಲದೆ ನಿಗದಿತ ಫಾರ್ಮ್ಯಾಟ್‌ನಲ್ಲಿ SMS ಕಳುಹಿಸಿದರೂ EPF ಖಾತೆಯ ಪ್ರಮುಖ ವಿವರಗಳು ನಿಮ್ಮ ಮೊಬೈಲ್‌ಗೆ ತಲುಪುತ್ತವೆ. ಗ್ರಾಮೀಣ ಹಾಗೂ ಕಡಿಮೆ ಡಿಜಿಟಲ್ ಸಂಪರ್ಕ ಇರುವ ಪ್ರದೇಶಗಳಲ್ಲಿ ಈ ಸೇವೆ ಬಹಳ ಉಪಯುಕ್ತವಾಗಿದೆ.

ಒಟ್ಟಾರೆಯಾಗಿ, EPF ಪಾಸ್‌ಬುಕ್ ನಿಮ್ಮ ನಿವೃತ್ತಿ ನಿಧಿಯ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಪ್ರಮುಖ ದಾಖಲೆ. EPFO ನೀಡುತ್ತಿರುವ ಈ ಡಿಜಿಟಲ್ ಸೌಲಭ್ಯಗಳು ಉದ್ಯೋಗಿಗಳಿಗೆ ಪಾರದರ್ಶಕತೆ, ಸುಲಭ ಪ್ರವೇಶ ಮತ್ತು ಸಮಯ ಉಳಿತಾಯವನ್ನು ಒದಗಿಸುತ್ತವೆ. ನಿಮ್ಮ ಹಣ ಸರಿಯಾಗಿ ಜಮಾ ಆಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು EPF ಪಾಸ್‌ಬುಕ್ ಅನ್ನು ನಿಯಮಿತವಾಗಿ ಪರಿಶೀಲಿಸುವುದು ಇಂದು ಅತ್ಯಂತ ಅಗತ್ಯವಾಗಿದ್ದು, ಇದು ನಿಮ್ಮ ಭವಿಷ್ಯದ ಆರ್ಥಿಕ ಭದ್ರತೆಗೆ ದೊಡ್ಡ ನೆರವಾಗುತ್ತದೆ. ಈಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
The EPF Passbook helps employees track their provident fund contributions and balance online. This guide explains simple and official ways to download and check your EPF Passbook using EPFO’s digital services.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+