Home
ಟೆಕ್ ನೌಕರಿ

ATM ಮೂಲಕ ಇನ್ಮುಂದೆ 2 ನಿಮಿಷಗಳಲ್ಲಿ ನಿಮ್ಮ PF ಹಣ ವಿತ್‌ಡ್ರಾ ಮಾಡಿ!..ಹೇಗೆ ಗೊತ್ತಾ?

ನಮ್ಮ ಕಷ್ಟದ ಸಮಯದಲ್ಲಿ ತಕ್ಷಣ ಹಣದ ಅಗತ್ಯವಿರುವಾಗ PF (ಭವಿಷ್ಯ ನಿಧಿ) ಹಣದ ಬಗ್ಗೆ ನೆನಪಾಗುತ್ತದೆ. ಆದರೆ, PF ಹಣವನ್ನು ನೇರವಾಗಿ ಪಡೆಯಲು ಸಾಧ್ಯವಿಲ್ಲ ಎಂಬುದರಿಂದ ಬೇಸರವಾಗುತ್ತದೆ. ಆದರೆ, ಇನ್ನು ಮುಂದೆ ಈ ಚಿಂತೆ ಬಿಟ್ಟುಬಿಡಿ! ಏಕೆಂದರೆ, ಈಗ ನೀವು ಉದ್ಯೋಗದಾತರ ದೃಢೀಕರಣವಿಲ್ಲದೆ ನಿಮ್ಮ PF ಹಣವನ್ನು ATM ಮೂಲಕ ಕೆಲವೇ ಕ್ಷಣಗಳಲ್ಲಿ ಪಡೆಯಬಹುದು! ಹೌದು, ಇಪಿಎಫ್‌ಒ (EPFO) ಸಂಸ್ಥೆ ತನ್ನ ಚಂದಾದಾರರಿಗೆ PF ಹಣವನ್ನು ನೇರವಾಗಿ ATM ಮೂಲಕ ಪಡೆಯಲು ಅನುಮತಿಸುವ ಮೂಲಕ ಸುಲಭಗೊಳಿಸುವುದಾಗಿ ಘೋಷಣೆ ಮಾಡಿದೆ.

ದೇಶದಲ್ಲಿ 70 ಮಿಲಿಯನ್‌ಗಿಂತ ಹೆಚ್ಚು ಇಪಿಎಫ್ ಚಂದಾದಾರರಿಗೆ ಸುಲಭ PF ಹಣಕಾಸು ಸೇವೆ ಒದಗಿಸಲು ಯುನೈಟೆಡ್ ಪೇಮೆಂಟ್ ಇಂಟರ್ಫೇಸ್ (UPI) ನೊಂದಿಗೆ ಸಂಯೋಜನೆಯ ಮೂಲಕ ನಿವೃತ್ತಿ ನಿಧಿ ಸಂಸ್ಥೆಯ ಯೋಜನೆಗೆ ಕಾರ್ಮಿಕ ಸಚಿವಾಲಯವು ಅನುಮೋದನೆ ನೀಡಿದೆ. ಗ್ರಾಹಕರ UAN ಸಕ್ರಿಯವಾಗಿದ್ದರೆ ಮತ್ತು ಅವರ ಮೊಬೈಲ್ ಸಂಖ್ಯೆಯು PF ಖಾತೆಯೊಂದಿಗೆ ಜೋಡಣೆಯಾಗಿದ್ದರೆ, ಕೆಲವೇ ಕ್ಷಣಗಳಲ್ಲಿ PF ಹಣವನ್ನು ಪಡೆಯಬಹುದು. ಹಾಗಾದರೆ, ಈ ಹೊಸ ಸೇವೆಯು ಹೇಗಿರಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.

ATM ಮೂಲಕ ಇನ್ಮುಂದೆ 2 ನಿಮಿಷಗಳಲ್ಲಿ ನಿಮ್ಮ PF ಹಣ ವಿತ್‌ಡ್ರಾ ಮಾಡಿ!
ನಿಮ್ಮ ಭವಿಷ್ಯ ನಿಧಿ (PF) ಹಣವನ್ನು ATM ಮೂಲಕ ಹಿಂಪಡೆಯಲು ಈ ಹಂತಗಳನ್ನು ಅನುಸರಿಸಿ
1. ನಿಮ್ಮ UAN ಸಕ್ರಿಯವಾಗಿರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು KYC ವಿವರಗಳನ್ನು ನವೀಕರಿಸಲಾಗಿದೆ ಎಂದು ಪರಿಶೀಲಿಸಿ.
2. ನಿಮ್ಮ UAN ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು ಮತ್ತು ನಿಮ್ಮ ಫೋನ್ ಸಂಖ್ಯೆಯೂ ಲಿಂಕ್ ಆಗಿರಬೇಕು.
3. EPFO ಬೆಂಬಲಿಸುವ ATM ಗೆ ಹೋಗಿ (ಈ ಸೌಲಭ್ಯವನ್ನು ಪ್ರಸ್ತುತ ಕೆಲವು ATM ಯಂತ್ರಗಳಲ್ಲಿ ಪರಿಚಯಿಸಲಾಗಿದೆ)
4. EPF ಹಿಂಪಡೆಯುವ ಆಯ್ಕೆಯನ್ನು ಆಯ್ಕೆ ಮಾಡಿ.
5. ನಿಮ್ಮ UAN ಮತ್ತು ಹಿಂಪಡೆಯಲು ಬಯಸುವ ಮೊತ್ತವನ್ನು ನಮೂದಿಸಿ.
6. ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಮೂಲಕ ಗುರುತನ್ನು ದೃಢೀಕರಿಸಿ.
7. ಈಗ, ಸಾಮಾನ್ಯ ಬ್ಯಾಂಕ್ ಬ್ಯಾಲೆನ್ಸ್‌ನಂತೆ ನಿಮ್ಮ PF ಹಣವನ್ನು ಸ್ವೀಕರಿಸಿ.

PF Withdrawal ಮಾಡುವ ಮೊದಲು ಗಮನಿಸಬೇಕಾದ ಪ್ರಮುಖ ಅಂಶಗಳು

ನೀವು ಭವಿಷ್ಯ ನಿಧಿ (PF) ಹಣವನ್ನು ಹಿಂಪಡೆಯಬಹುದಾದ ಮೊತ್ತವು ಹಿಂಪಡೆಯುವಿಕೆಗೆ ಕಾರಣ ಮತ್ತು ನಿಮ್ಮ ಸೇವಾ ವರ್ಷಗಳನ್ನು ಅವಲಂಬಿಸಿರುತ್ತದೆ. ಆದರೆ, PF ಹಣವನ್ನು ATM ಮೂಲಕ ಹಿಂಪಡೆಯಲು ಯಾವ ರೀತಿಯಲ್ಲಿ ಅನುಮೋದನೆ ನೀಡಲಾಗುತ್ತದೆ ಎಂಬುದು ತಿಳಿದುಬಂದಿದೆ. ಆದರೆ, PF Withdrawal ಮಾಡುವ ಮೊದಲು ಗಮನಿಸಬೇಕಾದ ಪ್ರಮುಖ ಅಂಶಗಳು ಹೀಗಿವೆ.

1. ವೈದ್ಯಕೀಯ ತುರ್ತು ಪರಿಸ್ಥಿತಿ: ನೀವು ಅಥವಾ ನಿಮ್ಮ ಸಂಗಾತಿ, ಪೋಷಕರು ಅಥವಾ ಮಕ್ಕಳ ಚಿಕಿತ್ಸೆಗೆ ಹಣದ ಅಗತ್ಯವಿದ್ದಾಗ, ಇಪಿಎಫ್ ಸದಸ್ಯರು ತಮ್ಮ ಕೊಡುಗೆ ಮತ್ತು ಬಡ್ಡಿ ಅಥವಾ ಮಾಸಿಕ ವೇತನದ 6 ಪಟ್ಟು ಕಡಿಮೆ ಇರುವ ಮೊತ್ತವನ್ನು ಹಿಂಪಡೆಯಬಹುದು.
2. ಹೊಸ ಮನೆ ಖರೀದಿಸಲು ಅಥವಾ ನಿರ್ಮಿಸಲು: ನೀವು ಕನಿಷ್ಠ 5 ವರ್ಷಗಳ ಕಾಲ ಕೆಲಸ ಮಾಡಿದ್ದರೆ, ನಿಮ್ಮ ಇಪಿಎಫ್ ಬ್ಯಾಲೆನ್ಸ್‌ನ 90% ವರೆಗೆ ಹಣವನ್ನು ಹಿಂಪಡೆಯಬಹುದು.
3 ಮನೆ ನವೀಕರಣಕ್ಕಾಗಿ: ನೀವು ಮನೆ ನಿರ್ಮಿಸಿದ 5 ವರ್ಷಗಳ ನಂತರ, ದುರಸ್ತಿ ಅಥವಾ ನವೀಕರಣದ ವೆಚ್ಚಗಳನ್ನು ಪೂರೈಸಲು ನಿಮ್ಮ ಮಾಸಿಕ ಸಂಬಳದ 12% ಕ್ಕಿಂತ ಹೆಚ್ಚು ಮೊತ್ತವನ್ನು ಹಿಂಪಡೆಯಬಹುದು.
4. ಗೃಹ ಸಾಲವನ್ನು ಮರುಪಾವತಿಸಲು: ನೀವು ಕನಿಷ್ಠ 3 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದರೆ, EPF ಬಾಕಿಯ 90% ವರೆಗೆ ಗೃಹ ಸಾಲವನ್ನು ಪಾವತಿಸಲು ಬಳಸಬಹುದು.
5. ಮದುವೆ ವೆಚ್ಚಗಳಿಗಾಗಿ: ನೀವು ಅಥವಾ ನಿಮ್ಮ ಮಕ್ಕಳ ಮದುವೆ ನಡೆಯುತ್ತಿದ್ದರೆ ಮತ್ತು ನೀವು 7 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದರೆ, ನಿಮ್ಮ ಇಪಿಎಫ್ ಕೊಡುಗೆ ಮತ್ತು ಬಡ್ಡಿಯ 50% ವರೆಗೆ ಹಣವನ್ನು ಹಿಂಪಡೆಯಬಹುದು.

Best Mobiles in India

English summary
EPFO subscribers will be able to withdraw their provident fund directly from ATMs, check all the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+