TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಕೀಬೋರ್ಡ್‌ನಲ್ಲಿರುವ f1 ಟು f12 ಕೀಗಳ ಉಪಯೋಗ ಗೊತ್ತಾ?!
ಕಂಪ್ಯೂಟರ್ ಬಳಕೆ ಮಾಡುವ ಬಹುತೇಕ ಜನರಿಗೆ ಕಂಪ್ಯೂಟರ್ ಕೀಬೋರ್ಡ್ ನಲ್ಲಿರುವ ಎಲ್ಲಾ ಕೀ ಗಳ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ ಮತ್ತು ಎಲ್ಲಾ ಕೀಗಳನ್ನು ಬಳಸಿಯೂ ಇರುವುದಿಲ್ಲ. ಅದರಲ್ಲಿಯೂ F1 ನಿಂದ F12 ವರೆಗಿನ ಫಂಕ್ಷನ್ ಕೀಗಳ ಬಗ್ಗೆ ಕೆಲವರನ್ನು ಕೇಳಿದರೆ ಅದು ನಮಗಲ್ಲ ಹೆಚ್ಚು ಬುದ್ದಿವಂತರಿಗೆ, ಕಂಪ್ಯೂಟರ್ ತಜ್ಞರಿಗೆ ಮಾತ್ರ ಎನ್ನುವವರು ಇದ್ದಾರೆ.
ಹೌದು, ಕಂಪ್ಯೂಟರ್ ಕೀಬೋರ್ಡ್ ಮೊದಲ ಸ್ಥಾನದಲ್ಲಿ ಇರುವ F1 ನಿಂದ F12 ವರೆಗಿನ 12 ಕೀಗಳು ಬಹುತೇಕ ಕಂಪ್ಯೂಟರ್ ಬಳಕೆದಾರರಿಗೆ ತಿಳಿಯಲಾಗದ ಪ್ರಶ್ನೆಗಳಾಗಿಯೇ ಉಳಿದಿದೆ. ಹಾಗಾಗಿ, ಇಂದಿನ ಲೇಖನದಲ್ಲಿ F1 ನಿಂದ F12 ವರೆಗಿನ 12 ಕೀಗಳ ಉಪಯೋಗವೇನು? ಅವುಗಳನ್ನು ಹೇಗೆಲ್ಲಾ ಬಳಸಿಕೊಳ್ಳಬಹದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.
ಎಫ್ 1 ಮತ್ತು ಎಫ್ 2
ಎಫ್1 (F1): ಕೀಬೋರ್ಡ್‌ನಲ್ಲಿರುವ ಎಫ್1 ಆಯ್ಕೆಯನ್ನು ಬಳಸಿಕೊಂಡು ನೀವು ಯಾವುದೇ ಪ್ರೋಗ್ರಾಂಗಳ ಸಹಾಯದ ಸ್ಕ್ರೀನ್ ತಡರೆಯಬಹುದು.ಗೂಗಲ್ ಕ್ರೋಮ್ ಬಳಕೆ ಮಾಡಿದಾಗ ಎಫ್1 ಒತ್ತಿದರೆ ನಿಮಗೆ ಹೆಲ್ಪ ಸ್ಕ್ರೀನ್ ತೆರೆಯುತ್ತದೆ.!!
ಎಫ್2 (F2): ಯಾವುದೇ ಫೋಲ್ಡರ್ ಹೆಸರನ್ನು ಬದಲಾವಣೆ ಮಾಡಲು ಎಫ್2 ಶಾರ್ಟ್ ಕೀ ಬಳಸಿದರೆ ಸಾಕಾಗುತ್ತದೆ. ಫೋಲ್ಡರ್ ಆಯ್ಕೆ ಮಾಡಿ ಎಫ್2 ಕ್ಲಿಕ್ ಮಾಡಿದರೆ ಸೆಕೆಂಡ್‌ಗಿಂತಲೂ ಕಡಿಮೆ ವೇಗದಲ್ಲಿ ಒಂದು ಫೋಲ್ಡರ್ ಹೆಸರು ಬದಲಾವಣೆ ಸಾಧ್ಯ.!!
ಎಫ್3 ಮತ್ತು ಎಫ್4
ಎಫ್3: ಯಾವುದಾದರೂ ಅಪ್ಲಿಕೇಷನ್ ಕಾರ್ಯನಿರ್ವಹಿಸುವಾಗ ಸರ್ಚ್ ಆಯ್ಕೆಯನ್ನು ತೆರೆಯಲು ಎಫ್3 ಒತ್ತಿದರೆ ಸಾಕು!! ಯಾವುದೇ ವಿಷಯವನ್ನು ಬಹುಬೇಗ ಸರ್ಚ್ ಮಾಡಲು ಇದೊಂದು ಉತ್ತಮ ಆಯ್ಕೆಯಾಗಿದೆ.!!
ಎಫ್4: ಗೂಗಲ್ ಕ್ರೋಮ್ ಅಥವಾ ಯಾವುದೇ ಸರ್ಚ್ ಎಂಜಿನ್ ತೆರೆದರೂ ಒಂದೇ ಬಾರಿ ಎಲ್ಲಾ ವಿಂಡೊಗಳನ್ನು ಕ್ಲೋಸ್ ಮಾಡಲು Alt+F4 ಒತ್ತಿದರೆ ಸಾಕು.!! ಇದಿರಿಂದ ನಿಮ್ಮ ಸರ್ಚ್ ಎಂಜಿನ್‌ಗಳು ಹೆಚ್ಚು ವೇಗವಾಗಿ ಮತ್ತು ಹೆಚ್ಚು ಸೆಕ್ಯೂರ್ ಆಗಿ ಕ್ಲೋಸ್ ಆಗುತ್ತವೆ.!!
ಎಫ್5 ಮತ್ತು ಎಫ್6
ಎಫ್5: ಕಂಪ್ಯೂಟರ್‌ನ ಯಾವುದೇ ಪೇಜ್ ಅನ್ನು ರೀಫ್ರೆಶ್ ಮಾಡಲು ಎಫ್5 ಕೀ ಯನ್ನು ಒತ್ತಿ ಹಿಡಿದರೆ ಸಾಕು. ಮತ್ತು ಯಾವುದೇ ಪೇಜ್ ಅನ್ನು ರೀಲೋಡ್ ಮಾಡಲೂ ಸಹ ಎಫ್5 ಕೀ ಬಳಸಿದರೆ ಸಾಕಾಗುತ್ತದೆ.!!
ಎಫ್6: ವೆಬ್‌ಪುಟದ ಯಾವುದಾದರೂ ಅ್ಡರೆಸ್ ಲಿಂಕ್ ಅನ್ನು ಪೂರ್ತಿಯಾಗಿ ಒಮ್ಮೆಲೇ ಸೆಲೆಕ್ಟ್ ಮಾಡಲು ಎಫ್6 ಕೀ ಒತ್ತಿದರೆ ಸಾಕು. ನಂತ ಆ ಲಿಂಕ್ ಅನ್ನು ಕಂಟ್ರೊಲ್+ಸಿ ಒತ್ತಿ ನಕಲು ಮಾಡಿಕೊಳ್ಳಬಹುದು.!!
ಎಫ್7 ಮತ್ತು ಎಫ್8
ಎಫ್7: ಮೈಕ್ರೊಸಾಫ್ಟ್ ವರ್ಡ್‌ನಂತಹ ಮೈಕ್ರೋಸಾಫ್ಟ್ ಅಪ್ಲಿಕೇಷನ್‌ಗಳಲ್ಲಿ ಎಫ್7 ಕೀ ಮೂಲಕ ಗ್ರಾಮರ್ ಮತ್ತು ಸ್ಪೆಲ್ಲಿಂಗ್ ಚೆಕ್ ಮಾಡಬಹುದು.!! ಡಾಕ್ಯುಮೆಂಟ್‌ಗಳನ್ನು ರೀಚೆಕ್ ಮಾಡಲು ಈ ಆಯ್ಕೆ ಬಹಳ ಉಪಯೋಗಕಾರಿ.!!
ಎಫ್8: ಕಂಪ್ಯೂಟರ್ ಆನ್ ಮಾಡುವ ಪ್ರಕ್ರಿಯೆಯಲ್ಲಿ ಎಫ್8 ಕೀಯನ್ನು ಸತತವಾಗಿ ಒತ್ತುತ್ತಲೇ ಇದ್ದರೆ, ಕಂಪ್ಯೂಟರ್ ಬೂಟ್ ಮಾಡುವ ಹಂತಕ್ಕೆ ತೆರೆಯುತ್ತದೆ.!! ನಿಮ್ಮ ಕಂಪ್ಯೂಟರ್ ಅನ್ನು ಮತ್ತೆ ಹೊಸದರಂತಾಗಿಸುವ ಆಯ್ಕೆ ಇದು.!!
ಎಫ್9 ಮತ್ತು ಎಫ್10
ಎಫ್9:ಮೈಕ್ರೋಸಾಫ್ಟ್ ಔಟ್‌ಲುಕ್ ಇ-ಮೇಲ್‌ಗಳನ್ನು ಸೆಂಡ್ ಮತ್ತು ರಿಸೀವ್ ಮಾಡಲು ಎಫ್9 ಬಳಕೆ ಮಾಡಬಹುದು. ಮತ್ತು ಮೈಕ್ರೋಸಾಫ್ಟ್ ಡಾಕ್ಯುಮೆಂಟ್‌ಗಳನ್ನು ರಿಫ್ರೆಶ್ ಮಾಡಲು ಸಹ ಇದೇ ಶಾರ್ಟ್ ಕೀ ಬೇಕು.!!
ಎಫ್10: ಅಪ್ಲಿಕೇಶನ್ ಮೆನು ಬಾರ್ ಸಕ್ರಿಯಗೊಳಿಸಲು ಎಫ್10 ಶಾರ್ಟ್ ಕೀ ಒತ್ತಬೇಕು. ಇದರಿಂದ ಬಹಳ ಸುಲಭವಾಗ ಅಪ್ಲಿಕೇಶನ್ ಮೆನು ಬಾರ್ ತೆರೆಯಬಹುದು .!!
ಎಫ್11 ಮತ್ತು ಎಫ್12
ಎಫ್11: ಇಂಟರ್‌ನೆಟ್ ಬ್ರೌಸಿಂಗ್ ತೆರೆದರೆ ಫುಲ್‌ಕ್ರೀನ್ ಆಯ್ಕೆಯನ್ನು ಮಾಡಬಹುದಾದ ಮತ್ತು ಫುಲ್ ಸ್ಕ್ರೀನ್ ಆಯ್ಕೆ ತೆರೆಯಬಹುದಾದ ಕಾರ್ಯವನ್ನು ಎಫ್11 ಕೀ ಮೂಲಕ ಮಾಡಬಹುದು. ಮತ್ತು ಭಾಷೆ ಬದಲಾವಣೆ ಮಾಡಲು ಸಹ ಇದೇ ಆಯ್ಕೆ ಬಳಸಬಹುದು.!!
ಎಫ್12: ಮೈಕ್ರೋಸಾಫ್ಟ್‌ನ ವರ್ಡ್‌ನಲ್ಲಿ ಸೇವ್ ಮತ್ತು ಡೈಲಾಗ್ ಬಾಕ್ಸ್ ತೆರೆಯಲು ಎಫ್12 ಬಳಕೆಯಾಗುತ್ತದೆ.!!
ಓದಿರಿ:ನಿಮ್ಮ ಫೋನ್ ವೇಗ ಕಡಿಮೆಯಾಗಿದ್ದರೆ ಹೀಗೆ ಮಾಡಿ!..ಖಂಡಿತ ಸ್ಪೀಡ್ ಆಗುತ್ತೆ!!