Home
ಟೆಕ್ ನೌಕರಿ

ಫೇಸ್‌ಬುಕ್ ಮೂಲಕವೇ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳುವುದು ಹೇಗೆ?..ಇಲ್ಲಿದೆ ಮಾಹಿತಿ!!

ಇಡೀ ಜಗತ್ತಿನಲ್ಲಿಯೇ ಅತ್ಯಧಿಕ ಜನರು ಬಳಸುತ್ತಿರುವ ಸಮಾಜಿಕ ಜಾಲತಾಣ ಫೇಸ್‌ಬುಕ್ ಮತ್ತೊಂದು ಹೊಸ ಫೀಚರ್ ಅನ್ನು ಪರಿಚಯಿಸುತ್ತಿದೆ.

By Bhaskar N J

ಇಡೀ ಜಗತ್ತಿನಲ್ಲಿಯೇ ಅತ್ಯಧಿಕ ಜನರು ಬಳಸುತ್ತಿರುವ ಸಮಾಜಿಕ ಜಾಲತಾಣ ಫೇಸ್‌ಬುಕ್ ಮತ್ತೊಂದು ಹೊಸ ಫೀಚರ್ ಅನ್ನು ಪರಿಚಯಿಸುತ್ತಿದೆ. ಫೇಸ್‌ಬುಕ್ ಬಳಕೆದಾರರ ಎಲ್ಲಾ ಪ್ರೋತ್ಸಾಹವನ್ನು ಬಳಕೆ ಮಾಡಿಕೊಳ್ಳುತ್ತಿರುವ ಫೇಸ್‌ಬುಕ್, ತನ್ನ ಆಪ್‌ನಲ್ಲಿಯೇ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಬಹುದಾದ ಆಯ್ಕೆಯನ್ನು ಪರಿಚಯಿಸಿದೆ.!

ಫೇಸ್‌ಬುಕ್‌ನಲ್ಲಿ ಪೇಮೆಂಟ್ ಸೇವೆಯನ್ನು ಶಿಘ್ರದಲ್ಲಿಯೇ ಪ್ರಾರಂಭಿಸುತ್ತದೆ ಎನ್ನುವ ಸುದ್ದಿಯ ಜೊತೆಯಲ್ಲಿಯೇ, ಫೇಸ್‌ಬುಕ್ ಖಾತೆಯಿಂದ ನೇರವಾಗಿ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳುವ ಆಯ್ಕೆ ಇದೀಗ ವೈರೆಲ್ ಆಗಿದೆ. ಬಳಕೆಗೆ ಬರುತ್ತಿರುವ ಈ ಮೊಬೈಲ್ ರೀಚಾರ್ಜ್ ಫೀಚರ್ ಕೇವಲ ಆಂಡ್ರಾಯ್ಡ್ ಫೋನ್ ಫೇಸ್‌ಬುಕ್ ಆಪ್‍ ಬಳಸುವವರಿಗೆ ಮೊದಲು ಲಭ್ಯವಾಗುತ್ತಿದೆ.!

ಫೇಸ್‌ಬುಕ್ ಮೂಲಕವೇ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳುವುದು ಹೇಗೆ?..ಇಲ್ಲಿದೆ ಮಾಹಿತಿ!

ಇದೇ ಮೊದಲ ಬಾರಿಗೆ ಫೇಸ್‌ಬುಕ್ ಸಂಸ್ಥೆ ಇಂತಹದೊಂದು ಫೀಚರ್ ತರುತ್ತಿದ್ದು, ಫೇಸ್‌ಬುಕ್ ಬಳಕೆದಾರರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಹಾಗಾದರೆ, ಫೇಸ್‌ಬುಕ್‌ನಲ್ಲಿ ಪರಿಚಯಿಸಿರುವ ಮೊಬೈಲ್ ರೀಚಾರ್ಜ್ ಆಯ್ಕೆಯನ್ನು ಬಳಸಿ ಮೊಬೈಲ್ ರೀಚಾರ್ಜ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.!

ಫೇಸ್‌ಬುಕ್ ಸೆಟ್ಟಿಂಗ್ಸ್ ತೆರೆಯಿರಿ.

ಫೇಸ್‌ಬುಕ್ ಸೆಟ್ಟಿಂಗ್ಸ್ ತೆರೆಯಿರಿ.

ಆಂಡ್ರಾಯ್ಡ್ ಫೋನ್‌ನಲ್ಲಿ ಫೇಸ್‌ಬುಕ್ ಆಪ್‌ಅನ್ನು ಓಪನ್ ಮಾಡಿ ಅದರಲ್ಲಿ ಸೆಟ್ಟಿಂಗ್ಸ್ ತೆರೆಯಿರಿ. ನಂತರ ಸ್ಕ್ರೀನ್ ಕೆಳಗೆ ಸ್ಕ್ರೋಲ್ ಮಾಡಿದರೆ ಮೊಬೈಲ್ ರೀಚಾರ್ಜ್ ಎಂಬ ಆಪ್ಷನ್ ಕಾಣಿಸುತ್ತದೆ. ಮೊಬೈಲ್ ರೀಚಾರ್ಜ್ ಆಪ್ಷನನ್ನು ಆಯ್ಕೆ ಮಾಡಿಕೊಂಡು ಮುಂದೆ ಹೋದರೆ ಬರುವ ವಿಂಡೋದಲ್ಲಿ ರೀಚಾರ್ಜ್ ನೌ ಎಂಬ ಆಪ್ಷನ್ ಕಾಣಿಸುತ್ತದೆ.

How to Send a WhatsApp Message Without Saving the Contact in Your Phone - GIZBOT KANNADA
ಮೊಬೈಲ್ ರೀಚಾರ್ಜ್ ಪ್ಲಾನ್.

ಮೊಬೈಲ್ ರೀಚಾರ್ಜ್ ಪ್ಲಾನ್.

ರೀಚಾರ್ಜ್ ನೌ ಎಂಬ ಆಯ್ಕೆ ಒತ್ತಿದರೆ, ಬಳಿಕ ಬರುವ ವಿಂಡೋದಲ್ಲಿ ಮೊಬೈಲ್ ನಂಬರ್, ಆಪರೇಟರ್‌ಗಳನ್ನು ಆಯ್ಕೆ ಮಾಡಿಕೊಂಡು ಬಳಕೆದಾರರು ತಾನು ಬೇಕೆಂದಿಕೊಂಡಿದ್ದ ಮೊಬೈಲ್ ರೀಚಾರ್ಜ್ ಪ್ಲಾನ್ ಮೊತ್ತವನ್ನು ಬಾಕ್ಸ್‌ನಲ್ಲಿ ಎಂಟರ್ ಮಾಡಬೇಕು. ಅಥವಾ ಬೇರೆ ಪ್ಲಾನ್ ಬೇಕೆಂದರೆ ಪಕ್ಕದಲ್ಲೇ ಇರುವ ಬ್ರೌಜ್ ಪ್ಲಾನ್ಸ್ ಎಂದು ಆಯ್ಕೆ ಮಾಡಿ.

ನಿಮ್ಮ ಕಾರ್ಡ್ ಮಾಹಿತಿ ನೀಡಿ.

ನಿಮ್ಮ ಕಾರ್ಡ್ ಮಾಹಿತಿ ನೀಡಿ.

ಫೇಸ್‌ಬುಕ್ ಬಳಕೆದಾರರು ತನಗೆ ಇಷ್ಟವಾದ ಯಾವುದೇ ಟೆಲಿಕಾಂ ಕಂಪೆನಿಯ ಯಾವುದೇ ಪ್ಲಾನನ್ನು ಆಯ್ಕೆ ಮಾಡಿಕೊಳ್ಳಬಹುದು. ಅದಕ್ಕೆ ಸೂಕ್ತ ಮೊತ್ತವನ್ನು ಬಾಕ್ಸ್‌ನಲ್ಲಿ ಆಟೋಮೆಟಿಕ್ ಆಗಿ ಬರುತ್ತದೆ. ನಂತರ ಹಣ ಪಾವತಿ ಮಾಡುವ ಹಂತಕ್ಕೆ ಹೋಗುತ್ತದೆ. ನಿಮ್ಮ ಕಾರ್ಡ್ ಮಾಹಿತಿ ನೀಡಿ ಇಲ್ಲಿ ಹಣ ಪಾವತಿ ಮಾಡಿಬಹುದು.

ಒಟಿಪಿ ನೀಡಿ.

ಒಟಿಪಿ ನೀಡಿ.

ಟೆಲಿಕಾಂ ಪ್ಲಾನ್ ಮೊತ್ತವನ್ನು ಎಂಟರ್ ಮಾಡಿದ ಬಳಿಕ ಪೇಮೆಂಟ್ ಪ್ರೊಸೀಡ್ ಆಯ್ಕೆಯಲ್ಲಿ ನಿಮ್ಮ ಕಾರ್ಡ್ ಮಾಹಿತಿ ನೀಡಿದರೆ, ನಿಮ್ಮ ಮೊಬೈಲ್‌ಗೆ ಬ್ಯಾಕಿನಿಂದ ಒಟಿಪಿ ಬರಲಿದೆ. ನಂತರ ಫೇಸ್‌ಬುಕ್ ಆಪ್‌ನಲ್ಲಿ ಆ ಒಟಿಪಿಯನ್ನು ಎಂಟರ್ ಮಾಡಿ ಒಕೆ ಕೊಟ್ಟರೆ ಸಾಕು, ನಿಮ್ಮ ಪೇಮೆಂಟ್ ಪೂರ್ಣಗೊಳ್ಳುತ್ತದೆ.

Best Mobiles in India

English summary
Facebook for Android Now Lets You Recharge Your Mobile Number: Here's How to Do It. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+