ಜಿಯೋ ಫೋನಿನಲ್ಲಿ ಫೇಸ್‌ಬುಕ್ ಇನ್ ಸ್ಟಾಲ್ ಮಾಡಿಕೊಳ್ಳುವುದು ಹೇಗೆ..?
ಮಾರುಕಟ್ಟೆಯಲ್ಲಿ ಸಖತ್ ಹವಾ ಎಬ್ಬಿಸಿರುವ ರಿಲಯನ್ಸ್ ಜಿಯೋ ಫೋನ್ ಈಗಾಗಲೇ ದೇಶದ ಮೂಲೆ ಮೂಲೆಯನ್ನು ತಲುಪಿದೆ. ಅದರಲ್ಲೂ ರೂ.49ಕ್ಲೆ ಮಾಸಿಕ ಪ್ಲಾನ್ ಘೋಷಣೆ ಮಾಡಿದ ನಂತರದಲ್ಲಿ ಜಿಯೋ ಫೋನ್ ಬೇಡಿಕೆ ಮತ್ತಷ್ಟು ಏರಿಕೆಯಾಗಿದೆ. ಇದೇ ಹಿನ್ನಲೆಯಲ್ಲಿ ಜಿಯೋ ತನ್ನ ಫೋನ್ ಬಳಕೆದಾರರಿಗೆ ಫೇಸ್‌ಬುಕ್ ಆಪ್ ಇನ್ ಸ್ಟಾಲ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದ್ದು, ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಫೇಸ್‌ಬುಕ್ ಆಪ್ ಅನ್ನು ಜಿಯೋ ಫೋನಿನಲ್ಲಿ ಬಳಕೆದಾರರು ಇನ್ ಸ್ಟಾಲ್ ಮಾಡಿಕೊಳ್ಳಬಹುದಾಗಿದ್ದು, ಇದರಿಂದ ಫುಷ್ ನೋಟಿಫಿಕೇಷನ್ ಅನ್ನು ಪಡೆಯಬಹುದಾಹಗಿದೆ. ಸಾಮಾನ್ಯ ಸ್ಮಾರ್ಟ್‌ಫೋನ್ ಗಳಲ್ಲಿ ಫೇಸ್ ಬುಕ್ ಆಪ್ ಬಳಕೆ ಮಾಡಿಕೊಂಡ ಮಾದರಿಯಲ್ಲಿಯೇ ಈ ಫೇಸ್ ಬುಕ್ ಆಪ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ನಿಮ್ಮ ಜಿಯೋ ಫೋನಿನಲ್ಲಿ ಫೇಸ್‌ಬುಕ್ ಆಪ್ ಬಳಕೆ ಇನ್ ಸ್ಟಾಲ್ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಸುವ ಪ್ರಯತ್ನವು ಇದಾಗಿದೆ.

ಜಿಯೋ ಫೋನ್ ಫೇಸ್ ಬುಕ್:
ಜಿಯೋ ತನ್ನ ಜಿಯೋ ಫೋನಿನಲ್ಲಿ ಬಳಕೆ ಮಾಡಿಕೊಳ್ಳಲು ವಿಶೇಷ ಮಾದರಿಯ ಫೇಸ್‌ಬುಕ್ ಆಪ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಲು ನೀಡಲಿದೆ. ಈ ಫೇಸ್‌ಬುಕ್ ಆಪ್ ನೋಡಲು ಫೇಸ್‌ಬುಕ್ ಲೈಟ್ ನಂತೆ ಕಾಣಿಸಿಕೊಳ್ಳಲಿದೆ.

ಮೇಸೆಜ್ ಮಾಡಬಹುದು:
ಈ ಜಿಯೋ ಫೋನ್ ಫೇಸ್‌ಬುಕ್ ಆಪ್‌ನಲ್ಲಿ ನೀವು ಮೇಸೆಜ್ ಮಾಡಬಹುದಾಗಿದೆ. ಅಲ್ಲದೇ ನ್ಯೂಸ್ ಫಿಡ್ಸ್ ನಲ್ಲಿ ಹಲವು ಆಯ್ಕೆಗಳನ್ನು ಪಡೆಯಬಹುದಾಗಿದೆ. ಇದಲ್ಲದೇ ಮುಖ್ಯವಾಗಿ ನೋಟಿಫಿಕೇಷನ್ ಸಹ ಲಭ್ಯವಾಗಲಿದೆ.

ಬದಲಾದ ಫೈರ್ ಫಾಕ್ಸ್ ಒಎಸ್:
ಇದಲ್ಲದೇ ಜಿಯೋ ಫೋನಿಲ್ಲಿ ಫೈಯರ್ ಫಾಕ್ಡ್ KaiOS ಅಳವಡಿಸಲಾಗಿದ್ದು, ಈ ಬಾರಿ ಫೇಸ್‌ಬುಕ್ ಆಪ್ ಇನ್ ಸ್ಟಾಲ್ ಮಾಡುವ ಸಲುವಾಗಿ OSನಲ್ಲಿ ಬದಲಾವಣೆಯನ್ನು ಮಾಡಲಾಗಿದೆ ಎನ್ನಲಾಗಿದೆ.

ಫೇಸ್‌ಬುಕ್ ಆಪ್ ಇನ್ ಸ್ಟಾಲ್ ಮಾಡುವುದು ಹೇಗೆ..?
ನಿಮ್ಮ ಜಿಯೋ ಫೋನಿನಲ್ಲಿರುವ ಜಿಯೋ ಸ್ಟೋರಿಗೆ ಹೋಗಿ, ನಂತರದಲ್ಲಿ ಸೋಶಿಯಲ್ ಸೆಕ್ಷನ್ ಅನ್ನು ಸೆಲೆಕ್ಟ್ ಮಾಡಿಕೊಂಡರೆ ನಿಮಗೆ ಫೇಸ್ ಬುಕ್ ಆಪ್ ಕಾಣಿಸಿಕೊಳ್ಳಲಿದೆ. ಅಲ್ಲಿ ನೀವು ಇನ್ ಸ್ಟಾಲ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಫೋನಿನಲ್ಲಿ ಫೇಸ್‌ಬುಕ್ ಇನ್ ಸ್ಟಾಲ್ ಆಗಲಿದೆ.

ಜಿಯೋ ಫೋನ್ ವಿಶೇಷತೆ:
ಜಿಯೋ ಫೋನಿನಲ್ಲಿ 2.4 ಇಂಚಿನ QVGA ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರಲ್ಲಿ 512MB RAM ಜೊತೆಗೆ 4GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಫೋನ್ ಹಿಂಭಾಗದಲ್ಲಿ 2MP ಕ್ಯಾಮೆರಾ ಮುಂಭಾಗದಲ್ಲಿ VGA ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ.

ಜಿಯೋ ಪೋನ್ ನಂಬರ್ 1:
ರೂ.1500ರ ಹಿಂತಿರುಗಿಸುವ ಠೇವಣಿಯನ್ನು ಪಡೆದು ಉಚಿತವಾಗಿ ನೀಡುತ್ತರುವ ಜಿಯೋ ಫೋನ್ ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ಹೆಚ್ಚಿನ ಸನಿಹಕ್ಕೆ ಬಂದಿದೆ. ಮಾರುಕಟ್ಟೆಯಲ್ಲಿ ಶೇ.27% ಮಂದಿ ಜಿಯೋ ಫೋನ್ ಕೊಂಡು ಕೊಂಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಜಿಯೋ ಫೋನ್ ನಂಬರ್ 1 ಸ್ಥಾನ ಅಲಂಕರಿಸಿದೆ.
ಜಿಯೋ ಪೋನ್ ಹೇಗಿದೆ ವಿಡಿಯೋ ನೋಡಿ:
ಜಿಯೋ ಫೋನ್ ಹೇಗಿದೆ ಎಂಬುದನ್ನು ಕನ್ನಡದಲ್ಲಿ ತಿಳಿಯಿರಿ.


Click it and Unblock the Notifications








