ಆನ್ಲೈನಿನಲ್ಲಿ Income Tax Returns ಫೈಲ್ ಮಾಡಲು ಟಿಪ್ಸ್

Posted By: Varun
ಆನ್ಲೈನಿನಲ್ಲಿ Income Tax Returns ಫೈಲ್ ಮಾಡಲು ಟಿಪ್ಸ್

ಇನ್ನೇನು ಜುಲೈ 31 ಹತ್ತಿರ ಬರುತ್ತಿದೆ.ಆದಾಯ ತೆರಿಗೆಯ ರಿಟರ್ನ್ಸ್ ಅನ್ನು ಭಾರತದ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲು ಕೆಲವೇ ವಾರಗಳು ಇರುವಾಗ ಸಂಬಳ ಪಡೆಯುವವರು ತಮಗೆ ಗೊತ್ತಿರುವ CA ಗಳ ಮೊರೆಹೋಗಿ ಆದಾಯ ತೆರಿಗೆಯ ಫೈಲಿಂಗ್ ಮಾಡಲು ಓಡಾಡುತ್ತಾರೆ.

ಆದರೆ ಈ ರೀತಿಯ ಫೈಲಿಂಗ್ ಮಾಡುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ ಹಾಗು ಈ ವರ್ಷದಿಂದ 10 ಲಕ್ಷಕ್ಕೂ ಹೆಚ್ಚು Taxable Income ಇರುವ ಮಂದಿ ಆನ್ಲೈನ್ ನಲ್ಲೆ ಫೈಲ್ ಮಾಡಬೇಕಾಗಿರುವುದರಿಂದ ಇ-ಫೈಲಿಂಗ್ ಬಗ್ಗೆ ತಿಳಿದುಕೊಳ್ಳುವುದು ಒಳಿತು ಹಾಗು ಆನ್ಲೈನ್ ಫೈಲಿಂಗ್ ಸುಲಭವಾಗಿರುವುದರಿಂದ ಈ ಕಳಗೆ ವಿವರಿಸಲಾಗಿರುವ ಹಂತಗಳನ್ನು ಪಾಲಿಸಿ ಸುಲಭವಾಗಿ ಆನ್ಲೈನ್ ಫೈಲಿಂಗ್ ಮಾಡಬಹುದಾಗಿದೆ.

1) ಮೊದಲಿಗೆ www.incometaxindiaefiling.gov.in ವೆಬ್ಸೈಟ್ ಗೆ ಹೋಗಿ ನೊಂದಾಯಿಸಿ. (ನಿಮ್ಮ PAN ಅನ್ನೇ ID ಆಗಿ ಕೊಟ್ಟರೆ ಒಳ್ಳೆಯದು)

2)ನೊಂದಾಯಿಸಿದ ಮೇಲೆ ವೆಬ್ಸೈಟ್ ನಲ್ಲೆ ಇರುವ downloads ಅನ್ನು ಕ್ಲಿಕ್ ಮಾಡಿ ನಿಮಗೆ ಅನ್ವಯವಾಗುವ ITR ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ನಿಮ್ಮದು ಸಂಬಳ/ಪೆನ್ಶನ್ ಆದಾಯವಾಗಿದ್ದರೆ ITR-I(Sahaj) ಅನ್ನು ಡೌನ್ಲೋಡ್ ಮಾಡಿ (Assesment year 2012-13)

3) ಡೌನ್ಲೋಡ್ ಆದ ಎಕ್ಸೆಲ್ ಫೈಲ್ ಅನ್ನು ಓಪನ್ ಮಾಡಿ. ನಿಮ್ಮದು MS office 2003 ಆದರೆ---> Tools --> Macro Security ಕ್ಲಿಕ್ ಮಾಡಿ ಸೆಕ್ಯುರಿಟಿ ಲೆವೆಲ್ ಅನ್ನು medium ಗೆ ಇಟ್ಟು enable Macros ಮಾಡಿಕೊಳ್ಳಿ.

4) ಈಗ ಫಾರ್ಮ್ ನಲ್ಲಿ ಕೇಳಿರುವ ಎಲ್ಲ ಮಾಹಿತಿಯನ್ನು ಆ ಎಕ್ಸೆಲ್ ಶೀಟ್ ನಲ್ಲಿ ತುಂಬಿಸಿ. ಇದಕ್ಕೆ ಬೇಕಾದ ಎಲ್ಲ ಮಾಹಿತಿ ನಿಮ್ಮ Form16 ನಲ್ಲೆ ಇರುತ್ತದೆ.

5) ಪೂರಾ ತುಂಬಿಸಿದ ಮೇಲೆ Validate ಬಟನ್ ಕ್ಲಿಕ್ ಮಾಡಿ. ಅದನ್ನು ಮಾಡಿದ ತಕ್ಷಣ ಒಂದು XML ಶೀಟ್ ಸೃಷ್ಟಿಯಾಗಿ ನಿಮ್ಮ ಕಂಪೂಟರ್ ನಲ್ಲಿ ಸೇವ್ ಆಗುತ್ತದೆ.

6) ಈ ಸೇವ್ ಆದ XML ಫೈಲ್ ಅನ್ನು ನೀವು ಅಪ್ಲೋಡ್ ಮಾಡಿ (AY 2012-2013) ಅಡಿಯಲ್ಲಿ. ಅಪ್ಲೋಡ್ ಮಾಡಿದೊಡನೆ ಅದು ಡಿಜಿಟಲ್ ಸೈನ್ ಮಾಡಬೇಕಾ ಎಂದು ಕೇಳುತ್ತದೆ. ನಿಮ್ಮ ಬಳಿ ಡಿಜಿಟಲ್ ಸೈನ್ ಇದ್ದರೆ 'Yes'ಎಂದು ಕ್ಲಿಕ್ ಮಾಡಿ. ಇಲ್ಲದಿದ್ದರೆ 'No' ಎಂದು ಕ್ಲಿಕ್ ಮಾಡಿ.

7) ನಿಮ್ಮ ಇ-ಫೈಲಿಂಗ್ ಯಶಸ್ವಿಯಾದರೆ ಅದರ ಬಗ್ಗೆ ಒಂದು ಮೆಸೇಜ್ ನಿಮ್ಮ ಪರದೆಯ ಮೇಲೆ ಗೋಚರಿಸುತ್ತದೆ. ಅದು ಬಂದರೆ ನಿಮ್ಮ ಇ-ಫೈಲಿಂಗ್ ಯಶ್ವಸ್ವಿಯಾಗಿದೆ ಎಂದೇ ಅರ್ಥ. ಇ-ಫೈಲಿಂಗ್ ನ Verification ಫಾರಂ (ITR-V) ಅನ್ನು ನಿಮ್ಮ ನೊಂದಾಯಿತ ಇಮೇಲ್ ID ಗೆ ಕಳುಹಿಸಿಕೊಡಲಾಗುತ್ತೆ.

8 ) ನಿಮ್ಮ ಇಮೇಲ್ ಗೆ ಈ ITR-V ಬಂದ ತಕ್ಷಣ ಒಂದು ಪ್ರಿಂಟ್-ಔಟ್ ತೆಗೆದುಕೊಂಡು, ಕೇಳಿರುವ ಕಡೆ ನಿಮ್ಮ ಸಹಿಯನ್ನು ಹಾಕಿ ಆರ್ಡಿನರಿ ಪೋಸ್ಟ್ ಮೂಲಕ (ಕೊರಿಯರ್ ನಲ್ಲಿ ಕಳುಹಿಸಿದರೆ ಯಾವ ಕಾರಣಕ್ಕೂ ತೆಗೆದುಕೊಳ್ಳುವುದಿಲ್ಲ) ಈ ವಿಳಾಸಕ್ಕೆ ಕಳುಹಿಸಬೇಕು- Income Tax Department-CPC, Post Bag No-1, Electronic City Post Office, Bangalore - 560100, Karnataka (ಆನ್ಲೈನ್ ನಲ್ಲಿ ರಿಟರ್ನ್ ಫೈಲ್ ಮಾಡಿದ 120 ದಿನಗಳೊಳಗೆ ಅವರಿಗೆ ತಲುಪಬೇಕು).

ಈ ಮೇಲಿನ 8 ಹಂತಗಳನ್ನು ಪಾಲಿಸಿದರೆ ನಿಮ್ಮ ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಆನ್ಲೈನ್ ನಲ್ಲಿ ಸುಲಭವಾಗಿ ಮಾಡಿ ನಿಶ್ಚಿಂತೆಯಿಂದ ಇರಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot