ಪಾನ್‌ಕಾರ್ಡ್ ಕಳೆದು, ಕಾರ್ಡ್ ಸಂಖ್ಯೆ ಮರೆತರೆ!?..ಆನ್‌ಲೈನ್‌ನಲ್ಲಿ ಹೀಗೆ ತಿಳಿಯಿರಿ!?
ಪಾನ್‌ಕಾರ್ಡ್ ಕಳೆದುಕೊಂಡು ಪಾನ್‌ಕಾರ್ಡ್ ನಂಬರ್ ಸಹ ನೆನಪಿನಲ್ಲಿ ಇಲ್ಲ ಎಂದರೆ ಅದನ್ನು ಹೇಗೆ ತಿಳಿಯುವುದು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಒಮ್ಮೊಮ್ಮೆ ಈ ರೀತಿ ಆಗುವುದು ಸಹಜ.!! ಏನಾಗುವುದು ಎಂದು ಪ್ರಶ್ನೆ ಕೇಳಬೇಡಿ! ಜೀವನದಲ್ಲಿ ಏನೇ ಆದರೂ ಅದು ಸಹಜವೇ. ಆದರೆ ನಮ್ಮ ಕೆಲವು ತಪ್ಪುಗಳು ಮಾತ್ರ ನಮ್ಮನ್ನು ಬಹುವಾಗಿ ಕಾಡುತ್ತವೆ.
ಇದಕ್ಕೆ ಉದಾಹರಣೆ ಎಂದರೆ, ನಮ್ಮ ಗಿಝ್ಬಾಟ್ ಸಂಪರ್ಕವಾಣಿಗೆ ನಮ್ಮ ಸೈಟ್ ಓದುಗರೊಬ್ಬರು ಕಾಲ್ ಮಾಡಿ, ನನ್ನ ಪಾನ್‌ಕಾರ್ಡ್ ಕಳೆದುಹೋಗಿದೆ. ನಾನು ಪಾನ್‌ಕಾರ್ಡ್ ನಂಬರ್ ಸಹ ನೆನಪಿನಲ್ಲಿ ಇಟ್ಟಿಕೊಂಡಿಲ್ಲ. ನನಗೆ ತುರ್ತಾಗಿ ಪಾನ್‌ಕಾರ್ಡ್ ನಂಬರ್ ತಿಳಿಯುವುದು ಹೇಗೆ ಎಂದು ನಮ್ಮಲ್ಲಿ ಸಲಹೆ ಕೇಳಿ ಪಡೆದುಕೊಂಡರು. ನಮ್ಮ ಸಲಹೆ ನಂತರ ಅವರ ತುರ್ತು ಸಮಸ್ಯೆ ಬಗೆಹರಿಯಿತು.

ಬುಕ್ ಮಾಡಲು ರೆಡಿಯಾಗಿ!.ಅಮೇಜಾನ್ ಮಾರಾಟಕ್ಕಿಟ್ಟಿದೆ "ಹಾನರ್ 6ಎಕ್ಸ್"!!
ಇದರಿಂದ ನಮಗೂ ಸಂತೋಷವೇ ಆಯಿತು. ಹಾಗಾಗಿ, ಪಾನ್‌ಕಾರ್ಡ್ ಕಳೆದು ಈ ರೀತಿಯಲ್ಲಿ ಹಲವರು ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬಂದಿರಬಹುದು ಅಥವಾ ಬರಬಹುದು.! ಹಾಗಾಗಿ, ಪಾನ್‌ಕಾರ್ಡ್ ಕಳೆದುಕೊಂಡು ಪಾನ್‌ಕಾರ್ಡ್ ನಂಬರ್ ಸಹ ನೆನಪಿನಲ್ಲಿ ಇಲ್ಲ ಎಂದರೆ ಅದನ್ನು ಹೇಗೆ ತಿಳಿಯುವುದು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಇನ್‌ಕಮ್ ಟ್ಯಾಕ್ಸ್ ವೆಬ್‌ಸೈಟ್‌ಗೆ ಭೇಟಿ ನೀಡಿ.
ಪಾನ್‌ಕಾರ್ಡ್ ಸಂಖ್ಯೆ ತಿಳಿದುಕೊಳ್ಳಲು ಭಾರತೀಯ ಇನ್‌ಕಮ್ ಟ್ಯಾಕ್ಸ್ ಅಫಿಶಿಯಲ್ ವೆಬ್‌ಸೈಟ್ ತೆರೆಯಿರಿ. ತರೆಯಲು ಈ ಲಿಂಕ್ ಕ್ಲಿಕ್ ಮಾಡಿ.( https://incometaxindiaefiling.gov.in ) ನಂತರ ನಿಮ್ಮ ಹುಟ್ಟಿದ ದಿನಾಂಕ ಮತ್ತು ನಿಮ್ಮ ಮೊದಲ ಹಾಗು ಕೊನೆಯ ಎರಡು ಹೆಸರುಗಳನ್ನು ತುಂಬಿರಿ. (ಪಾನ್‌ಕಾರ್ಡ್‌ನಲ್ಲಿ ನೀಡಿರುವಂತೆ)

ಆನ್‌ಲೈನ್‌ನಲ್ಲಿ 30 ರೂ.ಗೆ ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಹೇಗೆ? ಫುಲ್ ಡೀಟೆಲ್ಸ್!!
ನಂತರ ಇಮೇಜ್‌ನಲ್ಲಿರುವ ಕೋಡ್ ನಂಬರ್ ನಮೂದಿಸಿ, ಸಬ್‌ಮಿಟ್ ಕೊಡಿ. ನಿಮ್ಮ ಪಾನ್‌ಕಾರ್ಡ್ ಡೀಟೇಲ್ಸ್ ತೆರೆಯುತ್ತದೆ ಪಾನ್‌ಕಾರ್ಡ್ ಸಂಖ್ಯೆಯನ್ನು ತಿಳಿದುಕೊಳ್ಳಿ. ಇತರರಿಗೆ ಉಪಯೋಗವಾಗಲು ಈ ಮಾಹಿತಿ ಶೇರ್ ಮಾಡಿ.


Click it and Unblock the Notifications








