ಆಂಡ್ರಾಯ್ಡ್ ಓರಿಯೋಗೆ ನಿಮ್ಮ ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡುವುದು ಹೇಗೆ?
ಗೂಗಲ್‌ನ ಹೊಸ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ 'ಆಂಡ್ರಾಯ್ಡ್ ಒರಿಯೋ ಈಗ ಎಲ್ಲೆಲ್ಲಿಯೂ ಸದ್ದು ಮಾಡುತ್ತಿದೆ. ಯುಟಿಲಿಟಿಗೆ ತಕ್ಕಂತೆ ಆಪರೇಟಿಂಗ್ ಸಿಸ್ಟಂಗಳು ಅಪ್‌ಡೇಟ್ ಆಗುತ್ತಿದ್ದು, ಒರಿಯೋ ಆಪರೇಟಿಂಗ್ ಸಿಸ್ಟಂನಲ್ಲಿರೋ ಅಪ್ಲಿಕೇಷನ್‌ಗಳು ಇತ್ತೀಚಿನ ಸ್ಮಾರ್ಟ್‌ಫೋನ್ ಫೀಲ್ಡ್‌ಗೆ ಹೊಸ ಆಯಾಮ ಕೊಟ್ಟಿದೆ ಎನ್ನಬಹುದಾಗಿದೆ.!
ಇತ್ತೀಚಿಗೆ ಮಾರುಕಟ್ಟೆಗೆ ಕಾಲಿಡುತ್ತಿರುವ ಎಲ್ಲಾ ಸ್ಮಾರ್ಟ್‌ಫೋನುಗಳು ಆಂಡ್ರಾಯ್ಡ್ ಓರಿಯೋ ಒಎಸ್ ಅನ್ನು ಈಗಾಗಲೇ ಅಳವಡಿಸಿಕೊಂಡಿದೆ. ಆದರೆ, ಹಳೆ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಮಾರ್ಟ್‌ಫೋನ್ ಬಳಕೆ ಮಾಡಿಕೊಳ್ಳುತ್ತಿರುವ ಕೆಲವೇ ಕೆಲವರಿಗೆ ಮಾತ್ರ ಆ ಮೊಬೈಲ್ ಕಂಪೆನಿಗಳು ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ಅನ್ನು ನೀಡಿವೆ.

ಹಾಗಾಗಿ ಆಂಡ್ರಾಯ್ಡ್ ಒರಿಯೋ ಆಪರೇಟಿಂಗ್ ಸಿಸ್ಟಂಗೆ ಈ ವರೆಗೂ ಹೆಚ್ಚು ಜನರನ್ನು ತಲುಪಿಲ್ಲ ಎನ್ನಬಹುದು. ಆದರೂ, ಇನ್ನೇನು ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಒರಿಯೋ ನಿಮ್ಮ ಪೋನ್‌ಗಳಿಗೂ ಅಪ್‌ಡೇಟ್ ಸಿಗುವ ಸೂಚನೆ ಇದ್ದು, ಹಾಗಾದರೆ, ಆಂಡ್ರಾಯ್ಡ್ ಓರಿಯೋಗೆ ನೀವು ಅಪ್‌ಡೇಟ್ ಆಗುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಆಂಡ್ರಾಯ್ಡ್ ಓರಿಯೊ
ನೂತನ ಒಎಸ್ ಹಳೇದಕ್ಕಿಂತಲೂ ಫಾಸ್ಟ್ ಆಗಿದ್ದು, ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಮೂಲಕ ಹಲವು ಹೊಸ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಎರಡು ಆಪ್‌ಗಳನ್ನು ಒಮ್ಮೆಲೇ ಬಳಸಬಹುಹಾದ ಇಲ್ಲಿ ಇನ್‌ಸ್ಟೆಂಟ್ ಆಪ್ ಕಂಪ್ಯಾಟಬಲಿಟಿಯಿಂದಾಗಿ ಬಳಕೆದಾರರು ಬ್ರೌಸರ್ ನೆರವಿನಿಂದ ಹೊಸ ಆಪ್‌ಗಳಿಗೆ ಸುಲಭವಾಗಿ ಟೆಲಿಪೋರ್ಟ್ ಆಗಬಹುದಾಗಿದೆ. ಓರಿಯೋದಿಮದಾಗಿ ಒಎಸ್‌ನಿಂದ ಮೊಬೈಲ್ ಬ್ಯಾಟರಿ ಲೈಫ್ ಸಹ ಸುಧಾರಿಸಲಿದ್ದು, ಬೂಟಿಂಗ್ ಸ್ಪೀಡ್ ಸಹ ವೇಗವಾಗಲಿದೆ.ಆಟೋಫಿಲ್ ಟೂಲ್ ನಿಂದಾಗಿ ಮೊಬೈಲ್ ಕಾಂಟ್ಯಾಕ್ಟ್ ಡೀಟೇಲ್ಸ್ ಮತ್ತಿತರ ಖಾಸಗಿ ಮಾಹಿತಿಗಳು ಹೆಚ್ಚು ಸುರಕ್ಷಿತವಾಗಿರುತ್ತವೆ.

ಬ್ಯಾಕ್‌ಅಪ್ ಆಪ್ಷನ್ ಅನ್ನು ಒಮ್ಮೆ ಪರಿಶೀಲಿಸಿ!!
ನಿಮ್ಮ ಮೊಬೈಲ್ ಗೂಗಲ್ ಒರಿಯೋ ಆಪರೇಟಿಂಗ್ ಸಿಸ್ಟಂಗೆ ಅಪ್‌ಡೇಟ್ ಆಗುವಂತಿದ್ದರೆ . ಅಪ್‌ಡೇಟ್ ಮಾಡಿಕೊಳ್ಳುವ ಮುನ್ನ ಮೊಬೈಲ್ ಬ್ಯಾಕ್‌ಅಪ್ ಆಪ್ಷನ್ ಅನ್ನು ಒಮ್ಮೆ ಪರಿಶೀಲಿಸಿ. ಇಲ್ಲದಿದ್ದರೆ ನಿಮ್ಮ ಮಾಹಿತಿಗಳು ಅಳಿಸಿಹೋಗುವ ಸಂಭವ ಹೆಚ್ಚಿರುತ್ತದೆ.!!

ಡಿವೈಸ್ ಇನ್‌ಫರ್ಮೇಷನ್ ಸ್ಕ್ರೀನ್.!!
ಒರಿಯೋ ಆಪರೇಟಿಂಗ್ ಸಿಸ್ಟಂ ಅಪ್‌ಡೇಟ್ ಮಾಡಿಕೊಳ್ಳಲು ನಿಮ್ಮ ಸ್ಮಾರ್ಟ್‌ಫೋನ್ ಸೆಟ್ಟಿಂಗ್ಸ್ ತೆರೆಯಿರಿ, ನಂತರ ಕೊನೆಯ ಆಯ್ಕೆ ಎಬೌಟ್ ಫೋನ್ ಎನ್ನುವ ಐಕಾನ್ ಮೇಲೆ ಕ್ಲಿಕ್ ಮಾಡಿ ಅದರಲ್ಲಿರುವ ಡಿವೈಸ್ ಇನ್‌ಫರ್ಮೇಷನ್ ಸ್ಕ್ರೀನ್ ಸೆಲೆಕ್ಟ್ ಮಾಡಿಕೊಳ್ಳಿ.

ಅಪ್‌ಡೇಟ್ ಆಪ್ಷನ್ ಆಯ್ಕೆ ಮಾಡಿ.!!
ಡಿವೈಸ್ ಇನ್‌ಫರ್ಮೇಷನ್ ಸ್ಕ್ರೀನ್ ಸೆಲೆಕ್ಟ್ ಮಾಡಿದ ನಂತರ ಸಿಸ್ಟಂ ಅಪ್‌ಡೇಟ್ ಆಪ್ಷನ್ ಆಯ್ಕೆ ಮಾಡಿಕೊಳ್ಳಿ. ನಂತರ ಚೆಕ್‌ನೌ ಐಕಾನ್ ಮೇಲೆ ಕ್ಲಿಕ್ ಮಾಡಿ. ರಿಸ್ಟಾರ್ಟ್ ಮತ್ತು ಇನ್‌ಸ್ಟಾಲ್ ಬಟನ್ ಒತ್ತಿರಿ.!!

ನಿಮ್ಮ ಫೋನ್ ಅಪ್‌ಡೇಟ್ ಆಗುತ್ತದೆ.!!
ರಿಸ್ಟಾರ್ಟ್ ಮತ್ತು ಇನ್‌ಸ್ಟಾಲ್ ಬಟನ್ ಒತ್ತಿದ ನಂತರ ನಿಮ್ಮ ಫೋನ್ ಅಪ್‌ಡೇಟ್ ಆಗಲು ಪ್ರಾರಂಭಿಸುತ್ತದೆ.!ಕೆಲವು ನಿಮಿಷ ಅಥವಾ ಗಂಟೆಗಳಲ್ಲಿ ನಿಮ್ಮ ಫೋನ್ ನೂತನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಒರಿಯೋಗೆ ಅಪ್‌ಡೇಟ್ ಆಗುತ್ತದೆ.!!


Click it and Unblock the Notifications








