ಹೊಸ ಸ್ಮಾರ್ಟ್‌ಫೋನ್ ಖರೀದಿಸಿದ್ದೀರಾ? ಹಾಗಾದ್ರೆ ಈ ಆಪ್ ಡೌನ್‌ಲೋಡ್ ಮಾಡಿ
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರುತ್ತಿದ್ದಂತೆ ಇತ್ತ ಆಂಡ್ರಾಯ್ಡ್ ಆಪ್ಲಿಕೇಶನ್ ಅಂಗಡಿ ಗೂಗಲ್ ಪ್ಲೇ ಸ್ಟೋರ್‌ಗೆ ಹೊಸ ಹೊಸ ಆಪ್‌ಗಳು ಬರತೊಡಗಿದೆ. ಈ ಆಪ್‌ಗಳಲ್ಲಿ ಎಲ್ಲವೂ ಎಲ್ಲರಿಗೂ ಇಷ್ಟವಾಗದಿದ್ದರೂ ಕೆಲವು ಆಪ್‌ಗಳು ಮಾತ್ರ ಡೌನ್‌ಲೋಡ್ ಮಾಡಿದ್ದರೆ ನಮ್ಮ ಅನೇಕ ಕೆಲಸಗಳು ಸುಲಭವಾಗುತ್ತದೆ.
ಹೊಸ ಸ್ಮಾರ್ಟ್‌ಫೋನ್‌ಲ್ಲಿ ಕೆಲವು ಆಪ್‌ಗಳು ಪ್ರಿ ಲೋಡೆಡ್ ಆಗಿ ಬರುತ್ತದೆ. ಆದರೆ ಕೆಲವು ಸಹಕಾರಿಯಾಗಬಲ್ಲ ಆಪ್‌ಗಳು ಪ್ರಿ ಲೋಡೆಡ್ ಆಗಿ ಬರುವುದಿಲ್ಲ.ಹೀಗಾಗಿ ಇಲ್ಲಿ ಹೊಸದಾಗಿ ಸ್ಮಾರ್ಟ್‌ಫೋನ್ ಖರೀದಿಸಿದ ಗ್ರಾಹಕರು ಡೌನ್‌ಲೋಡ್ ಮಾಡಲೇಬೇಕಾದ ಕೆಲವು ಆಪ್‌ಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ. ಇಷ್ಟವಾದಲ್ಲಿ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.
ಇದನ್ನೂ ಓದಿ: ನಿಮ್ಮ ಜೀವನಕ್ಕೆ ಸಹಕಾರಿಯಾಗಬಲ್ಲ ನೋಡಲೇಬೇಕಾದ ಯೂ ಟ್ಯೂಬ್ ವೀಡಿಯೋಗಳು

3ಜಿ ವಾಚ್‌ಡಾಗ್
ಸ್ಮಾರ್ಟ್‌ಫೋನ್ ಇಂಟರ್‌ನೆಟ್ ಸಂಪರ್ಕಕ್ಕಾಗಿ 2ಜಿ/ 3ಜಿ ಡೇಟಾ ಪ್ಲ್ಯಾನ್‌ಗಳನ್ನು ಬಹಳಷ್ಟು ಜನರು ಬಳಸುತ್ತಿದ್ದಾರೆ. ಆದರೆ ಈ ಡೇಟಾ ಎಷ್ಟಿದೆ ಯಾವಾಗ ಮುಗಿಯುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ಈ ಮಾಹಿತಿ ತಿಳಿಯಲೆಂದೇ 3ಜಿ ವಾಚ್‌ಡಾಗ್ ಆಪ್ ಇದೆ . ಈ ಆಪ್ ಉಚಿತವಾಗಿ ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.

ಗೋ ಬ್ಯಾಕ್‌ಅಪ್
ಒಂದೇ ಆಪ್‌ನಲ್ಲಿ ಎಲ್ಲಾ ಮೆಸೇಜ್,ಕಾಂಟಕ್ಟ್,ಕಾಲ್ ಲಾಗ್‌ನ್ನು ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಜೊತೆಗೆ ಇದನ್ನು ಮೆಮೋರಿ ಕಾರ್ಡ್‌ನಲ್ಲೂ ಇನ್‌ಸ್ಟಾಲ್ ಮಾಡಬಹುದು.2.4MB ಇರುವ ಗೋ ಬ್ಯಾಕ್‌ಆಪ್ ಉಚಿತವಾಗಿ ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.

ಒಪೆರಾ ಮಿನಿ
ಆಂಡ್ರಾಯ್ಡ್ ಸ್ಮಾರ್ಟ್‌ಫೋನಲ್ಲಿ ಇಂಟರ್‌ನೆಟ್ ವೇಗವಾಗಿ ಬ್ರೌಸ್ ಮಾಡಲು ಬಹಳಷ್ಟು ಆಂಡ್ರಾಯ್ಡ್ ಬಳಕೆದಾರರು ಒಪೆರಾ ಮಿನಿ ಬ್ರೌಸರ್‌ನ್ನು ಬಳಸುತ್ತಿದ್ದಾರೆ. ಅಷ್ಟೇ ಅಲ್ಲದೇ ಫೋನ್ ಮತ್ತು ಡೆಸ್ಕ್‌ಟಾಪ್ ನೋಡುವಂತೆ ಎರಡು ಆಯ್ಕೆ ಇದ್ದು ಬಳಕೆದಾರರು ಬೇಕಾದ ಆಯ್ಕೆಯನ್ನು ಆರಿಸಿ ಬ್ರೌಸ್ ಮಾಡಬಹುದು. ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಇದು ಲಭ್ಯವಿದೆ.

ಎವಿಜಿ ಅಂಟಿ ವೈರಸ್
ಸ್ಮಾರ್ಟ್‌ಫೋನ್‌ಗೆ ನುಸುಳುವ ವೈರಸ್ ಮಾಲ್‌ವೇರ್‌ಗಳಿಂದ ರಕ್ಷಣೆ ಪಡೆಯಲು ಎವಿಜಿ ಅಂಟಿ ವೈರಸ್ ಇನ್‌ಸ್ಟಾಲ್ ಮಾಡಬಹುದು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಇದು ಲಭ್ಯವಿದೆ.

ಮೊಬೋ ಪ್ಲೇಯರ್
ಸ್ಮಾರ್ಟ್‌ಫೋನ್ ಅಂದ್ರೆ ವಿಡಿಯೋ ವೀಕ್ಷಿಸಲು ಅನೇಕ ಆಪ್‌ಗಳಿವೆ. ಆದರೆ ಎಲ್ಲಾ ಆಪ್‌ಗಳು ಎಲ್ಲಾ ರೀತಿಯ ವಿಡಿಯೋ ಫಾರ್ಮೆಟ್ ಸಪೋರ್ಟ್ ಮಾಡುವುದಿಲ್ಲ ಹೀಗಾಗಿ MoboPlayer ಅಥವಾ VLC Media PLayer ಲ್ಲಿ ಒಂದು ವಿಡಿಯೋ ಆಪ್ ಡೌನ್‌ಲೋಡ್ ಮಾಡುವ ಮೂಲಕ ವಿಡಿಯೋ ವೀಕ್ಷಿಸಬಹುದು.

ಸ್ಕೈಪ್:
ಟೆಕ್ಷ್ಟ್ ಮೆಸೇಜ್,ವಾಯ್ಸ್ ಕಾಲ್ ಮತ್ತು ವೀಡಿಯೋ ಕಾಲ್, ಪುಶ್ ಟು ಟಾಕ್ ಮೂಲಕ ಕಾಲ್ ಮಾಡಲು ಸ್ಕೈಪ್ ಆಪ್‌ನ್ನು ಬಳಸಬಹುದು. ವಿಡಿಯೋ ಕಾಲಿಂಗ್ ಮಾಡಲು ಮುಂದುಗಡೆ ಕ್ಯಾಮೆರಾವಿರಬೇಕು!

ಗೂಗಲ್ ಟ್ರಾನ್ಸ್‌ಲೇಟ್
ಯಾವುದೋ ಭಾಷೆಯ ಮಾಹಿತಿ ನಿಮಗೆ ಅಥವಾಗಿಲ್ಲದಿದ್ದಲ್ಲಿ Google Translate ಆಪ್ ಡೌನ್‌ಲೋಡ್ ಮಾಡಬಹುದು. ಈ ಆಪ್‌ನಲ್ಲಿ ಕನ್ನಡ ಭಾಷೆ ಸೇರಿಸಲಾಗಿದ್ದು ಆ ಭಾಷೆಯಲ್ಲಿಯರುವ ಮಾಹಿತಿಯನ್ನು ತಿಳಿಯಬಹುದು.

ಇನ್‌ಸ್ಟಾಗ್ರಾಮ್
ಸ್ಮಾರ್ಟ್‌ಫೋನ್‌ಲ್ಲೇ ಕ್ಲಿಕ್ಕಿಸಿದ ಫೋಟೋ ಮತ್ತಷ್ಟು ಚೆನ್ನಾಗಿ ಮಾಡುವುದು ಮತ್ತು ಫೋಟೋವನ್ನು ಶೇರಿಂಗ್ ಮಾಡಲು ಇನ್‌ಸ್ಟಾಗ್ರಾಮ್ ಆಪ್ ಉತ್ತಮ. ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಈ ಆಪ್ ಲಭ್ಯವಿದೆ.

ವಾಟ್ಸ್ ಆ್ಯಪ್:
ಜಗತ್ತಿನಲ್ಲಿ ಅತೀ ಹೆಚ್ಚು ಜನ ಬಳಸುತ್ತಿರುವ ಆಪ್. ಮೆಸೇಜ್ ಜೊತಗೆ ವಿಡಿಯೋ, ಆಡಿಯೋ,ಫೋಟೋಗಳನ್ನು ಈವಾಟ್ಸ್ ಆಪ್ ಮೂಲಕ ಶೇರ್ ಮಾಡಬಹುದು.


Click it and Unblock the Notifications





