Subscribe to Gizbot

ಈ 5 ದಾಖಲೆಗಳಿಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಲೇಬೇಕು!!.ಯಾವುವು ಗೊತ್ತಾ?

Written By:

ದೇಶದ ಎಲ್ಲಾ ಜನರಿಗೂ ಆಧಾರ್ ಅನ್ನು ಯಾವ ಯಾವ ಸರ್ಕಾರದ ಯೋಜನೆಗಳಿಗೆ ಲಿಂಕ್ ಮಾಡಬೇಕು ಎಂಬುದೇ ದೊಡ್ಡ ತಲೆನೊವಾಗಿದೆ ಎನ್ನಬಹುದು.! ಹೌದು, ಎಲ್ಲಾ ಸರ್ಕಾರಿ ದಾಖಲಾತಿಗಳಿಗೆ ಆಧಾರ್ ಅನ್ನು ಲಿಂಕ್ ಮಾಡುವುದು ಬಹಳ ಸುಲಭವಾದ ಕೆಲಸವಾದರೂ ಕೂಡ, ನಾವು ಆಧಾರ್ ಅನ್ನು ಯಾವ ಯಾವ ದಾಖಲೆಗಳಿಗೆ ಲಿಂಕ್ ಮಾಡಬೇಕು ಎಂದು ತಿಳಿಯುವುದೇ ಕಷ್ಟವಾಗಿದೆ.!

ಹಾಗಾಗಿ, ಪ್ರತಿದಿನವೂ ಆಧಾರ್ ಅನ್ನು ನಿಮ್ಮ ಸರ್ಕಾರಿ ದಾಖಲೆಗಳಿಗೆ ಲಿಂಕ್ ಮಾಡಿ ಎನ್ನುವ ಹಲವು ಸುದ್ದಿಗಳು ನಿಮಗೆ ತಲುಪಿರುತ್ತವೆ. ಆಧಾರ್ ಲಿಂಕ್ ಮಾಡಲು ಡೆಡ್‌ಲೈನ್ ಸಹ ಇರುತ್ತದೆ. ಹಾಗಾಗಿ, ಇಂದಿನ ಲೇಖನದಲ್ಲಿ ಯಾವ ಯಾವ ದಾಖಲೆಗಳಿಗೆ ಆಧಾರ್ ಲಿಂಕ್ ಮಾಡಬೇಕು.? ಲಿಂಕ್ ಮಾಡಲು ಕೊನೆಯ ದಿನಾಂಕ ಯಾವುದು ಎಂಬುದನ್ನು ತಿಳಿಸಲಿದ್ದೇವೆ.! ಕೆಳಗಿನ ಸ್ಲೈಡರ್‌ಗಳಲ್ಲಿ ಅವುಗಳು ಯಾವುವು ಎಂಬುದನ್ನು ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1. ಆಧಾರ್ ಮತ್ತು ಪಾನ್ ಲಿಂಕ್

1. ಆಧಾರ್ ಮತ್ತು ಪಾನ್ ಲಿಂಕ್

ಪ್ರತಿಯೋರ್ವರು ಪಾನ್‌ಕಾರ್ಡ್‌ ಬಳಕೆದಾರನು ಕೂಡ ಪಾನ್ ಕಾರ್ಡ್‌ಗೆ ಲಿಂಕ್ ಮಾಡಲೇಬೇಕು ಎಂದು ಸರ್ಕಾರ ತಿಳಿಸಿದ್ದು, ಡಿಸೆಂಬರ್ 31, 2017 ಒಳಗಾಗಿ ಆಧಾರ್ ಮತ್ತು ಪಾನ್ ಲಿಂಕ್ ಮಾಡಬೇಕು.!! ಆಗಸ್ಟ್ 5, 2017 ರಂದು ಇದ ಗಡುವು ದಿನಾಂಕವನ್ನು ಡಿಸೆಂಬರ್ 31, 2017ರ ವರೆಗೂ ಹೆಚ್ಚಿಸಲಾಗಿದೆ.!!

2. ಆಧಾರ್ ಮತ್ತು ಬ್ಯಾಂಕ್ ಖಾತೆ!!

2. ಆಧಾರ್ ಮತ್ತು ಬ್ಯಾಂಕ್ ಖಾತೆ!!

ಯಾವುದೇ ಬ್ಯಾಂಕ್ ಖಾತೆಯ ಜೊತೆ ಆಧಾರ್ ಕಾರ್ಡ್ ಲಿಂಕ್ ಆಗದಿದ್ದರೆ ಆ ಬ್ಯಾಂಕ್ ಖಾತೆಗಳನ್ನು ನಿಷೇಧಿಸಲು ಬ್ಯಾಂಕ್, ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಸರ್ಕಾರ ಆಧೆಶ ನೀಡಿದೆ.!! ಹಾಗಾಗಿ, ಡಿಸೆಂಬರ್ 31, 2017 ಒಳಗಾಗಿ ಆಧಾರ್ ಮತ್ತು ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬೇಕಿದೆ.!!

#3 ಆಧಾರ್ ಮತ್ತು ಸಿಮ್‌ಕಾರ್ಡ್!!

#3 ಆಧಾರ್ ಮತ್ತು ಸಿಮ್‌ಕಾರ್ಡ್!!

ಸಿಮ್‌ಕಾರ್ಡ್‌ಗಳ ಮೂಲಕ ಆಗಬಹುದಾದ ಅಪಾಯಗಳನ್ನು ಸರ್ಕಾರ ಗುರುತಿಸಿದ್ದು, ಎಲ್ಲಾ ಟೆಲಿಕಾಂ ಕಂಪೆನಿಗಳಿಗೆ ಕಡ್ಡಾಯವಾಗಿ ಎಲ್ಲಾ ಸಿಮ್‌ಕಾರ್ಡ್‌ಗಳು ಆಧಾರ್ ಮೂಲಕ ಲಿಂಕ್ ಆಗಿರಲೇಬೇಕು ಎಂಬ ಸೂಚನೆ ನೀಡಿದೆ.!! ಹಾಗಾಗಿ, ಫೆಬ್ರವರಿ 6 2018 ರ ಒಳಗಾಗಿ ಆಧಾರ್ ಮತ್ತು ಸಿಮ್‌ಕಾರ್ಡ್ ಲಿಂಕ್ ಮಾಡಬೇಕು.!!

#4 ಆಧಾರ್ ಮತ್ತು ಡ್ರೈವಿಂಗ್ ಲೈಸೆನ್ಸ್

#4 ಆಧಾರ್ ಮತ್ತು ಡ್ರೈವಿಂಗ್ ಲೈಸೆನ್ಸ್

ನಕಲಿ ಡ್ರೈವಿಂಗ್ ಲೈಸೆನ್ಸ್‌ಗಳ ಹಾವಳಿ ತಪ್ಪಿಸಲು ಸರ್ಕಾರ ಆಧಾರ್ ಮತ್ತು ಡ್ರೈವಿಂಗ್ ಲೈಸೆನ್ಸ್ ಲಿಂಕ್ ಮಾಡಲು ನಿರ್ದೇಶನ ನೀಡಿದೆ.! ಆದರೆ, ಆಧಾರ್ ಮತ್ತು ಡ್ರೈವಿಂಗ್ ಲೈಸೆನ್ಸ್ ಲಿಂಕ್‌ಗಾಗಿ ಸರ್ಕಾರ ಇನ್ನು ಯಾವುದೇ ಗಡುವನ್ನು ನೀಡಿಲ್ಲ.!! ಆದರೂ, ಈ ವರ್ಷದ ಒಳಗಾಗಿ ಆಧಾರ್ ಮತ್ತು ಡ್ರೈವಿಂಗ್ ಲೈಸೆನ್ಸ್ ಲಿಂಕ್ ಮಾಡಿದರೆ ಉತ್ತಮ.!!

#5 ಎಲ್‌ಪಿಜಿ, ಸ್ಕಾಲರ್‌ಶಿಪ್ ಮತ್ತು ಇತರೆ!!

#5 ಎಲ್‌ಪಿಜಿ, ಸ್ಕಾಲರ್‌ಶಿಪ್ ಮತ್ತು ಇತರೆ!!

ಸರ್ಕಾರದ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಸಾಮಾಜಿಕ ಯೋಜನೆಗಳ ಪ್ರಯೋಜನ ಪಡೆಯಲು ಕಡ್ಡಾಯವಾಗಿ ಆಧಾರ್ ವಿವರಗಳನ್ನು ಒದಗಿಸಲು ಗಡುವು ವಿಧಿಸಿದೆ.!! ಎಲ್‌ಪಿಜಿ, ಸ್ಕಾಲರ್‌ಶಿಪ್, ಪೆನ್‌ಷನ್ ಹಾಗೂ ಇನ್ನಿತರ ಸರ್ಕಾರದ ಎಲ್ಲಾ ಸೇವೆಗಳು ಸಹ ಆಧಾರ್ ಲಿಂಕ್ ಹೊಂದಲೇಬೇಕಿದೆ.!!

ಓದಿರಿ:ಐಫೋನ್ 8 ಎಫೆಕ್ಟ್..ಐಫೋನ್ 7, ಐಫೋನ್ 6 ಬೆಲೆ ಕಡಿಮೆ ಮಾಡಿದ ಆಪಲ್!!.ಎಷ್ಟು ಕಡಿಮೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
here are certain deadlines that you need to meet related to your Aadhaar in order to avoid pain in the coming year, 2018. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot